ಅಮ್ಮನಿಗೆ ಸರ್ಕಾರಿ ಗೌರವ ಕೊಟ್ಟಿದ್ದು ಸರಿ
Team Udayavani, Jun 10, 2017, 11:26 AM IST
ಇತ್ತೀಚೆಗಷ್ಟೇ ನಿಧನರಾದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರಿಗೆ ಸರ್ಕಾರಿ ಗೌರವ ಕೊಟ್ಟಿದ್ದು, ಅವರ ಅಂತ್ಯಕ್ರಿಯೆಗೆ ಕಂಠೀರವ ಸ್ಟುಡಿಯೋದಲ್ಲಿ ಸರ್ಕಾರ ಜಾಗ ಕೊಟ್ಟಿದ್ದರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಅದೆಷ್ಟು ಸರಿ, ತಪ್ಪು ಎಂದು ಟೀಕೆ ಮಾಡಲಾಗಿದೆ.
ಈ ಕುರಿತು ಶಿವರಾಜಕುಮಾರ್ ಅವರನ್ನು ಕೇಳಿದರೆ, ತಮ್ಮ ಪ್ರಕಾರ ಅದು ಸರಿ ಎನ್ನುತ್ತಾರೆ. ಶುಕ್ರವಾರ ನಡೆದ ಪಾರ್ವತಮ್ಮ ಶ್ರದ್ಧಾಂಜಲಿ ಸಭೆಯ ನಂತರ ಮಾತನಾಡಿದ ಅವರು, “ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯವಿರುತ್ತದೆ. ಹಾಗಾಗಿ ಈ ತರಹದ ಚರ್ಚೆಗಳೆಲ್ಲಾ ಸಹಜ. ನನ್ನನ್ನು ಈ ಕುರಿತು ಕೇಳಿದರೆ, ಸರಿ ಎನ್ನುತ್ತೇನೆ.
ಏಕೆಂದರೆ, ಕನ್ನಡ ಚಿತ್ರರಂಗಕ್ಕೆ ಅವರು ಅಪಾರ ಕೊಡುಗೆ ನೀಡಿದವರು. ಚಿತ್ರರಂಗಕ್ಕೆ ಸಂಬಂಧಿಸಿದ ಹೋರಾಟಗಳಲ್ಲದೆ, ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದವರು. ಒಬ್ಬ ಮಹಿಳೆಯಾಗಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರ ಕೊಡುಗೆಯನ್ನು ನೋಡಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ನನ್ನ ಪ್ರಕಾರ ಇದು ಸರಿ’ ಎಂದರು ಶಿವರಾಜಕುಮಾರ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.