ಅವಿಭಜಿತ ದ.ಕ.ಜಿಲ್ಲೆ : 14 ಸಾವಿರ ಹೆ. ಭತ್ತ ಕೃಷಿ ಕಣ್ಮರೆ !
Team Udayavani, Jun 10, 2017, 4:18 PM IST
ಮಂಗಳೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಕರಾವಳಿಯಲ್ಲಿ ಭತ್ತದ ಬೆಳೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಅನ್ನದ ಬಟ್ಟಲು ಬರಿದಾಗುತ್ತಿದೆ. ಜತೆಗೆ, ಭತ್ತದ ಬೆಳೆ ಪ್ರೋತ್ಸಾಹಿಸುವ ಕೇರಳ ಮಾದರಿ ಪ್ಯಾಕೇಜ್ ಜಾರಿಗೂ ಮೀನಮೇಷ ಎಣಿಸಲಾಗುತ್ತಿದೆ.
ದ.ಕ.: 6000 ಹೆಕ್ಟೇರ್ ಭತ್ತ ಕೃಷಿ ಕಣ್ಮರೆ
ಆರು ವರ್ಷಗಳ ಹಿಂದೆ ದ. ಕ. ಜಿಲ್ಲೆಯಲ್ಲಿ 34,000 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿತ್ತು. 2016-17 ಸಾಲಿನಲ್ಲಿ ಇದು 28,540 ಹೆಕ್ಟೇರ್‌ಗೆ ಕುಸಿದಿದೆ. 2010-11 ರಲ್ಲಿ ಮಂಗಳೂರು ತಾಲೂಕಿನಲ್ಲಿ 12,100, ಬಂಟ್ವಾಳದಲ್ಲಿ 9500, ಬೆಳ್ತಂಗಡಿಯಲ್ಲಿ 8500, ಪುತ್ತೂರಿನಲ್ಲಿ 3400, ಸುಳ್ಯದಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರಿನಲ್ಲಿ ಭತ್ತ ಬೆಳೆಸಲಾಗುತ್ತಿತ್ತು. 2016-17ನೇ ಸಾಲಿಗೆ ಬರುವಾಗ ಮಂಗಳೂರು ತಾಲೂಕಿನಲ್ಲಿ 8900 ಹೆ., ಬಂಟ್ವಾಳದಲ್ಲಿ 8800 ಹೆ., ಬೆಳ್ತಂಗಡಿಯಲ್ಲಿ 7700 ಹೆ., ಪುತ್ತೂರಿನಲ್ಲಿ 2500 ಹೆ. ಸುಳ್ಯದಲ್ಲಿ 490 ಹೆಕ್ಟರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು.
2017-18ನೇ ಸಾಲಿನಲ್ಲಿ 28,000 ಹೆ. ಗುರಿ ಇರಿಸಿಕೊಳ್ಳಲಾಗಿದೆ. ಅಂದರೆ ಜಿಲ್ಲೆಯಲ್ಲಿ ಒಟ್ಟಾರೆ ಹೇಳುವುದಾದರೆ ಕಳೆದ ಆರು ವರ್ಷಗಳಲ್ಲಿ ಸುಮಾರು 6,000 ಹೆಕ್ಟೇರ್ ಪ್ರದೇಶದಿಂದ ಭತ್ತದ ಬೆಳೆ ಕಣ್ಮರೆಯಾಗಿದೆ.
ಉಡುಪಿ : 8 ವರ್ಷಗಳಲ್ಲಿ 8 ಸಾವಿರ ಹೆ. ಕುಸಿತ
ಉಡುಪಿ ಜಿಲ್ಲೆಯಲ್ಲಿ ಕಳೆದ 8 ವರ್ಷಗಳಲ್ಲಿ 8 ಸಾವಿರ ಹೆಕ್ಟೇರ್ ಭತ್ತದ ಬೆಳೆ ಕುಸಿತವಾಗಿದೆ. 2007-08ರಲ್ಲಿ 51,350 ಹೆಕ್ಟೇರ್‌ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. 2015-16ನೇ ಸಾಲಿನಲ್ಲಿ ಇದು 43,506 ಹೆಕ್ಟೇರ್‌ಗೆ ಕುಸಿದಿದೆ. ಕಳೆದ ವರ್ಷ 45,000 ಹೆಕ್ಟೇರ್ ಗುರಿಯನ್ನು ನಿಗದಿಪಡಿಸಲಾಗಿತ್ತು. 2016-17 ನೇ ಸಾಲಿನಲ್ಲಿ 44,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯ ಗುರಿಯನ್ನು ಇರಿಸಿಕೊಳ್ಳಲಾಗಿದೆ.
ಭತ್ತ ಕುಸಿತಕ್ಕೆ ಕಾರಣ
ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ , ಬೆಲೆ ಕುಸಿತ, ಕಾರ್ಮಿಕರ ಕೊರತೆ ಕರಾವಳಿಯಲ್ಲಿ ರೈತರು ಭತ್ತದ ಬೆಳೆಯಿಂದ ವಿಮುಖರಾಗಲು ಪ್ರಮುಖ ಕಾರಣ. ಭತ್ತದ ಬೆಳೆಗೆ ಹೋಲಿಸಿದರೆ ಕಡಿಮೆ ಕಾರ್ಮಿಕರು ಬೇಕಾಗಿರುವ, ಹೆಚ್ಚು ಲಾಭದಾಯಕವಾಗಿರುವ ಅಡಿಕೆ, ಕಾಳು ಮೆಣಸು ಮುಂತಾದ ತೋಟಗಾರಿಕಾ ಬೆಳೆಗಳು ಭತ್ತದ ಗದ್ದೆಗಳನ್ನು ಆವರಿಸ ತೊಡಗಿವೆ. ನಗರಕ್ಕೆ ಸಮೀಪದ ಪ್ರದೇಶಗಳ ಗದ್ದೆಗಳು ಕೃಷಿಯೇತರ ಭೂಮಿಗಳಾಗಿ ಪರಿವರ್ತನೆಗೊಂಡು ಲೇಔಟ್‌ಗಳು, ವಾಣಿಜ್ಯ, ವಸತಿ ಸಂಕೀರ್ಣಗಳು ಬರುತ್ತಿವೆ. ಈ ಎಲ್ಲಾ ಅಂಶಗಳು ಭತ್ತದ ಬೆಳೆ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ ಎನ್ನುವುದು ಭತ್ತ ಬೆಳೆಗಾರರ ಅಭಿಪ್ರಾಯ ಉತ್ತೇಜನಕಾರಿ ಕ್ರಮಗಳ ನಿರೀಕ್ಷೆ ಭತ್ತದ ಬೆಳೆ ಪ್ರಮಾಣ ಕುಸಿಯುತ್ತಿರುವ ಈ ಸಂಕೀರ್ಣ ಕಾಲಘಟ್ಟದಲ್ಲಿ ಉತ್ತೇಜನಕಾರಿ ಕ್ರಮಗಳು ಸರಕಾರದಿಂದ ಜಾರಿಯಾಗಬೇಕು ಎಂಬ ಬೇಡಿಕೆ ರೈತರಿಂದ ನಿರಂತರ ಮಂಡನೆಯಾಗುತ್ತಲೆ ಬಂದಿದೆ. ತಜ್ಞರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೆರೆಯ ಕೇರಳ ರಾಜ್ಯದಲ್ಲಿ ಜ್ಯಾರಿಯಲ್ಲಿರುವ ವಿಶೇಷ ಪ್ಯಾಕೇಜ್‌ಗಳನ್ನು ಜಾರಿಗೊಳಿಸುವಂತೆ ಸರಕಾರ ನೇಮಿಸಿದ್ದ ಅಧ್ಯಯನ ತಂಡ , ಕೃಷಿ ಬೆಲೆ ಆಯೋಗ ಕೂಡ ಶಿಫಾರಸ್ಸು ಮಾಡಿದೆ.
ಪ್ರಸಕ್ತ ಸಾಲಿನ ಮುಂಗಾರು ಬೆಳೆಯ ಚಟುವಟಿಕೆಗಳು ಇದೀಗ ಆರಂಭಗೊಂಡಿವೆ. ಈ ಹಂತದಲ್ಲಿ ರೈತರಿಗೆ ಉತ್ತೇಜನಗಳು ಲಭಿಸಿದರೆ ಬೆಳೆ ಕುಸಿತವನ್ನು ತಡೆಗಟ್ಟಲು ಸಾಧ್ಯವಿದೆ ಮಾತ್ರವಲ್ಲದೆ ಬೆಳೆಯ ಪ್ರಮಾಣವನ್ನು ವಿಸ್ತರಣೆಗೂ ನೆರವಾಗುತ್ತದೆ.
ಜ್ಯಾರಿಯಾಗದ ಕೇರಳ ಮಾದರಿ ಪ್ಯಾಕೇಜ್
ಕೇರಳ ರಾಜ್ಯದಲ್ಲಿ ನೀಡುತ್ತಿರುವಂತೆ ಕರ್ನಾ ಟಕದಲ್ಲೂ ಕರಾವಳಿ/ ಮಲೆನಾಡು ಜಿಲ್ಲೆಗಳಲ್ಲಿ ಭತ್ತ ಬೆಳೆಯುವ ರೈತರಿಗೆ ಹೆಕ್ಟೇರ್‌ಗೆ 7500 ರೂ. ಪೋತ್ಸಾಹಧನ ನೀಡಬಹುದಾಗಿದೆ ಎಂದು ಕರ್ನಾಟಕ ಸರಕಾರ ನೇಮಿಸಿದ್ದ ಅಧ್ಯಯನ ತಂಡ 2015-16ರಲ್ಲಿ ಶಿಫಾರಸ್ಸು ಮಾಡಿತ್ತು. ಆದರೆ ನಮ್ಮ ರಾಜ್ಯ ಸರಕಾರ ಇನ್ನೂ ಬಗ್ಗೆ ಪೂರಕ ಸ್ಪಂದನೆ ನೀಡಿಲ್ಲ.
ರಾಜ್ಯದಲ್ಲಿ ಮಳೆಯಾಶ್ರಿತ ಭತ್ತಕ್ಕೆ ಕೇರಳ ಮಾದರಿಯ ಪ್ಯಾಕೇಜ್ ನೀಡುವ ಬಗ್ಗೆ ಅಧ್ಯಯನ ನಡೆಸಲು ದ.ಕ.ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ರಾಜ್ಯ ಸರಕಾರ ತಂಡವೊಂದನ್ನು ನೇಮಿಸಿತ್ತು. ಭತ್ತ ಬೆಳೆಯುವ ಪ್ರಮುಖ ಜಿಲ್ಲೆಗಳಾದ ದ.ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ , ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಕೃಷಿ ಇಲಾಖೆ ತಲಾ ಓರ್ವ ಅಧಿಕಾರಿ ಹಾಗೂ ಕೃಷಿ ಬೆಲೆ ಆಯೋಗದ ಸಹಾಯಕ ಕೃಷಿ ನಿರ್ದೇಶಕರನ್ನು ಒಳಗೊಂಡ ತಂಡ ಕೇರಳದ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ಅಧ್ಯಯನ ಮಾಡಿತ್ತು. ಇದರ ವರದಿಯನ್ನು ಕೃಷಿ ಬೆಲೆ ಆಯೋಗದ ಆಯುಕ್ತರಿಗೆ ಸಲ್ಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullal: ಎಂಡಿಎಂಎ ಸಾಗಾಟ: ಮೂವರ ಬಂಧನ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.