ಸಚಿವ ರಾಧಾ ಮೋಹನ್ ಸಿಂಗ್ ಕಾರಿನ ಮೇಲೆ ಮೊಟ್ಟೆ ಎಸೆತ; ಐವರ ಬಂಧನ
Team Udayavani, Jun 10, 2017, 4:24 PM IST
ಭುವನೇಶ್ವರ : ಮಧ್ಯಪ್ರದೇಶದ ಮಂದ್ಸೋರ್ನಲ್ಲಿ ಐವರು ರೈತರು ಪೊಲೀಸರ ಗುಂಡಿಗೆ ಬಲಿಯಾಗಿರುವುದನ್ನು ಪ್ರತಿಭಟಿಸಲು ಇಲ್ಲಿನ ಸರಕಾರಿ ಗೆಸ್ಟ್ ಹೌಸ್ ಬಳಿ ನೆರೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಕೃಷಿ ಸಚಿವ ರಾಧಾ ಮೋಹನ ಸಿಂಗ್ ಅವರ ವಾಹನದ ಮೇಲೆ ಮೊಟ್ಟೆಗಳನ್ನು ಎಸೆದರಲ್ಲದೆ ಕರಿ ಬಾವುಟ ತೋರಿಸಿದರು.
ಸಚಿವ ರಾಧಾ ಮೋಹನ ಸಿಂಗ್ ಅವರು ಜತನಿ ಎಂಬಲ್ಲಿ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದರು.
ಕಾಂಗ್ರೆಸ್ ಕಾರ್ಯಕರ್ತರು ಎಸೆದ ಮೊಟ್ಟೆಗಳು ಸಚಿವರ ಮೇಲೆ ನೇರವಾಗಿ ಎರಗಲಿಲ್ಲವಾದರೂ ಕೆಲವು ಮೊಟ್ಟೆಗಳು ಅವರ ಕಾರಿನ ಮುಂಭಾಗದ ಮೇಲೆ ಬಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.
ಈ ಘಟನೆ ಸಂಬಂಧ ಪೊಲೀಸರು ರಾಜ್ಯ ಯುವ ಕಾಂಗ್ರೆಸ್ ದಳದ ಅಧ್ಯಕ್ಷ ಲೋಕನಾಥ್ ಮಹಾರಥಿ ಸಹಿತ ಐವರನ್ನು ಬಂಧಿಸಿದರೆಂದು ಡಿಸಿಪಿ ಸತ್ಯವ್ರತ ಭೋಯಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.