ವಿವಿಧೆಡೆ ಕಾರಹುಣ್ಣಿಮೆ ಸಂಭ್ರಮ

Team Udayavani, Jun 10, 2017, 4:45 PM IST

hub5.jpg

ಉಪ್ಪಿನಬೆಟಗೇರಿ: ಸಮೀಪದ ಹನುಮನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಸಂಜೆ ಕಾರ ಹುಣ್ಣಿಮೆ ನಿಮಿತ್ತವಾಗಿ ರೈತರು ಎತ್ತುಗಳನ್ನು ಅಲಂಕರಿಸಿ ಕರಿ ಹರಿಯುವ ಕಾರ್ಯಕ್ರಮ ಜರುಗಿತು. ಗ್ರಾಮದ ರೈತರು ತಮ್ಮ-ತಮ್ಮ ಎತ್ತುಗಳಿಗೆ ವಿವಿಧ ಬಣ್ಣ ಮತ್ತು ಜೂಲುಗಳಿಂದ ಅಲಂಕರಿಸಿ ಕೊಂಬುಗಳಿಗೆ ವಿವಿಧ ಬಗೆಯ ಖಾದ್ಯಗಳಾದ ಕಡುಬು, ಕೋಡಬಳೆ, ವಡೆ, ಕರಚಿಕಾಯಿ, ಶೇಂಗಾ, ಗಾರಿಗೆ, ಕೊಬ್ರಿ ಸೇರಿದಂತೆ ಕರಿದ ಪದಾರ್ಥಗಳನ್ನು ಕಟ್ಟಲಾಗಿತ್ತು.

ಗ್ರಾಮದ ಅಗಸಿಯಲ್ಲಿ ಎರಡು ಎತ್ತುಗಳಿಗೆ ಮುಂಗಾರಿ ಮತ್ತು ಹಿಂಗಾರಿ ಎಂದು ನಾಮಕರಣ ಮಾಡಿ ಮೊದಲು ಆ ಎತ್ತುಗಳನ್ನು ಓಡಲು ಬಿಟ್ಟು ನಂತರ ಉಳಿದವುಗಳನ್ನು ತಂಡೋಪ ತಂಡವಾಗಿ ಓಡಿಸಲಾಯಿತು. ಹೀಗೆ ಮೊದಲು ಓಡುವ ಎರಡು ಎತ್ತುಗಳಲ್ಲಿ ಯಾವ ಎತ್ತು ಮೊದಲು ಹೋಗುತ್ತದೆಯೋ ಅದರ ಮೇಲೆ ಹಿಂಗಾರಿ ಮತ್ತು ಮುಂಗಾರಿ ಮಳೆ ಉತ್ತಮವಾಗಿ ಬೆಳೆ ಚನ್ನಾಗಿ ಬರುತ್ತದೆ ಎಂಬ ನಂಬಿಕೆ ರೈತ ಬಾಂಧವರದ್ದಾಗಿದೆ. 

ಓಡುವ ಎತ್ತುಗಳನ್ನು ಹರಿಜನಕೇರಿ ಓಣಿಯ ಜನರು ಬೆನ್ನಟ್ಟಿ ಅವುಗಳಿಗೆ ಕಟ್ಟಿದ ಖಾದ್ಯಗಳನ್ನು ಹರಿದು ತಿನ್ನುವ ಸಂಪ್ರದಾಯ ಇದೆ. ಮೊದಲಿನಿಂದಲೂ ಬಂದ ಪದ್ಧತಿಯಾಗಿದ್ದು, ಈಗಲೂ ಕೂಡ ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಇದನ್ನು ಮಾಡುವುದರಿಂದ ಉತ್ತಮ ಮಳೆ-ಬೆಳೆ ಚನ್ನಾಗಿ ಆಗುತ್ತದೆ ಎನ್ನುತ್ತಾರೆ ಅಲ್ಲಿನ ರೈತರು. 

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯ ಕಲ್ಲಪ್ಪ ಬೊಬ್ಬಿ, ಈಶ್ವರಪ್ಪ ಹಟ್ಟಿ, ಅಶೋಕ ಅಷ್ಟಗಿ, ಮಹೇಶ ಬೂಬ್ಬಿ,ನೇಮಣ್ಣ ಅಷ್ಟಗಿ, ಮಡಿವಾಳಪ್ಪ ದೊಡವಾಡ, ಶಂಕರ ಅರಳಿಕಟ್ಟಿ, ಮಹಾಂತೇಶ ದೊಡವಾಡ, ಬಸವರಾಜ ತಿಗಡಿ, ರುದ್ರಪ್ಪ ದೊಡಮನಿ, ಯಲ್ಲಪ್ಪ ಹೊಸಮನಿ, ಪರಮೇಶ್ವರ ದೊಡವಾಡ, ಹನುಮಂತಪ್ಪ ಜಾಧವ, ನಾಗಪ್ಪ ಹಾರೋಬೆಳವಡಿ, ಚಂದ್ರು ಅಷ್ಟಗಿ, ರಮೇಶ ದೊಡವಾಡ, ಧರೆಪ್ಪ ಬೊಬ್ಬಿ, ನಿಂಗಪ್ಪ ತಿಗಡಿ, ಮಹಾದೇವಪ್ಪ ದೊಡವಾಡ, ಮಂಜುನಾಥ ದೊಡವಾಡ ಇದ್ದರು.

ಟಾಪ್ ನ್ಯೂಸ್

“ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

Tulu Cinema: “ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

16-skin

Deepawali: ಪಟಾಕಿ ಅವಘಡ: ಚರ್ಮ ಕಸಿ ಶಸಚಿಕಿತ್ಸೆಗೆ ಸಜ್ಜು

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Ignoring MES is better than banning it: Satish Jarakiholi

Belagavi; ಎಂಇಎಸ್‌ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್‌ ಜಾರಕಿಹೊಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್

Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್

Waqf

Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್‌ ಬಿಸಿ!

ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ

ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ

ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್‌ ಅರೆಸ್ಟ್!‌ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ

ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್‌ ಅರೆಸ್ಟ್!‌ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ

jameer-ak

B.Z. Zameer Ahmed Khan;ನಾನು ಶುದ್ದ ಹಿಂದೂಸ್ಥಾನಿ ಭಾರತೀಯ, 24 ಕ್ಯಾರೆಟ್ ಗೋಲ್ಡ್..

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

“ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

Tulu Cinema: “ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

19-bng

Bengaluru: ಕಾವೇರಿ ನೀರು 6ನೇ ಹಂತದ ಯೋಜನೆಗೆ ಸಿದ್ಧತೆ

18-bng

ಆಟೋದಲ್ಲಿ ಗಾಂಜಾ ಮಾರುತ್ತಿದ್ದ ಚಾಲಕನ ಬಂಧನ

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.