HORRIFIC: ಚಿನ್ನದ ನಿಧಿಗಾಗಿ ಬಾಲಕಿಯ ರೇಪ್ ಮಾಡಿ ಕೊಂದ ಮಾಂತ್ರಿಕ
Team Udayavani, Jun 10, 2017, 4:57 PM IST
ಕನೋಜ್ : ಉತ್ತರ ಪ್ರದೇಶ ಪೊಲೀಸರು ಇಂದು ಶನಿವಾರ, ವೃತ್ತಿಯಲ್ಲಿ ಶಿಕ್ಷಕನೂ ಆಗಿರುವ ಮಾಂತ್ರಿಕನೋರ್ವನನ್ನು ಬಂಧಿಸಿದ್ದಾರೆ. ಹದಿನಾಲ್ಕು ವರ್ಷ ಪ್ರಾಯದ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು “ಬಲಿ’ ನೀಡಲು ಕೊಂದಿದ್ದ ಈ ಮಾಂತ್ರಿಕ ಆ ಬಳಿಕ ಪರಾರಿಯಾಗಿದ್ದ.
ಈ ಘಟನೆ ಕನೋಜ್ ಜಿಲ್ಲೆಯ ಭಾದೌಸಿ ಗ್ರಾಮದಲ್ಲಿ ಈ ವಾರದ ಆದಿಯಲ್ಲಿ ನಡೆದಿತ್ತು. ಆರೋಪಿ ಮಾಂತ್ರಿಕ ಕೃಷ್ಣ ಕುಮಾರ್ ಶರ್ಮಾ ಎಂಬಾತ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಅರೆ ಪ್ರಜ್ಞಾವಸ್ಥೆಯಲ್ಲಿ ಹೊಲವೊಂದಕ್ಕೆ ಒಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ “ಬಲಿ’ ನೀಡುವುದಕ್ಕಾಗಿ ಕುತ್ತಿಗೆ ಹಿಸುಕಿ ಕೊಂದು ಬಳಿಕೆ ಬಲಿಗಾಗಿ ಆಕೆಯ ಕತ್ತನ್ನು ಸೀಳಿ ರಕ್ತ ಸಂಗ್ರಹಿಸಿದ್ದ.
ಕನೋಜ್ ಸಹಾಯಕ ಪೊಲೀಸ್ ಸುಪರಿಂಟೆಂಡೆಂಟ್ ಕೇಶವ ಚಂದ್ರ ಗೋಸ್ವಾಮಿ ಅವರು ಈ ಘಟನೆಯ ವಿವರಗಳನ್ನು ಈ ರೀತಿಯಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ :
ತನ್ನ ಮನೆ ಆವರಣದಲ್ಲಿ ನೆಲದಡಿ ಚಿನ್ನದ ನಿಧಿ ಇದೆ ಎಂದು ನಂಬಿದ್ದ ಚಿನ್ನದ ವ್ಯಾಪಾರಿ ಮಹಾವೀರ ಪ್ರಸಾದ್ (55) ಎಂಬಾತ ಆ ನಿಧಿಯನ್ನು ಪತ್ತೆಹಚ್ಚಿ ಮೇಲಕ್ಕೆತಲು ಆರೋಪಿ ಮಾಂತ್ರಿಕ ಶರ್ಮಾನನ್ನು ಸಂಪರ್ಕಿಸಿದ್ದ.
ಚಿನ್ನದ ನಿಧಿಯನ್ನು ಪಡೆಯಲು ನಿಮ್ಮ ಮಗಳನ್ನು ಬಲಿಕೊಡಬೇಕಾಗುವುದು; ಬಲಿಕೊಟ್ಟ ಸ್ವಲ್ಪ ಹೊತ್ತಿನ ಬಳಿಕ ನಿಮ್ಮ ಮಗಳು ಪುನಃ ಜೀವಂತವಾಗುತ್ತಾಳೆ ಎಂದು ಮಹಾವೀರ ಪ್ರಸಾದ್ ಮತ್ತು ಆತನ ಪತ್ನಿ ಪುಷ್ಪಾ (50) ಳನ್ನು ಮಾಂತ್ರಿಕನು ನಂಬಿಸಿದ್ದ. ಇದಕ್ಕೆ ಈ ದಂಪತಿ ಒಪ್ಪಿಗೆ ನೀಡಿತ್ತು.
ಆ ಪ್ರಕಾರ ಮಹಾವೀರ ದಂಪತಿಗೆ, ಪುತ್ರಿಯೊಂದಿಗೆ ಸ್ಥಳೀಯ ದೇವಸ್ಥಾನಕ್ಕೆ ಬರುವಂತೆ ಮಾಂತ್ರಿಕನು ಹೇಳಿದ್ದ. ಆ ಪ್ರಕಾರ ಅವರು ಮೂವರೂ ಅಲ್ಲಿಗೆ ಹೋಗಿದ್ದರು. ಆಗ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಹುಡುಗಿಯನ್ನು ಮಾಂತ್ರಿಕ ಶರ್ಮಾ, ಕೆಲವೊಂದು ಮಂತ್ರ-ತಂತ್ರಗಳ ವಿಧಿ ವಿಧಾನ ನಡೆಸಿ, ಬಳಿಕ ಸಮೀಪದ ಗದ್ದೆಯೊಂದಕ್ಕೆ ಒಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯ ಕತ್ತು ಸೀಳಿ ಅಲ್ಲಿಂದ ಚಿಮ್ಮಿದ ರಕ್ತವನ್ನು ಪೂಜಾ ಸ್ಥಳಕ್ಕೆ ತಂದಿದ್ದ. ಆ ಬಳಿಕ ಅಲ್ಲಿಂದ ಪರಾರಿಯಾಗಿದ್ದ.
ಮಗಳು ಮಾಂತ್ರಿಕನ ವಿಧಿ-ವಿಧಾನಗಳಲ್ಲಿ ಸತ್ತೇ ಹೋಗಿರುವುದು ಖಾತರಿಯಾದ ಕೂಡಲೇ ಮಹಾವೀರ ಪ್ರಸಾದ್ ಪೊಲೀಸರನ್ನು ಸಂಪರ್ಕಿಸಿ ತನ್ನ ಮಗಳನ್ನು ಮಾಂತ್ರಿಕನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆಗೈದಿದ್ದಾನೆ ಎಂದು ದೂರು ನೀಡಿದ.
ದೂರು ದಾಖಲಿಸಿಕೊಂಡು ಕೂಡಲೇ ತನಿಖೆ ಆರಂಭಿಸಿದ ಪೊಲೀಸರಿಗೆ ಜೂನ್ 8ರಂದು ಮಹಾವೀರ ಪ್ರಸಾದನ ಪುತ್ರಿ ಕವಿತಾಳ ಶವ ಹೊಲದಲ್ಲಿ ಸಿಕ್ಕಿತು. ಪರಾರಿಯಾಗಿರುವ ಮಾಂತ್ರಿಕನಿಗಾಗಿ ಪೊಲೀಸರೀಗ ಹುಡುಕಾಟ ನಡೆಸುತ್ತಿದ್ದಾರೆ.
ಕವಿತಾ ಳ ತಂದೆ ಮಹಾವೀರ ಪ್ರಸಾದ್ ಕೊಲೆ ಸಂಚಿನಲ್ಲಿ ಭಾಗಿಯಾಗಿರುವುದರಿಂದ ಆತನ ಮೇಲೂ ಕೇಸು ಹಾಕಲಾಗಿದೆ. ಆದರೆ ತನಿಖೆ ಪೂರ್ತಿಯಾಗುವ ತನಕವೂ ಆತನ ಪಾತ್ರದ ಬಗ್ಗೆ ನಿರ್ಧರಿಸಲಾಗದು ಎಂದಿದ್ದಾರೆ ಪೊಲೀಸರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್ಗಳು-ಕಡಲಾಮೆಗೆ ಅಪಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.