ಸ್ನೇಹಕ್ಕೆ ಸ್ನೇಹ: ಪ್ರೀತಿಗೆ ಪ್ರೀತಿ


Team Udayavani, Jun 11, 2017, 11:35 AM IST

Noorondu-Nenapu.jpg

ಬಹುಶಃ ಆ ಕಾಲೇಜು ತನ್ನ ದಿಕ್ಕನ್ನೇ ಬದಲಿಸುತ್ತದೆ ಎಂದು ಅವನಿಗೆ ಗೊತ್ತಿರುತ್ತದೋ ಇಲ್ಲವೋ ಗೊತ್ತಿಲ್ಲ. ತಾಯಿಯ ಒತ್ತಾಯದ ಮೇರೆಗೆ ಅವನು ಇದ್ದ ಕಾಲೇಜು ಬಿಟ್ಟು ಇನ್ನೊಂದು ಕಾಲೇಜು ಸೇರುತ್ತಾನೆ. ಅಲ್ಲಿಗೆ ಹೋದ ನಂತರ ಅವನ ದುನಿಯಾನೇ ಬದಲಾಗಿಬಿಡುತ್ತದೆ. ಹೊಸ ಹೊಸ ಸ್ನೇಹಿತರು, ಹೊಸ ಹೊಸ ಸನ್ನಿವೇಶಗಳು, ಸಂಬಂಧಗಳು, ಸಂತೋಷಗಳು ಎಲ್ಲವೂ ಸಿಗುತ್ತಾ ಹೋಗುತ್ತದೆ. ಇದೆಲ್ಲದರಿಂದ ಅವನ ಜೀವನವೇ ಬದಲಾಗಿ ಹೋಗುತ್ತದೆ.

ಆದರೆ, ಎಲ್ಲಾ ಸಂತೋಷಗಳಿಗೂ ಭಗವಂತ ಒಂದು ಫ‌ುಲ್‌ಸ್ಟಾಪ್‌ ಇಡುವಂತೆ, ಶ್ರೇಯಸ್‌ನ ಈ ಸಂತೋಷಗಳಿಗೂ ಫ‌ುಲ್‌ಸ್ಟಾಪ್‌ ಇಡುತ್ತಾನೆ. ಪ್ರತಿಯೊಬ್ಬರ ಕಾಲೇಜು ಜೀವನವನ್ನು ನೆನಪಿಸುವಂತಹ “ಕಿರಿಕ್‌ ಪಾರ್ಟಿ’ ಕೆಲವು ತಿಂಗಳುಗಳ ಹಿಂದಷ್ಟೇ ಬಂದಿತ್ತು. ಅದೇ ಸಾಲಿಗೆ ಸೇರಿದ ಇನ್ನೊಂದು ಸಿನಿಮಾ “ನೂರೊಂದು ನೆನಪು’. ಒಬ್ಬ ವಿದ್ಯಾರ್ಥಿಯ ಕಾಲೇಜು ಜೀವನದಲ್ಲಿನ ನೂರೊಂದು ನೆನಪುಗಳ’ನ್ನು ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ.

ಸ್ನೇಹ, ಪ್ರೀತಿ, ತ್ಯಾಗ, ದ್ವೇಷ … ಎಲ್ಲವೂ ಇರುವ ಒಂದು ಚಿತ್ರವನ್ನು ಪ್ರೇಕ್ಷಕರೆದುರು ಇಡಲಾಗಿದೆ. ಹಾಗೆ ನೋಡಿದರೆ, ಈ ತರಹದ ಚಿತ್ರಗಳು ಹೊಸದೇನಲ್ಲ. ಕಾಲೇಜಿನ ನೆನಪುಗಳನ್ನು ಮೆಲುಕು ಹಾಕುವಂತಹ ಹಲವು ಚಿತ್ರಗಳು ಇದುವರೆಗೂ ಕನ್ನಡ ಮತ್ತು ಬೇರೆಬೇರೆ ಭಾಷೆಗಳಲ್ಲಿ ಬಂದಿದೆ. ಆದರೆ, ಅದೇ ಕಥೆಯನ್ನು ರೆಟ್ರೋ ಸ್ಟೈಲ್‌ನಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕ ಕುಮರೇಶ್‌ ಮಾಡಿದ್ದಾರೆ. ಅದೇ ಈ ಚಿತ್ರದ ಹೈಲೈಟ್‌ ಎಂದರೆ ತಪ್ಪಲ್ಲ.

ಇಡೀ ಚಿತ್ರ ಫ್ಲಾಶ್‌ಬ್ಯಾಕ್‌ನಲ್ಲಿ ನಡೆಯುತ್ತದೆ. ಚಿತ್ರ ಪ್ರಾರಂಭವಾಗುವುದು 1989ರಲ್ಲಿ. ಒಂದು ಸೀನು ಮುಗಿಯುತ್ತಿದ್ದಂತೆಯೇ, ಚಿತ್ರ 1981ಕ್ಕೆ ರಿವರ್ಸ್‌ ಹೋಗುತ್ತದೆ. ಅಲ್ಲಿ ಶ್ರೇಯಸ್‌ ಎಂಬ ಹುಡುಗನ ಕಥೆಯನ್ನು ಹೇಳಲಾಗುತ್ತದೆ. ಕೊನೆಯ ದೃಶ್ಯದಲ್ಲಿ ಮತ್ತೆ ಫಾಸ್ಟ್‌ ಫಾರ್ವರ್ಡ್‌ ಆಗಿ, ಚಿತ್ರ 89ರಲ್ಲಿ ಮುಗಿಯುತ್ತದೆ. ರೆಟ್ರೋ ಶೈಲಿಯಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿರುವುದು ಹೈಲೈಟ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಸುಮಾರು 35 ವರ್ಷಗಳಷ್ಟು ಹಿಂದಿನ ಪರಿಸರ, ಪರಿಕರ ಇವೆಲ್ಲವನ್ನೂ ಚೆನ್ನಾಗಿ ತೋರಿಸಲಾಗಿದೆ.

ಈ ಮಧ್ಯೆಯೇ ಒಂದಿಷ್ಟು ಯಡವಟ್ಟುಗಳಿವೆ. 81ರಲ್ಲಿ ನಡೆಯುವ ಕಥೆಯಲ್ಲಿ 84ರಲ್ಲಿ ಬಿಡುಗಡೆಯಾದ “ಬಂಧನ’ ಚಿತ್ರದ ಒಂದು ದೃಶ್ಯ ಬಂದುಬಿಡುತ್ತದೆ. ಇನ್ನು ಕೆಲವು ಕಾಸ್ಟೂéಮ್‌ಗಳು, ಅತಿರೇಕದ ಅಭಿನಯ ಇವೆಲ್ಲಾ ಪ್ರೇಕ್ಷಕರಿಗೆ ಕಿರಿಕಿರಿ ಮಾಡುವುದು ಹೌದು. ಇವೆಲ್ಲದರ ಜೊತೆಗೆ ಚಿತ್ರದ ಪ್ರಮುಖ ಸಮಸ್ಯೆಯೆಂದರೆ, ಚಿತ್ರದ ವೇಗ. ಚಿತ್ರದ ನಿಧಾನವಷ್ಟೇ ಅಲ್ಲ, ಚಿತ್ರದಲ್ಲಿ ಹೆಚ್ಚಿನ ಟ್ವಿಸ್ಟ್‌ಗಳನ್ನು ಕಾಣುವುದು ಕಷ್ಟ. ಚಿತ್ರದಲ್ಲಿ ಕೆಲವು ಎಮೋಷನಲ್‌ ಎನ್ನುವಂತಹ ಸನ್ನಿವೇಶಗಳಿವೆ.

ಆದರೆ, ಅದ್ಯಾವುದೇ ಪ್ರೇಕ್ಷಕರನ್ನು ತಟ್ಟುವುದೇ ಇಲ್ಲ. ಅದೇ ಕಾರಣಕ್ಕೆ ಚಿತ್ರದಲ್ಲಿ ನಾಯಕನ “ನೂರೊಂದು ನೆನಪು’ಗಳನ್ನು ನೋಡಬಹುದೇ ಹೊರತು, ಚಿತ್ರದ “ನೂರೊಂದು ನೆನಪು’ಗಳು ಕಾಡುವುದೇ ಇಲ್ಲ. ಇಡೀ ಚಿತ್ರದ ಕೇಂದ್ರಬಿಂದುವೆಂದರೆ ಅದು ಚೇತನ್‌ ಅವರ ಪಾತ್ರ. ಅದರ ಸುತ್ತವೇ ಇಡೀ ಚಿತ್ರ ಸುತ್ತುತ್ತದೆ ಮತ್ತು ಚೇತನ್‌ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದರೆ. ಹೆಚ್ಚು ಆಕ್ರಮಣಕಾರಿಯಲ್ಲದ, ಹಾಗೆಯೇ ತೀರಾ ಸೋಬರ್‌ ಅಲ್ಲದ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಇನ್ನು ಡಿಎಸ್‌ಪಿಯಾಗಿ ಕಾಣಿಸಿಕೊಂಡಿರುವ ರಾಜ್‌ವರ್ಧನ್‌, ಇನ್ನಷ್ಟು ಪಳಗಬೇಕು. ಆದರೂ ಮೊದಲ ಪ್ರಯತ್ನದಲ್ಲೇ ಅವರು ಗಮನಸೆಳೆಯುತ್ತಾರೆ. ನಾಯಕಿಯರ ಪೈಕಿ ಹೆಚ್ಚು ಗಮನಸೆಳೆಯುವುದು ಮೇಘನಾ ರಾಜ್‌. ಯಶ್‌ ಶೆಟ್ಟಿ, ರವಿಶಂಕರ್‌ ತರಹ ನಟಿಸುತ್ತಾರೋ ಅಥವಾ ಅವರನ್ನು ಅನುಕರಣೆ ಮಾಡುತ್ತಾರೋ ಹೇಳುವುದು ಕಷ್ಟ.

ರಾಜೇಶ್‌ ನಟರಂಗ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ, ಪ್ರೇಕ್ಷಕರನ್ನು ಭಾವುಕರನ್ನಾಗಿ ಮಾಡಿ ಹೋಗುತ್ತಾರೆ. “ನೂರೊಂದು ನೆನಪು’ ನಿಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿಸುವಂತಹ ಇನ್ನೊಂದು ಚಿತ್ರ. ಅಂದಹಾಗೆ, ಇದು “ದುನಿಯಾದಾರಿ’ ಎನ್ನುವ ಮರಾಠಿ ಕಾದಂಬರಿ ಆಧಾರಿತ ಮತ್ತು ಅದೇ ಹೆಸರಿನ ಚಿತ್ರದ ರೀಮೇಕು.

ಚಿತ್ರ: ನೂರೊಂದು ನೆನಪು
ನಿರ್ಮಾಣ: ಕುಮರೇಶ್‌
ನಿರ್ದೇಶನ: ಸೂರಜ್‌ ದೇಸಾಯಿ, ಮನಿಶ್‌ ದೇಸಾಯಿ
ತಾರಾಗಣ: ಚೇತನ್‌, ರಾಜ್‌ವರ್ಧನ್‌, ಮೇಘನಾ ರಾಜ್‌, ಸುಷ್ಮಿತಾ ಜೋಷಿ, ಯಶ್‌ ಶೆಟ್ಟಿ, ನಟರಂಗ ರಾಜೇಶ್‌ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?

12-protest

Trasi: ಸಾಂಪ್ರದಾಯಿಕ ‌ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ,‌ ಗೋಪಾಲ ಪೂಜಾರಿ ಭಾಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guns and Roses Review

Guns and Roses Review: ನೆತ್ತರ ಹಾದಿ ಪ್ರೇಮ್‌ ಕಹಾನಿ

Out of syllabus movie review

Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್‌

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

16-

Shelter: ಸೂರು ಹುಡುಕಲೆಂದು ಹೊರಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.