ದಾಖಲೆ ಕೊಡದಿದ್ದಕ್ಕೆ ಗುಂಡು ಹಾರಿಸಿದ ಮಾಜಿ ಸೈನಿಕ
Team Udayavani, Jun 11, 2017, 12:23 PM IST
ಬೆಂಗಳೂರು: ವಾಹನ ನೋಂದಣಿ ವಿಚಾರದಲ್ಲಿ ಬೈಕ್ ಶೋ ರೂಂ ಮಾಲೀಕನೊಂದಿಗೆ ಜಗಳ ಮಾಡಿಕೊಂಡ ಮಾಜಿ ಸೈನಿಕರೊಬ್ಬರು ಗುಂಡು ಹಾರಿಸಿ ಬೆದರಿಸಿದ ಘಟನೆ ಶನಿವಾರ ಸಂಜೆ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಮಾಜಿ ಸೈನಿಕ ಜಗದೀಶ್ (35) ರನ್ನು ಗಸ್ತಿನಲ್ಲಿದ್ದ ಮುಖ್ಯಪೇದೆ ಚಂದ್ರಪ್ಪ ಬಂಧಿಸಿದ್ದಾರೆ. ಜತೆಗೆ ಜಗದೀಶ್ ಬಳಿಯಿದ್ದ ಪರವಾನಿಗೆ ಪಿಸ್ತೂಲನ್ನು ವಶಪಡಿಸಿಕೊಂಡಿದ್ದಾರೆ.
ಜಗದೀಶ್ ಮಾ.31ರಂದು ಶಫೀವುಲ್ಲಾ ಎಂಬುವವರ ಮಾಲೀಕತ್ವದ ಸ್ಯಾಟಲೈಟ್ ಮೋಟಾರ್ಸ್‌ನಲ್ಲಿ ಮಾರಾಟ ಅಂತ್ಯಗೊಂಡ ಬಿಎಸ್3 ಎಂಜಿನ್‌ನ ಹೊಂಡಾ ಲಿವಾ ಬೈಕ್ ಖರೀದಿಸಿದ್ದರು. ಆದರೆ, ಶಫೀವುಲ್ಲಾ ನೊಂದಣಿ ಅಥವಾ ಬೈಕ್‌ನ ದಾಖಲೆಗಳನ್ನು ಇದುವರೆಗೂ ನೀಡಿರಲಿಲ್ಲ. ಇದೇ ವಿಚಾರವಾಗಿ ಜಗದೀಶ್ ಆಗಾಗ್ಗೆ ಶೋರೂಂಗೆ ಬಂದು ದಾಖಲೆಗಳನ್ನು ಕೊಡುವಂತೆ ಒತ್ತಾಯಿಸುತ್ತಿದ್ದರು.
ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಶೋರೂಂಗೆ ಬಂದ ಜಗದೀಶ್, ಬೈಕ್‌ನ ದಾಖಲಾತಿಗಳ ಬಗ್ಗೆ ವಿಚಾರಿಸಿದ್ದಾರೆ. ಚರ್ಚೆ ವಿಕೋಪಕ್ಕೆ ಹೋದ ಸಂದರ್ಭದಲ್ಲಿ ತಮ್ಮ ಬಳಿ ಇದ್ದ .32 ಎಂಎಂ ಪಿಸ್ತೂಲ್ ಮೂಲಕ ಕೊಠಡಿಯ ಮೇಲ್ಛಾವಣೆಗೆ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಇದರಿಂದ ಬೆದರಿದ ಶಫೀವುಲ್ಲ ಮತ್ತು ಇತರರು ತಪ್ಪಿಸಿಕೊಂಡಿದ್ದಾರೆ. ಇದೇ ವೇಳೆ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಗಾಬರಿಯಿಂದ ಜಿಗಿಯಲು ಯತ್ನಿಸಿದಾಗ ಗಾಜಿನ ಬಾಗಿಲಿಗೆ ಡಿಕ್ಕಿ ಹೊಡೆದುಕೊಂಡು ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಸನ ಮೂಲದ ಜಗದೀಶ್ 106 ಪ್ಯಾರಾ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ವರ್ಷ ಸ್ವಯಂ ನಿವೃತ್ತಿ ಪಡೆದು, ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ
ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ
Amritsar; ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ
UV Fusion: ಪ್ರಕೃತಿ ಅವಶ್ಯ ಮನುಜನಿಗೆ
Siddaramaiah; ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಟಿ.ಜೆ.ಅಬ್ರಹಾಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.