ಸಹಕಾರ ಸಂಘದ ಕಟ್ಟಡಕ್ಕೆ ಕಲ್ಯಾಣ ನಿಧಿಯಿಂದ 10 ಲಕ್ಷ

Team Udayavani, Jun 11, 2017, 12:46 PM IST

mys3.jpg

ಮೈಸೂರು: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಜಿಲ್ಲಾ ಪತ್ರಕರ್ತರ ಸಂಘದಿಂದ ಶನಿವಾರ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. 

ನಗರದ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ನಾಲ್ವರಿಗೆ ತಲಾ 15 ಸಾವಿರ ರೂ. ನಗದು ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ 9 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ. ನಗದು ಹಾಗೂ ಪ್ರಮಾಣ ಪತ್ರವನ್ನು ಶಾಸಕ ಎಂ.ಕೆ. ಸೋಮಶೇಖರ್‌ ವಿತರಿಸಿದರು.

ಶಾಸಕ ಎಂ.ಕೆ.ಸೋಮಶೇಖರ್‌ ಮಾತನಾಡಿ, ಇದು ಅತ್ಯಂತ ವಿಶೇಷ ಕಾರ್ಯಕ್ರಮವಾಗಿದ್ದು, ಪತ್ರಕರ್ತರ ಸಂಘ ತನ್ನ ಆದಾಯದಲ್ಲಿ ಶೇ.25ನ್ನು ಪತ್ರಕರ್ತರ ಮಕ್ಕಳ ಶಿಕ್ಷಣ ನಿಧಿಗಾಗಿ ಮೀಸಲಿರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆರ್ಥಿಕ ನೆರವು ನೀಡುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಮಳೆ, ಗಾಳಿಯನ್ನು ಲೆಕ್ಕಿಸದೇ ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಬಹುತೇಕ ಸಂದರ್ಭದಲ್ಲಿ ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಸಂಘದಿಂದ ಪತ್ರಕರ್ತರ ಕ್ಷೇಮಾಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಪತ್ರಕರ್ತರ ಸಂಘದಿಂದ ಆರಂಭಿಸಲಾಗುತ್ತಿರುವ ಸಹಕಾರ ಸಂಘದ ಕಟ್ಟಡಕ್ಕೆ ಶಾಸಕರ ಕಲ್ಯಾಣ ನಿಧಿಯಿಂದ 10 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್‌ ಮಾತನಾಡಿ, ಸಂಘ ಸದೃಢವಾದಾಗ ಮಾತ್ರ ಸದಸ್ಯರ ಆರ್ಥಿಕ ಸ್ಥಿತಿ ಸರಿಪಡಿಸಲು ಸಾಧ್ಯ. ಸಂಘಕ್ಕೆ ತಾವು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಸಂಘದ ಠೇವಣಿ 5 ಲಕ್ಷ ರೂ. ಇದೀಗ 20 ಲಕ್ಷ  ರೂ.ಗಳನ್ನು ಕ್ರೋಡಿಕರಿಸಲಾಗಿದ್ದು, ಆ ಮೂಲಕ ಸಂಘವು ಆರ್ಥಿಕವಾಗಿ ಸದೃಢವಾಗಿದೆ.

ಶೀಘ್ರದಲ್ಲೇ ಸಹಕಾರ ಸಂಘವು ಅಸ್ತಿತ್ವಕ್ಕೆ ಬರಲಿದ್ದು, ಈಗಾಗಲೇ 6.75 ಲಕ್ಷ ರೂ. ಷೇರು ಸಂಗ್ರಹವಾಗಿದೆ ಎಂದು ತಿಳಿಸಿದರು. ಮೇಯರ್‌ ಎಂ.ಜೆ.ರವಿಕುಮಾರ್‌, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‌ ಬಾಬು, ಉಪಾಧ್ಯಕ್ಷ ಎಸ್‌.ಟಿ.ರವಿಕುಮಾರ್‌, ಹಿರಿಯ ಪತ್ರಕರ್ತ ಸಿ.ಕೆ.ಮಹೇಂದ್ರ ಇನ್ನಿತರರು ಹಾಜರಿದ್ದರು.

ಟಾಪ್ ನ್ಯೂಸ್

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

court

Fact check ಘಟಕ ಸ್ಥಾಪಿಸುವ ಐಟಿ ನಿಯಮ ರದ್ದು: ಹೈಕೋರ್ಟ್‌ ಆದೇಶ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

Road Mishap ಸ್ಲೀಪರ್ ಕೋಚ್ ಬಸ್ ಪಲ್ಟಿ: ಓರ್ವ ಮೃತ್ಯು; 11 ಮಂದಿಗೆ ಗಾಯ

Road Mishap ಸ್ಲೀಪರ್ ಕೋಚ್ ಬಸ್ ಪಲ್ಟಿ: ಓರ್ವ ಮೃತ್ಯು; 11 ಮಂದಿಗೆ ಗಾಯ

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

court

Fact check ಘಟಕ ಸ್ಥಾಪಿಸುವ ಐಟಿ ನಿಯಮ ರದ್ದು: ಹೈಕೋರ್ಟ್‌ ಆದೇಶ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

1-wewewqeqwewqe

Edible oil; ದಾಸ್ತಾನಿದ್ದರೂ ಖಾದ್ಯ ತೈಲ ಬೆಲೆ ಏರಿಸಿದ್ದೇಕೆ: ಸರಕಾರ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.