ಹಣ ಬಿಟ್ಬಿಟ್ಟು ಟಾಯ್ಲೆಟ್ ಕಟ್ಟಿದ್ರು
Team Udayavani, Jun 11, 2017, 3:10 PM IST
ಬಿಜ್ನೋರ್: ಶೌಚಾಲಯ ಕಟ್ಟಿಸಿಕೊಳ್ಳಲು ಸರಕಾರ ಬಿಡುಗಡೆ ಮಾಡಿದ್ದ 17.5 ಲಕ್ಷ ರೂ. ಹಿಂದಿರುಗಿಸಿದ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಗ್ರಾಮವೊಂದರ ನಿವಾಸಿಗಳು, ಸ್ವಂತ ಹಣದಲ್ಲೇ ಶೌಚಾಲಯ ಕಟ್ಟಿಕೊಳ್ಳುವ ಮೂಲಕ ಇಡೀ ದೇಶಕ್ಕೇ ಮಾದರಿಯಾಗಿದ್ದಾರೆ. ಈ ಮೂಲಕ ರಮ್ಜಾನ್ ತಿಂಗಳನ್ನು ಅರ್ಥಪೂರ್ಣವಾಗಿ ಆಚರಿಸುವುದು ಇಲ್ಲಿನ ಜನರ ಆಶಯವಾಗಿದೆ.
ಮುಸ್ಲಿಂ ಪ್ರಾಬಲ್ಯವಿರುವ ಮುಬಾರಕ್‌ಪುರ್ ಕಾಲಾ ಗ್ರಾಮದಲ್ಲಿ 661 ಕುಟುಂಬಗಳಿದ್ದು, ಈ ಪೈಕಿ ಕೇವಲ 146 ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದವು. ಉಳಿದವರೆಲ್ಲ ಶೌಚಕ್ಕೆ ಬಯಲನ್ನೇ ಆಶ್ರಯಿಸಿದ್ದರು. ಹೀಗಾಗಿ ಗ್ರಾಮವನ್ನು ಬಯಲು ಶೌಚಮುಕ್ತವಾಗಿಸಲು ಸ್ಥಳೀಯ ಪಂಚಾಯತ್‌ಗೆ ಜಿಲ್ಲಾಡಳಿತದಿಂದ 17.5 ಕೋಟಿ ರೂ. ಮಂಜೂರಾಯಿತು. ಆದರೆ “ಇದು ರಮ್ಜಾನ್ ತಿಂಗಳು. ಈ ಪವಿತ್ರ ಮಾಸದಲ್ಲಿ ದಾನ ಕೊಡಬೇಕೇ ಹೊರತು, ಉತ್ತಮ ಕೆಲಸಕ್ಕಾಗಿ ಹಣಕಾಸು ನೆರವು ಪಡೆಯುವುದು ತಪ್ಪಾಗುತ್ತದೆ. ಎಲ್ಲ ಮನೆಗಳಲ್ಲೂ ಶೌಚಾಲಯ ಕಟ್ಟುವುದು ಒಳ್ಳೆಯ ಕೆಲಸ. ಹಾಗೇ ಈ ಕೆಲಸವನ್ನು ನಮ್ಮ ಹಣದಲ್ಲೇ ಮಾಡಿಕೊಳ್ಳುತ್ತೇವೆ’ ಎಂದು ಜಿಲ್ಲಾಡಳಿತಕ್ಕೆ ಪತ್ರ ಬರೆದ ಗ್ರಾಮಸ್ಥರು, ಒಟ್ಟೂ ಹಣವನ್ನು ಹಿಂದಿರುಗಿಸಿದ್ದಾರೆ. ಪರಿಶೀಲನೆ ನಡೆಸಿದ ಅಧಿಕಾರಿಗಳು ಈ ಗ್ರಾಮವನ್ನು “ಬಯಲು ಶೌಚ ಮುಕ್ತ ಗ್ರಾಮ’ ಎಂದು ಘೋಷಿಸಿದ್ದಾರೆ. ಸಾರ್ವಜನಿಕರ ನಿರ್ಧಾರವನ್ನು “ಉದಾತ್ತ ಚಿಂತನೆ’ ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.