ಯಾರದಿದು ಈ ಮಾತು?


Team Udayavani, Jun 11, 2017, 3:42 PM IST

mathu.jpg

ಕವಿ ಮಾತೊಂದು ಕೇಳುತ್ತಿದೆ, “ಅಕ್ಕರದ ಬರಹಕ್ಕೆ ಮೊದಲಿಗನಾರು?’ ಹಾಗೆ ಕೇಳುವಾಗಲೇ ಹೀಗೆ ಕೇಳುವುದೇ ಎಷ್ಟು ಅಸಂಬದ್ಧವಾಗಿದೆ ಎಂದು ಸೂಚಿಸುತ್ತಲೂ ಇದೆ. ಬರಹವಿರಲಿ, ಬರಹದ ಮೂಲವಾದ ಮಾತಿನ ಮೂಲ ಎಲ್ಲಿದೆ? ಹಾಗೆ ಮಾತು ಎಂಬ ಮಾತಿಗೆ ಮೂಲವೊಂದು ಇದ್ದ ಪಕ್ಷದಲ್ಲಿ ಅದನ್ನು ಮೊತ್ತಮೊದಲಿಗೆ ಆಡಿದವರು ಯಾರಿದ್ದಿರಬಹುದು? ಸರಿ, ಯಾರೊ ಎÇÉೋ ಒಂದೆಡೆ, ಯಾರೂ ಅದುವರೆಗೆ ಆಡದಿದ್ದ ಒಂದು ಮಾತನ್ನು ಆಡಿದರು ಎಂದಿಟ್ಟುಕೊಂಡರೆ, ಆ ಮಾತಿಗೆ ಮೂಲವಾದ ಒಂದು ಯೋಚನೆ ಅಥವಾ ಭಾವನೆ ಅವರಿಗೆ ಬಂದಿ¨ªೆಲ್ಲಿಂದ? ಅದು ಮಾತಿನ ರೂಪ ಪಡೆದದ್ದು ಹೇಗೆ? ಹಾಗೆ ಬಂದ ಆ ಒಂದು ಯೋಚನೆ ಕೇವಲ ಅವರದ್ದಷ್ಟೆ ಆಗಿತ್ತು ಎಂಬುದಕ್ಕೆ ಪುರಾವೆ ಏನಿದೆ? ಲೆಕ್ಕವಿಲ್ಲದ ಇಂಥ ಎಷ್ಟೆಷ್ಟೋ ಮೊದಲುಗಳನ್ನು ಹಾಗೆಲ್ಲ ಲೆಕ್ಕವಿರಿಸದ ಈ ಜಗದಲ್ಲಿ, “ದಕ್ಕುವುದೆ ಜಸ ನಿನಗೆ ಮಂಕುತಿಮ್ಮ?’ ಎಂದು ಕವಿ ಕೇಳುತ್ತಾರೆ. ಅವರಿಗೂ ಮುಂಚೆಯೂ ಅವರ ನಂತರವೂ ಇನ್ನೆಷ್ಟೋ ಕವಿಗಳು, ತತ್ವಜ್ಞಾನಿಗಳು, ವಿಜ್ಞಾನಿಗಳು, ವಿಚಾರವಂತರು, ಹಾಗೆಯೇ ಅದ್ಯಾವುದೂ ಅಲ್ಲದೆ ಸಾಮಾನ್ಯರೆನಿಸಿಕೊಂಡ ಎಷ್ಟೋ ಮಂದಿಯೂ ಈ ಪ್ರಶ್ನೆಯನ್ನು  ಮತ್ತೆ ಮತ್ತೆ ಎಲ್ಲ ಕಾಲದಲ್ಲೂ ಹೊಸದಾಗಿ ಕೇಳುತ್ತಲೇ ಇ¨ªಾರೆ. ಈ ಪ್ರಶ್ನೆ ಮೊತ್ತಮೊದಲಿಗೆ ಯಾವ ಕಾಲದಲ್ಲಿ ಯಾರ ಮನದಲ್ಲಿ ಮೊದಲು ಮೂಡಿದ್ದು ಎಂದು ಯಾರೂ ಯಾರನ್ನೂ ಕೇಳುವಂತಿಲ್ಲ. ಆದರೆ, ಆಡುವವರು ಹೊಸಬರಾದಂತೆಲ್ಲ ಅಥವಾ ಬೇರೆಯಾದಂತೆಲ್ಲ ಆ ಮಾತೂ ಹೊಸದಾಗುತ್ತಿರುತ್ತದೆ. ಮತ್ತೆ  ಮತ್ತೆ ಯಾರೇ ಎಷ್ಟೇ ಬಾರಿ ಅದನ್ನು ಈಗಾಗಲೇ ನುಡಿದಿದ್ದರೂ ಹಾಗೆ ಈಗ ಅದನ್ನು ನುಡಿದವರು ಅದನ್ನು ತಮ್ಮದೇ ಮಾತಾಗಿ ಆಡುತ್ತಿರುವುದೇ ಕಾರಣವಾಗಿ ಆ ಮಾತೂ ಹೊಸದಾಗಿಯೆ ಮೂಡಿದೆ. ಆದರೆ  ಆಡುವವರ ಸ್ವಂತ ಬುದ್ಧಿ ಮತ್ತು ಅನುಭವದ ಹಿನ್ನೆಲೆಯಿರದೆ, ಭಾವ-ಬೆರಗು-ಪ್ರಾಮಾಣಿಕತೆಗಳ ಹಂಗೇ ಇಲ್ಲದೆ ಸುಮ್ಮನೆ ಯಾರೋ ಆಡಿದ್ದನ್ನೆ ಆಡಿದಾಗ ಮಾತ್ರ ಮಾತೂ ಹೊಸದಾಗಲು ಸೋಲುತ್ತದೆ.   

ಈ ಲೋಕದಲ್ಲಿ ಈ ಹಿಂದೆ ಇದ್ದ, ಮುಂದೆ ಬರಲಿರುವ ಮತ್ತು ಈಗ ಸದ್ಯದಲ್ಲಿ ಇರುವ ಏಳೂವರೆ ಬಿಲಿಯನ್‌ ಮಂದಿಯ ಕಣ್ಣಿನ ಐರಿಸ್‌ ಮತ್ತು ಕೈಬೆರಳಚ್ಚಿನ ಗುರುತು ಹೇಗೆ ಪ್ರತಿಯೊಬ್ಬರಿಗೂ ವಿಶಿಷ್ಟವಾಗಿದೆಯೋ ಹಾಗೆಯೇ ಅವರಾಡುವ ಮಾತೂ ಅವರವರ ಅನುಭವದ ನೆಲೆಯಲ್ಲಿ ಬೇರೆ ಬೇರೆಯಾಗಿಯೇ ಮೂಡುತ್ತಿದೆ, ಒಂದೇ ಎಂಬಂತೆ ಕಂಡರೂ.

ಒಂದೇ ಮಾತಿಗೆ ಹೀಗೆ ಸಾವಿರ ರೂಪಗಳಾದರೂ ಯಾಕಿರಬೇಕು? ಮನುಷ್ಯನೆಂಬ ಜೀವಿಗೆ ಒದಗಿಬಂದಿರುವ ಎಷ್ಟೆಷ್ಟೋ ವಿಶೇಷಗಳಲ್ಲಿ ಈ ಮಾತಿನ ವೈವಿಧ್ಯವೂ ಒಂದು. ಅದರ ಹಿಂದೆ ಇರುವುದು ಈ ಸೃಷ್ಟಿಯ ಕುರಿತು, ಜೀವಿತದ ಕುರಿತು ಅವನಿಗಿರುವ ಒಂದು ಶುದ್ಧ ಬೆರಗು ಮತ್ತು ಅದನ್ನು ಹೇಗಾದರೂ ಅರಿಯಬೇಕೆನ್ನುವ, ಆಡಬೇಕೆನ್ನುವ ಯಾವ ತರ್ಕಕ್ಕೂ ಸಿಕ್ಕದ ಒಂದು ಸಹಜ ಆಸೆ.  ಹೀಗಾಗಿಯೇ ಅದನ್ನು ನೂರು ಬಗೆಯಲ್ಲಿ, ನೂರು ವಿಧಗಳಲ್ಲಿ ಅರಿಯುವ ಆಸೆ ಮತ್ತು ತನ್ನ ಅರಿವಿಗೆ ಸಿಕ್ಕಿದ್ದನ್ನೂ ಸಿಕ್ಕಲಾರದೆ ಹೋಗಿದ್ದನ್ನೂ ಮಾತಿನಲ್ಲಿ ಆಡುವ ಹಂಬಲ.

ಅಲ್ಲಮ ಆಡುತ್ತಿ¨ªಾನೆ, ಬೆಡಗಿನಲ್ಲಿ : 
ಅರಿವು ಅರಿವೆನುತಿಪ್ಪಿರಿ!
ಅರಿವು ಸಾಮಾನ್ಯವೆ?
ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
ನಿಂದ ಹೆಜ್ಜೆಯನರಿಯಬಾರದು.
ಮುಂದಣ ಹೆಜ್ಜೆಯಳಿದಲ್ಲದೆ
ಒಂದು ಪಾದ ನೆಲೆಗೊಳ್ಳದು.
ನೆಲನ ಬಿಟ್ಟು 
ಆಕಾಶದಲ್ಲಿ ನಿಂದು
ಮುಗಿಲೊಳಗೆ ಮಿಂಚಿದಲ್ಲದೆ ತಾನಾಗಬಾರದು.
ಗುಹೇಶ್ವರನೆಂಬುದು ಬರಿದೆ ಬಹುದೇ ಹೇಳಿರೇ.

ಅರಿವು, ಅನುಭವಗಳು ಹಿಂದಿನ ಮುಂದಿನ ಹೆಜ್ಜೆಗಳ ನೆಲೆಯÇÉೇ ನೆಲೆ ಕಂಡುಕೊಳ್ಳುತ್ತಾ ಸಾಗುತ್ತಿದ್ದರೂ ಎಂದಾದರೊಮ್ಮೆ ಈ ತಿಳುವಳಿಕೆಯ ಹಾದಿಯ ಹಂಗು ತೊರೆದು, ನೆಲ ಬಿಟ್ಟು ಮುಗಿಲಲ್ಲಿ ಮಿಂಚಿ ವಿಶೇಷವಾಗದೆ ಅದು ತಾನೆ ತಾನಾಗುವುದು ಸಾಧ್ಯವಿಲ್ಲ ಎಂದು ಇದನ್ನು ಅರ್ಥೈಸಬಹುದೆ? ಬಹುದೋ ಬಾರದೋ ಎಂಬುದು ಸಹ ನಮ್ಮ ನಮ್ಮ ಅರಿವು, ಅನುಭವಗಳ ಹಿನ್ನೆಲೆಯಲ್ಲಿ, ಅಷ್ಟೇ ಅಲ್ಲದೆ ಅರ್ಥವನ್ನು ಅರಸುವ ಸಂದರ್ಭಗಳನ್ನು ಅನುಸರಿಸಿಯೂ ಬದಲಾಗುತ್ತಲೇ ಉಳಿಯಬಹುದು. ಶಬ್ದ, ಅರ್ಥ, ಭಾವಗಳೆಲ್ಲ ಹೀಗೆ ಈಗಾಗಲೇ ಅರ್ಥೈಸಿರುವ, ಸಿಕ್ಕಿರುವ ಸಿದ್ಧ ಉತ್ತರಗಳ ಹಂಗು ತೊರೆದು, ಉತ್ತರವನ್ನೇ ಬಯಸದ ಪ್ರಶ್ನೆಗಳಾಗಿ ಥಟ್ಟನೆ ಮನದಲ್ಲಿ ಮೂಡಿದಾಗ ಮಾತ್ರ ಮಾತು ಹೊಸದಾಗಬಹುದು ಅಥವಾ ಹೊಸದೆನ್ನುವ ಹಾಗೆ ಕಾಣಬಹುದು.  

ತಿಳಿದವರೊಬ್ಬರು ಯಾವುದೋ ಕಥೆಯೊಂದನ್ನು ಹೇಳುತ್ತಾ ಹೇಳಿದರು, ದೇವರು ಈ ಸೃಷ್ಟಿಯಲ್ಲಿರುವ ಸಮಸ್ತವನ್ನೂ ಒಂದರ ಬಳಿಕ ಒಂದೆಂಬಂತೆ ಸೃಷ್ಟಿಸುತ್ತಿದ್ದ ವೇಳೆ ಒಂದು ಹಂತದಲ್ಲಿ ಮನುಷ್ಯನನ್ನು ಸೃಷ್ಟಿಸಿದನಂತೆ. ಹಾಗೆ ಮನುಷ್ಯನನ್ನು ಸೃಷ್ಟಿಸಿದ ಬಳಿಕ ದೇವರಿಗೆ ಅನ್ನಿಸಿತಂತೆ, ತಾನು ಸೃಷ್ಟಿಸಲು ಇನ್ನೇನೂ ಉಳಿದಿಲ್ಲ ಎಂದು! ಮನುಷ್ಯ ದೇವರ ಪರಿಪೂರ್ಣ ಸೃಷ್ಟಿ ಎಂದು ದೇವರಿಗೇ ಅನ್ನಿಸಿದ್ದು ಅದಕ್ಕೆ ಕಾರಣ. ಸರಿ, ಈ ಪರಿಪೂರ್ಣ ಸೃಷ್ಟಿ ಎಂದರೇನು? ದೇವರಿಗೆ ಅನ್ನಿಸಿತಂತೆ, “ಈ ಮನುಷ್ಯ ಪ್ರಾಣಿ ಚಿರಶಿಶು’ ಎಂದು! ಅಂದರೆ ತಾನು ಇದುವರೆಗೆ ಸೃಷ್ಟಿಸಿದ ಎಲ್ಲವನ್ನೂ ಜೊತೆಗೆ ತನ್ನನ್ನೂ ಸದಾಕಾಲವೂ ಬೆರಗಿನಲ್ಲಿ, ಕುತೂಹಲದಲ್ಲಿ ನೋಡಬಲ್ಲ ಮತ್ತು ಹಾಗೆ ನೋಡಿದ್ದನ್ನು ಅರಿಯಬೇಕೆಂಬ ಸಹಜ ಆಸೆ ಮನುಷ್ಯನಲ್ಲಿದೆ ಎಂದು. ಈ ಮಗುಮನ ಮನುಷ್ಯನಲ್ಲಿ ಇದೆ ಎಂದು ತಿಳಿದ ದೇವರು ಇವನನ್ನು ಪರಿಪೂರ್ಣನೆಂದುಕೊಂಡು ತನ್ನ ಸೃಷ್ಟಿ ಕಾರ್ಯವನ್ನು ಅಲ್ಲಿಗೆ ನಿಲ್ಲಿಸಿದನಂತೆ. ಈ ಕಥೆಯಲ್ಲಿ ನನಗಿಷ್ಟವಾದದ್ದು ಮನುಷ್ಯನನ್ನು ಚಿರ ಶಿಶುವೆಂದು ಕರೆದ ಬಗೆ. ಇನ್ನಷ್ಟು ಇಷ್ಟವಾಗಿದ್ದು, ನಮ್ಮನ್ನು ಪರಿಪೂರ್ಣಗೊಳಿಸುವುದು ಉತ್ತರಗಳಲ್ಲ , ಬದಲಿಗೆ ಪ್ರಶ್ನೆಗಳನ್ನು ಹುಟ್ಟಿಸಬಲ್ಲ ಸಹಜ ಬೆರಗು ಎಂಬುದು! ದೇವರೇ ನಮ್ಮನ್ನು ಪರಿಪೂರ್ಣ ಎಂದುಕೊಂಡಿದ್ದಕ್ಕೆ ಕಾರಣ ಮನುಷ್ಯನಲ್ಲಿದ್ದ ಶುದ್ಧ ಕುತೂಹಲ. ಈ ಕುತೂಹಲದಿಂದಾಗಿಯೇ ಮನುಷ್ಯನೆಂಬ ಈ ಚಿರ ಶಿಶುವಿಗೆ ತನ್ನ ಅರಿವಿನಾಚೆಗೆ ನಿಂತ ಎಲ್ಲವನ್ನೂ ಅರಿಯುವ, ಮುಟ್ಟಿ ಮಾತಾಡಿಸುವ ಹಂಬಲ. 
….
ನಿನ್ನ ಮನದ ಕಳವಳವ ತಿಳುಹಲೆಂದು
ಮಾತಾಡಿಸಿ ನೋಡಿದಡೆ,
ಎನ್ನ ಮನದೊಳಗೆ ಕಂದು ಕಲೆಯೆಂಬುದಿಲ್ಲ ನೋಡಾ!
ನಮ್ಮ ಗುಹೇಶ್ವರ ಲಿಂಗಕ್ಕೆ ನೀನು ಕರುಣದ ಶಿಶುವಾದ ಕಾರಣ,
ಬಾಯ್ದೆಗೆದೆನಲ್ಲದೆ, ಭಿನ್ನ ಉಂಟೆ ಹೇಳಾ ಮರುಳೆ!
ಮಗುಮನದ ಈ ಆಸೆ ಈ ಕುತೂಹಲ ಮನುಷ್ಯನನ್ನು ಕಾಯುವ ತನಕ ಆಡುವ ಮಾತು ಮತ್ತೆ ಮತ್ತೆ ಹೊಸದಾಗುತ್ತಲೇ ಉಳಿಯಬಹುದೇನೋ! 

– ಮೀರಾ ಪಿ. ಆರ್‌., ನ್ಯೂಜೆರ್ಸಿ

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.