ಯಹೂದಿ ವಿನೋದ ಕತೆಗಳು


Team Udayavani, Jun 11, 2017, 3:58 PM IST

yahudi.jpg

ಸಿಟ್ಟಿಗೊಂದು ಕಾರಣ
ರೆಬೆಕ ರಬೈಯನ್ನು ನೋಡಲು ಬಂದಳು. ಮೈಯೆಲ್ಲ ಥರಗುಟ್ಟುತ್ತಿತ್ತು. ಕೋಪದಿಂದ ಮೂಗಿನ ಹೊಳ್ಳೆಗಳು ದೊಡ್ಡದಾಗಿದ್ದವು. ಕಿವಿ ಕೆಂಪಾಗಿತ್ತು. ಆವೇಶದ ಬಿಸಿಯುಸಿರು ಚಿಮ್ಮುತ್ತಿತ್ತು. ವಿಷಯ ಗಂಭೀರವಾಗಿದೆ ಎಂದು ರಬೈಗೆ ಅರ್ಥವಾಯಿತು.

ತುಂಬ ಅನುನಯದಿಂದ “”ಏನು ವಿಷಯ ಮಗಳೇ?” ಎಂದು ಕೇಳಿದ.
“”ನನಗೆ ನ್ಯಾಯ ಬೇಕು” ರೆಬೆಕ ನಡುಗುವ ಧ್ವನಿಯಲ್ಲಿ ಸಿಟ್ಟಿಂದ ಕಿರುಚಿದಳು.
“”ಖಂಡಿತ. ನಿನಗಾದ ಅನ್ಯಾಯದ ಬಗ್ಗೆ ಹೇಳು”
“”ನನ್ನ ಗಂಡನ ಬಗ್ಗೆ ಯಾಕೋ ಇತ್ತೀಚೆಗೆ ಸಂಶಯ ಬಲವಾಗುತ್ತಿದೆ ನನಗೆ. ನನ್ನ ಕೊನೆಯ ಮಗುವಿನ ತಂದೆ ಅವನಲ್ಲ ಅಂತ ಗುಮಾನಿ”.

ಸಭ್ಯ ಗಿರಾಕಿ
ತಲೆಗೂದಲುದುರಿ ಹಲ್ಲು ಬಿದ್ದುಹೋಗಿ ಕೋಲಿಲ್ಲದೆ ನಿಲ್ಲುವುದೇ ಕಷ್ಟವಾದಂತಿದ್ದ ಮೋಷೆಗೆ ಒಮ್ಮೆ ವೇಶ್ಯಾಗೃಹಕ್ಕೆ ಹೋಗುವ ಮನಸ್ಸಾಯಿತು. ಎರಡನೆಯ ಯೋಚನೆ ಕೂಡ ಮಾಡದೆ ನೆಟ್ಟಗೆ ಹೋಗಿಯೇಬಿಟ್ಟ. ಅಲ್ಲದೆ ಅದರ ಒಡತಿಯ ಬಳಿ ಸಾಗಿ ತನಗೊಬ್ಬಳು ಸುಂದರವಾದ ಷೋಡಶಿಕನ್ಯೆ ಬೇಕಾಗಿತ್ತೆಂದು ಬೇಡಿಕೆ ಇಟ್ಟ. ಅವಳಿಗೆ ಈ ಅಜ್ಜನ ಅವಸ್ಥೆ ನೋಡಿ ಅಸಹ್ಯವಾದರೂ ನಗು ಬಂತು.

“”ಶ್ರೀಯುತರೇ, ತಮಗೆ ಎಷ್ಟು ವಯಸ್ಸು ಅಂತ ಕೇಳಬಹುದೋ?” ಎಂದಳು.
“”ಯಾಕೆ! ಇವತ್ತಿಗೆ ನನಗೆ 98 ವರ್ಷ ತುಂಬಿತು” ಎಂದ ಮೋಷೆ.
“”ಇದನ್ನೆಲ್ಲ ಸಾಕುಸಾಕೆನಿಸುವಷ್ಟು ಮಾಡಿ ಮುಗಿಸಿದ್ದೇನೆಂದು ನಿಮಗೆ ಅನಿಸಿಲ್ಲವೆ?” ಎಂದು ತಿರಸ್ಕಾರದಿಂದ ನುಡಿದಳಾಕೆ.
“”ಅಯ್ಯೊ! ಹೌದೆ? ಕ್ಷಮಿಸಿ. ಈ ಹಾಳು ಮರೆವು! ಹಾಗಾದರೆ ಎಷ್ಟಾಯಿತು?” ಎಂದು ಮೋಷೆ ಅಜ್ಜ ದುಡ್ಡಿನ ಗಂಟು ಬಿಚ್ಚಿದ.

ವಿಶೇಷ ಊಟ
ರಬೈ ಲಾಂದೌ ಅವರಿಗೆ ಪಿಗ್‌ಮಟನ್‌ ತಿನ್ನಬೇಕೆಂದು ಆಸೆ ಇತ್ತು. ಆದರೆ, ಮುಸ್ಲಿಮರಂತೆ ಯಹೂದಿಗಳಿಗೂ ಹಂದಿ ಪರಮ ನಿಷಿದ್ಧ ಅಲ್ಲವೆ? ಕೊನೆಗೆ ಈ ಆಸೆ ಪೂರೈಸಿಕೊಳ್ಳಲು ಒಂದೇ ಉಪಾಯ ಎಂದು ರಬೈ ದೂರದ ಊರಿಗೆ ಪ್ರವಾಸ ಹೋದರು. ಅಲ್ಲಿ ಹಂದಿಮಾಂಸದ ಅಡುಗೆ ಮಾಡುವ ಹೊಟೇಲನ್ನು ಪತ್ತೆ ಹಚ್ಚಿ ಅಲ್ಲಿಗೆ ಊಟಕ್ಕೆ ಹೋದರು. ಅಲ್ಲಿ ತಯಾರಿಸುವ ಒಂದು ವಿಶೇಷ ಹಂದಿಮಾಂಸದ ಖಾದ್ಯವನ್ನು ಆರ್ಡರ್‌ ಮಾಡಿದರು. ಅದು ಇಡೀ ಹಂದಿಯನ್ನು ಕತ್ತರಿಸದೆ ಬೇಯಿಸಿ ತಯಾರಿಸುವ ಒಂದು ವಿಶೇಷ ಐಟಂ ಆಗಿತ್ತು.

ಆದರೆ, ರಬೈಯವರ ದುರದೃಷ್ಟಕ್ಕೆ ಸ್ವಲ್ಪ ಹೊತ್ತಿನÇÉೇ “ಶ್ರೀಯುತ ಲಾಂದೌ!’ ಎಂದು ಹಿಂದಿನಿಂದ ಯಾರೋ ಕರೆಯುವುದು ಕೇಳಿಸಿತು. ತಿರುಗಿ ನೋಡಿದರೆ, ಪ್ರಾರ್ಥನಾ ಮಂದಿರಕ್ಕೆ ಬರುವ ಒಬ್ಬ ಭಕ್ತಮಿತ್ರರು! ಲಾಂದೌ ಅವರಿಗೆ ಭೂಮಿಯೇ ಬಾಯಿಬಿಡಬಾರದೇ ಎನ್ನಿಸಿತು. ಅಷ್ಟರಲ್ಲಿ ಸರ್ವರ್‌, ಒಂದು ದೊಡ್ಡ ತಟ್ಟೆಯಲ್ಲಿ ಬೇಯಿಸಿದ ಇಡೀ ಹಂದಿಯನ್ನು ಉಪ್ಪು-ಮಸಾಲೆ ಹಚ್ಚಿ ಸುಂದರವಾಗಿ ಶೃಂಗರಿಸಿ ರಬೈಯವರ ಮುಂದಿಟ್ಟು “ನಿಮ್ಮ ವಿಶೇಷ ಊಟ!’ ಎಂದ. ಹಂದಿಯ ತೆರೆದ ಬಾಯೊಳಗೆ ಅಲಂಕಾರಕ್ಕೆಂದು ಒಂದು ಸಣ್ಣ ಸೇಬುಹಣ್ಣು ಇಟ್ಟಿದ್ದರು.
ರಬೈ ಕೂಡಲೇ, “ಆಹ್‌! ಏನೀ ಅದ್ಭುತ! ಒಂದು ಸೇಬನ್ನು ಆರ್ಡರ್‌ ಮಾಡಿದರೆ ಈ ಹೊಟೇಲಲ್ಲಿ ಅದನ್ನು ಕೊಡುವ ಬಗೆ ಹೇಗಿದೆ!’ ಎಂದು ಮೇಲೆ ನೋಡಿದರು.

ಈಡಿಪಸ್‌ ಕಾಂಪ್ಲೆಕ್ಸ್‌

ಫ್ರೆಡಾ ಕೊಹೆನ್‌ನ ದಿನದ ಅರ್ಧದಷ್ಟು ಸಮಯ ತನ್ನ ಮಗನೊಡನೆ ಜಗಳದÇÉೇ ಕಳೆಯುತ್ತಿತ್ತು. “ನೀನು ಒರಟ’ ಎಂದು ಆಕೆ, “ನೀನು ಸರ್ವಾಧಿಕಾರಿ’ ಎಂದು ಆತ ಒಬ್ಬರ ಮೇಲೊಬ್ಬರು ಕೂಗಾಡುತ್ತಲೇ ಇರುತ್ತಿದ್ದರು. ಯಾವ ವಿಷಯದಲ್ಲೂ ಅವರಿಗೆ ಒಮ್ಮತ ಇರಲಿಲ್ಲ. ಯಾಕೋ ಇತ್ತೀಚೆಗೆ ಈ ಜಗಳಗಳು ನಿಯಂತ್ರಣ ತಪ್ಪುವಷ್ಟು ವಿಪರೀತಕ್ಕೆ ಹೋಗುತ್ತಿವೆ ಎನ್ನಿಸಿದ ಮೇಲೆ ಫ್ರೆಡಾ ತನ್ನ ಹದಿಹರೆಯದ ಮಗನನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ದಳು. 
ಅವನನ್ನು ಪೂರ್ತಿಯಾಗಿ ತಪಾಸಣೆ ಮಾಡಿದ ಮೇಲೆ, ವೈದ್ಯರು ಫ್ರೆಡಾ ಬಳಿ, “ಬೇಸರಿಸಬೇಡಿ. ಆದರೆ, ನಿಮಗೆ ಸತ್ಯವನ್ನು ಹೇಳುವುದು ನಮ್ಮ ಕರ್ತವ್ಯ. ನಿಮ್ಮ ಮಗನಿಗೆ ಈಡಿಪಸ್‌ ಕಾಂಪ್ಲೆಕ್ಸ್‌ ಇದೆ’ ಎಂದರು.

“ಈಡಿಪಸೊÕà ಕೋಡಿಪಸೊÕà. ಒಟ್ಟಲ್ಲಿ ಅವನಿಗೆ ತನ್ನ ತಾಯಿ ಮೇಲೆ ಪ್ರೀತಿ ಹುಟ್ಟಿದರೆ ಅಷ್ಟೇ ಸಾಕಾಗಿದೆ’ ಎಂದಳು ಫ್ರೆಡಾ!

ಪಶ್ಚಾತ್ತಾಪ
ಬರ್ನಿ ತನ್ನ ಕಾರನ್ನು ಪಾರ್ಕಿಂಗ್‌ ಜಾಗದಿಂದ ತೆಗೆಯುವುದರಲ್ಲಿ¨ªಾಗ ಅದು ಹೋಗಿ ಎದುರು ನಿಲ್ಲಿಸಿದ್ದ ಇನ್ನೊಂದು ಕಾರಿನ ಮೂತಿಗೆ ಬಡಿಯಿತು. ಬಡಿದ ವೇಗಕ್ಕೆ ಅದರ ಮೂತಿ ಸೊಟ್ಟಗಾಯಿತು. ಸಾಲದ್ದಕ್ಕೆ ಈ ಘಟನೆಯನ್ನು ಹತ್ತಿರದÇÉೇ ಇದ್ದ ಬಸ್‌ ಸ್ಟಾಪಿನಲ್ಲಿ ಬಸ್ಸಿಗೆ ಕಾಯುತ್ತಿದ್ದ ಹತ್ತಾರು ಜನ ನೋಡಿಬಿಟ್ಟರು. ಕಾರಿಂದ ಕೆಳಗಿಳಿದು ಸಮಸ್ಯೆಯನ್ನು ಬಗೆಹರಿಸದೆ ಬರ್ನಿಗೆ ಬೇರೆ ದಾರಿಯೇ ಇಲ್ಲವಾಯಿತು.

ಅವನು ತನ್ನ ಕಾರಿಂದ ಹೊರಬಂದು, ಅÇÉೇ ಬಿದ್ದಿದ್ದ ಒಂದು ಪೇಪರ್‌ ಅನ್ನು ಎತ್ತಿಕೊಂಡು ಬರೆಯಲಾರಂಭಿಸಿದ: “ನಮಸ್ಕಾರ! ನಾನು ಈಗಷ್ಟೇ ನಿಮ್ಮ ಕಾರಿಗೆ ಗುದ್ದಿ ಅದರ ಮೂತಿ ಸೊಟ್ಟಗಾಗಲು ಕಾರಣನಾಗಿದ್ದೇನೆ. ಇದನ್ನು ಹೊರಗೆ ನಿಂತಿದ್ದ ಅನೇಕರು ನೋಡಿಬಿಟ್ಟಿ¨ªಾರೆ. ನಿಮಗೆ ಮುಂದಿನ ಕೆಲಸಕ್ಕೆ ಅನುಕೂಲವಾಗುವಂತೆ ನಾನು ನನ್ನ ಹೆಸರು, ಫೋನ್‌ ನಂಬರನ್ನು ಇಲ್ಲಿ ಬರೆದು ಹೋಗುತ್ತಿದ್ದೇನೆ ಎಂದು ನಾನು ಬರೆಯುವುದನ್ನು ನೋಡುತ್ತಿರುವ ಇವರೆಲ್ಲ ತಿಳಿದಿ¨ªಾರೆ. ಆದರೆ, ಕ್ಷಮಿಸಿ, ನಾನು ಅಂಥದ್ದೇನನ್ನೂ ಬಿಟ್ಟುಹೋಗುವ ಪೈಕಿ ಅಲ್ಲ. ಕ್ಷಮಿಸಿ’

– ಆರ್.ಸಿ

ಟಾಪ್ ನ್ಯೂಸ್

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.