66 ಸರಕುಗಳ ತೆರಿಗೆಗೆ ಕತ್ತರಿ : ಇನ್ಸುಲಿನ್ ಬೆಲೆ ಇಳಿಕೆ
Team Udayavani, Jun 12, 2017, 1:39 AM IST
ಹೊಸದಿಲ್ಲಿ: ಸರಕು ಸೇವಾ ತೆರಿಗೆ (ಜಿಎಸ್ಟಿ) ಜುಲೈ 1ರಿಂದ ಜಾರಿಗೆ ಬಂದಲ್ಲಿ ಬಿಂದಾಸ್ ಊಟ, ಉಪಾಹಾರ ಮಾಡಲೇನೂ ಅಡ್ಡಿಯಿಲ್ಲ. ತೃಪ್ತಿಯಾಗುವಷ್ಟು ಸಿನೆಮಾ ನೋಡಿದ ಮೇಲೂ ಮತ್ತೂಂದು ನೋಡಿಯೇ ಬಿಡೋಣ ಎನ್ನುವ ಧೈರ್ಯ ಬಂದರೂ ಬರಬಹುದು. ಆದರೆ ಸಿನೆಮಾ ಟಿಕೆಟ್ಗಳ ದರ 100 ರೂ. ಒಳಗೆ ಇದ್ದಲ್ಲಿ ಮಾತ್ರ!
ರವಿವಾರ 16ನೇ ಬಾರಿಗೆ ಸಭೆ ಸೇರಿದ ಜಿಎಸ್ಟಿ ಮಂಡಳಿ ಒಟ್ಟು 66 ವಸ್ತುಗಳ ಮೇಲಿನ ತೆರಿಗೆಯನ್ನು ಬದಲಿಸಿದೆ. ಉಪ್ಪಿನಕಾಯಿ, ಸಾಸಿವೆ ಸಾಸ್, ಕಜ್ಜಾಯಕ್ಕೆ ಬೇಕಾಗುವ ಸಾಮಗ್ರಿಗಳು ಸೇರಿ ಅಡುಗೆ ಮನೆಗೆ ಅಗತ್ಯವಾದ ಬಹುತೇಕ ವಸ್ತುಗಳು ಹಾಗೂ ಸಿನೆಮಾ ಟಿಕೆಟ್ಗಳ ದರ ಕಡಿಮೆಯಾಗಲಿವೆ. ಜಿಎಸ್ಟಿ ಮಂಡಳಿ ನಿಗದಿ ಪಡಿಸಿರುವಂತೆ ಸಿನೆಮಾ ಟಿಕೆಟ್ ಬೆಲೆ 100 ರೂ. ಇದ್ದಲ್ಲಿ ಶೇ.18, 100ಕ್ಕಿಂತ ಜಾಸ್ತಿ ಬೆಲೆಯ ಟಿಕೆಟ್ಗಳಿಗೆ ಶೇ. 28ರಷ್ಟು ತೆರಿಗೆ ನಿಗದಿಗೊಳಿಸಿದೆ. ಅದರಂತೆ ಉಪ್ಪಿನಕಾಯಿ, ಸಾಸ್ ಹಾಗೂ ಸಿಹಿ ಪದಾರ್ಥಗಳ ಮೇಲಿನ ಈ ಮೊದಲ ಶೇ. 18 ತೆರಿಗೆಯನ್ನು ಶೇ. 12ಕ್ಕೆ ಇಳಿಸಿದೆ. ಗೋಡಂಬಿ ಮೇಲಿನ ಶೇ. 12ರಷ್ಟು ತೆರಿಗೆಯನ್ನು ಶೇ. 5ಕ್ಕೆ ನಿಗದಿಪಡಿಸಲಾಗಿದೆ.
ಹೊಟೇಲ್ ಉದ್ಯಮಿಗಳ ಒತ್ತಡದ ಹಿನ್ನೆಲೆಯಲ್ಲಿ ತೆರಿಗೆ ಹೇರಿಕೆ ಬಗ್ಗೆ ಪರಿಶೀಲನೆ ನಡೆಸಿದ ಜಿಎಸ್ಟಿ ಮಂಡಳಿ ವ್ಯಾಪಾರಿಗಳು, ತಯಾರಕರು, ಹೊಟೇಲ್ ಮಾಲಕರ ವಹಿವಾಟು 75 ಲಕ್ಷ ರೂ. ಮೀರದಿದ್ದಲ್ಲಿ ಅವರಿಗೆ ಕ್ರಮವಾಗಿ ಶೇ. 1, 2 ಹಾಗೂ 5 ತೆರಿಗೆ ನಿಗದಿಪಡಿಸಿದೆ. ಕೃಷಿ ಸಾಮಗ್ರಿಗಳ ತೆರಿಗೆಯನ್ನು ಶೇ. 18ಕ್ಕೆ ಇಳಿಸಲಾಗಿದೆ. ಶೇ. 12ರಷ್ಟಿದ್ದ ಮಕ್ಕಳ ಡ್ರಾಯಿಂಗ್ ಪುಸ್ತಕಗಳ ಮೇಲಿನ ತೆರಿಗೆಯನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ. ಸ್ಕೂಲ್ ಬ್ಯಾಗ್ಗಳ ಮೇಲಿನ ತೆರಿಗೆಯನ್ನು ಶೇ.18ಕ್ಕೆ ನಿಗದಿಗೊಳಿಸಲಾಗಿದೆ. ಕಂಪ್ಯೂಟರ್ ಬಳಕೆದಾರರಿಗೂ ಸಿಹಿ ಸುದ್ದಿ ಇದ್ದು, ಪ್ರಿಂಟರ್ ಸಾಮಗ್ರಿಗಳು ಹಾಗೂ ಶಾಲಾ ಸಾಮಗ್ರಿಗಳಿಗೆ ಶೇ.12 ತೆರಿಗೆ ನಿಗದಿಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.