ಲಿಮ್ಕಾ ದಾಖಲೆ ಬರೆದ ಮೈಸೂರಿನ ಖುಷಿ
Team Udayavani, Jun 12, 2017, 1:22 PM IST
ಮೈಸೂರು: ನಗರದ ಬಾಲಕಿಯೊಬ್ಬಳು ಯೋಗ ಪ್ರದರ್ಶನದಲ್ಲಿ ವಿಶ್ವ ದಾಖಲೆ ಬರೆದು, ಜಗತ್ತಿನ ಗಮನ ಸೆಳೆದಿದ್ದಾಳೆ. ನಗರದ ಆರ್‌ಬಿಐ ನೋಟು ಮುದ್ರಣ ಘಟಕದ ಅಧಿಕಾರಿ ಹೇಮಚಂದ್ರ ಹಾಗೂ ಕುಮುದಾ ದಂಪತಿಯ ಪುತ್ರಿ 13 ವರ್ಷದ ಖುಷಿ ಈ ಸಾಧನೆ ಮಾಡಿರುವ ಬಾಲಕಿ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಉತ್ತಮ ಯೋಗ ಕಲೆ ಮೈಗೂಡಿಸಿರುವ ಬಾಲಕಿ ಒಂದು ನಿಮಿಷದಲ್ಲಿ ನಿರಾಲಂಭ ಪೂರ್ಣ ಚಕ್ರಾಸನ ಯೋಗಾಸನವನ್ನು 15 ಬಾರಿ ಪ್ರದರ್ಶಿಸುವುದರೊಂದಿಗೆ ವಿಶ್ವದಾಖಲೆ ನಿರ್ಮಿಸಿದ್ದಾರೆ.
ನಗರದ ಮೇಟಗಳ್ಳಿಯ ಆರ್‌ಬಿಐ ನಗರದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖುಷಿ ಈ ಸಾಧನೆ ಮಾಡಿದ್ದು, ಕಾರ್ಯಕ್ರಮದಲ್ಲಿ ಹಾಜರಿದ್ದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರತಿನಿಧಿ ಸಂತೋಷ್ ಅಗರ್‌ವಾಲ್, ಖುಷಿಗೆ ಲಿಮ್ಕಾ ಪ್ರಶಸ್ತಿ ಪತ್ರ ವಿತರಿಸಿದರು.
ಚಕ್ರಾಸನ ಯೋಗ: ಖುಷಿ ಪ್ರದರ್ಶನ ನೀಡಿರುವ ಚಕ್ರಾಸನದಲ್ಲಿ ಯೋಗಪಟು ತನ್ನ ಎರಡೂ ಕೈಗಳನ್ನು ಮುಂದಕ್ಕೆ ಕಟ್ಟಿಕೊಂಡು ಯಾವುದೇ ವಸ್ತುವಿನ ಸಹಾಯವಿಲ್ಲದೆ ಚಕ್ರಾಸನದ ಮಾದರಿಯಲ್ಲಿ ಕಾಲಿನ ಮೇಲೆ ನಿಯಂತ್ರಣ ಸಾಧಿಸಿಕೊಂಡು ಹಿಂಭಾಗಕ್ಕೆ ಬಾಗಿ ನೆಲಕ್ಕೆ ಮೊದಲು ತಲೆ ಮುಟ್ಟಿಸಿ,
-ಬಳಿಕ ನಿಧಾನವಾಗಿ ಜಾರಿಕೊಂಡು ನೇರವಾಗಿ ಮಲಗುವುದಾಗಿದೆ. ನಂತರ ಅದೇ ರೀತಿ ಕಾಲಿನ ಸಹಾಯದಿಂದಲೆ ಮೇಲಕ್ಕೇಳುವ ಈ ಆಸನ ಅತ್ಯಂಕ ಕ್ಲಿಷrಕರವಾಗಿದೆ. ಆದರೆ ಖುಷಿ ಈ ಆಸನವನ್ನು ಅತಿ ಸುಲಭವಾಗಿ ಪ್ರದರ್ಶಿಸುವ ಮೂಲಕ ನೋಡುಗರಲ್ಲಿ ಅಚ್ಚರಿ ಮೂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.