ಶೀಂಬ್ರ: ಕೊಚ್ಚಿಹೋದ ಸೇತುವೆ ಸಲಕರಣೆ
Team Udayavani, Jun 12, 2017, 4:27 PM IST
ಬ್ರಹ್ಮಾವರ: ಕೊಳಲಗಿರಿ ಪರಾರಿ ಮೂಲಕ ಶೀಂಬ್ರ, ಮಣಿಪಾಲಕ್ಕೆ ಸಂಪರ್ಕ ಕಲ್ಪಿಸಲು ಸ್ವರ್ಣಾನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಯ ಸಲಕರಣೆಗಳು ಶನಿವಾರ ರಾತ್ರಿ ಭಾರೀ ಮಳೆಗೆ ಕೊಚ್ಚಿ ಹೋಗಿ ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.
ಸೇತುವೆ ಕಾಮಗಾರಿಯನ್ನು ಮಳೆಗಾಲದ ಪ್ರಯುಕ್ತ ಇನ್ನೆರಡು ದಿನಗಳಲ್ಲಿ ಸ್ಥಗಿತಗೊಳಿ ಸುವ ಬಗ್ಗೆ ನಿರ್ಧರಿಸಿದ್ದು, ಶನಿವಾರ ರಾತ್ರಿ ಒಂದೇ ಸಮನೆ ನೀರಿನ ಹರಿವು ಹೆಚ್ಚಳವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸೇತುವೆ ಕಾಮಗಾರಿಗೆ ಹೊಳೆಯ ತೀರ ದಲ್ಲಿ ಶೇಖರಿಸಿಟ್ಟಿದ್ದ ಕಬ್ಬಿಣದ ಸಲಕರಣೆ ಮತ್ತು ಇನ್ನಿತರ ಸರಕುಗಳು ಕೊಚ್ಚಿ ಹೋಗಿವೆ. ಸೇತುವೆ ನಿರ್ಮಾಣಕ್ಕೆ ಹಾಕಿದ ಮಣ್ಣು ಕೂಡ ಕೊಚ್ಚಿ ಹೋಗಿದೆ. ಒಂದೇ ಬಾರಿ ಭಾರೀ ಪ್ರಮಾಣದ ನೀರು ಬಂದಿದ್ದರಿಂದ ಸಾಮಾನು ಗಳನ್ನು ಬೇರೆಡೆ ಸಾಗಿಸಲು ಸಾಧ್ಯವಾಗಿಲ್ಲ.
ಕಳೆದ ಡಿಸೆಂಬರ್ನಲ್ಲಿ ಕಾಮಗಾರಿ ಪ್ರಾರಂಭವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆ
AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.