12ರ ಬಾಲೆಗೆ ಮಳೆ ತರಿಸೋ ಶಕ್ತಿ!
Team Udayavani, Jun 13, 2017, 2:00 AM IST
ಮಿದ್ರಾಂಡ್: ದಕ್ಷಿಣ ಆಫ್ರಿಕಾದ ಈಕೆಗೆ ಇನ್ನೂ 12ರ ವಯಸ್ಸು. ಅದಾಗಲೇ ಈಕೆಯನ್ನು ರಾಣಿ ಎಂದು ಬಾಲೊಬೆಡು ಸಮುದಾಯ ಪರಿಗಣಿಸಿದೆ. ಈಕೆಗೆ ಮಳೆ ತರಿಸುವ ಶಕ್ತಿ ಇದೆ ಎನ್ನುವುದೇ ವಿಶೇಷ! ಇವಳ ಹೆಸರು ಮಸಾಲಾನಬೊ ಮೋದ್‌ಜಡ್ಜಿ. ಡಾಕ್ಟರ್ ಆಗಬೇಕೆನ್ನುವ ಆಸೆ ಹೊಂದಿದ್ದಾಳೆ. 2005ರಲ್ಲಿ ಈಕೆಯ ತಾಯಿಯ ನಿಧನಾನಂತರ ಮಸಾಲಾನಬೊಳನ್ನು ರಾಣಿಯನ್ನಾಗಿ ಘೋಷಿಸಲಾಗಿದೆ. 18 ತುಂಬುತ್ತಿದ್ದಂತೆ ಆಕೆಗೆ ಪಟ್ಟ ಕಟ್ಟಲಾಗುತ್ತದೆ. ಬಾಲೊ ಬೆಡು ಆದಿವಾಸಿ ಸಮುದಾಯ ಮಹಿಳಾ ಪ್ರಧಾನ ವ್ಯವಸ್ಥೆ ಹೊಂದಿದೆ. ಸದ್ಯ ಮಸಾ ಲಾನಬೊ ಜೊಹಾನ್ಸ್‌ಬರ್ಗ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಅವರ ಸಮುದಾಯ ದ.ಆಫ್ರಿಕಾ ಸರಕಾರದೊಂದಿಗೆ ಉತ್ತಮ ಸಂಬಂಧ, ಪ್ರಭಾವ ಹೊಂದಿದೆಯಂತೆ.
ಮಳೆ ತರಿಸುವ ನಂಬಿಕೆ: ಬಾಲೊಬೆಡು ಸಮುದಾಯದಲ್ಲಿ ರಾಣಿಗೆ ಮಳೆ ತರಿಸುವ ಶಕ್ತಿ ಇದೆ ಎಂಬ ನಂಬಿಕೆ ಇದೆ. ವಸಂತ ಕಾಲದ 5 ವಾರಾಂತ್ಯಗಳಲ್ಲಿ ಆಕೆ ಪೂಜೆ ನಡೆಸುತ್ತಾಳೆ. ಬಳಿಕ ತಡವಿಲ್ಲದಂತೆ ಮಳೆ ಸುರಿಯುತ್ತದೆ ಎಂಬ ನಂಬಿಕೆ ಈ ಸಮುದಾಯದ್ದು. ಇನ್ನೂ ಒಂದು ಅಚ್ಚರಿ ಎಂದರೆ ಈ ಸಮುದಾಯದ ರಾಣಿ ಎಷ್ಟಾದರೂ ಮಹಿಳೆಯನ್ನೇ ವಿವಾಹವಾಗುತ್ತಾಳೆ. ರಾಣಿಯ ಅಪ್ಪಣೆ ಮೇರೆಗೆ ಆಕೆ ಸಮುದಾಯದ ಇತರರಿಂದ ಮಕ್ಕಳನ್ನು ಪಡೆಯ ಬಹುದು. ಅವರನ್ನು ರಾಣಿಯ ಮಕ್ಕಳೆಂದೇ ಪರಿಗಣಿಸಲಾಗುತ್ತದೆ. ರಾಣಿಯೂ ಗುಪ್ತವಾಗಿ ಸಮುದಾಯದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿ ಮಕ್ಕಳನ್ನು ಪಡೆಯಬಹುದಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.