ಮಾಲ್ಗೆ ಹೋಗೋ ಸೊಸೆ ಬೇಡ
Team Udayavani, Jun 13, 2017, 2:04 AM IST
ಪಟ್ನಾ: ‘ಮಾಲ್, ಚಿತ್ರ ಮಂದಿರಗಳಿಗೆ ಭೇಟಿ ನೀಡುವಂಥ ಹುಡುಗಿಯರ ಜತೆ ನನ್ನ ಮಕ್ಕಳ ಮದುವೆ ಮಾಡುವುದಿಲ್ಲ. ಅವರಿಗೆ ನನ್ನ ಹಾಗೇ ಇರುವ ಸುಸಂಸ್ಕೃತ, ಅಪ್ಪಟ ದೇಸಿ ಹುಡುಗಿಯನ್ನು ನೋಡಿ ಮದುವೆ ಮಾಡುತ್ತೇನೆ.’ ಹೀಗೆಂದು ಹೇಳಿರುವುದು ಬೇರಾರೂ ಅಲ್ಲ. ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ. ಪತಿ, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ರ 70ನೇ ಹುಟ್ಟು ಹಬ್ಬದ ಆಚರಣೆ ಸಂದರ್ಭದಲ್ಲಿ ರಾಬ್ಡಿ ತಮ್ಮ ಭಾವೀ ಸೊಸೆಯಂದಿರ ಬಗ್ಗೆ ಆಡಿದ ಮಾತುಗಳಿವು. ಬಿಹಾರದ ಸಚಿವರಾಗಿರುವ ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಪ್ರಸಾದ್ ಯಾದವ್ಗೆ ಇನ್ನೂ ಮದುವೆಯಾಗಿಲ್ಲ. ಅವರನ್ನು ವಿವಾಹವಾಗಲು ಎಷ್ಟೋ ಯುವತಿಯರು ತಾಮುಂದು, ನಾಮುಂದು ಎಂದು ತುದಿಗಾಲಲ್ಲಿ ನಿಂತಿದ್ದಾರೆ.
ಆದರೆ, ಸೊಸೆಯರ ಬಗ್ಗೆ ಖಡಕ್ಕಾಗಿ ಮಾತನಾಡಿರುವ ಅತ್ತೆ ರಾಬ್ಡಿ ದೇವಿ, ‘ನನ್ನ ಮಕ್ಕಳನ್ನು ಮದುವೆಯಾಗುವ ಹುಡುಗಿ ಯರು ಜವಾಬ್ದಾರಿಯುತವಾಗಿ ಮನೆ ನಡೆಸಿಕೊಂಡು ಹೋಗಬೇಕು. ಹಿರಿಯರನ್ನು ಗೌರವಿಸುವ ಗುಣ ಹೊಂದಿರಬೇಕು. ನನ್ನ ಹಾಗೆ ಹೊರಗಿನ ಕೆಲಸಗಳನ್ನೂ ನಿಭಾಯಿಸ ಬೇಕು. ಅದರಲ್ಲೂ ತೇಜ್ ಪ್ರತಾಪ್ ಧಾರ್ಮಿಕ ವ್ಯಕ್ತಿ. ಆತನನ್ನು ಮದುವೆಯಾಗುವವಳು ಸುಸಂಸ್ಕೃತಳಾಗಿರಬೇಕು’ ಎಂದಿದ್ದಾರೆ. ಮಾಲ್ವೊಂದಕ್ಕೆ ಅಕ್ರಮವಾಗಿ ಜಾಗ ಪಡೆದಿರುವ ಹಗರಣದಲ್ಲಿ ಲಾಲು ಕುಟುಂಬ ಸಿಲುಕಿರುವಾಗಲೇ ರಾಬ್ಡಿ ಈ ಹೇಳಿಕೆ ನೀಡಿರುವುದು ಹಾಸ್ಯಕ್ಕೆ ಎಡೆಮಾಡಿಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.