ಗುಡುಗುಗಳ ನಾಡಿನಲ್ಲಿ ನಗುವ ಸೂರ್ಯ


Team Udayavani, Jun 13, 2017, 10:00 AM IST

benki.jpg

ಸಖತ್‌ ಸೆಖೆಯಿಂದ ಒಂದಿಷ್ಟು ರಿಲೀಫ್ ಬೇಕಪ್ಪಾ ಅನ್ನುವವರಿಂದ, ಟಿಬೇಟಿಯನ್‌ ಮಾನೆಸ್ಟರಿಗಳನ್ನು ನೋಡಬಯಸುವವರವರೆಗೆ, ಮಧುಚಂದ್ರಕ್ಕೊಂದು ಒಳ್ಳೇ ಜಾಗ ಹುಡುಕುವವರಿಂದ, ಬಂಗಾಲ, ಸಿಕ್ಕಿಂ ಪ್ರವಾಸ ಕೈಗೊಳ್ಳುವವರವರೆಗಿನ ನಾನಾ ಪ್ರವೃತ್ತಿಯ, ವೇಷ ಭಾಷೆಗಳ ಜನರು ನೋಡಲೇಬೇಕೆನ್ನೋ ತಾಣ ಡಾರ್ಜಿಲಿಂಗ್‌…

ಈಶಾನ್ಯ ರಾಜ್ಯಗಳ ಪ್ರವಾಸಕ್ಕೆ ನೀವೇನಾದರೂ ಹೋಗಿದ್ದೇ ಆದರೆ ಡಾರ್ಜಿಲಿಂಗ್‌ ಟೀ, ಅಸ್ಸಾಂ ಟೀ, ಕಾಂಚನಜುಂಗಾ (ಕನ್ನಡದಲ್ಲಿ ಕಾಂಚನಗಂಗಾ) ಎನ್ನೋ ಪದಗಳನ್ನು ಬೇಜಾರಾಗುವಷ್ಟು ಸಲ ಕೇಳಿರ್ತೀರ. ಸಖತ್‌ ಸೆಖೆಯಿಂದ ಒಂದಿಷ್ಟು ರಿಲೀಫ್ ಬೇಕಪ್ಪಾ ಅನ್ನುವವರಿಂದ, ಟಿಬೇಟಿಯನ್‌ ಮಾನೆಸ್ಟರಿಗಳನ್ನು ನೋಡಬಯಸುವವರವರೆಗೆ, ಮಧುಚಂದ್ರಕ್ಕೊಂದು ಒಳ್ಳೇ ಜಾಗ ಹುಡುಕುವವರಿಂದ, ಬಂಗಾಲ, ಸಿಕ್ಕಿಂ ಪ್ರವಾಸ ಕೈಗೊಳ್ಳುವವರವರೆಗಿನ ನಾನಾ ಪ್ರವೃತ್ತಿಯ, ವೇಷ ಭಾಷೆಗಳ ಜನರು ನೋಡಲೇಬೇಕೆನ್ನೋ ತಾಣ ಡಾರ್ಜಿಲಿಂಗ್‌. ಇದು ಪಶ್ಚಿಮ ಬಂಗಾಳದಲ್ಲಿದೆ.

ಇಲ್ಲಿಯ ರಾಜ್ಯಭಾಷೆ ಬಂಗಾಳಿಯಾಗಿದ್ದರೂ ಡಾರ್ಜಿಲಿಂಗಿನ ಜಿÇÉಾ ಭಾಷೆ ನೇಪಾಳಿ! 
ಇಲ್ಲಿನ ಅರ್ಧಕ್ಕಿಂತಲೂ ಹೆಚ್ಚು ಜನ ತಮ್ಮ ತಮ್ಮಲ್ಲಿ ನೇಪಾಳಿಯÇÉೇ ಮಾತಾಡಿಕೊಳ್ಳೋದನ್ನು ಕಂಡರೂ ಬರುವ ಪ್ರವಾಸಿಗರ ಹತ್ತಿರ ಹಿಂದಿಯಲ್ಲೂ ಆರಾಮಾಗಿ ಮಾತಾಡ್ತಾರೆ. ಪಕ್ಕದ ಈಶಾನ್ಯ ರಾಜ್ಯಗಳಿಂದ ಇಲ್ಲಿಗೆ ಬರೋ ಶೆರ್ಪಾಗಳು ಭೂತಾನೀಸ್‌, ಲೆಪಾc, ಟಿಬೇಟಿಯನ್‌ ಭಾಷೆಗಳಲ್ಲೂ ಮಾತಾಡುತ್ತಿರುತ್ತಾರೆ. ಜಪಾನೀಸ್‌, ಥಾಯೀಸ್‌, ಸಿಕ್ಕಿಮೀಸ್‌, ಭೂತಾನೀಸ್‌, ನೇಪಾಳೀಸ್‌, ಬೆಂಗಾಳಿ, ದಕ್ಷಿಣ ಭಾರತೀಯ… ಹೀಗೆ ತರಹೇವಾರಿ ಖಾದ್ಯಗಳು ಸಿಗುವ ಇಲ್ಲಿನ ವೈವಿಧ್ಯತೆಗೆ “ಡಾರ್ಜಿಲಿಂಗ್‌” ಎಂಬ ಹೆಸರೇ ಮತ್ತೂಂದು ಉದಾಹರಣೆ. ಇದು ಟಿಬೇಟಿಯನ್‌ ಭಾಷೆಯ ಡೊರ್ಜೆ(ಗುಡುಗು) ಮತ್ತು ಲಿಂಗ್‌ (ಪ್ರದೇಶ) ಎಂಬ ಪದಗಳಿಂದ ಬಂದಿದ್ದಂತೆ. ಅಂದರೆ, ಗುಡುಗುಗಳ ನಾಡೆಂದೂ ಕರೆಯಬಹುದಿದನ್ನ.

ಟಾಯ್‌ ಟ್ರೈನು!
ಡಾರ್ಜಿಲಿಂಗಿಗೆ ಬಂದೋರು, ನೋಡಲೇಬೇಕಾದ ಆಕರ್ಷಣೆಗಳಲ್ಲಿ ಇಲ್ಲಿನ ಐತಿಹಾಸಿಕ ಟಾಯ… ಟ್ರೈನ್‌ ಕೂಡ ಒಂದು. ಇಲ್ಲಿಂದ “ಘೂಮ…’ ಎನ್ನುವ ಸ್ಥಳಕ್ಕೆ 8 ಕಿ.ಮೀ. ಕ್ರಮಿಸಲು ನ್ಯಾನೋ ಗೇಜಿನ ರೈಲಿಗೆ ಸಾವಿರ ಕೊಡೋದು ಕೊಂಚ ದುಬಾರಿಯೆನ್ನಿಸಿದರೂ 1891ರಿಂದ ಶುರುವಾದ ಆ ಡೀಸೆಲ…, ಕಲ್ಲಿದ್ದಲು ಎಂಜಿನ್ನಿನ ರೈಲುಗಳನ್ನು ಇನ್ನೂ ಸಂರಕ್ಷಿಸಿ, ಕಾರ್ಯನಿರ್ವಹಿಸುತ್ತಿರುವ ರೈಲ್ವೆಯ ಪ್ರಯತ್ನಕ್ಕೆ ಶ್ಲಾ ಸಲಾದರೂ ಈ ರೈಲುಗಳಲ್ಲಿ ಪಯಣಿಸಬಹುದು. 

ಕಾಂಚನಜುಂಗಾದ ಹೊಳಪು
ಡಾರ್ಜಿಲಿಂಗಿನಿಂದ, ಪ್ರಪಂಚದ ಮೂರನೇ ಎತ್ತರದ ಶಿಖರವಾದ ಕಾಂಚನಚುಂಗಾವನ್ನು ಸಮೀಪದಿಂದ ನೋಡಬಹುದು. ಹಾಗಾಗಿ, ಇಲ್ಲಿನ ಸುಮಾರಷ್ಟು ಹೋಟೆಲ್ಲುಗಳಲ್ಲಿ, “ನಾಥುರಾಂ’ ಎನ್ನುವ ಪ್ರಸಿದ್ಧ ಟೀ ಅಂಗಡಿಯಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ವೀವ್‌ ಪಾಯಿಂಟ…ಗಳನ್ನೇ ಮಾಡಿ¨ªಾರೆ. ಇಲ್ಲಿನ ಸಮಯಕ್ಕೂ ನಮ್ಮ ಸಮಯಕ್ಕೂ ಏನಿಲ್ಲವೆಂದರೂ ಒಂದೂವರೆ, ಎರಡು ತಾಸು ವ್ಯತ್ಯಾಸವಿದ್ದಂತೆ ಭಾಸವಾಗುತ್ತದೆ. ಇಲ್ಲಿ ಸಾಮಾನ್ಯವಾಗಿ ಸೂರ್ಯೋದಯವಾಗೋದು ನಾಲ್ಕೂಕಾಲರ ಆಸುಪಾಸಿನಲ್ಲಿ. ಡಿಸೆಂಬರಿನ ಚಳಿಯಲ್ಲಿ ಅದು ಆರೂಕಾಲರ ಆಸುಪಾಸಿಗೆ ಬಂದರೂ ಸಂಜೆ ನಾಲ್ಕಕ್ಕೇ ಕತ್ತಲಾಗಿ ಹೋಗುತ್ತೆ! ಏಳೂವರೆ ಎಂಟಕ್ಕೆಲ್ಲ ಅಲ್ಲಿನ ವ್ಯಾಪಾರಿಗಳು ಅಂಗಡಿಗಳ ಬಾಗಿಲನ್ನು ಹಾಕೋಕ್ಕೆ ಶುರು ಮಾಡುತ್ತಾರೆ. 

ಟೈಗರ್‌ ಹಿಲ್ಸ…ನ ಸೂರ್ಯ
ಬೆಳಗ್ಗೆ ಬೇಗ ಏಳುವ ಈ ನಾಡಿನ ಇನ್ನೊಂದು ಆಕರ್ಷಣೆ ಟೈಗರ್‌ ಹಿಲ್ಸ್‌ನ ಸೂರ್ಯೋದಯ. ಇಲ್ಲಿ ಸೂರ್ಯೋದಯ ವೀಕ್ಷಿಸಲೆಂದೇ ಬೆಳಗ್ಗಿನ 3.30ರ ಚಳಿಯನ್ನೂ ಲೆಕ್ಕಿಸದೆ ಜನ ಕಾಯುತ್ತಿರುತ್ತಾರೆ. ಕಾಂಚನಜುಂಗಾದ ಮೇಲೆ ಬೀಳುವ ಮೊದಲ ಸೂರ್ಯರಶ್ಮಿಗಳ ದರ್ಶನ, ಅರುಣೋದಯ, ಪ್ರತ್ಯೂಷ, ಸೂರ್ಯೋದಯಗಳ ನಡುವಿನ ಸಮಯದಲ್ಲಿ ಬದಲಾಗುವ ಕಾಂಚನಜುಂಗೆ ಮತ್ತು ಸುತ್ತಣ ಪ್ರಕೃತಿಯ ಚೆಲುವನ್ನು ಸವಿಯೋದೇ ಒಂದು ಅದ್ಭುತ ಅನುಭವ
ಮಹಾಕಾಳ್‌ ಮಂದಿರದ ನೋಟ ಚೌರಸ್ತದ ಸಮೀಪದ ಮಹಾಕಾಲ… ಮಂದಿರದ ಗುಹೆಯ ಸುತ್ತಲಿನ ಕತೆಗಳು ಅನನ್ಯ. ನೇಪಾಳಿ ಶೈಲಿಯ ಕಾಳಿ ಮತ್ತು ಶಿವ ಮಂದಿರಗಳು, ಬೌದ್ಧ ಶೈಲಿಯ ಮಾಹೆಗಳು (ತಿರುಗುಣಿಯ ಮೇಲೆ ನಿಂತಿರುವ ಗಂಟೆಯಂಥ ಆಕೃತಿಗಳು) ಮತ್ತು ಅವುಗಳಲ್ಲಿನ ಟಿಬೇಟಿಯನ್‌ ಮಂತ್ರಗಳನ್ನು ಒಮ್ಮೆ ನೋಡಲೇಬೇಕು. ಇಲ್ಲಿನ ಪೂಜಾರಿಯ ಜೊತೆಗೆ ಬೌದ್ಧ ಭಿಕ್ಕುವೊಬ್ಬರು ಪ್ರತೀ ದೇಗುಲದಲ್ಲಿ ಕೂತಿರುವುದನ್ನೂ ಕಾಣಬಹುದು! 

ಜಪಾನೀಸ್‌ ಪೀಸ್‌ ಪಗೋಡ
ಮಹಾಕಾಳ್‌ ಮಂದಿರದಿಂದ ಸ್ವಲ್ಪ ಹಿಂದೆ ಬಂದು ಮತ್ತೂಂದು ದಾರಿ ಹಿಡಿದರೆ ಸಿಗೋದು ಜಪಾನೀಸ್‌ ಶಾಂತಿ ಪಗೋಡ ಅಥವಾ ಜಪಾನೀಸ್‌ ಮಂದಿರ. ಇಲ್ಲಿನ ಜಪಾನೀಸ್‌ ಆಚರಣೆಗಳ ಜೊತೆಗೆ ಎತ್ತರದಲ್ಲಿರುವ ಇಲ್ಲಿಂದ ಕಾಣಸಿಗೋ ಕಾಂಚನಜುಂಗಾ ಪರ್ವತಶ್ರೇಣಿಯ ದೃಶ್ಯವೂ ರಮ್ಯ. ಇಲ್ಲಿ ನೂರೈವತ್ತು ವರ್ಷ ಪೂರೈಸಿದ ನಗರಸಭೆಯ ಮೇಲಿರುವ ಗಡಿಯಾರ ಗೋಪುರ, ನೂರು ವರ್ಷ ಪೂರೈಸಿದ ಬಾಹ್ಯಾಂತರಿಕ್ಷ ಸಂಶೋಧನೆಯ ಬೋಸ್‌ ಇನ್‌ಸ್ಟಿಟ್ಯೂಟ್‌ ಮುಂತಾದ ಸ್ಥಳಗಳಿವೆ. ನಗರದಿಂದ ಸ್ವಲ್ಪ$ಹೊರಹೋಗೋದಾದರೆ ಬಟಿಸ್ಟಾ ಲೂಪ್‌, ರಾಕ್‌ ಗಾರ್ಡನ್‌ ಮುಂತಾದ ಸ್ಥಳಗಳ ಜೊತೆಗೆ ಹತ್ತು ಹಲವು ಮಾನೆಸ್ಟರಿಗಳೂ ಇವೆ. ಜನವರಿ ಮೊದಲ ವಾರದಲ್ಲಿ ವಿಪರೀತ ಹಿಮ ಬಿದ್ದು ಇಲ್ಲಿನ ರಸ್ತೆಗಳೆÇÉಾ ಬಂದ್‌ ಆಗೋ ಸಮಯ ಬಿಟ್ಟರೆ, ವರ್ಷವಿಡೀ ಡಾರ್ಜಿಲಿಂಗ್‌ ಪ್ರವಾಸಮುಕ್ತ ತಾಣ.

ಡಾರ್ಜಿಲಿಂಗ್‌ ತಲುಪೋದ್ಹೇಗೆ? 
ಡಾರ್ಜಿಲಿಂಗಿಗೆ ಅತ್ಯಂತ ಹತ್ತಿರದ ವಿಮಾನ ನಿಲ್ದಾಣವೆಂದರೆ, ಅಲ್ಲಿಂದ 95 ಕಿ.ಮೀ. ದೂರವಿರುವ ಬಗೊªàಗ್ರ. ರೈಲಲ್ಲಿ ಬರುತ್ತೀರೆಂದರೆ, ಹತ್ತಿರದ ರೈಲ್ವೇ ಸ್ಟೇಷನ್‌ ನಯಿ ಜಲ್ಪ ಗುರಿ. ಅಲ್ಲಿಂದ ಬೆಳಗ್ಗೆ 8:30ಕ್ಕೆ ಬಿಟ್ಟು ಮಧ್ಯಾಹ್ನ 14:15ರ ಸುಮಾರಿಗೆ ಡಾರ್ಜಿಲಿಂಗ್‌ನಿಂದ 8 ಕಿ.ಮೀ. ದೂರವಿರುವ ಘೂಮ… ಸ್ಟೇಷನ್‌ ತಲುಪೋ ಡಾರ್ಜಿಲಿಂಗ್‌ ಹಿಮಾಲಯ ರೈಲು (ಸಂಖ್ಯೆ 52541) ಇದೆಯಾದರೂ, ಅದರ ಬುಕ್ಕಿಂಗ್‌ ಸಿಕ್ಕೋದು ಬಹಳ ಕಷ್ಟ. “ನಯಿ ಜಲ್ಪ ಗುರಿ’ಗೆ ಬೇಗನೇ ತಲುಪುವವರು ಅಲ್ಲಿಂದ ಡಾರ್ಜಿಲಿಂಗ್‌ ವರೆಗಿನ 78 ಕಿ.ಮೀ. ದೂರವನ್ನು ಶೇರ್‌ ಟ್ಯಾಕ್ಸಿಗಳ ಮೂಲಕ ಕಳೆಯೋದು ಉತ್ತಮ ಆಯ್ಕೆ.

– ಪ್ರಶಸ್ತಿ ಪಿ

ಟಾಪ್ ನ್ಯೂಸ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

kuladalli keelyavudo kannada movie

Kannada Cinema: ಕ್ಲೈಮ್ಯಾಕ್ಸ್‌ ನತ್ತ ʼಕುಲದಲ್ಲಿ ಕೀಳ್ಯಾವುದೋʼ

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.