ಮತ್ತೂಂದು ಇಷ್ಟದ ಜೀವಕ್ಕೆ ಕಾಯುತ್ತಾ…
Team Udayavani, Jun 13, 2017, 10:41 AM IST
ನಿನ್ನ ನೆನಪುಗಳನ್ನು ಮೂಟೆ ಕಟ್ಟಿ ನದಿಗೆಸೆದೆ. ನಿನ್ನ ಪತ್ರಗಳಿಗೆ ಬೆಂಕಿಯಿಕ್ಕಿ ಬೂದಿಯಾಗಿಸಿದೆ. ಮನದ ಮೂಲೆ ಹಸನು ಮಾಡಿ ಮತ್ತೂಂದು ಇಷ್ಟದ ಜೀವದ ಆಗಮನಕ್ಕೆ ಅಣಿಯಾದೆ. ಈಗ ನಿನ್ನ ನೆನಪು ನನ್ನನ್ನು ಸತಾಯಿಸುವುದಿಲ್ಲ. ನಿನ್ನ ಭಾವಚಿತ್ರ ಕಣ್ಮುಂದೆ ಸುಳಿಯುವುದಿಲ್ಲ.
ಒಂದು ವಾರದಿಂದ, ಅನ್ನ, ನೀರು ಬಿಟ್ಟು ಕೋಣೆಯಲ್ಲಿ ಮುಸುಕೆಳೆದು ಮಲಗಿಬಿಟ್ಟಿದ್ದೇನೆ. ಕೆನ್ನೆ ಮೇಲಿಳಿವ ಕಣ್ಣೀರು ಧಾರಾಕಾರ. ಅರ್ಧರಾತ್ರಿಯಲ್ಲಿ ದುಃಸ್ವಪ್ನ ಬಿದ್ದು ಬೆಚ್ಚಿ ಚೀರುತ್ತೇನೆ. ತಂದೆ-ತಾಯಿ, ಮಗನಿಗೆ ಏನಾಯಿತೋ? ಎಂಬ ಆತಂಕದಿಂದ ದುಡುದುಡು ಓಡಿಬರುತ್ತಾರೆ. ಕಾರಣ ಹೇಳದೆ ಸುಮ್ಮನೆ ಕಣ್ಣೀರಾಗುತ್ತೇನೆ. ಅದೇಕೆ ಹೀಗೆ ಮಾಡಿದೆ ಹುಡುಗೀ…?
ಹಲವು ವರ್ಷಗಳಿಂದ ಒಂದು ದೇಹ, ಎರಡು ಜೀವದಂತಿದ್ದ ನಾವು, ಅಲೆಯದ ಜಾಗಗಳಿಲ್ಲ. ಮಾಡದ ಆಣೆ-ಪ್ರಮಾಣಗಳಿಲ್ಲ. ಎಲ್ಲಿ ಹೋದರೂ ಒಟ್ಟಿಗೇ ಇರುತ್ತಿದ್ದ ನಮ್ಮನ್ನು ಕಂಡು ಕೆಲವರು ಹೊಟ್ಟೆ ಉರಿದುಕೊಂಡದ್ದು ಸುಳ್ಳಲ್ಲ. ಅವೆಲ್ಲಕ್ಕೂ ಕಿಚ್ಚು ಹಚ್ಚುವಂತೆ ನೀನು, ನಡು ನೀರಿನಲ್ಲಿ ಬಿಟ್ಟೆದ್ದು ಮೌನವಾಗಿ ನಡೆದು ಹೋದದ್ದು ನನಗಿಂದಿಗೂ ವಿಸ್ಮಯ. ನೀನೇನೋ ದೂರವಾಗಿ, ನಿಟ್ಟುಸಿರುಗಳೆದರೂ ನನ್ನ ಪರಿಸ್ಥಿತಿ ಭಿನ್ನ. ಜೀವದ ಜೀವ ಅಗಲಿ ಹೋದ ಮೇಲೆ ಬದುಕೇ ದುಸ್ತರವಾಯಿತು. ಕಣ್ಣುಗಳು ಬತ್ತಿದ ಕೊಳದಂತಾದವು. ಯಾವ ಕಾರ್ಯದಲ್ಲೂ ಸೊಗಸೇ ಉಳಿಯಲಿಲ್ಲ.
ಇದ್ದೊಬ್ಬ ಮಗ ಹೀಗೆ ದಿಕ್ಕೆಟ್ಟು ಕೂತಿರುವಾಗ ಅದನ್ನು ಕಂಡು ಸುಮ್ಮನಿರಲು ಹೆತ್ತವರಿಗೆ ಹೇಗೆ ಸಾಧ್ಯವಾದೀತು?
ಅದೊಂದು ದಿನ, ಅಪ್ಪ ಬಳಿ ಕರೆದು, ಹೆಗಲ ಮೇಲೆ ಕೈಹಾಕಿ ಮಾತು ಶುರು ಮಾಡಿದರು, “ನೋಡು ಮಗನೇ, ಒಂದು ವಾರವಾಯಿತು ನೀನು ಅನ್ನ ನೀರು ಬಿಟ್ಟು. ನಿನ್ನ ಗೆಳೆಯರ ಹತ್ತಿರ ವಿಚಾರಿಸಿದೆ, ನಿನ್ನ ಗಾಢ ಮೌನದ ಕಾರಣ ತಿಳಿಯಿತು. ನೋಡಪ್ಪ, ಪ್ರೀತಿಸಬೇಕು ನಿಜ. ನಾನು ಬೇಡ ಅನ್ನಲ್ಲ. ಆದರೆ ಬದುಕೇ ಮುಳುಗಿ ಹೋಗುವಂತೆ ಪ್ರೀತಿಸಬಾರದು. ಅವಳನ್ನು ನೀನು ಇಷ್ಟಪಟ್ಟಿದ್ದೆ. ಆದರೆ ನೀನವಳಿಗೆ ಇಷ್ಟವಾಗಲಿಲ್ಲ. ಅದಕ್ಕೆ ಪ್ರಪಂಚಾನೇ ಮುಳುಗೊØàಯ್ತಾ? ಇಲ್ಲ ಮಗಾ. ನಮ್ಮನ್ನ ನೋಡು, ಇಪ್ಪತ್ತು ವರ್ಷ ನಿನ್ನನ್ನು ಸಾಕಿ ಸಲುಹಿ, ದೊಡ್ಡವನನ್ನಾಗಿ ಮಾಡಿ, ನಿನ್ನ ಸುಖಕ್ಕೆ ನಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ್ದೇವೆ. ನಮ್ಮದು ಪ್ರೀತಿ ಅಲ್ವೇನೋ ಮಗಾ..? ನಿನ್ನ ತಾಯಿಯನ್ನು ನೋಡು, ಮಗ ಊಟ ಬಿಟ್ಟು ಮೌನವಾಗಿರುವುದಕ್ಕೆ ಚಡಪಡಿಸ್ತಾ ಇದೆ ಹೆತ್ತಕರುಳು. ಅವಳನ್ನು ಮರೆತುಬಿಡು. ಅಂಥ ಹತ್ತು ಹುಡುಗಿಯರನ್ನು ನಿನ್ನೆದುರು ಸಾಲಾಗಿ ನಿಲ್ಲಿಸ್ತೇನೆ…’. ಅಪ್ಪ ಹೀಗೆಲ್ಲಾ ಹೇಳುತ್ತಿರಬೇಕಾದರೆ ಹೃದಯ ಹಿಂಡಿದಂತಾಗುತ್ತಿತ್ತು. ಅವರು ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಹೆತ್ತ ಕರುಳಿನ ಕರೆಯನ್ನು ನಾನೇ ಇಷ್ಟು ದಿನ ಆಲಿಸಲಿಲ್ಲವೇನೋ ಅನ್ನಿಸ್ತು. ಮರುಕ್ಷಣ ಹೊಸ ಮನುಷ್ಯನಾಗಿದ್ದೆ. ತಂದೆ- ತಾಯಿಯ ಕಾಲು ಹಿಡಿದು ಇನ್ನೆಂದೂ ನಿಮ್ಮ ಮನಸ್ಸು ನೋಯಿಸಲ್ಲ ಅಂತ ಅತ್ತುಬಿಟ್ಟೆ.
ಅಂದಿನಿಂದ ನಿನ್ನ ನೆನಪುಗಳನ್ನು ಮೂಟೆ ಕಟ್ಟಿ ನದಿಗೆಸೆದೆ. ನಿನ್ನ ಪತ್ರಗಳಿಗೆ ಬೆಂಕಿಯಿಕ್ಕಿ ಬೂದಿಯಾಗಿಸಿದೆ. ಮನದ ಮೂಲೆ ಹಸನು ಮಾಡಿ ಮತ್ತೂಂದು ಇಷ್ಟದ ಜೀವದ ಆಗಮನಕ್ಕೆ ಅಣಿಯಾದೆ. ಈಗ ನಿನ್ನ ನೆನಪು ನನ್ನನ್ನು ಸತಾಯಿಸುವುದಿಲ್ಲ. ನಿನ್ನ ಭಾವಚಿತ್ರ ಕಣ್ಮುಂದೆ ಸುಳಿಯುವುದಿಲ್ಲ. ಮಗ ಎಂದಿನಂತೆ ಲವಲವಿಕೆಯಿಂದ ಇರುವುದನ್ನು ಕಂಡು ತಂದೆ- ತಾಯಿ ಖುಷಿಯಾಗಿದ್ದಾರೆ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು?
– ನಾಗೇಶ್ ಜೆ. ನಾಯಕ, ಬೆಳಗಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.