ಮತ್ತೆ ಕಿರುತೆರೆಯತ್ತ ಅದಿತಿ
Team Udayavani, Jun 13, 2017, 11:47 AM IST
ಸಾಮಾನ್ಯವಾಗಿ ಕಿರುತೆರೆಯಿಂದ ಚಿತ್ರರಂಗಕ್ಕೆ ಬಂದ ನಾಯಕಿಯರು ಆ ನಂತರ ಕಿರುತೆರೆಗೆ ಹೋಗಲು ಅಷ್ಟೊಂದು ಆಸಕ್ತಿ ತೋರಿಸೋದಿಲ್ಲ. ಧಾರಾವಾಹಿಗಿಂತ ಸಿನಿಮಾದಲ್ಲೇ ಮಿಂಚಬೇಕೆಂದು ಕನಸು ಕಾಣುತ್ತಾರೆ. ಆದರೆ, ಅದಿತಿ ಮಾತ್ರ ಆ ತರಹ ಅಲ್ಲ. ಎಲ್ಲಿ ತನಗೆ ಇಷ್ಟವಾಗುತ್ತದೆ, ಯಾವ ಪಾತ್ರ ಮೋಡಿ ಮಾಡುತ್ತದೋ ಅದನ್ನು ಮಾಡುತ್ತಿದ್ದಾರೆ.
“ಗುಂಡ್ಯನಾ ಹೆಂಡ್ತಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದ ಈ ದಾವಣಗೆರೆಯ ಹುಡುಗಿ, ಅಜೇಯ್ ರಾವ್ ನಾಯಕರಾಗಿರುವ “ಧೈರ್ಯಂ’ ಮೂಲಕ ನಾಯಕಿಯಾಗಿ ಎಂಟ್ರಿಕೊಟ್ಟಿದ್ದರು. ಆ ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದೆ. ಟ್ರೇಲರ್ ಹಾಗೂ ಹಾಡಿನಲ್ಲಿ ಅದಿತಿಯನ್ನು ನೋಡಿದವರು ಹುಡುಗಿಗೆ ಚಿತ್ರರಂಗದಲ್ಲಿ ಭವಿಷ್ಯವಿದೆ ಎನ್ನುತ್ತಾ ಒಂದಷ್ಟು ಆಫರ್‌ಗಳನ್ನು ಕೂಡಾ ಕೊಟ್ಟರು. ಆದರೆ, ಅದಿತಿ ಮಾತ್ರ ಸದ್ದಿಲ್ಲದೇ ಈಗ ಒಂದು ಧಾರಾವಾಹಿ ಒಪ್ಪಿಕೊಂಡಿದ್ದಾರೆ. ಅದು “ನಾಗಕನ್ನಿಕೆ’.
“ನಾಗಕನ್ನಿಕೆ’ ಧಾರಾವಾಹಿಯು ಕಲರ್ ಸೂಪರ್ ವಾಹಿನಿಯಲ್ಲಿ ಜೂನ್ 26 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ರಾಮ್‌ಜೀ ಈ ಧಾರಾವಾಹಿಯ ನಿರ್ದೇಶಕರು. ಮೈಸೂರಿನ ಲಲಿತ್ ಮಹಲ್, ಬೆಂಗಳೂರು ಪ್ಯಾಲೇಸ್‌ನಲ್ಲಿ ಚಿತ್ರೀಕರಣವಾಗಿದ್ದು, ಸದ್ಯ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದೆ.
“ನಾಗಕನ್ನಿಕೆ’ಯಲ್ಲಿ ಅದಿತಿ, ನಾಗಕನ್ನಿಕೆಯಾಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ಪಾತ್ರ ತುಂಬಾ ಎಕ್ಸಟೈಟ್ ಆಗಿದ್ದರಿಂದ ಅದಿತಿ ಮತ್ತೆ ಧಾರಾವಾಹಿ ಒಪ್ಪಿಕೊಂಡರಂತೆ. “ನನಗೆ ಸಿನಿಮಾನೇ ಮಾಡಬೇಕು, ಅದರಲ್ಲೇ ಜೀವನ ಮಾಡಬೇಕೆಂಬ ಆಸೆ ಇಲ್ಲ. ಕೆಲವೇ ಕೆಲವು ಸಿನಿಮಾ ಮಾಡಿದರೂ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದೆ. ವಿಭಿನ್ನ ಪಾತ್ರ, ಹೊಸ ಲುಕ್ ಅನ್ನು ಬಯಸುತ್ತೇನೆ. ಆ ತರಹದ ಅವಕಾಶ ಎಲ್ಲಿ ಸಿಗುತ್ತದೋ ಅಲ್ಲಿಗೆ ಹೋಗುತ್ತೇನೆ.
“ನಾಗಕನ್ನಿಕೆ’ ಧಾರಾವಾಹಿಯಲ್ಲಿ ನನ್ನ ಲುಕ್‌ನಿಂದ ಹಿಡಿದು ಕಾಸ್ಟೂéಮ್ ಎಲ್ಲವೂ ವಿಭಿನ್ನವಾಗಿದೆ. ಈ ಹಿಂದೆ “ಗುಂಡ್ಯಾನ ಹೆಂಡ್ತಿ’ಯಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೆ. ಈಗ “ಧೈರ್ಯಂ’ನಲ್ಲಿ ಇಂದಿನ ಟ್ರೆಂಡಿ ಹುಡುಗಿಯಾಗಿ ನಟಿಸಿದ್ದೇನೆ. “ನಾಗಕನ್ನಿಕೆ’ಯಲ್ಲಿ ಮತ್ತೂಂದು ಅವತಾರ. ಈ ಗೆಟಪ್‌ನಲ್ಲಿ ನಾನು ಹೇಗೆ ಕಾಣುತ್ತೇನೆಂಬ ಕುತೂಹಲ ನನಗಿದೆ’ ಎನ್ನುತ್ತಾರೆ ಅದಿತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.