ಎಂಟರಿಂದ ಹತ್ತು ಪಾಲಾದ ಪಾಲಿಕೆ!
Team Udayavani, Jun 13, 2017, 12:45 PM IST
ಬೆಂಗಳೂರು: ಸಾರ್ವಜನಿಕರ ಅನುಕೂಲ ಹಾಗೂ ಆಡಳಿತ ವಿಕೇಂದ್ರಿಕರಣದ ಉದ್ದೇಶದಿಂದ ಬಿಬಿಎಂಪಿಯ 8 ವಲಯಗಳನ್ನು 10 ವಲಯಗಳನ್ನಾಗಿ ಮರುವಿಂಗಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಿಬಿಎಂಪಿ ಪುನಾರಚನೆ ಕುರಿತಂತೆ ಬಿ.ಎಸ್.ಪಾಟೀಲ್ ನೇತೃತ್ವದ ತಜ್ಞರ ಸಮಿತಿ ನೀಡಿದ ಮಧ್ಯಂತರ ವರದಿಯ ಶಿಫಾರಸಿನ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ.
ಈ ಹಿಂದೆ ಇದ್ದ 8 ವಲಯಗಳ ಪೈಕಿ ಯಲಹಂಕ, ದಾಸರಹಳ್ಳಿ, ಮಹದೇವಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ ವಲಯಗಳ ಹೆಸರನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಉಳಿದಂತೆ ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಲಯಗಳನ್ನು ಕೈಬಿಟ್ಟು, ಸರ್ವಜ್ಞನಗರ, ಜಯನಗರ, ಮಲ್ಲೇಶ್ವರ, ಗಾಂಧಿನಗರ, ವಿಜಯನಗರ ಎಂಬ ಹೊಸ ವಲಯಗಳನ್ನು ರಚನೆ ಮಾಡಲಾಗಿದೆ.
ವಲಯ ವ್ಯಾಪ್ತಿಯ ಅಸಮಾನತೆಯನ್ನು ತಡೆಯುವ ಉದ್ದೇಶದಿಂದ ಸರ್ಕಾರ ವಲಯ ಮರುವಿಂಗಡಣೆಗೆ ಮುಂದಾಗಿತ್ತು. ಸದ್ಯ ಪಾಲಿಕೆಯನ್ನು ವಿಭಜನೆ ಕುರಿತಂತೆ ರಾಷ್ಟ್ರಪತಿಗಳ ಮುಂದಿದ್ದು, ವಿಧಾನಸಭಾ ಚುನಾವಣೆಗೂ ಮೊದಲು ರಾಷ್ಟ್ರಪತಿಗಳು ಕೆಎಂಸಿ ಕಾಯ್ದೆ ತಿದ್ದುಪಡಿಗೆ ಅಂಕಿತ ಹಾಕಿದರೆ, ತಕ್ಷಣವೇ ಪಾಲಿಕೆಯನ್ನು ವಿಭಜಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ ಎನ್ನಲಾಗಿದೆ.
ಬಿ.ಎಸ್.ಪಾಟೀಲ್ ಸಲ್ಲಿಸಿದ ವರದಿಯಲ್ಲಿ ಆಡಿಳಿತಾತ್ಮಕ ದೃಷ್ಟಿಯಿಂದ ಪಾಲಿಕೆಯ ವಲಯಗಳನ್ನು 8 ರಿಂದ 10ಕ್ಕೆ ಹೆಚ್ಚಿಸಬೇಕು ಮತ್ತು ಪಾಲಿಕೆಯನ್ನು ಐದು ಭಾಗಗಳಾಗಿ ರಚಿಸಬೇಕು ಎಂದು ತಿಳಿಸಲಾಗಿತ್ತು. ಅದರಂತೆ ಮೊದಲು ಹಂತವಾಗಿ ಪಾಲಿಕೆಯ ವಲಯಗಳನ್ನು 10ಕ್ಕೆ ಹೆಚ್ಚಿಸಲಾಗಿದೆ.
ಪರಿಷ್ಕೃತ ವಲಯಗಳಿಗೆ ಬರುವ ವಾರ್ಡ್‌ಗಳು
* ಸರ್ವಜ್ಞನಗರ ವಲಯ, ವಿಧಾನಸಭೆ ಕ್ಷೇತ್ರ: ಸರ್ವಜ್ಞನಗರ, ಕೃಷ್ಣರಾಜಪುರ, ಸಿ.ವಿ.ರಾಮನ್‌ನಗರ.
ವಾರ್ಡ್‌ಗಳು: ಬೆನ್ನಿಗಾನಹಳ್ಳಿ, ಸಿ.ವಿ.ರಾಮನ್‌ನಗರ, ಹೊಸ ತಿಪ್ಪಸಂದ್ರ, ಸರ್ವಜ್ಞನಗರ, ಹೊಯ್ಸಳನಗರ, ಜೀವನ್ ಭೀಮಾನಗರ, ಕೋನೇನ ಅಗ್ರಹಾರ, ನಾಗವಾರ, ಎಚ್.ಬಿ.ಆರ್.ಬಡಾವಣೆ, ಬಾಣಸವಾಡಿ, ಕಮ್ಮನಹಳ್ಳಿ, ಕಾಚರಕನಹಳ್ಳಿ, ಕಾಡುಗೊಂಡನಹಳ್ಳಿ, ಲಿಂಗರಾಜಪುರ, ಮಾರುತಿ ಸೇವಾನಗರ, ಹೊರಮಾವು, ರಾಮಮೂರ್ತಿನಗರ, ವಿಜಿನಾಪುರ, ಕೆ.ಆರ್.ಪುರ, ಬಸವನಪುರ, ದೇವಸಂದ್ರ, ಎ.ನಾರಾಯಣಪುರ, ವಿಜ್ಞಾನನಗರ, ಎಚ್.ಎ.ಎಲ್.ವಿಮಾನನಿಲ್ದಾಣ.
* ಜಯನಗರ ವಲಯ, ವಿಧಾನಸಭೆ ಕ್ಷೇತ್ರ: ಶಾಂತಿನಗರ, ಬಿಟಿಎಂ ಬಡಾವಣೆ, ಜಯನಗರ, ಪದ್ಮನಾಭನಗರ
ವಾರ್ಡ್‌ಗಳು: ಜೋಗುಪಾಳ್ಯ, ಶಾಂತಲಾನಗರ, ದೊಮ್ಮಲೂರು, ಅಗರಂ, ವನ್ನಾರಪೇಟೆ, ನೀಲಸಂದ್ರ, ಶಾಂತಿನಗರ, ಲಕ್ಕಸಂದ್ರ, ಆಡುಗೋಡಿ, ಈಜೀಪುರ, ಕೋರಮಂಗಲ, ಸದ್ದುಗುಂಟೆಪಾಳ್ಯ, ಮಡಿವಾಳ, ಜಕ್ಕಸಂದ್ರ, ಬಿಟಿಎಂ ಬಡಾವಣೆ, ಪಟ್ಟಾಭಿರಾಮನಗರ, ಭೈರಸಂದ್ರ, ಜಯನಗರ ಪೂರ್ವ, ಗುರುಪ್ಪನಪಾಳ್ಯ, ಜೆ.ಪಿ.ನಗರ, ಸಾರಕ್ಕಿ, ಶಾಕಾಂಬರಿನಗರ, ಹೊಸಕೆರೆಹಳ್ಳಿ, ಗಣೇಶಮಂದಿರ, ಕರಿಸಂದ್ರ, ಯಡಿಯೂರು, ಬನಶಂಕರಿ ದೇವಸ್ಥಾನ, ಕುಮಾರಸ್ವಾಮಿ ಬಡಾವಣೆ, ಪದ್ಮನಾಭನಗರ, ಚಿಕ್ಕಕಲ್ಲಸಂದ್ರ
* ಮಲ್ಲೇಶ್ವರ ವಲಯ, ವಿಧಾನಸಭೆ ಕ್ಷೇತ್ರ: ಮಲ್ಲೇಶ್ವರ, ಹೆಬ್ಟಾಳ, ಪುಲಕೇಶಿನಗರ, ಶಿವಾಜಿನಗರ
ವಾರ್ಡ್‌ಗಳು: ಅರಮನೆ ನಗರ, ಮತ್ತಿಕೆರೆ, ಮಲ್ಲೇಶ್ವರ, ರಾಜಮಹಲ್ ಗುಟ್ಟಹಳ್ಳಿ, ಕಾಡುಮಲ್ಲೇಶ್ವರ, ಸುಬ್ರಹ್ಮಣ್ಯನಗರ, ಗಾಯತ್ರಿನಗರ, ರಾಧಾಕೃಷ್ಣದೇವಸ್ಥಾನ, ಸಂಜಯನಗರ, ಗಂಗಾನಗರ, ಹೆಬ್ಟಾಳ, ವಿ.ನಾಗೇನಹಳ್ಳಿ, ಮನೋರಾಯನಪಾಳ್ಯ, ಗಂಗೇನಹಳ್ಳಿ, ಜೆ.ಸಿ.ನಗರ, ಕುಶಾಲನಗರ, ಕಾವಲ್ ಭೈರಸಂದ್ರ, ದೇವರ ಜೀವನಹಳ್ಳಿ, ಮುನೇಶ್ವರನಗರ, ಸಗಾಯಪುರ, ಎಸ್.ಕೆ.ಗಾರ್ಡನ್, ಪುಲಕೇಶಿನಗರ, ರಾಮಸ್ವಾಮಿಪಾಳ್ಯ, ಜಯಮಹಲ್, ಹಲಸೂರು, ಭಾರತಿನಗರ, ಶಿವಾಜಿನಗರ, ವಸಂತನಗರ, ಸಂಪಂಗಿರಾಮನಗರ
* ಗಾಂಧಿನಗರ ವಲಯ, ವಿಧಾನಸಭೆ ಕ್ಷೇತ್ರ: ಚಿಕ್ಕಪೇಟೆ, ಗಾಂಧಿನಗರ, ಚಾಮರಾಜಪೇಟೆ, ಬಸವನಗುಡಿ
ವಾರ್ಡ್‌ಗಳು: ಸುಧಾಮನಗರ, ಧರ್ಮರಾಯಸ್ವಾಮಿ ದೇವಸ್ಥಾನ, ಸುಂಕೇನಹಳ್ಳಿ, ವಿ.ವಿ.ಪುರ, ಸಿದ್ದಾಪುರ, ಹೊಂಬೇಗೌಡನಗರ, ಜಯನಗರ, ದತ್ತಾತ್ರೇಯ ದೇವಸ್ಥಾನ, ಗಾಂಧಿನಗರ, ಸುಭಾಷ್‌ನಗರ, ಓಕಳಿಪುರ, ಚಿಕ್ಕಪೇಟೆ, ಕಾಟನ್‌ಪೇಟೆ, ಬಿನ್ನಿಪೇಟೆ, ಪಾದರಾಯನಪುರ, ಜಗಜೀವನರಾಮ್‌ನಗರ, ರಾಯಪುರ, ಛಲವಾದಿಪಾಳ್ಯ, ಕೆ.ಆರ್.ಮಾರುಕಟ್ಟೆ, ಚಾಮರಾಜಪೇಟೆ, ಆಜಾದ್‌ನಗರ, ಬಸವನಗುಡಿ, ಹನುಮಂತನಗರ, ಶ್ರೀನಗರ, ಗಿರಿನಗರ, ಕತ್ತರಿಗುಪ್ಪೆ, ವಿದ್ಯಾಪೀಠ.
* ವಿಜಯನಗರ ವಲಯ, ವಿಧಾನಸಭೆ ಕ್ಷೇತ್ರ: ರಾಜಾಜಿನಗರ, ಗೋವಿಂದರಾಜನಗರ, ವಿಜಯನಗರ
ವಾರ್ಡ್‌ಗಳು: ದಯಾನಂದನಗರ, ಪ್ರಕಾಶ್‌ನಗರ, ರಾಜಾಜಿನಗರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಶಿವನಗರ, ಶ್ರೀರಾಮಮಂದಿರ, ಕಾವೇರಿಪುರ, ಗೋವಿಂದರಾಜನಗರ, ಅಗ್ರಹಾರ ದಾಸರಹಳ್ಳಿ, ಡಾ.ರಾಜಕುಮಾರ್, ಮಾರೇನಹಳ್ಳಿ, ಮಾರುತಿಮಂದಿರ, ಮೂಡಲಪಾಳ್ಯ, ನಾಗರಬಾವಿ, ನಾಯಂಡಹಳ್ಳಿ, ಕೆಂಪಾಪುರ ಅಗ್ರಹಾರ, ವಿಜಯನಗರ, ಹೊಸಹಳ್ಳಿ, ಅತ್ತಿಗುಪ್ಪೆ, ಹಂಪಿನಗರ, ಬಾಪೂಜಿನಗರ, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ದೀಪಾಂಜಲಿನಗರ
* ಯಲಹಂಕ ವಲಯ, ವಿಧಾನಸಭೆ ಕ್ಷೇತ್ರ: ಯಲಹಂಕ, ಬ್ಯಾಟರಾಯನಪುರ
ವಾರ್ಡ್‌ಗಳು: ಕೆಂಪೇಗೌಡ, ಚೌಡೇಶ್ವರಿ, ಅಟ್ಟೂರು, ಯಲಹಂಕ ಉಪನಗರ, ಜಕ್ಕೂರು, ಥಣಿಸಂದ್ರ, ಬ್ಯಾಟರಾಯನಪುರ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಕುವೆಂಪುನಗರ
* ದಾಸರಹಳ್ಳಿ ವಲಯ, ವಿಧಾನಸಭೆ ಕ್ಷೇತ್ರ: ಯಶವಂತಪುರ, ದಾಸರಹಳ್ಳಿ
ವಾರ್ಡ್‌ಗಳು: ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಕುಂಟೆ, ಟಿ.ದಾಸರಹಳ್ಳಿ, ಚೊಕ್ಕಸಂದ್ರ, ಪೀಣ್ಯ ಕೈಗಾರಿಕಾ ಪ್ರದೇಶ, ರಾಜಗೋಪಾಲನಗರ, ಹೆಗ್ಗನಹಳ್ಳಿ, ದೊಡ್ಡಬಿದರಕಲ್ಲು, ಹೇರೋಹಳ್ಳಿ, ಕೆಂಗೇರಿ, ಉಲ್ಲಾಳು, ಹೆಮ್ಮಿಗೆಪುರ
* ಮಹದೇವಪುರ ವಲಯ, ವಿಧಾನಸಭೆ ಕ್ಷೇತ್ರ: ಮಹದೇವಪುರ
ವಾರ್ಡ್‌ಗಳು: ಹೂಡಿ, ಗರುಡಾಚಾರ್‌ಪಾಳ್ಯ, ಕಾಡುಗೋಡಿ, ಹಗದೂರು, ದೊಡ್ಡನೆಕ್ಕುಂದಿ, ಮಾರತಹಳ್ಳಿ, ವರ್ತೂರು, ಬೆಳ್ಳಂದೂರು
* ರಾಜರಾಜೇಶ್ವರಿನಗರ ವಲಯ, ವಿಧಾನಸಭೆ ಕ್ಷೇತ್ರ: ರಾಜರಾಜೇಶ್ವರಿನಗರ, ಮಹಾಲಕ್ಷ್ಮೀಲೇಔಟ್
ವಾರ್ಡ್‌ಗಳು: ನಂದಿನಿ ಲೇಔಟ್, ಮಾರಪ್ಪನಪಾಳ್ಯ, ನಾಗಪುರ, ಮಹಾಲಕ್ಷ್ಮೀಪುರ, ಶಕ್ತಿಗಣಪತಿನಗರ, ಶಂಕರಮಠ, ವೃಷಭಾವತಿನಗರ, ಜಾಲಹಳ್ಳಿ, ಜೆ.ಪಿ.ಉದ್ಯಾನ, ಯಶವಂತಪುರ, ಎಚ್.ಎಂ.ಟಿ., ಲಕ್ಷ್ಮೀದೇವಿನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ರಾಜರಾಜೇಶ್ವರಿನಗರ
ಪಾಲಿಕೆಯ ವಲಯಗಳನ್ನು 10ಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಹೊರಿಡಿಸಿ, ಅಗತ್ಯ ಅಧಿಕಾರಿ, ಸಿಬ್ಬಂದಿ ನೇಮಿಸುವ ಕುರಿತು ತೀರ್ಮಾನ ಕೈಗೊಂಡಿದೆ. ಸರ್ಕಾರದ ಆದೇಶದಂತೆ ಎರಡೂ ವಲಯಗಳಿಗೆ ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿ ನೇಮಿಸಲಾಗುವುದು. ಜತೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.