ಲಾಲ್‌ಬಾಗ್‌ಗೆ ಬರಲಿದೆ ಹೊಸ ಮೆರುಗು
Team Udayavani, Jun 13, 2017, 12:45 PM IST
ಬೆಂಗಳೂರು: ಮುಂಗಾರು ಶುರುವಾಗಿರುವ ಬೆನ್ನಲ್ಲೇ ಸಸ್ಯಕಾಶಿ ಲಾಲ್‌ಬಾಗ್‌ನಲ್ಲೂ ವನಮಹೋತ್ಸವದ ಸುಗ್ಗಿ. ಆಗಸ್ಟ್‌ನ ಸ್ವಾತಂತ್ರೊéàತ್ಸವಕ್ಕೂ ಮುನ್ನವೇ ರಂಗುರಂಗಿನ ಹೂವುಗಳು ಉದ್ಯಾನಕ್ಕೆ ಮೆರಗು ನೀಡುವಂತೆ ಮಾಡಲು ರಾಜ್ಯ ತೋಟಗಾರಿಕೆ ಇಲಾಖೆ ಹಲವಾರು ಪ್ರಭೇದದ ಹೂಗಿಡಗಳು, ದೊಡ್ಡ ಮರಗಳಾಗುವ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರಗಳ ಒಳ ಮತ್ತು ಹೊರಭಾಗಗಳು ಹೆಚ್ಚು ಆಕರ್ಷಣೆಗಳೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವಂತೆ ಅಭಿವೃದ್ಧಿಪಡಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಮೊದಲ ಹಂತವಾಗಿ ಕೆ.ಎಚ್.ರಸ್ತೆ ಕಡೆಯ (ಡಬಲ್ ರಸ್ತೆ) ಪ್ರವೇಶ ದ್ವಾರದ ಒಳಭಾಗದ ಜೋಡಿ ರಸ್ತೆ ಬದಿ ಆಕರ್ಷಕ ಭೂವಿನ್ಯಾಸ (ಲ್ಯಾಂಡ್‌ಸ್ಕೇಪಿಂಗ್) ಮೂಲಕ ಅಂದಗೊಳಿಸುವ ಕಾಮಗಾರಿ ಶುರುವಾಗಿದೆ.
ಮೈಸೂರು ಉದ್ಯಾನ ಕಲಾ ಸಂಘ ಸಮೀಪದ ಬಂಡೆ ಮುಂಭಾಗದ ವೃತ್ತದಿಂದ ಪ್ರವೇಶ ದ್ವಾರದವರೆಗೆ ಸುಮಾರು 3 ಅಡಿ ಅಗಲದ ಜಾಗದಲ್ಲಿ ನಾನಾ ಪ್ರಭೇದದ ಹೂವುಗಳು ಅರಳಲಿವೆ. ಇದಕ್ಕಾಗಿ ಹಲವು ವರ್ಷಗಳಿಂದ ಬೆಳೆದಿದ್ದ ಗಿಡಗಳನ್ನು ಬುಡ ಸಮೇತ ಕೀಳಲಾಗುತ್ತಿದೆ. ಈಗಾಗಲೇ ಹಳೆಯ ಗಿಡಗಳನ್ನು ತೆಗೆದು, ಮಣ್ಣನ್ನು ಹದಗೊಳಿಸಿ ತುಂಬಲಾಗಿದೆ. ಸುತ್ತಲಿನ ದಂಡೆಯನ್ನು ಅಣಿಗೊಳಿಸಿದ್ದು, ಗಿಡಗಳನ್ನು ನೆಡುವುದಷ್ಟೇ ಬಾಕಿ ಇದೆ.
ಅದಕ್ಕೂ ಮೊದಲು ಗಿಡ ನೆಡ ಬೆಳೆಸುವ ಸ್ಥಳದ ಎರಡೂ ಬದಿಯಲ್ಲಿ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ಪುಣೆ ಮತ್ತು ಲಾಲ್‌ಬಾಗ್ ನರ್ಸರಿಯಲ್ಲಿ ಅಭಿವೃದ್ಧಿಪಡಿಸಲಾದ ಸುಮಾರು 15ರಿಂದ 20 ಪ್ರಭೇದದ ಅಲಂಕಾರಿಕ ಹೂಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ ಎಂದು ಲಾಲ್‌ಬಾಗ್ ಉಪನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.
ಅಂದ ಹೆಚ್ಚಿಸಿದ ವಿದ್ಯುದ್ದೀಪ: ಜೋಡಿ ರಸ್ತೆಯ ಮಧ್ಯಭಾಗದಲ್ಲಿ ನಿರ್ಮಿಸಲಾಗುತ್ತಿರುವ ಲ್ಯಾಂಡ್‌ಸ್ಕೇಪಿಂಗ್ ನಡುವೆ ಸುಮಾರು ಐದು ಅಲಂಕಾರಿದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಈ ರಸ್ತೆಗೆ ಹೊಸ ಬೆಳಕಿನ ವ್ಯವಸ್ಥೆ ವಿಶೇಷ ಮೆರಗು ನೀಡಲಿದೆ. ಮತ್ತೂಂದು ವಿಶೇಷತೆ ಎಂದರೆ, ಎರಡು ನವಿಲಿನ ಪ್ರತಿಕೃತಿಗಳು ಈ ದೀಪದ ಕಂಬಗಳ ಮೇಲೆ ಕುಳಿತಂತೆ ನಿರ್ಮಿಸಲಾಗಿದ್ದು, ನೋಡುಗರನ್ನು ಸೆಳೆಯುತ್ತಿದೆ.
ಹೊಸ ಸಸ್ಯಗಳ ಮೆರುಗು: ಲಾಲ್‌ಬಾಗ್‌ನ ವಿವಿಧೆಡೆಗಳಲ್ಲಿ ಚೆಂಡು ಹೂವು, ಸೇವಂತಿಗೆ, ಜೇವಿಯ, ಫ್ಲಕ್ಸ್, ಪೆಟ್ರಿಮಿಯಾ, ಡೇಲಿಯಾ, ಟೆರ್ರಿವಿಯಂ ಹೂವಿನ ಗಿಡಗಳು ಸೇರಿದಂತೆ ಸುಮಾರು 300ರಿಂದ 400 ಪ್ರಭೇದದ ಗಿಡಗಳನ್ನು ನೆಡಲಾಗುತ್ತಿದೆ. ಜತೆಗೆ ಈಗಾಗಲೇ ಲಾಲ್‌ಬಾಗ್‌ನ ಹಲವೆಡೆ 250ಕ್ಕೂ ಹೆಚ್ಚು ಗುಂಡಿ ತೆಗೆಯಲಾಗಿದ್ದು, ಸುಮಾರು 300ರಿಂದ 400 ಜಾತಿಯ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ 20ಕ್ಕೂ ಹೆಚ್ಚು ಪ್ರಭೇದದ ಮರದ ಸಸಿಗಳನ್ನು ಹೈದರಾಬಾದ್ ಮತ್ತು ಪುಣೆಯಿಂದ ತರಿಸಲಾಗುತ್ತಿದೆ.
ಖರ್ಚು-ವೆಚ್ಚ: ಹೂವಿನ ಗಿಡಗಳು, ಮರದ ಸಸಿಗಳು, ಡಬಲ್ ರೋಡ್ ಲ್ಯಾಂಡ್ ಸ್ಕೇಪಿಂಗ್ ಹಾಗೂ ಕೆಂಪುಮಣ್ಣು, ಮರಳು, ಗೊಬ್ಬರ ಇತ್ಯಾದಿಗಳ ವೆಚ್ಚ ಸೇರಿದಂತೆ ಈ ಯೋಜನೆಗೆ ಸುಮಾರು 40ರಿಂದ 45 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಆಕರ್ಷಕ ಲ್ಯಾಂಡ್‌ಸ್ಕೇಪಿಂಗ್, ಹೂವಿನ ಗಿಡಗಳ ನೆಡುವ ಕಾರ್ಯ ಶೀಘ್ರವೇ ಆರಂಭಿಸಲಿದ್ದು, ಒಂದೂವರೆ ತಿಂಗಳಲ್ಲಿ ಕೆಲಸ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಉಪನಿರ್ದೇಶಕ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
ಈ ಯೋಜನೆಗೆ ತಗಲುವ ವೆಚ್ಚವನ್ನು ಪಾರ್ಕ್ಸ್ ಆ್ಯಂಡ್ ಗಾರ್ಡನ್ಸ್ ಮತ್ತು ಸುವರ್ಣ ಕರ್ನಾಟಕ ಉದ್ಯಾನ ಟ್ರಸ್ಟ್ ಮೂಲಕ ಭರಿಸಲಾಗುವುದು. ಸಸಿಗಳನ್ನು ನೆಡಲು ಮಳೆಗಾಲ ಉತ್ತಮವಾಗಿರುವುದರಿಂದ ಆರೈಕೆ ಸುಲಭ. ಜತೆಗೆ ಉದ್ಯಾನವನ್ನು ಹೆಚ್ಚು ಆಕರ್ಷಣೀಯಗೊಳಿಸುವ ನಿಟ್ಟಿನಲ್ಲಿ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ಈ ಕಾಮಗಾರಿ ಆರಂಭಿಸಲಾಗಿದೆ.
-ಡಾ. ಎಂ.ಜಗದೀಶ್, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ
* ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.