ಹಲ್ಲೆ, ಕಳವಿನ ಆರೋಪ: ವಾಯು ಪಡೆ ಪೈಲಟ್ ಡಿಸ್ಮಿಸ್, 2 ವರ್ಷ ಜೈಲು
Team Udayavani, Jun 13, 2017, 3:26 PM IST
ಹೊಸದಿಲ್ಲಿ : ಹಿರಿಯ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಹಾಗೂ ಮೆಸ್ನಿಂದ ಟಿವಿ ರಿಮೋಟ್ ಕದ್ದ ಆರೋಪದ ಮೇಲೆ ಭಾರತೀಯ ವಾಯು ಪಡೆಯ ಪೈಲಟ್ ಒಬ್ಬರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ ಮಾತ್ರವಲ್ಲ ಎರಡು ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ ಎಂದು ಮೇಲ್ ಟುಡೇ ವರದಿ ಮಾಡಿದೆ.
ಜನರಲ್ ಕೋರ್ಟ್ ಮಾರ್ಶಲ್ ವಿಧಿಸಿರುವ ಈ ಶಿಕ್ಷೆಯನ್ನು ಪ್ರಶ್ನಿಸಿ ಸಂತ್ರಸ್ತ ಫ್ಲೈಟ್ ಲೆಫ್ಟಿನೆಂಟ್ ಇದೀಗ ದಿಲ್ಲಿಯಲ್ಲಿನ ಸೇನಾ ನ್ಯಾಯಾಲಯದ ಮೆಟ್ಟಲು ಹತ್ತಿದ್ದಾರೆ ಎಂದು “ದಿ ಇಂಡಿಯನ್ ಎಕ್ಸ್ಪ್ರೆಸ್’ ಆನ್ಲೈನ್ ವರದಿ ತಿಳಿಸಿದೆ.
25,000 ರೂ.ಗಳ ವೈಯಕ್ತಿಕ ಬಾಂಡ್ ನೀಡಿರುವ ಪೈಲಟ್ಗೆ ದಿಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಸೇನೆಯ ನ್ಯಾಯಮಂಡಳಿ ಪೀಠದ ಮುಖ್ಯಸ್ಥರಾಗಿರುವ ಜಸ್ಟಿಸ್ ವಿ ಕೆ ವಾಲಿ ಅವರು ಸಂತ್ರಸ್ತ ಪೈಲಟ್ಗೆ ಜಾಮೀನು ಮಾಡಿರುವ ನ್ಯಾಯಾಧೀಶರಾಗಿದ್ದಾರೆ.
ಮಿಲಿಟರಿ ನ್ಯಾಯಾಲಯವು ಪೈಲಟ್ಗೆ ತನ್ನ ಪಾಸ್ ಪೋರ್ಟನ್ನು ನ್ಯಾಯ ಮಂಡಳಿಗೆ ಒಪ್ಪಿಸುವಂತೆ ಸೂಚಿಸಿದೆಯಲ್ಲದೆ ದಿಲ್ಲಿಯಲ್ಲಿ ಅಥವಾ ದಿಲ್ಲಿಯ ಹೊರಗೆ ಇರುವಾಗ ಯಾವುದೇ ವಾಯು ನೆಲೆಯನ್ನು ಅಥವಾ ವಸತಿ ಸಂಕೀರ್ಣಗಳನ್ನು ಪ್ರವೇಶಿಸಕೂಡದೆಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.