ಮಲ್ಯಗೆ ಬ್ರಿಟನ್ ಕೋರ್ಟ್ ಬೇಲ್; ನಿರಪರಾಧಿತ್ವ ಸಾಬೀತು ಪಡಿಸುವೆ
Team Udayavani, Jun 13, 2017, 7:08 PM IST
ಹೊಸದಿಲ್ಲಿ : ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲ ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ಮಾಡಿದ್ದ ವಿವಾದಿತ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರಿಗೆ ಬ್ರಿಟನ್ ನ್ಯಾಯಾಲಯ ಇಂದು ಮಂಗಳವಾರ ಡಿಸೆಂಬರ್ 4ರ ವರೆಗೆ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜುಲೈ 6ಕ್ಕೆ ನಿಗದಿಸಿದೆ.
61ರ ಹರೆಯದ, ಕಿಂಗ್ ಫಿಶರ್ ಏರ್ ಲೈನ್ಸ್ ಮಾಜಿ ಮುಖ್ಯಸ್ಥ ಮಲ್ಯ ಅವರು ಇಂದು ಮಂಗಳವಾರ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟರ ನ್ಯಾಯಾಲಯದಲ್ಲಿ ತಮ್ಮ ಗಡೀಪಾರು ವಿಚಾರಣೆ ಸಂಬಂಧವಾಗಿ ಹಾಜರಾದರು. ಮ್ಯಾಜಿಸ್ಟ್ರೇಟ್ ಎಮಾ ಲೂಯಿಸ್ ಆರ್ಬತ್ನಾಟ್ ಅವರು ಮಲ್ಯಗೆ ಜಾಮೀನು ಮಂಜೂರು ಮಾಡಿದರು.
ಬೆಳಗ್ಗೆ ಕೋರ್ಟ್ ಆವರಣ ಪ್ರವೇಶಿಸುವ ಮುನ್ನ ಮಲ್ಯ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಾನು ನ್ಯಾಯಾಲಯ ವಿಚಾರಣೆಯನ್ನು ತಪ್ಪಿಸಿಕೊಳ್ಳುತ್ತಿದ್ದೇನೆ ಎಂಬ ತನ್ನ ಮೇಲಿನ ಆರೋಪವನ್ನು ಅಲ್ಲಗಳೆದರು. ತಾನು ನ್ಯಾಯಾಲಯದಲ್ಲಿ ನಿರಪರಾಧಿಯಾಗಿ ಮೂಡಿ ಬರುವ ವಿಶ್ವಾಸ ತನಗಿದೆ ಎಂದು ಮಲ್ಯ ಹೇಳಿಕೊಂಡರು.
ಭಾರತೀಯ ಅಧಿಕಾರಿಗಳ ಪರವಾಗಿ ಕೋರ್ಟಿನಲ್ಲಿಂದು ಬ್ರಿಟನ್ ಕ್ರೌನ್ ಪ್ರಾಸಿಕ್ಯೂಶನ್ ಸೇವೆ ವಾದಿಸಿತು. ಈ ಮೊದಲು ಮೇ 17ಕ್ಕೆ ವಿಚಾರಣೆಯನ್ನು ನಿಗದಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.