ಯಾರು ಯುದ್ದ ಬಯಸುತ್ತಾರೋ ಅವರನ್ನು ಗಡಿಗೆ ಕಳುಹಿಸಿ! ಸಲ್ಮಾನ್ ಖಾನ್
Team Udayavani, Jun 14, 2017, 4:21 PM IST
ಮುಂಬಯಿ : “ಯಾರು ಯುದ್ಧವನ್ನು ಬಯಸುತ್ತಾರೋ, ಯಾರು ಯುದ್ದಕ್ಕೆ ಆದೇಶ ನೀಡುತ್ತಾರೋ ಅವರನ್ನು, ಯುದ್ಧದಲ್ಲಿ ಹೋರಾಡಲು, ಸೈನಿಕರ ಬದಲು, ಮೊದಲು ಗಡಿಯತ್ತ ಕಳುಹಿಸಬೇಕು; ಆಗ ಮಾತ್ರವೇ ಅವರಿಗೆ ಯುದ್ಧ ಎಂದರೇನು, ಯುದ್ಧದಲ್ಲಿ ಹೋರಾಡುವುದೆಂದರೆ ಏನು ಎಂಬುದು ಚೆನ್ನಾಗಿ ಗೊತ್ತಾಗುತ್ತದೆ. ರಣರಂಗದಲ್ಲಿ ಬಂದೂಕು ಹಿಡಿದು ನಿಂತಾಗ ಅವರ ಕೈಗಳು ನಡುಗಲು ಶುರುವಾಗುತ್ತವೆ; ಕಾಲುಗಳು ಕಂಪಿಸಲು ಶುರುವಾಗುತ್ತವೆ. ಯುದ್ದದ ಬದಲು ಶಾಂತಿ ಮಾತುಕತೆಯ ಮೂಲಕವೇ ಭಿನ್ನಮತವನ್ನು ಬಗೆಹರಿಸಿಕೊಳ್ಳುವುದು ಒಳ್ಳೆಯದು ಎಂಬ ಸತ್ಯ ಅವರಿಗೆ ಅರಿವಾಗುತ್ತದೆ. ದೇಶ-ದೇಶಗಳ ನಡುವಿನ ವಿವಾದ, ಭಿನ್ನಮತ ಬಗೆಹರಿಸಲು ಮಾತುಕತೆಯೊಂದೇ ಪರಿಹಾರ ಹೊರತು ಯುದ್ದ ಅಲ್ಲ’.
ಈ ಮಾತುಗಳನ್ನು ಆಡಿದವರು ಯಾರು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಖುದ್ದಾಗಿ ಆಡಿರುವ ಮಾತುಗಳು ಇವು !
ಯುದ್ದಾಕಾಂಕ್ಷಿಗಳು, ಯುದ್ದಾಪೇಕ್ಷಿಗಳು ಮತ್ತು ಯುದ್ಧೋನ್ಮಾದ ಹೊಂದಿದವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿರುವ ಸಲ್ಮಾನ್ ನಿರ್ದಾಕ್ಷಿಣ್ಯವಾಗಿ ಈ ಮಾತುಗಳನ್ನು ಆಡಿದ್ದಾರೆ.
“ಯುದ್ದ ಎನ್ನುವುದು ಅತೀ ಕೆಟ್ಟದು; ಜಗತ್ತಿನಲ್ಲೇ ಯಾರನ್ನೇ ಕೇಳಿದರೂ ಅವರು ಯುದ್ದ ಅತ್ಯಂತ ಕೆಟ್ಟದ್ದು ಎನ್ನುತ್ತಾರೆ; ಆದರೂ ವಿಶ್ವಾದ್ಯಂತ ಯುದ್ದ ನಡೆಯುತ್ತಲೇ ಇದೆ; ಜನರು ಸಾಯುತ್ತಲೇ ಇದ್ದಾರೆ; ನಿಜಕ್ಕಾದರೆ ಯುದ್ದಕ್ಕೆ ಆದೇಶ ಕೊಡುವವರು ರಣರಂಗಕ್ಕೆ ಹೋಗುವುದಿಲ್ಲ; ಹಾಗಾಗಿ ಅವರಿಗೆ ಯುದ್ದದಿಂದಾಗುವ ಸಾವು ನೋವುಗಳ ಬಗ್ಗೆ ದುಃಖವೇ ಇರುವುದಿಲ್ಲ’ ಎಂದು ಸಲ್ಮಾನ್ ಹೇಳಿದರು.
ಸಲ್ಮಾನ್ ಖಾನ್ ಈ ಮಾತುಗಳನ್ನು ಯಾರನ್ನು ಉದ್ದೇಶಿಸಿ ಹೇಳಿದರು ಎಂಬುದು ಸ್ಪಷ್ಟವಿಲ್ಲ; ಹಾಗಾಗಿ ಅವರ ಈ ಮಾತುಗಳು ಹೊಸ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಿಳಿಯಲಾಗಿದೆ.
ಕಳೆದ ವರ್ಷ ಈದ್ ಸಂದರ್ಭದಲ್ಲಿ ತಮ್ಮ ಬ್ಲಾಕ್ ಬಸ್ಟರ್ “ಸುಲ್ತಾನ್’ ಚಿತ್ರವನ್ನು ತೆರೆಗೆ ಅರ್ಪಿಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಸಲ್ಮಾನ್ ಖಾನ್ ಈ ಬಾರಿ ಈದ್ ಸಂದರ್ಭದಲ್ಲಿ “ಟ್ಯೂಬ್ ಲೈಟ್’ ಎಂಬ ತಮ್ಮ ಹೊಸ ಚಿತ್ರವನ್ನು ಬಿಡುಗಡೆ ಮಾಡಲು ಉದ್ದೇಶಿಸಿದ್ದಾರೆ. ಈ ಚಿತ್ರ 1962ರಲ್ಲಿ ನಡೆದಿದ್ದ ಭಾರತ-ಚೀನ ಯುದ್ದದ ಹಿನ್ನೆಲೆಯನ್ನು ಹೊಂದಿದೆ. ಕಬೀರ್ ಖಾನ್ ಈ ಚಿತ್ರದ ನಿರ್ದೇಶಕರು.
ಚಿತ್ರದ ಪ್ರಚಾರಾರ್ಥವಾಗಿ ನಡೆದ ಕಾರ್ಯಕ್ರಮದಲ್ಲಿ ಸಲ್ಮಾನ್ ಮತ್ತು ಸೊಹೇಲ್ ಖಾನ್ ಅವರು ಯುದ್ಧ ಮತ್ತು ಯುದೊœàತ್ಸಾಹ ಹೊಂದಿದವರನ್ನು ತರಾಟೆಗೆ ತೆಗೆದುಕೊಂಡರು !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.