ಬಿಆರ್‌ಟಿಎಸ್ ಕಾಮಗಾರಿ ವಿಳಂಬ ಖಂಡಿಸಿ ನಾಗರಿಕರ ಪ್ರತಿಭಟನೆ
Team Udayavani, Jun 14, 2017, 5:06 PM IST
ಧಾರವಾಡ: ಬಿಆರ್‌ಟಿಎಸ್ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ ಹಾಗೂ ಕಾಮಗಾರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಖಂಡಿಸಿ ಜೆಎಸ್ ಎಸ್ ಕಾಲೇಜಿನ ಹತ್ತಿರದ ಮಧು ಅಪಾರ್ಟ್‌ಮೆಂಟ್ ಎದುರು ಸಾರ್ವಜನಿಕರು ಮಂಗಳವಾರ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಟೋಲನಾಕಾ, ವಿವೇಕಾನಂದ ನಗರ, ಲಕೀನಗರ, ವಿದ್ಯಾಗಿರಿ, ರಜತಗಿರಿ, ಸತ್ತೂರ ಕಾಲನಿ, ಗಾಂ ಧಿನಗರ, ಶೆಟ್ಟರ ಕಾಲನಿಯ ನಿವಾಸಿಗಳು ಹು-ಧಾ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ರಸ್ತೆ ಅಗಲೀಕರಣ ಹೆಸರಿನಲ್ಲಿ ಕಂಪನಿಯವರು ರಸ್ತೆ ಅಗೆದ ಕಾರಣದಿಂದ ಒಳಚರಂಡಿ, ರಸ್ತೆ, ಗಟಾರು ಹಾಳಾಗಿವೆ. ರಸ್ತೆ ಅಗೆಯವ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್‌ಗೆ ಚರಂಡಿ ನೀರು ಸೇರಿ ಮನೆಗಳಿಗೆ ಹೊಲಸು ನೀರು ಬರುತ್ತಿವೆ.
ಈ ನೀರನ್ನು ಬಳಸುವ ಜನರು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. ಈ ಕುರಿತು ಹಲವು ಬಾರಿ ಕಂಪನಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಈ ಯೋಜನೆಯ ಅವಸ್ಥೆಯಿಂದ ನಗರದ ಟೋಲನಾಕಾ ಮಾಡರ್ನ್ ಹಾಲ್ ಎದುರಲ್ಲಿ ಒಳಚರಂಡಿ ನೀರು ಹರಿಯುತ್ತಿದೆ.
ಮಧು ಅಪಾರ್ಟ್‌ಮೆಂಟ್‌ನಿಂದ ಗಾಂಧಿನಗರದವರೆಗೂ ಒಳಚರಂಡಿ ನೀರು ಹರಿಯುತ್ತಿದೆ. ಯೋಜನೆ ಜಾರಿಯಾದಾಗಿನಿಂದ ರಸ್ತೆ ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ವಿದ್ಯುತ್ ಕಂಬಗಳನ್ನು ಸರಿಯಾಗಿ ನೆಟ್ಟಿಲ್ಲ, ಕುಡಿಯುವ ನೀರಿನ ಪೈಪ್‌ಗ್ಳು ಎಲ್ಲೆಂದರಲ್ಲಿ ಸೋರುತ್ತಿವೆ. ಕಂಡ ಕಂಡಲ್ಲಿ ತಗ್ಗು ದಿನ್ನೆಗಳನ್ನು ಮಾಡಲಾಗಿದೆ.
ಇದ್ದ ಗಠಾರುಗಳನ್ನು ಮುಚ್ಚಲಾಗಿದೆ. ದಿನನಿತ್ಯ ಉಪಯೋಗಿಸುವ ನೀರನ್ನು ರಸ್ತೆಗಳಿಗೆ ಬಿಡಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಸಾರ್ವಜನಿಕರು ಕಾಲರಾ, ಡೆಂ à, ಕಾಮಣಿ, ಅಸ್ತಮಾದಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸುದ್ದಿ ತಿಳಿದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಆರ್‌ಟಿಎಸ್ ಅಧಿಕಾರಿ ಬಸವರಾಜ ಕೆರಿ ಅವರ ಎದುರು ಅಳಲು ತೋಡಿಕೊಂಡ ನಿವಾಸಿಗಳು, ಈ ಸಮಸ್ಯೆಗಳಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಮೂರು ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ದೊರೆತ ಬಳಿಕ ಪ್ರತಿಭಟನೆ ಹಿಂಪಡೆದರು.
ಅರ್ಧ ತಾಸಿಗೂ ಹೆಚ್ಚು ಸಮಯ ರಸ್ತೆತಡೆ ನಡೆಸಿದ್ದರಿಂದ ಸಂಚಾರದಲ್ಲಿ ವ್ಯತ್ಯಯ ಆಗಿದ್ದು, ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಪ್ರತಿಭಟನೆಯಲ್ಲಿ ಮೋಹನ ಅರ್ಕಸಾಲಿ, ಸಂತೋಷ ಪಟ್ಟಣಶೆಟ್ಟಿ, ಮಧು ಸತ್ತೂರ, ಶಂಕರ ದೇವರೆಡ್ಡಿ, ಇಸಬೆಲ್ಲಾದಾಸ, ರಘು ಲಕ್ಕನ್ನವರ, ಶೈಲಾ ಕಾಮರೆಡ್ಡಿ, ಅರುಣ, ಮನೋಜ ಸಂಗೊಳ್ಳಿ,
-ಕಿರಣ ಹಿರೇಮಠ, ದೀಪಕ ಗಾಂವಕರ, ಶೈಲಜಾ ಗುಡ್ಡದ, ರೂಪಾ ಇರೇಶನವರ, ಪುಷ್ಪಾ ನಾಯಕ, ಅನಂತ ಕೃಷ್ಣ ಕಿಡಿಯೂರ, ತುರಮರಿ, ಸಂತೋಷ ತಳವಾಯಿ, ಕುಮಾರ ಚಿನಿವಾಳ, ವೀರಭದ್ರ ಭರಣಿ ಮತ್ತನವರ, ಮಂಜುನಾಥ ಕಲ್ಲೂರಮಠ, ರಮೇಶ ಶೆಟ್ಟಿ, ರಾಜು ಇಟಗಿ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.