ದೇವಾಲಯ ಹಣ ಚರ್ಚ್‌-ಮಸೀದಿಗೆ ಕೊಡ್ತಿಲ್ಲ


Team Udayavani, Jun 15, 2017, 12:50 PM IST

Rudrappa.jpg

ವಿಧಾನ ಪರಿಷತ್ತು: ಹಿಂದೂ ದೇವಾಲಯಗಳಿಂದ ಬರುವ ಆದಾಯವನ್ನು ಚರ್ಚ್‌, ಮಸೀದಿಗಳಿಗೆ ನೀಡಲಾಗುತ್ತಿದೆ ಎಂಬುದು ಸುಳ್ಳು.

ದೇವಾಲಯಗಳಿಗೆ ಬರುವ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತಿದ್ದು, ಇಂತಹ ವದಂತಿಗಳಿಗೆ ಭಕ್ತರು ಕಿವಿಗೊಡಬಾರದು ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಸ್ಪಷ್ಟಪಡಿಸಿದ್ದಾರೆ.

ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರಶ್ನೆಗೆ ಉತ್ತರಿಸಿದ ಅವರು, “ಯಾವುದೇ ಹಿಂದೂ ದೇವಾಲಯದ ಆದಾಯವನ್ನು ಬೇರೆ ಕಾರ್ಯಕ್ಕೆ ನೇರವಾಗಿ ಖರ್ಚು ಮಾಡಲು ಅವಕಾಶವಿಲ್ಲ. “ಎ’ ವರ್ಗದ ದೇವಾಲಯದ ಆದಾಯದಲ್ಲಿ ಶೇ.10 ಹಾಗೂ “ಬಿ’ ವರ್ಗದ ದೇವಾಲಯದ ಆದಾಯದಲ್ಲಿ ಶೇ.5ರಷ್ಟು ಹಣವಷ್ಟೇ ಸರ್ಕಾರಕ್ಕೆ ಬರಲಿದೆ. ಉಳಿದ ಹಣವನ್ನು ದೇವಾಲಯದ ಅಭಿವೃದ್ಧಿ, ಮೂಲ ಸೌಕರ್ಯ ಕಲ್ಪಿಸುವ ಕಾರ್ಯಕ್ಕೆ ಬಳಸ ಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ರಾಜ್ಯ ಧಾರ್ಮಿಕ ಪರಿಷತ್‌ನಲ್ಲಿ ಇತ್ತೀಚೆಗೆ ನಡೆದ ಸಭೆಯ ಚರ್ಚೆಯಂತೆ ದೇವಸ್ಥಾನದ ಆದಾಯದಲ್ಲಿ ಶೇ.60ರಷ್ಟನ್ನು
ಮುಜರಾಯಿ ದೇವಾಲಯದ ಅಭಿವೃದ್ಧಿಗೆ ಹಾಗೂ ಇನ್ನುಳಿದ ಶೇ.40ರಷ್ಟು ಹಣವನ್ನು ಉಳಿದ ದೇವಾಲಯಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು, ಪ್ರವಾಸಿಗರಿಗೆ ಸವಲತ್ತು ಕಲ್ಪಿಸಲು ಚಿಂತಿಸಲಾಗಿದೆ ಎಂದು ಹೇಳಿದರು.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 34,559 ದೇವಾಲಯಗಳಿವೆ. ಹಿಂದೂ ದೇವಾಲಯದ ಹುಂಡಿಗೆ ಬರುವ
ಹಣವನ್ನು ಚರ್ಚ್‌, ಮಸೀದಿಗಳ ಅಭಿವೃದ್ಧಿಗೆ ಬಳಸುತ್ತಿಲ್ಲ. ಆದರೆ, ಈ ಬಗ್ಗೆ ವಾಟ್ಸಪ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸುತ್ತಿ ರುವುದು ಗಮನಕ್ಕೆ ಬಂದಿದೆ. ಕೆಲವರು ವೀರಾವೇಶದಿಂದ ಸಂದೇಶಗಳನ್ನು ಪ್ರಕಟಿಸಿದ್ದು, ಅಪಪ್ರಚಾರ ಮಾಡುವುದು ಸರಿಯಲ್ಲ. ಸುಳ್ಳು ಮಾಹಿತಿ ನೀಡಿ ಜನರ ತಲೆಕೆಡಿಸುವ ಪ್ರಯತ್ನ ನಡೆದಿದೆ. ಪ್ರತಿಯೊಂದು ಪೈಸೆಗೂ ಲೆಕ್ಕ ಇರುತ್ತದೆ. ಹಾಗಾಗಿ ಭಕ್ತರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಹುಂಡಿ ಹಣವನ್ನು ಆಯಾ ದೇವಾಲಯಕ್ಕೆ ಖರ್ಚು ಮಾಡಲಾಗುವುದು. ಕೆಲವೆಡೆ ದೇವಸ್ಥಾನ ಸೇರಿರುವ ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯಾನ, ಶಾಲಾ- ಕಾಲೇಜು ಅಭಿವೃದ್ಧಿ ಸೇರಿದಂತೆ ಇತರ ಅಭಿವೃದ್ಧಿ ಚಟುವಟಿಕೆಗಳಿಗೆ ಹಣ ವೆಚ್ಚ ಮಾಡಲಾಗುತ್ತದೆ. ಅಲ್ಲದೆ, 2 ಲಕ್ಷ ರೂ.ಗಿಂತ ಕಡಿಮೆ ಆದಾಯವಿರುವ ನಾಲ್ಕೈದು ದೇವಾಲಯಗಳನ್ನು ದತ್ತು ಪಡೆದು ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸುವ ಕಾರ್ಯವೂ ನಡೆದಿದೆ. ಹಿಂದಿನ ಸರ್ಕಾರಕ್ಕಿಂತ ತಮ್ಮ ಸರ್ಕಾರ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಸಮರ್ಥಿಸಿಕೊಂಡರು. ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಬಸನಗೌಡ ಪಾಟೀಲ್‌ ಯತ್ನಾಳ್‌, “ರಾಜ್ಯದಲ್ಲಿನ ಹಿಂದೂ ದೇವಾಲಯಗಳನ್ನು ಸರ್ಕಾರ ನಿಯಂತ್ರಿಸುತ್ತಿದ್ದು, ಬೇರೆ ಧರ್ಮದ ಪ್ರಾರ್ಥನಾ ಮಂದಿರಗಳ ಮೇಲೆ ನಿಯಂತ್ರಣ ಸಾಧಿಸುತ್ತಿಲ್ಲ. “ಎ’ ವರ್ಗ (175) ಹಾಗೂ “ಬಿ’ ವರ್ಗದ (158) ದೇವಸ್ಥಾನಗಳಿಗೆ 2015-16ನೇ ಸಾಲಿನಲ್ಲಿ 476 ಕೋಟಿ ರೂ.ಆದಾಯ ಬಂದಿದ್ದು, ಇದರಲ್ಲಿ 314 ಕೋಟಿ ರೂ. ವೆಚ್ಚ ಮಾಡಲಾಗಿದೆ. ಉಳಿದ 161 ಕೋಟಿ ರೂ.ಹಣ ಏನಾಯಿತು? ಹಿಂದೂ ದೇವಾಲಯಗಳಿಗೆ ಬರುವ ಹಣವನ್ನು ಹಜ್‌ ಯಾತ್ರೆಗೆ ಹೋಗುವವರಿಗೆ ನೀಡಲಾಗುತ್ತದೆ ಎಂದು ವಾಟ್ಸಪ್‌ ಹಾಗೂ ಇತರ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು
ಎಂದು ಹೇಳಿದರು.

ಬಳಿಕ ಬಿಜೆಪಿಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಬಜೆಟ್‌ನಲ್ಲಿ ಮುಜರಾಯಿ ಇಲಾಖೆಗೆ 201 ಕೋಟಿ ರೂ.ಅನುದಾನ
ಘೋಷಿಸಲಾಗಿದ್ದು, ಇದು ಹುಂಡಿಯಿಂದ ಸಂಗ್ರಹವಾದ ಮೊತ್ತವೇ ಅಥವಾ ಸರ್ಕಾರದ ಅನುದಾನವೇ ಎಂದು ಪ್ರಶ್ನಿಸಿದರು.

ಇದು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ನೀಡಿರುವ ಅನುದಾನ ಎಂದು ಸಚಿವರು ಸ್ಪಷ್ಟಪಡಿಸಿದರು. ಈ ನಡುವೆ ಸಚಿವ ಎಂ.ಬಿ.ಪಾಟೀಲ್‌, “2009ರಲ್ಲಿ ಸೂರ್ಯಗ್ರಹಣ ಘಟಿಸುವುದು ಅನಿಷ್ಠವೆಂಬ ಕಾರಣಕ್ಕೆ ಮುಜರಾಯಿ ದೇವಸ್ಥಾನಗಳಲ್ಲಿ ತಲಾ 8000 ರೂ.ಖರ್ಚು ಮಾಡಿ ಪೂಜೆ, ಪುನಸ್ಕಾರ ನಡೆಸಲಾಗಿತ್ತು. ಹಾಗೆಯೇ 2012ರಲ್ಲೂ ಪ್ರತಿ ದೇವಾಲಯದಲ್ಲಿ ಪರ್ಜನ್ಯ ಹೋಮ ನಡೆಸಲು ತಲಾ ಐದು ಸಾವಿರ ರೂ.ವೆಚ್ಚ ಮಾಡಲಾಗಿತ್ತು. ಹೀಗೆ ಮೂಢನಂಬಿಕೆಯಿಂದಾಗಿ ಹಣ ವೆಚ್ಚ ಮಾಡಿದ ಉದಾಹರಣೆ ಇದೆ ಎಂದು ಹೇಳಿ ಬಿಜೆಪಿ ಸದಸ್ಯರನ್ನು ಕೆಣಕುತ್ತಿದ್ದಂತೆ ಬಿಜೆಪಿಯ ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

“ಎ’ ಶ್ರೇಣಿ ದೇವಸ್ಥಾನದ ಮೂಲಕವೇ ಗೋಶಾಲೆಗಳನ್ನು ನಡೆಸಿದರೆ ನಿರ್ವಹಣೆ ಸುಲಭವಾಗಲಿದ್ದು, ಪಾರದರ್ಶಕತೆ
ಕಾಪಾಡಬಹುದಾಗಿದೆ. ಜತೆಗೆ ಮುಜರಾಯಿ ಇಲಾಖೆಯ ಅರ್ಚಕರಿಗೆ ಸರಿಯಾದ ವೇತನ, ಉದ್ಯೋಗ ಭದ್ರತೆ
ಕಲ್ಪಿಸಲಾಗಿದೆಯೇ ಎಂದು ಯತ್ನಾಳ ಪ್ರಶ್ನಿಸಿದರು. ಉತ್ತರಿಸಿದ ಸಚಿವರು, ಕೆಲವೆಡೆ ದೇವಸ್ಥಾನದ ವತಿಯಿಂದಲೇ ಗೋಶಾಲೆ ನಡೆಯುತ್ತಿದ್ದು, ಜನರಿಂದ ಬೇಡಿಕೆ ಬಂದರೆ ವ್ಯವಸ್ಥಾಪನಾ ಸಮಿತಿ ರಚಿಸಿ ಅವಕಾಶ ಕಲ್ಪಿಸಲು ಚಿಂತಿಸಲಾಗುವುದು ಎಂದರು.

ಅರ್ಚಕರ ವೇತನ ಹೆಚ್ಚಳ
ಈ ಹಿಂದೆ “ಎ’, “ಬಿ’ ವರ್ಗದ ದೇವಾಲಯದ ಅರ್ಚಕರ ವೇತನ 2,000 ರೂ.ನಿಂದ 2,500 ರೂ.ಇತ್ತು. ಈಗ “ಎ’ ವರ್ಗದ ದೇವಾಲಯದ ಅರ್ಚಕರ ವೇತನವನ್ನು 6,500 ರೂ.ನಿಂದ 13,000 ರೂ.ವರೆಗೆ ಹಾಗೂ “ಬಿ’ ವರ್ಗದ ದೇವಾಲಯ ಅರ್ಚಕರ ವೇತನವನ್ನು 5,500 ರೂ.ನಿಂದ 12,500 ರೂ.ವರೆಗೆ ಹೆಚ್ಚಳ ಮಾಡಲಾಗಿದೆ. ತಟ್ಟೆ ಕಾಸು ಅರ್ಚಕರಿಗೆ ಸೇರುತ್ತದೆ ಎಂದು ಸಚಿವ ರುದ್ರಪ್ಪ ಲಮಾಣಿ ಹೇಳಿದರು. 

ಟಾಪ್ ನ್ಯೂಸ್

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

8-bng

Bengaluru: ಕದ್ದ ಮೊಬೈಲ್‌ ಕೊರಿಯರ್‌ ಮೂಲಕ ಕೇರಳಕ್ಕೆ ರವಾನೆ!

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.