ಭಟ್ಕಳದ ಆರ್ಮರ್ ಜಾಗತಿಕ ಉಗ್ರ: ಅಮೆರಿಕ
Team Udayavani, Jun 16, 2017, 2:22 AM IST
ವಾಷಿಂಗ್ಟನ್: ಐಸಿಸ್‌ನ ಉಗ್ರ ಕರ್ನಾಟಕದ ಭಟ್ಕಳ ಮೂಲದ ಮೊಹಮ್ಮದ್ ಶಫಿ ಆರ್ಮರ್‌ನನ್ನು ಅಮೆರಿಕ ಅಂತಾರಾಷ್ಟ್ರೀಯ ಉಗ್ರರ ಪಟ್ಟಿಗೆ ಸೇರಿಸಿದೆ. ಈತ ಯುವಕರನ್ನು ಐಸಿಸ್‌ಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಅಮೆರಿಕ ಪ್ರಕಟ ಮಾಡುವ ಈ ಜಾಗತಿಕ ಉಗ್ರರ ಪಟ್ಟಿಯಲ್ಲಿ ಒಮ್ಮೆ ಸೇರ್ಪಡೆಯಾದರೆ, ಇಂಥ ಉಗ್ರರಿಗೆ ಹಣಕಾಸು ನೆರವು ನೀಡುವ, ಆಶ್ರಯ ನೀಡುವ ದೇಶ, ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ನಿರ್ಬಂಧ ಹೇರಬಹುದಾಗಿದೆ. 30 ವರ್ಷದ ಈತನ ಮೇಲೆ ಈಗಾಗಲೇ ಇಂಟರ್‌ಪೋಲ್ ನೋಟಿಸ್ ಜಾರಿಯಾಗಿದೆ. ಚೋಟೆ ಮೌಲಾ, ಅಂಜಾನ್ ಬಾಯ್ ಮತ್ತು ಯೂಸುಫ್ ಅಲ್ ಹಿಂದಿ ಎಂಬ ಹೆಸರಿನಿಂದಲೂ ಆರ್ಮರ್ ಉಗ್ರರ ಪಾಳೆಯದಲ್ಲಿ ಚಿರಪರಿಚಿತ. ಈಗಾಗಲೇ ಬಂಧಿತನಾಗಿರುವ ಯಾಸೀನ್ ಭಟ್ಕಳ್ ಕೂಡ ಈತನ ಬಗ್ಗೆ ಮಾಹಿತಿ ನೀಡಿದ್ದ.
ಆರಂಭದಲ್ಲಿ ಯಾಸೀನ್ ಮತ್ತು ರಿಯಾಜ್ ಭಟ್ಕಳ್ ಗರಡಿಯಲ್ಲಿ ಪಳಗಿದ್ದ ಆರ್ಮರ್, ಅನಂತರ ಇವರ ಜತೆ ಜಗಳವಾಡಿಕೊಂಡು, ತನ್ನ ಅಣ್ಣನನ್ನೂ ಕರೆದುಕೊಂಡು ಪಾಕ್‌ಗೆ ಪರಾರಿಯಾಗಿದ್ದ. ಅಲ್ಲಿ ಅನ್ಸರ್ ಅಲ್ ತಾವಿದ್ ಎಂಬ ಉಗ್ರ ಸಂಘಟನೆ ಶುರು ಮಾಡಿದ್ದ. ಬಳಿಕ ಐಸಿಸ್ ಸೇರಿ, ಸಂಘಟನೆಗೆ ಯುವಕರನ್ನು ಸೇರ್ಪಡೆ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ. ಭಾರತೀಯ ಗುಪ್ತಚರ ಮೂಲಗಳ ಪ್ರಕಾರ ಶಫಿ ಆರ್ಮರ್ ಭಾರತದಿಂದ ಐಸಿಸ್‌ಗೆ ಸುಮಾರು 30 ಮಂದಿಯನ್ನು ನೇಮಕ ಮಾಡಿದ್ದಾನೆ. ಸೋದರ ಸುಲ್ತಾನ್ ಆರ್ಮರ್ ಬಳಿಕ ಈತನೇ ಐಸಿಸ್‌ನ ಮುಖ್ಯ ನೇಮಕದಾರನಾಗಿದ್ದ ಎಂದು ಹೇಳಲಾಗಿದೆ. ಸಿರಿಯಾದಲ್ಲಿ 2016ರ ಡ್ರೋನ್ ದಾಳಿಗೆ ಬಲಿಯಾಗಿದ್ದ ಎಂದೂ ವರದಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.