ಎಸ್ಸೆಸ್ ಜನ್ಮದಿನದ ಸಡಗರದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ
Team Udayavani, Jun 16, 2017, 1:17 PM IST
ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪನವರ 87ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳ ಬಳಗದಿಂದ ಇಂದು ಏರ್ಪಡಿಸಿರುವ 87 ಜೋಡಿ ಸರ್ವ ಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳುತ್ತಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ವರ್ಷ (2013)ದ ನಂತರ ಈಗ ಎರಡನೇ ಬಾರಿಗೆ ಎಸ್ಸೆಸ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿರುವ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. 2012ರಲ್ಲಿ ವಿಧಾನ ಸಭೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಅವರು ಸಹ ಪಾಲ್ಗೊಂಡಿದ್ದರು.
2013ರ ಜೂ. 16ರಂದು ಶಾಮನೂರು ಶಿವಶಂಕರಪ್ಪನವರ 83ನೇ ಜನ್ಮ ದಿನದ ಅಂಗವಾಗಿ ನಡೆದಿದ್ದ ಸರ್ವ ಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಉದ್ಘಾಟಿಸಿ ಮಾತನಾಡಿದ್ದ ಸಿದ್ದರಾಮಯ್ಯ, ಶ್ರೀಮಂತ ವರ್ಗದವರ ವೈಭವೋಪೇತ, ಅದ್ದೂರಿ, ವೈಭವೀಕರಣ ವಿವಾಹಗಳಿಗೆ ಕಡಿವಾಣ ಹಾಕುವ ಸಂಬಂಧ ಕಾಯ್ದೆ ಜಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದರು.
ಶ್ರೀಮಂತ ವರ್ಗದವರು ನಡೆಸುವ ಅದ್ದೂರಿ, ಆಡಂಬರ, ದುಂದುವೆಚ್ಚದ ಮದುವೆ ನಿಲ್ಲುವಂತಾಗಬೇಕು. ಎಲ್ಲರೂ ಸಾಮೂಹಿಕ ವಿವಾಹದಂತೆ ಸರಳ ಮತ್ತು ಆದರ್ಶ ಮದುವೆಯಾಗಬೇಕು. ಸಾಮೂಹಿಕ ಮದುವೆಯಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ. ಹಣ ಉಳಿತಾಯವಾಗುತ್ತದೆ. ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆಯಾದವರು ಕಡ್ಡಾಯವಾಗಿ ಸಂತಾನ ನಿಯಂತ್ರಣ ಯೋಜನೆಗೆ ಬದ್ಧರಾಗಬೇಕು.
ಜನಸಂಖ್ಯೆ ನಿಯಂತ್ರಣಕ್ಕೆ ಸಹಕರಿಸಬೇಕು ಎಂಬುದಾಗಿ ಮನವಿ ಸಹ ಮಾಡಿದ್ದರು. ಇಂದು ಶುಕ್ರವಾರ ಶಾಸಕ ಶಾಮನೂರು ಶಿವಶಂಕರಪ್ಪನವರ 87ನೇ ಅಂಗವಾಗಿ ನಗರಸಭೆ ಮಾಜಿ ಅಧ್ಯಕ್ಷ ಬಿ. ವೀರಣ್ಣ ಮತ್ತು ನಗರಪಾಲಿಕೆ ಸದಸ್ಯೆ ಲಕ್ಷ್ಮಿದೇವಿ ನೇತೃತ್ವದ ಅಭಿಮಾನಿಗಳ ಬಳಗದಿಂದ 6ನೇ ಬಾರಿಗೆ ಸರ್ವ ಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ನಡೆಸಲಾಗುತ್ತಿದೆ.
ಮಧ್ಯಾಹ್ನ 12-30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿವಾಹ ಮಹೋತ್ಸವ ಉದ್ಘಾಟಿಸುವರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಧ್ಯಕ್ಷತೆ, ರಾಜನಹಳ್ಳಿ ವಾಲೀ¾ಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಸಮಾಜದ ಜಗದ್ಗುರು ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾ,ಮೀಜಿ, ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಲೋಕೋಪಯೋಗಿ ಇಲಾಖೆ ಸಚಿವ ಡಾ| ಎಚ್.ಸಿ. ಮಹಾದೇವಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ, ಮಾಜಿ ಸಚಿವ ಅಂಬರೀಶ್, ವಿಧಾನ ಪರಿಷತ್ತು ಸದಸ್ಯ ವಿ.ಎಸ್. ಉಗ್ರಪ್ಪ, ಮೇಯರ್ ಅನಿತಾಬಾಯಿ, ಸಚಿವರು, ಶಾಸಕರು, ನಗರಪಾಲಿಕೆ, ಜಿಲ್ಲಾ ಪಂಚಾಯತಿ ಕಾಂಗ್ರೆಸ್ ಸದಸ್ಯರು ಭಾಗವಹಿಸುವರು.
ಬರ್ತ್‌ಡೇ ಬಾಯ್ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಸಂಜೆ 6.30ಕ್ಕೆ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಳೆದ ವರ್ಷ 86ನೇ ಜನ್ಮದಿನದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪನವರೇ ತಮ್ಮ 87ನೇ ಜನ್ಮ ದಿನಕ್ಕೆ 87 ಜೋಡಿಗಳ ಮದುವೆ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು.
ಅವರ ಆಶಯದಂತೆ 87 ಜೋಡಿಗಳ ಮದುವೆ ನಡೆಯುತ್ತಿದೆ. ಲಕ್ಷಾಂತರ ವೆಚ್ಚವಾದರೂ ವೀರಣ್ಣ ದಂಪತಿ, ಅಭಿಮಾನಿಗಳ ಬಳಗದವರೇ ಎಲ್ಲಾ ವೆಚ್ಚವನ್ನು ಭರಿಸುವುದು ಅವರು ಶಾಮನೂರು ಶಿವಶಂಕರಪ್ಪನವರ ಮೇಲೆ ಹೊಂದಿರುವ ಅಭಿಮಾನದ ದ್ಯೋತಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.