ರಾಫೆಲ್‌ ನಡಾಲ್‌ ಕೆಂಪು ಮಣ್ಣಿನ ಅಂಕಣಕ್ಕೀಗ ಅಧಿಕೃತ ದೊರೆ!


Team Udayavani, Jun 17, 2017, 3:55 AM IST

655.jpg

ಸ್ಪೇನ್‌ ದೇಶದ ಮೊಲ್ಲಾರ್ಕೋ ದ್ವೀಪದ ನಿವಾಸಿ ರಾಫೆಲ್‌ ನಡಾಲ್‌ ಫ್ರೆಂಚ್‌ ಓಪನ್‌ ಗೆಲ್ಲುವುದರ ಬಗ್ಗೆ ತೀವ್ರ ನಿರೀಕ್ಷೆ ಇತ್ತು. ಇಷ್ಟು ಸುಲಭವಾಗಿ ಗೆಲ್ಲುತ್ತಾರೆ ಎಂಬುದು ಮಾತ್ರ ಕಲ್ಪನೆಯಲ್ಲಿರಲಿಲ್ಲ. ರೋಜರ್‌ ಫೆಡರರ್‌ ಟೂರ್ನಿಯಿಂದಲೇ ಹಿಂದೆ ಸರಿದಿದ್ದು, ಜೊಕೊವಿಕ್‌ ಬೇಗ ಸೋಲು ಕಂಡಿದ್ದು, ಆ್ಯಂಡಿ ಮರ್ರೆ ಸೋಲುವ ಮುನ್ನ ಫೈನಲಿಸ್ಟ್‌ ವಾವ್ರಿಂಕಾ ಅವರನ್ನು ಐದು ಸೆಟ್‌ಗಳ ಪಂದ್ಯದಲ್ಲಿ ಬಸವಳಿಯುವಂತೆ ಮಾಡಿದ್ದು ನಡಾಲ್‌ಗೆ ಪರೋಕ್ಷವಾಗಿ ಲಾಭವಾಗಿರಲೇಬೇಕು. ಟೆನಿಸ್‌ನಲ್ಲಿ ಅತ್ಯುತ್ತಮ ಮಟ್ಟದ ಜಂಟಲ್‌ವುನ್‌ಶಿಪ್‌ ಜಾರಿಯಲ್ಲಿದೆ. ಅಲ್ಲಿ ಎದುರಾಳಿಯನ್ನು ದೂಷಿಸುವಂತ, ಸೋಲಿಗೆ ನೆಪ ಹೇಳುವಂತದನ್ನು ಸಾಮಾನ್ಯವಾಗಿ ಕಾಣುವುದಿಲ್ಲ. ಹಾಗಾಗಿ ನಾವೂ ಕೂಡ ನಡಾಲ್‌ರ ಚಾರಿತ್ರಿಕ 10ನೇ ರೋಲ್ಯಾಂಡ್‌ ಗ್ಯಾರಸ್‌ ಪ್ರಶಸ್ತಿಯ ಸಾಧನೆಯನ್ನು ಕೊಂಕುಗಳಿಲ್ಲದೆ ಅಭಿನಂದಿಸೋಣ! ನೆನಪಿರಲಿ, ಯಾವುದೇ ಗ್ರ್ಯಾನ್‌ಸ್ಲಾಮ್‌ನಲ್ಲಿ ನಡಾಲ್‌ರನ್ನು ಹೊರತುಪಡಿಸಿ ಉಳಿದ ಆಟಗಾರ ಗಳಿಸಿದ ಪರಮಾವಧಿ ಗ್ರ್ಯಾನ್‌ಸ್ಲಾಮ್‌ ಕೇವಲ ಏಳು.

 ಗೆಲುವನ್ನು ಸಂಭ್ರಮಿಸುವುದರ ಜೊತೆಗೆ ಅದರ ಸುತ್ತಮುತ್ತ ಇರುವ ವಿಷಯಗಳನ್ನು ಹೆಕ್ಕುವುದು ಕೂಡ ಅಗತ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ 30 ಎಂದರೆ ವೃದ್ಧಾಪ್ಯ ಎಂಬ ಭಾವನೆಯನ್ನು ಹುಸಿಗೊಳಿಸುವಂತೆ ಈಗ ವಿಶ್ವದ ಟಾಪ್‌ 5 ಟೆನಿಸ್‌ ಆಟಗಾರರು 30 ವಸಂತಗಳನ್ನು ದಾಟಿದವರು. ಅದರಲ್ಲಿ ನಡಾಲ್‌ ತಮ್ಮ ಜೀವನದ ಪ್ರತಿ ದಶಕದಲ್ಲೂ ಗ್ರ್ಯಾನ್‌ಸ್ಲಾಮ್‌ ಗೆದ್ದವರು. 20ರ ದಶಕದಿಂದ 31ರ ಹರೆಯದ ನಡಾಲ್‌ ನಿರಂತರವಾಗಿ ಮೂರು ದಶಕಗಳಲ್ಲೂ ಪ್ರಶಸ್ತಿ ಗೆದ್ದಿರುವುದು ಅಪ್ರತಿಮ. ಅಷ್ಟೇಕೆ, ಈ ನಡಾಲ್‌ 2001ರಲ್ಲಿ 14 ವರ್ಷವಿದ್ದಾಗ ಅವತ್ತಿನ ಗ್ರಾನ್‌ಸ್ಲಾಮ್‌ ವಿಜೇತ ಪ್ಯಾಟ್‌ ಕ್ಯಾಷ್‌ರನ್ನು ಕ್ಲೇ ಕೋರ್ಟ್‌ನಲ್ಲಿ ಪರಾಭವಗೊಳಿಸಿದ್ದರು.

ನಡಾಲ್‌ ಜೊತೆ ಈ ಬಾರಿಯ ಫೈನಲ್‌ ಪ್ರವೇಶಿಸಿದ ವಾಂವ್ರಿಂಕಾ 32 ವಸಂತ ಕಳೆದಿದ್ದು, ಈ 44 ವರ್ಷಗಳ ಫ್ರೆಂಚ್‌ ಓಪನ್‌ ಇತಿಹಾಸದಲ್ಲಿ ಫೈನಲ್‌ ಆಡಿದ ಅತಿ ಹಿರಿಯ. ಇತ್ತ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್‌ ಆಸ್ಟ್ರೇಲಿಯನ್‌ನ್ನು ಗೆದ್ದಿದ್ದು 34ರ ರೋಜರ್‌ ಫೆಡರರ್‌. ಅಂದರೆ ಇದು ಹಿರಿಯರ ವಿಭಾಗದ ಗ್ರಾನ್‌ಸ್ಲಾಮ್‌!

ಎರಡು ವರ್ಷಗಳ ತೀವ್ರ ಬರ!
ಹೀಗೇ ಫ್ಲಾಶ್‌ಬ್ಯಾಕ್‌ಗೆ ಹೋದರೆ, 2014ರಲ್ಲಿ ನಡಾಲ್‌ ಮೂರನೇ ಸುತ್ತಿನ ಪಂದ್ಯದ ವೇಳೆ ಎಡ ಮುಂಗೈ ಗಾಯದಿಂದಾಗಿ ಮಾರ್ಸೆಲ್‌ ಗ್ರಾನೊಲ್ಲೆರ್ ಎದುರಿನ ಪಂದ್ಯವನ್ನು ಬಿಟ್ಟುಕೊಟ್ಟರು. ಆನಂತರ ಅವರು ಗಾಯದಿಂದ ಚೇತರಿಸಿಕೊಂಡರೂ ಅವರಾಗಿರಲಿಲ್ಲ. ಮೊದಲ ಸುತ್ತಿನ ಮುಖಭಂಗ ಕೂಡ ಎದುರಾಗತೊಡಗಿತ್ತು. ಯಾವ ಆಟಗಾರ 12 ಫ್ರೆಂಚ್‌ ಓಪನ್‌ನಲ್ಲಿ ಕೇವಲ ಎರಡು ಪಂದ್ಯವನ್ನಷ್ಟೇ ಸೋತಿದ್ದನೋ ಅವ ಇನ್ನು ರ್ಯಾಕೆಟ್‌ ಸಂನ್ಯಾಸ ಪಡೆಯುವುದು ಕ್ಷೇಮ ಎಂಬರ್ಥದ ಅಭಿಪ್ರಾಯ ದಟ್ಟವಾಗುತ್ತಿತ್ತು. ಎರಡು ವರ್ಷಗಳಿಂದ ಫ್ರೆಂಚ್‌ ಓಪನ್‌ ಬರ ಎಂಬುದು ಮಲೆನಾಡಿನಲ್ಲಿ ಮಳೆ ಕೊರತೆಯಂತಹ ಬರವೇ! 

 ನಿಜ, ಫ್ರೆಂಚ್‌ನ ಕ್ಲೇ ಕೋರ್ಟ್‌ಗೆ ಹೇಳಿಸಿದಂತಹ ರಕ್ಷಣಾತ್ಮಕ ಆಟ ಹೊಂದಿರುವ ನಡಾಲ್‌ 30-40 ಹೊಡೆತಗಳ ವಿನಿಮಯದ ನಂತರವಷ್ಟೇ ಸಿಗುವ ಒಂದು ಅಂಕಕ್ಕೆ ಘಂಟೆಗಳ ಕಾಲ ಅಂಕಣದಲ್ಲಿ ಉಳಿದುಕೊಳ್ಳುವ ಫಿಟ್‌ನೆಸ್‌ ಹೊಂದಿದ್ದಾಗಿನ ಆಟವೇ ಬೇರೆ. ಕೋರ್ಟ್‌ ಉದ್ದಕ್ಕೂ ಚುರುಕು ಓಡಾಟದ ತಾಕತ್ತು ಪ್ಲಸ್‌. ಅದೇ ಕಾಣೆಯಾದರೆ ನಡಾಲ್‌ ಸಾಮಾನ್ಯ ಆಟಗಾರ! ಮೊಣಕಾಲು ನೋವು, ಬೆನ್ನು ನೋವುಗಳಿಂದಲೂ ಮುಕ್ತಿ ಪಡೆದ ರಫೆಲ್‌ ಈ ಬಾರಿ ಫ್ರೆಂಚ್‌ ಓಪನ್‌ನಲ್ಲಿ ಒಂದೇ ಒಂದು ಸೆಟ್‌ ಸೋಲಲಿಲ್ಲ.

 ಸೆಟ್‌ ಉಲ್ಲೇಖವೇ ತಪ್ಪು. ಅವರು ಇಡೀ ಗ್ರ್ಯಾನ್‌ಸ್ಲಾಮ್‌ ಅರ್ಥಾತ್‌ 7 ಪಂದ್ಯಗಳಲ್ಲಿ ಕಳೆದುಕೊಂಡಿದ್ದು ಕೇವಲ 35 ಗೇಮ್‌. ಬೋರ್ನ್ ಬೋರ್ಗ್‌ ನಂತರ ಇಷ್ಟು ಕಡಿಮೆ ಗೇಮ್‌ನ ನಷ್ಟಕ್ಕೆ ಚಾಂಪಿಯನ್‌ ಆದ ಎರಡನೇ ಆಟಗಾರ ನಡಾಲ್‌. 1978ರಲ್ಲಿ ಬೋರ್ಗ್‌ ಪ್ರಶಸ್ತಿ ಗೆಲ್ಲುವ ಮುನ್ನ ಕಳೆದುಕೊಂಡಿದ್ದು 32 ಗೇಮ್‌ಗಳನ್ನು ಮಾತ್ರ. ನಡಾಲ್‌ ಫ್ರೆಂಚ್‌ ಓಪನ್‌ನಲ್ಲಿ ಈವರೆಗೆ 79 ಪಂದ್ಯದಲ್ಲಿ ಗೆದ್ದಿದ್ದಾರೆ. ಕೇವಲ ಎರಡು ಪಂದ್ಯ, ಅದೂ ಓಪನ್‌ನ ನಿರ್ಣಾಯಕ ಪಂದ್ಯಗಳಲ್ಲಿ ಪರಾಭವಗೊಂಡಿದ್ದಾರೆ. ಮೊನ್ನೆ ವಾವ್ರಿಂಕಾ ವಿರುದ್ಧ 13 ಬ್ರೇಕ್‌ ಪಾಯಿಂಟ್‌ಗಳಲ್ಲಿ ಆರನ್ನು ತಮ್ಮದಾಗಿಸಿಕೊಂಡರು. ಇದೇ ವೇಳೆ ವಾವ್ರಿಂಕಾಗೆ ಸಿಕ್ಕಿದ್ದು ಒಂದು ಬ್ರೇಕ್‌ ಪಾಯಿಂಟ್‌. ಅದರಲ್ಲೂ ಸಫ‌ಲತೆ ಸಿಗಲಿಲ್ಲ. ವಾವ್ರಿಂಕಾರ 29 ಅನಗತ್ಯ ಹೊಡೆತಗಳ ಎದುರು ನಡಾಲ್‌ ಆ ತಪ್ಪು ಮಾಡಿದ್ದು 12 ಬಾರಿ ಮಾತ್ರ. ಅದಿರಲಿ, ನೆಟ್‌ ಬಳಿ ತೆರಳಿ ಸ್ಮಾಷ್‌ ಮಾಡುವ ಪ್ರವೃತ್ತಿ ನಡಾಲ್‌ರದಲ್ಲ. ಆದರೂ 20 ಅವಕಾಶಗಳಲ್ಲಿ 18 ಸರ್ತಿ ನೆಟ್‌ ಅಂಕಗಳನ್ನು ನಡಾಲ್‌ ಗೆದ್ದರಲ್ಲ. ಈ ಎಲ್ಲ ಕಾರಣಕ್ಕಾಗಿಯೋ ಏನೋ 2017ರ ಫ್ರೆಂಚ್‌ ಓಪನ್‌ ಫೈನಲ್‌ ಅತ್ಯಂತ ಹೀನಾಯ ಏಕಪಕ್ಷೀಯ ಪಂದ್ಯವಾಗಿ ಚರಿತ್ರೆಯಲ್ಲಿ ದಾಖಲಾಗಿದೆ.

 ಫೆಡರರ್‌ ದಾಖಲೆ ಮುರಿಯುವ ಅವಕಾಶ?:
 ನಡಾಲ್‌ರ 15 ಗ್ರಾನ್‌ಸ್ಲಾಮ್‌ ಗಳಿಕೆ ಸ್ವಿರ್ಜರ್‌ಲೆಂಡ್‌ನ‌ ರೋಜರ್‌ ಫೆಡರರ್‌ 18ಕ್ಕಿಂತ ಮೂರು ಕಡಿಮೆ. ಈ 15ರಲ್ಲಿ 10 ಫ್ರೆಂಚ್‌ ಓಪನ್‌ ಹೊರತುಪಡಿಸಿ ನಡಾಲ್‌ ಉಳಿದ ಎಲ್ಲ ಮೂರು ಗ್ರಾನ್‌ಸ್ಲಾಮ್‌ಗಳಲ್ಲೂ ಪ್ರಶಸ್ತಿ ಪಡೆದಿದ್ದಾರೆ. ಅವರು ಫ್ರೆಂಚ್‌ ಗ್ರ್ಯಾನ್‌ಸ್ಲಾಮ್‌ ವಂಡರ್‌ ಅಲ್ಲ. 2009ರಲ್ಲಿ ಆಸ್ಟ್ರೇಲಿಯನ್‌ ಓಪನ್‌, 2008 ಹಾಗೂ 2010ರಲ್ಲಿ ವಿಂಬಲ್ಡನ್‌ ಹಾಗೂ 2010, 2013ರಲ್ಲಿ ಯುಎಸ್‌ ಓಪನ್‌ ಗೆಲುವು ಅವರದ್ದು. ಫೆಡರರ್‌ ದಾಖಲೆ ಮುರಿಯುವ ಆಸೆ ನಡಾಲ್‌ರಿಗೆ ಇರಲಿಕ್ಕೆ ಸಾಕು. ಅದಕ್ಕವರು ಫ್ರೆಂಚ್‌ನ್ನೇ ನೆಚ್ಚಿಕೊಂಡರೆ ಇನ್ನೂ ನಾಲ್ಕು ವರ್ಷಗಳು ಬೇಕು. ಆ ನಾಲ್ಕು ವರ್ಷಗಳು ಅವರೆಣಿಕೆಯಂತೆ ನಡೆಯಬೇಕು. ವಯಸ್ಸು ನಿಲ್ಲಿಸುವುದು ಅವರ ಕೈಯಲಿಲ್ಲ. ಹಾಗಾಗಿ ಅವರು ಬೇರೆ ಗ್ರ್ಯಾನ್‌ಸ್ಲಾಮ್‌ ಗಳಿಕೆಗೂ ಪ್ರಯತ್ನಿಸಲೇಬೇಕು. ಆದರೆ ಮೊನ್ನೆ ಮೊನ್ನೆ 35ರ ರೋಜರ್‌ ಫೆಡರರ್‌ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ತಮ್ಮ 18ನೇ ಗ್ರ್ಯಾನ್‌ಸ್ಲಾಮ್‌ ಗೆಲ್ಲಲಿಲ್ಲವೇ?

 ಆ ಹಾದಿಯಲ್ಲಿ ತಿಂಗಳೊಪ್ಪತ್ತಲ್ಲಿ ಎದುರಾಗುವುದು ಆಲ್‌ ಇಂಗ್ಲೆಂಡ್‌ ಕ್ಲಬ್‌ನ ವಿಂಬಲ್ಡನ್‌. ಹುಲ್ಲುಹಾಸಿನ ಸ್ಪರ್ಧೆಯಲ್ಲಿ ಈ ಮುಂಚಿನಂತೆ ಸರ್ವ್‌ ಎಂಡ್‌ ವಾಲಿ ಆಟದ ವೇಗ ಇಲ್ಲ ಎಂಬುದು ನಡಾಲ್‌ರಿಗೆ ಪ್ಲಸ್‌ ಪಾಯಿಂಟ್‌. ಅತ್ತ ಫೆಡರರ್‌ ಕ್ಲೇ ಸೀಸನ್‌ಗೆ ಬೈ ಹೇಳಿ ವಿಂಬಲ್ಡನ್‌ಗೆ ಸಿದ್ಧರಾಗುತ್ತಿದ್ದಾರೆ. ನೊವಾಕ್‌ ಜೊಕೊವಿಚ್‌ಗೆ ತಮ್ಮ ಫಾರಂ ಅಷ್ಟೇ ಕೈಕೊಟ್ಟಿತ್ತು. ಪ್ರತಿಭೆ ಅಲ್ಲ ಎಂದು ತೋರಿಸಲು ಕೂಡ ವಿಂಬಲ್ಡನ್‌ ಉತ್ತಮ ವೇದಿಕೆ. ಒಟ್ಟಾರೆ ಮತ್ತೆ ಹಿರಿಯರೇ ಪ್ರಶಸ್ತಿಯ ಬಹು ಮುಖ್ಯ ಸ್ಪರ್ಧಿಗಳಾಗಿದ್ದಾರೆ!

ಟೋನಿ ನಡಾಲ್‌ರ ಜೊತೆಗಿಲ್ಲ ಎಂದರೆ…?
ರಾಫೆಲ್‌ ನಡಾಲ್‌ ಫ‌ುಟ್ಬಾಲ್‌ ಪ್ರೇಮಿ ಎಂಬುದು ಬಹುಮಂದಿಗೆ ಗೊತ್ತಿಲ್ಲ. ಅದರಲ್ಲಿಯೇ ತೊಡಗಿಸಿಕೊಳ್ಳಲು ಅವರು ಪ್ರಯತ್ನ ನಡೆಸಿದ್ದರು. ನಂ.9 ಶರ್ಟ್‌ ಹಾಕಿ ಜಗತ್ತಿನಲ್ಲಿ ಮಿಂಚುವ ಇರಾದೆ ಅವರದಾಗಿತ್ತು. ಆದರೆ ಅವರ ಚಿಕ್ಕಪ್ಪ ಟೋನಿ ನಡಾಲ್‌ರ ಲೆಕ್ಕಾಚಾರಗಳೇ ಬೇರೆಯಿತ್ತು. ಫ‌ುಟ್ಬಾಲ್‌ರ ಆಕರ್ಷಣೆಯನ್ನು ತಪ್ಪಿಸಲು ಮೂರು ವರ್ಷದ ನಡಾಲ್‌ಗೆ ಟೋನಿ ಎಡಗೈ ಟೆನಿಸ್‌ ಕಲಿಸಿದರು. ಟೆನಿಸ್‌ನಲ್ಲಿ ಎಡಚರಿಗೆ ಒಂದು ಎಕ್ಸ್‌ಟ್ರಾ ತಾಕತ್ತಿದೆ ಎಂಬುದು ಹಿನ್ನೆಲೆ. ಬಲಗೈಯಿಂದ ಬರವಣಿಗೆ ಮಾಡುವ ನಡಾಲ್‌ ಎರಡೂ ಕೈಯಲ್ಲಿ ರ್ಯಾಕೆಟ್‌ ಝಳಪಿಸಬಲ್ಲರು. 

ಗೆದ್ದದ್ದು ಟೋನಿ. ಈ ಹತ್ತನೇ ಪ್ರಂಚ್‌ ಓಪನ್‌ ಗೆಲುವಿನವರೆಗೂ ನಡಾಲ್‌ರ ಕೋಚ್‌ ಆಗಿದ್ದವರು ಟೋನಿ. ಈಗವರು ಮಲ್ಲಾರ್ಕೋದಲ್ಲಿ ನಡಾಲ್‌ ಅಕಾಡೆಮಿಯಲ್ಲಿ ಪೂರ್ಣ ಸಮಯ ಕಳೆಯಲು ತೀರ್ಮಾನಿಸಿದ್ದಾರೆ. ನಡಾಲ್‌ ಹೊಸ ಕೋಚ್‌ ಆಗಿ ಕಾರ್ಲೋಸ್‌ ಮೋಯಾರನ್ನು ಕರೆತರಲಾಗಿದೆ. ಮೊನ್ನೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ನಡಾಲ್‌ ಹೇಳಿದರು, ನನ್ನ 10 ಫ್ರೆಂಚ್‌ ಓಪನ್‌ ಗೆಲುವಿನ ಹಿಂದೆ ಅಂಕಲ್‌ ಟೋನಿ ಇದ್ದಾರೆ. ಅವರಿಲ್ಲದೆ ಇನ್ನೊಂದು ಫ್ರೆಂಚ್‌ ಓಪನ್‌ ಗೆಲ್ಲುವುದು ಕಷ್ಟವಿದೆ!

ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

police

Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.