ಬಹು ನಿರೀಕ್ಷೆಯ ಕೊಚ್ಚಿ ಮೆಟ್ರೋ ರೈಲು ಉದ್ಘಾಟಿಸಿದ ಪ್ರಧಾನಿ ಮೋದಿ
Team Udayavani, Jun 17, 2017, 12:06 PM IST
ಕೊಚ್ಚಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ಕೇರಳದ ಪ್ರಪ್ರಥಮ ಕೊಚ್ಚಿ ಮೆಟ್ರೋ ರೈಲನ್ನು ಉದ್ಘಾಟಿಸಿದರು.
ಬಳಿಕ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮೆಟ್ರೋ ಮ್ಯಾನ್ ಇ ಶ್ರೀಧರನ್, ಹಾಗೂ ಇತರ ಕೆಲವು ಮುಖ್ಯ ಅಧಿಕಾರಿಗಳೊಂದಿಗೆ ಉದ್ಘಾಟನಾ ಮೆಟ್ರೋ ಸಂಚಾರದಲ್ಲಿ ಭಾಗಿಯಾಗಿ ಕೇರಳದ ಈ ಚೊಚ್ಚಲ ಸಾಧನೆಯ ಸಂತಸವನ್ನು ಹಂಚಿಕೊಂಡರು.
ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಕೇರಳ ರಾಜ್ಯಪಾಲ ಪಿ. ಸದಾಶಿವಂ ಮತ್ತು ಕೇರಳ ಬಿಜೆಪಿ ಮುಖ್ಯಸ್ಥ ಕುಮ್ಮನಂ ರಾಜಶೇಖರನ್ ಅವರು ಕೂಡ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ಸಂದರ್ಭದಲ್ಲಿ ಇದ್ದರು.
ಮೋದಿ ಅವರು ಈ ಬಹು ನಿರೀಕ್ಷೆಯ ಯೋಜನೆಯ ಉದ್ಘಾಟನಾರ್ಥವಾಗಿ ಪಳರಿವಟ್ಟಂ ಸ್ಟೇಶನ್‌ನಲ್ಲಿ ರಿಬ್ಬನ್ ಕತ್ತರಿಸಿ ನೂತನ, ಪ್ರಪ್ರಥಮ ಮಟ್ರೋ ಯಾನಕ್ಕೆ ಚಾಲನೆ ನೀಡಿದರು. ಪಳರಿವಟ್ಟಂ ನಿಂದ ಪಢದಿಪ್ಪಾಲಂ ವರೆಗಿನ ಈ ಮಟ್ರೋ ರೈಲು ಯಾನ ಸೇವೆಯು ಜನರಿಗೆ ತ್ವರಿತ ಸಂಚಾರ ಸೌಕರ್ಯವನ್ನು ಒದಗಿಸುತ್ತದೆ.
ಕೊಚ್ಚಿ ಮೆಟ್ರೋ ರೈಲು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, “ಇದು ಭವಿಷ್ಯದ ಅತ್ಯಾಧುನಿಕ ಮೂಲ ಸೌಕರ್ಯವಾಗಿದ್ದು ಭಾರತದ ಬೆಳವಣಿಗೆಗೆ ಮಹತ್ತರ ಕಾಣಿಕೆ ನೀಡಲಿದೆ’ ಎಂದು ಹೇಳಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಾತನಾಡಿ ಕೊಚ್ಚಿ ಮೆಟ್ರೋ ರೈಲು ಯೋಜನೆಯ ಸಾಕಾರಕ್ಕೆ ಶ್ರಮಿಸಿದ ಎಲ್ಲ ಕೆಲಸಗಾರರಿಗೆ ಕೃತಜ್ಞತೆ ಅರ್ಪಿಸಿದರು.
ಮೋದಿ ಅವರ ಬೆಳಗ್ಗೆ 10.15ಕ್ಕೆ ಇಲ್ಲಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದರು. ಅವರನ್ನು ರಾಜ್ಯಪಾಲ ಸದಾಶಿವಂ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ವಾಗತಿಸಿದರು.
ಪಳರಿವಟ್ಟಂ ನಿಂದ ಅಳುವಾ ವರೆಗಿನ 13 ಕಿ.ಮೀ. ಉದ್ದದ 11 ಸ್ಟೇಶನ್‌ಗಳನ್ನು ಒಳಗೊಂಡ ಕೊಚ್ಚಿ ಮೆಟ್ರೋ ರೈಲಿನ ಈ ಮೊದಲ ಹಂತವು ಅತೀ ಉದ್ದದ ಭಾಗವಾಗಿ ಉದ್ಘಾಟನೆಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.