ಮೆಟ್ರೋಗೆ ಜಾಗ ಕೊಟ್ಟು ಹಸನಾಯ್ತು ಬದುಕು


Team Udayavani, Jun 17, 2017, 12:42 PM IST

metro-vijay-chandaragi.jpg

ಬೆಂಗಳೂರು: ಜೈಭೀಮನಗರ ಮತ್ತು ಬಸವೇಶ್ವರ ಸ್ಲಂಗಳ ಸಣ್ಣ ಸಣ್ಣ ಮನೆಗಳಲ್ಲಿ ವಾಸವಾಗಿದ್ದ ಆ ಕುಟುಂಬಗಳು ಇಂದು ಪೀಣ್ಯ ಮತ್ತು ಶ್ರೀಗಂಧ ಕಾವಲ್‌ನ ಕಾಲೋನಿಗಳಲ್ಲಿ ಡುಪ್ಲೆಕ್ಸ್‌ ಮನೆಗಳನ್ನು ನಿರ್ಮಿಸಿಕೊಂಡು ಹಾಯಾಗಿವೆ. ಇನ್ನೂ ಕೆಲ ಕುಟುಂಬಳು ಅದೇ ಮನೆಗಳ ಮೇಲೆ ಬ್ಯಾಂಕ್‌ ಲೋನ್‌ ಪಡೆದು ಕೈಸಾಲ ತೀರಿಸಿಕೊಂಡಿವೆ. ಕೆಲವರು ತಂಗಿ ಅಥವಾ ಮಗಳ ಮದುವೆ ಮಾಡಿ ನಿರಾಳರಾಗಿದ್ದಾರೆ.

ಇನ್ನು ಕೆಲವರು ಸಾಲದ ಹಣದಲ್ಲಿ ಚಿಲ್ಲರೆ ವ್ಯಾಪಾರ ಮಾಡಿಕೊಂಡು, ಉತ್ತಮ ಜೀವನ ನಡೆಸುತ್ತಿದ್ದಾರೆ. ಒಂದೇ ಒಂದು ಕೊರತೆಯೆಂದರೆ, ಮೊದಲು ನಗರದ ಕೇಂದ್ರ ಭಾಗದಲ್ಲಿದ್ದವರು ಈಗ ನಗರದ ಹೊರವಲಯದಲ್ಲಿದ್ದಾರಷ್ಟೆ. “ನಮ್ಮ ಮೆಟ್ರೋ’ ಯೋಜನೆಗೆ ಮನೆ ಕಳೆದುಕೊಂಡಿದ್ದ ಮಾಗಡಿ ರಸ್ತೆಯ ಬಸವೇಶ್ವರನಗರ ಮತ್ತು ಸಂಪಿಗೆರಸ್ತೆ ನಿಲ್ದಾಣದ ಬಳಿಯ ಜೈಭೀಮನಗರ ಕೊಳಚೆಪ್ರದೇಶಗಳ ಜನರ ಈಗಿನ ಸ್ಥಿತಿ ಇದು.   

ಮೆಟ್ರೋ ಯೋಜನೆಗಾಗಿ ಈ ಎರಡೂ ಕೊಳಚೆಪ್ರದೇಶಗಳಲ್ಲಿದ್ದ ನೂರಾರು ಕುಟುಂಬಗಳನ್ನು ತೆರವುಗೊಳಿಸಲಾಗಿತ್ತು. ಇವರಿಗೆಲ್ಲ ಪೀಣ್ಯ ಡಿಪೋ ಬಳಿ ಮತ್ತು ಶ್ರೀಗಂಧ ಕಾವಲ್‌ ಬಳಿ ಪುನರ್ವಸತಿ ಕಲ್ಪಿಸಲಾಗಿತ್ತು. ಜೈಭೀಮನಗರ ಸ್ಲಂನಲ್ಲಿದ್ದ 120 ಕುಟುಂಬಳು ಹಾಗೂ ಬಸವೇಶ್ವರನಗರ ಸ್ಲಂನಲ್ಲಿದ್ದ 135 ಕುಟುಂಬಳಿಗೆ ಕ್ರಮವಾಗಿ ಪೀಣ್ಯ ಮತ್ತು ಶ್ರೀಗಂಧ ಕಾವೆಲ್‌ನಲ್ಲಿ ಮೆಟ್ರೋ ನಿಗಮದ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಮೊದಲ ಹಂತದ ಮೆಟ್ರೋ ಪೂರ್ಣಗೊಳ್ಳುತ್ತಿರುವ ಈ ಹೊತ್ತಿಗೆ ಪುನರ್ವಸತಿ ಕಂಡುಕೊಂಡ ಜನರ ಸ್ಥಿತಿಯೂ ತಕ್ಕಮಟ್ಟಿಗೆ ಸುಧಾರಣೆಯಾಗಿದೆ. 

ಎರಡೂ ಕೊಳಚೆಪ್ರದೇಶಗಳಲ್ಲಿ ಸೂರು ಕಳೆದುಕೊಂಡ 250ಕ್ಕೂ ಹೆಚ್ಚು ಸಂತ್ರಸ್ತರಿಗೆ ಡುಪ್ಲೆಕ್ಸ್‌ ಮನೆಗಳನ್ನು ನಿರ್ಮಿಸಿ, ಹಕ್ಕುಪತ್ರದ ಜತೆಗೆ ಕ್ರಯಪತ್ರ ಮಾಡಿಸಿಕೊಡಲಾಯಿತು. ಅಲ್ಲದೆ, ಆ ಕಾಲೊನಿಗಳಿಗೆ ರಸ್ತೆ, ವಿದ್ಯುತ್‌, ನೀರು ಸಂಪರ್ಕ ಕೂಡ ನೀಡಲಾಗಿದೆ. ಅದೇ ಕಾಲೊನಿಗಳಲ್ಲಿ ಮೆಟ್ರೋ ಸಿಬ್ಬಂದಿ ಕೂಡ ವಾಸವಾಗಿರುವುದು ಮತ್ತೂಂದು ವಿಶೇಷ. ಹಾಗಾಗಿ, ತಾರತಮ್ಯ ಮತ್ತು ಕಟ್ಟಡಗಳ ಗುಣಮಟ್ಟದ ಬಗ್ಗೆ ಅನುಮಾನವಿಲ್ಲ ಎನ್ನುತ್ತಾರೆ ಬಿಎಂಆರ್‌ಸಿ ಅಧಿಕಾರಿಗಳು. 

ಖುಷಿ ಆಗಿದೆ; ಬೇಸರವೂ ಆಗುತ್ತದೆ: ಮೆಟ್ರೋ ನಿರ್ಮಾಣದ ಹಿನ್ನೆಲೆಯಲ್ಲಿ ಬಸವೇಶ್ವರ ನಗರ ಸ್ಲಂನಿಂದ 2009-10ರಲ್ಲೇ ಶ್ರೀಗಂಧ ಕಾವಲ್‌ಗೆ ನಾವು ಸ್ಥಳಾಂತರಗೊಂಡೆವು. ಆರಂಭದಲ್ಲಿ ಯಾವುದೇ ಸೌಲಭ್ಯಗಳಿರಲಿಲ್ಲ. ಆದರೆ, ಈಗ ರಸ್ತೆ ಆಗಿದೆ. ಬಸ್‌ ಸೌಕರ್ಯ, ನೀರು ಮತ್ತು ವಿದ್ಯುತ್‌ ಸಂಪರ್ಕವೂ ಇದೆ. ಮನೆಗಳು ವ್ಯವಸ್ಥಿತವಾಗಿದ್ದು, ಇದೇ ಮನೆಗಳ ಮೇಲೆ ಕಾಲೊನಿಯಲ್ಲಿ ಕೆಲವರು ಸಾಲ ಪಡೆದು, ಮಕ್ಕಳ ಮದುವೆ ಮಾಡಿದ್ದಾರೆ.

ಒಟ್ಟಾರೆ ಮೆಟ್ರೋ ಯೋಜನೆ ಪುನರ್ವಸತಿಯಿಂದ ಜೀವನದ ಸ್ಥಿತಿಗತಿಯಲ್ಲಿ ತುಸು ಸುಧಾರಣೆಯಾಗಿದೆ ಎಂದು ಶ್ರೀಗಂಧ ಕಾವೆಲ್‌ನ ಮನೆ ನಂಬರ್‌ 154 ನಿವಾಸಿ ರಮೇಶ್‌ ತಿಳಿಸುತ್ತಾರೆ. ಅಂದು ಮನೆ ಕಳೆದುಕೊಂಡಾಗ ಬೇಸರವಾಗಿತ್ತು. ಈಗಲೂ ನೆನಪಿಸಿಕೊಂಡರೆ ಸ್ವಲ್ಪ ನೋವಾಗುತ್ತದೆ. ಆದರೆ, ಮೆಟ್ರೋ ಮೊದಲ ಹಂತ ಪೂರ್ಣಗೊಂಡು, ಅದರಿಂದ ಇಡೀ ನಗರದ ಜನರಿಗೆ ಅನುಕೂಲ ಆಗುತ್ತಿರುವುದನ್ನು ನೆನಪಿಸಿಕೊಂಡಾಗ ಅದೆಲ್ಲಾ ಮರೆತು ಖುಷಿ ಆಗುತ್ತದೆ ಎಂದೂ ಅವರು ಹೇಳಿದರು.  

ಅಕ್ಕ-ತಂಗಿ ಮದುವೆ ಮಾಡಿದೆ: ಮಾಗಡಿ ರಸ್ತೆಯಲ್ಲಿ ನಮ್ಮ ಮನೆ ಇತ್ತು. ತೆರವಾದ ನಂತರ ಶ್ರೀಗಂಧ ಕಾವೆಲ್‌ಗೆ ಬಂದೆವು. ನನ್ನ ಮನೆ ನಂಬರ್‌ 156. ಮನೆ ಮೇಲೆ ಬೆಂಗಳೂರು ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿ ಹತ್ತು ಲಕ್ಷ ರೂ. ಸಾಲ ಪಡೆದು, ಅಕ್ಕ ಮತ್ತು ತಂಗಿಯ ಮದುವೆ ಮಾಡಿದೆ. ಕೆಲವು ಸಣ್ಣ-ಪುಟ್ಟ ಸಾಲವನ್ನೂ ಹಿಂತಿರುಗಿಸಿದೆ. ಈಗ ಕೊಂಚ ನಿರಾಳವಾಗಿದ್ದೇನೆ’ ಎನ್ನುತ್ತಾರೆ ಮೋಹನ್‌. 

ಕೊಳಚೆಪ್ರದೇಶದಲ್ಲಿದ್ದಾಗ ಎರಡು ಮನೆಗಳಿದ್ದವು. ಅದರಲ್ಲಿ ಒಂದನ್ನು 50 ಸಾವಿರ ರೂ.ಗಳಿಗೆ ಲೀಸ್‌ನಲ್ಲಿ ಕೊಟ್ಟಿದ್ದೆ. ಈಗ ಆ ರೀತಿ ಬಾಡಿಗೆ ಅಥವಾ ಭೋಗ್ಯ ಕೊಡಲು ಬರುವುದಿಲ್ಲ. ಇನ್ನು ಈ ಮೊದಲು ನಗರದ ಹೃದಯಭಾಗದಲ್ಲಿದ್ದೆವು. ಈಗ ನಗರದಿಂದ 10-15 ಕಿ.ಮೀ. ದೂರ ಹೋಗಿದ್ದೇವೆ. ಇಲ್ಲಿರುವವರಲ್ಲಿ ಬಹುತೇಕ ಎಲ್ಲರೂ ಕೂಲಿ ಕೆಲಸ ಮಾಡಿಕೊಂಡಿದ್ದವರು. ಅವರೆಲ್ಲಾ ನಿತ್ಯ ನಗರಕ್ಕೇ ಬರಬೇಕು. ಇನ್ನು ಕಾಲೊನಿಯಿಂದ ಮುಖ್ಯರಸ್ತೆ 2 ಕಿ.ಮೀ. ದೂರದಲ್ಲಿದೆ.

ಅಲ್ಲಿಗೆ ಕಾಲ್ನಡಿಗೆಯಲ್ಲೇ ಬರಬೇಕಾದ ಅನಿವಾರ್ಯತೆ ಇದೆ. ಇಂತಹ ಕೆಲವು ಕುಂದು-ಕೊರತೆಗಳನ್ನು ಸರಿಪಡಿಸುವ ಅಗತ್ಯವಿದೆ ಎಂದೂ ಮೋಹನ್‌ ಹೇಳುತ್ತಾರೆ. ಮೆಟ್ರೋಗಾಗಿ ಮನೆ ಕಳೆದುಕೊಂಡಿದ್ದೇವೆ. ಅದೇ ಮೆಟ್ರೋದಲ್ಲಿ ಕೆಲಸಗಳನ್ನು ನಮಗೆ ನೀಡಿದರೆ ತುಂಬಾ ಅನುಕೂಲ ಆಗುತ್ತದೆ ಎಂದು ರಮೇಶ್‌ ಎಂಬುವವರು ಒತ್ತಾಯಿಸಿದ್ದಾರೆ. 

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Kota-Shrinivas

Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.