ಸೈಕಲ್‌ ಉತ್ಸವಕ್ಕೆ ಚಾಲನೆ


Team Udayavani, Jun 17, 2017, 3:02 PM IST

hub3.jpg

ಧಾರವಾಡ: ಬಾಲಬಳಗ ಶಾಲೆ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡ ಸೈಕಲ್‌ ಉತ್ಸವಕ್ಕೆ ನಗರದ ಜಿಪಂ ಕಾರ್ಯಾಲಯ ಬಳಿಯ ಪಿಡಬ್ಲೂಡಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಚಾಲನೆ ದೊರೆಯಿತು. ಉತ್ಸವಕ್ಕೆ ಚಾಲನೆ ನೀಡಿದ ಕವಿ ಡಾ|ವಿ.ಸಿ.ಐರಸಂಗ, ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರು ಜೀವಿಸುತ್ತಿದ್ದೇವೆ.

ಹೀಗಾಗಿ ಸೈಕಲ್‌ ಮೂಲೆ ಗುಂಪಾಗಿ ಬೈಕ್‌ ಹಾಗೂ ಕಾರ್‌ ರಸ್ತೆಗಿಳಿದಿವೆ. ಸುಡುವ ಇಂಧನದ ಪರಿಣಾಮದಿಂದ ಪರಿಸರ ಹಾಳಾಗುತ್ತಿದೆ. ಸೈಕಲ್‌ದಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ಅರಿತು ಮುಂದಿನ ಪೀಳಿಗೆ ಸೈಕಲ್‌ ಪರಿಚಯಿಸುವ ಕಾರ್ಯ ಮಕ್ಕಳಿಂದ ನಡೆಯಬೇಕಿದೆ. ಇದಲ್ಲದೇ ಪರಿಸರ ಉಳಿಸುವುದಕ್ಕಾಗಿ ಎಲ್ಲ ಶಾಲಾ-ಕಾಲೇಜು ಮಕ್ಕಳು ಸೈಕಲ್‌ ಏರಬೇಕು.

ಈ ಮೂಲಕ ಸೈಕಲ್‌ ಮಹತ್ವವನ್ನು ಜನರಿಗೆ ತಿಳಿಸಬೇಕು ಎಂದರು. ಶಾಲೆಗೆ ಹೋಗುತ್ತಿರುವಾಗಿನಿಂದ ನಾನು ಸೈಕಲ್‌ ಹೊಡೆಯುವುದು ಆರಂಭಿಸಿದ್ದೇನೆ. ಈಗ 80 ವರ್ಷ ತುಂಬಿದ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಯಾವುದೇ ಕಾಯಿಲೆಗಳಿಲ್ಲ. ಇದಕ್ಕೆ ಮುಖ್ಯ ಕಾರಣ ಸೈಕಲ್‌ ಬಳಕೆ. 

ಇದರಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ. ಆದ್ದರಿಂದ ಸೈಕಲ್‌ ನನಗೆ ಮೂರನೇ ಹೆಂಡತಿ ಎಂದು ಚಟಾಕಿ ಹಾರಿಸಿದರು. ನೇತ್ರತಜ್ಞ ಡಾ| ಮಾಧವ ರಂಗ ಮಾತನಾಡಿ, ಸೈಕಲ್‌ 1817ರಲ್ಲಿ ಜಗತ್ತಿಗೆ ಪರಿಚಯವಾಗಿದೆ. ಇದೀಗ ಅದಕ್ಕೆ  ಎರಡು ಶತಮಾನಗಳ ಇತಿಹಾಸ. ಸೈಕಲಿಂಗ್‌ನಲ್ಲಿ ಎರಡು ಬಗೆಗಳಿವೆ. ರಸ್ತೆ ಸೈಕಲಿಂಗ್‌  ಹಾಗೂ ಗುಡ್ಡಗಾಡು ಸೈಕಲಿಂಗ್‌. ಸೈಕಲ್‌ ಹೊಡೆಯುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಇಲ್ಲ.

ಬದಲಾಗಿ ರೋಗಗಳು ಮಾಯವಾಗುತ್ತವೆ. ಆದರೆ, ಬಹುತೇಕ ಜನರು ವಾಹನ ಬಳಸುತ್ತಿರುವುರಿಂದ ಸೈಕಲ್‌ ಮರೆಯಾಗಿದೆ ಎಂದು ವಿಷಾದಿಸಿದರು. ಬಾಲಬಳಗದ ಪ್ರಾಚಾರ್ಯ ಪ್ರತಿಭಾ ಕುಲಕರ್ಣಿ, ಆದಿತ್ಯ ಹಿರೇಮಠ, ವರ್ಷಾ ಸ್ಯಾಮಿಯಲ್‌ ಇದ್ದರು. ಇದೇ ವೇಳೆ ಸೈಕಲ್‌ನ ವಿವಿಧ ಹಳೆಯ ಹಾಗೂ ಹೊಸ ಮಾದರಿಗಳು ಪ್ರದರ್ಶನಗೊಂಡವು.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.