ವೈದ್ಯೆಯ ಅರೆನಗ್ನ ವೀಡಿಯೋ ಚಿತ್ರೀಕರಿಸಿ ವೈರಲ್ ಮಾಡಿದ ಸರಕಾರಿ ವೈದ್ಯ
Team Udayavani, Jun 17, 2017, 5:02 PM IST
ಮುಂಬಯಿ: ಮಹಿಳಾ ಸಹೋದ್ಯೋಗಿ ಬಟ್ಟೆ ಬದಲಾಯಿಸುತ್ತಿರುವಾಗಿನ ದೃಶ್ಯಾವಳಿಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿದ ನಗರದ ಸರಕಾರಿ ಆಸ್ಪತ್ರೆಯೊಂದರ ವೈದ್ಯನೋರ್ವನನ್ನು ಜುಹೂ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವೈದ್ಯ ಮಹಿಳಾ ವೈದ್ಯೆಯ ಮೊಬೈಲ್ ಫೋನ್‌ನ ಮೆಮರಿ ಕಾರ್ಡ್‌ನ್ನು ಕಳವುಗೈದಿದ್ದಾನೆ ಎನ್ನಲಾಗಿದ್ದು ಈ ಸಂಬಂಧವೂ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸರಕಾರಿ ಆಸ್ಪತ್ರೆಯಲ್ಲಿ ಇವರೀರ್ವರು ವೈದ್ಯರಾಗಿದ್ದು ವೈದ್ಯರ ವಸತಿ ಸಮುಚ್ಚಯದಲ್ಲಿನ ಒಂದೇ ಮಹಡಿಯಲ್ಲಿ ಬೇರೆ ಬೇರೆ ಕೋಣೆಗಳಲ್ಲಿ ವಾಸವಾಗಿದ್ದರು. ಮಹಿಳಾ ವೈದ್ಯೆಗೆ ಆಕೆಯ ಸ್ನೇಹಿತೆಯೋರ್ವಳು ವೀಡಿಯೋವನ್ನು ಕಳುಹಿಸಿದ ಬಳಿಕವಷ್ಟೇ ವೈದ್ಯನ ಕುಕೃತ್ಯ ಬಯಲಾಯಿತು.
ಇದಾದ ಬಳಿಕ ಆಕೆ ಜುಹೂ ಠಾಣೆ ಪೊಲೀಸರಿಗೆ ಸಹೋದ್ಯೋಗಿ ವೈದ್ಯನ ವಿರುದ್ಧ ದೂರು ನೀಡಿದ್ದಳು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದರು. ಮ್ಯಾಜಿಸ್ಟ್ರೇಟ್ ಅವರು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು ಪೊಲೀಸರು ವೈದ್ಯನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.