ಒಬ್ಬ ಹುಡುಗ, ನಾಲ್ಕು ಹುಡುಗಿಯರು
Team Udayavani, Jun 18, 2017, 11:07 AM IST
“ಮುಗುಳು ನಗೆ’ ಚಿತ್ರದಲ್ಲಿ ಈ ಬಾರಿ ಯೋಗರಾಜ್ ಭಟ್ ಏನು ಹೇಳುವುದಕ್ಕೆ ಹೊರಟಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಆ ಕುರಿತು, ಸ್ವಲ್ಪ ರಹಸ್ಯ ಬಿಟ್ಟುಕೊಟ್ಟಿದ್ದಾರೆ ಯೋಗರಾಜ್ ಭಟ್. ಅದೇನೆಂದರೆ, ಈ ಚಿತ್ರದಲ್ಲಿ ಅವರು, ಜೀವನದಲ್ಲಿ ಅಳುವೇ ಬರದ ಒಬ್ಬ ಹುಡುಗನ ಕಥೆ ಹೇಳುವುದಕ್ಕೆ ಹೊರಟಿದ್ದಾರೆ.
ಹೌದು, ಈ ಚಿತ್ರದಲ್ಲಿ ಅವರು ಪುಲ್ಕೇಶ್ ಅಲಿಯಾಸ್ ಪುಲ್ಕು ಎಂಬ ಹುಡುಗನ ಕಥೆ ಹೇಳುತ್ತಿದ್ದಾರೆ. ಆ ಮುಗುಳು ನಗೆಯ ಯುವಕ, ಮಗುವಾಗಿದ್ದಾಗಿನಿಂದ ಅತ್ತಿರುವುದೇ ಇಲ್ಲ. ಕಣ್ಣೀರು ಬರುವುದಿಲ್ಲವೆಂಬುದೊಂದೇ ಆತನ ಬಾಳಿನ ಶಾಶ್ವತ ಕೊರಗು. ಅಂತಹವನ ಕಣ್ಣಲ್ಲಿ ಒಂದು ಹನಿ ಕಣ್ಣೀರು ಬರುತ್ತದೆ. ಅದು ಹೇಗೆ ಮತ್ತು ಯಾಕೆ ಎಂದು ಗೊತ್ತಾಗಬೇಕಿದ್ದರೆ, ನೀವು ಚಿತ್ರ ನೋಡಬೇಕು.
ಇಲ್ಲಿ ಪುಲ್ಕೇಶಿಯ ಪಾತ್ರದಲ್ಲಿ ಗಣೇಶ್ ಕಾಣಿಸಿಕೊಂಡಿದ್ದಾರೆ. ಇನ್ನು ಅವರಿಗೆ ನಾಲ್ವರು ನಾಯಕಿಯರಿದ್ದಾರೆ. ಕಾಲೇಜಿನಲ್ಲಿ ಒಬ್ಬಳು, ಕೆಲಸ ಮಾಡುವ ಸಮಯದಲ್ಲಿ ಒಬ್ಬಳು, ಯಾವುದೋ ಅಪರಿಚಿತ ಊರಲ್ಲಿ ಸಿಕ್ಕ ಇನ್ನೊಬ್ಬಳು ಮತ್ತು ಮನೆ ಮಂದಿಯ ಫೇವರೇಟ್ ಆದ ಮತ್ತೂಬ್ಬಳು …
ಹೀಗೆ ನಾಲ್ವರೂ ಸೇರಿ ಪುಲ್ಕುವಿನ ಬದುಕನ್ನು ಯಾವುದೋ ಅರಿಯದ ದಿಕ್ಕಿಗೆ ತಿರುಗಿಸಲು ಪ್ರಯತ್ನಿಸುವುದೇ ಚಿತ್ರದ ಕಥೆಯಂತೆ. ಚಿತ್ರಕ್ಕೆ ಯೋಗರಾಜ್ ಭಟ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ಬರೆದಿದ್ದಾರೆ. ಚಿತ್ರದ ಹಾಡುಗಳು ಗಣೇಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡಗುಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.