ಸೆಲ್ಫಿ ತೆಗೆದು ಸಂಭ್ರಮಿಸಿದ ಸಾರ್ವಜನಿಕರು
Team Udayavani, Jun 18, 2017, 11:58 AM IST
ಬೆಂಗಳೂರು: ಬೆಂಗಳೂರಿಗರ ಪಾಲಿಗೆ ಶನಿವಾರ ಐತಿಹಾಸಿಕ ಕ್ಷಣ. ಅಂದು ಸಂಜೆ 6.20 ಗಂಟೆಗೆ ನಗರದ ದಶಕಗಳ ಕನಸು ನನಸಾಯಿತು. ವಿಧಾನಸೌಧದ ಆವರಣದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ರಿಮೋಟ್ ಗುಂಡಿ ಒತ್ತುತ್ತಿದ್ದಂತೆ ಇತ್ತ ಸಂಪಿಗೆ ರಸ್ತೆಯ ಮಂತ್ರಿಸ್ಕ್ವೇರ್ ನಿಲ್ದಾಣದಿಂದ ರೈಲು ಯಲಚೇನಹಳ್ಳಿಯ ಕಡೆಗೆ ಸಾಗಿತು. ಆಗ, ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಸಂಭ್ರಮ ಮುಗಿಲುಮುಟ್ಟಿತು.
ಬಹುತೇಕ ಎಲ್ಲ ಹೊಸ ನಿಲ್ದಾಣಗಳಲ್ಲಿ ಎಲ್‌ಇಡಿ ಟಿವಿಗಳ ಮೂಲಕ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಇತ್ತು. ಅತ್ತ ಚಾಲನೆ ನೀಡುತ್ತಿದ್ದಂತೆ ಇತ್ತ ಬಿಎಂಆರ್‌ಸಿ ಸಿಬ್ಬಂದಿ, ಗಣ್ಯರು, ವಿವಿಐಪಿ ಪಾಸುಗಳನ್ನು ಹಿಡಿದು ಬಂದವರಿಂದ ಕರತಾಡನ ಮೊಳಗಿದವು.
ಮೆಟ್ರೋ ರೈಲು ಮತ್ತು ನಿಲ್ದಾಣಗಳು ಬಲೂನು, ಹೂವುಗಳಿಂದ ಸಿಂಗಾರಗೊಂಡಿದ್ದವು. ಉದ್ಘಾಟನೆ ನಂತರ ಒಟ್ಟಾರೆ ಎರಡು ರೈಲುಗಳು ಮಂತ್ರಿಸ್ಕ್ವೇರ್‌ನಿಂದ ಹೊರಟವು.
ಸಿಂಗಾರಗೊಂಡಿದ್ದ ಹಸಿರು ರೈಲು ಸಂಪಿಗೆರಸ್ತೆಯ ಮಂತ್ರಿಸ್ಕ್ವೇರ್‌ನಿಂದ ಹೊರಟು, 45 ನಿಮಿಷಗಳಲ್ಲಿ ಯಲಚೇನಹಳ್ಳಿ ತಲುಪಿತು. ಕನ್ನಡಿಗ ಶಾಂತರಾಜ ಮೊದಲ ಹಂತದ ಮೊದಲ ರೈಲು ಓಡಿಸಿದರು. ಇನ್ನು ಆ ರೈಲಿನ ಮೊದಲ ಪ್ರಯಾಣಿಕ ಮಲ್ಲೇಶ್ವರದ ಎಸ್.ವಿ.ಎಸ್. ರಾವ್.
ರೈಲು ಹೊರಟ ಮಾರ್ಗದುದ್ದಕ್ಕೂ ಬರುವ ಎಲ್ಲ 12 ನಿಲ್ದಾಣಗಳಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ನಿಲ್ದಾಣದ ಸಮೀಪ ಬರುತ್ತಿರುವ ಮೆಟ್ರೋ ರೈಲನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಳ್ಳುವ ಉತ್ಸಾಹ, ರೈಲಿನೊಂದಿಗೆ ಸ್ನೇಹಿತರ ಸೆಲ್ಫಿಗಳು, ಬಂದು ನಿಂತ ರೈಲಿನ ಮುಂದೆ ಬಿಎಂಆರ್‌ಸಿ ತಂಡದ ವಿಕ್ಟರಿ ಪೋಜು ನೀಡುವ ಮೂಲಕ ಜನ ಸಂಭ್ರಮಪಟ್ಟರು.
ಅದೇ ರೀತಿ, ಕೆಲವರು ಮೆಟ್ರೋ ಎತ್ತರಿಸಿದ ಮಾರ್ಗದ ಆಸುಪಾಸು ಕಟ್ಟಡ ಇರುವವರು ತಾರಸಿಯಲ್ಲಿ ನಿಂತು ಮೆಟ್ರೋ ರೈಲು ವೀಕ್ಷಿಸಿದರು. ಪ್ರವೇಶ ಇಲ್ಲದಿದ್ದರೂ ಕುತೂಹಲ ತಡೆಯದ ಜನ ನಿಲ್ದಾಣಗಳವರೆಗೆ ಬಂದು, ನಿರಾಸೆಯಿಂದ ವಾಪಸ್ಸಾದರು.
ಈ ಸಂದರ್ಭದಲ್ಲಿ ಮೆಟ್ರೋಗಾಗಿ ಕಾದು ವಾಪಸ್ಸಾಗುತ್ತಿದ್ದ ಜಯನಗರದ ನಿವಾಸಿ ಮಹೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲ ದಿನವೇ ಮೆಟ್ರೋದಲ್ಲಿ ಪ್ರಯಾಣಿಸಬೇಕು ಎಂಬ ಆಸೆಯಿಂದ ಬಂದೆವು. ಆದರೆ, ಪಾಸುಗಳನ್ನು ಹೊಂದಿದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಸಿಕ್ಕಿತು. ಭಾನುವಾರ ಸಂಜೆ ಮೊದಲ ಟ್ರಿಪ್‌ನಲ್ಲೇ ಪ್ರಯಾಣ ಬೆಳೆಸುತ್ತೇನೆ ಎಂದು ಹೇಳಿದರು.
ಇಂದು ಸಾರ್ವಜನಿಕ ಸಂಚಾರ: ರಾಷ್ಟ್ರಪತಿಗಳಿಂದ ಉದ್ಘಾಟನೆಗೊಂಡ “ನಮ್ಮ ಮೆಟ್ರೋ’ ಪೂರ್ಣ ಹಂತದ ಸಾರ್ವಜನಿಕ ಸಂಚಾರ ಸೇವೆ ಭಾನುವಾರ ಸಂಜೆ 4ರಿಂದ ಆರಂಭವಾಗಲಿದೆ. ಸಂಜೆ 4ಕ್ಕೆ ಸಂಪಿಗೆರಸ್ತೆಯ ಮಂತ್ರಿಸ್ಕ್ವೇರ್‌ನಿಂದ ಕಾರ್ಯಾಚರಣೆ ಆರಂಭಗೊಳ್ಳಲಿದೆ. ಅದೇ ರೀತಿ, ಯಲಚೇನಹಳ್ಳಿಯಿಂದಲೂ ಸಾರ್ವಜನಿಕ ಸೇವೆ ಶುರುವಾಗಲಿದೆ ಎಂದು ಬಿಎಂಆರ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರಿಗೆ ಉಚಿತ ಸಂಚಾರ: ಮೆಟ್ರೋ ರೈಲಿನಲ್ಲಿ ಭಾನುವಾರ ಪೊಲೀಸರಿಗೆ ಕುಟುಂಬ ಸದಸ್ಯರೊಂದಿಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೊದಲ ಹಂತದ ಮೆಟ್ರೋ ನಿರ್ಮಾಣ ಮತ್ತು ಉದ್ಘಾಟನಾ ಸಮಾರಂಭಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕುಟುಂಬ ಸದಸ್ಯರೊಂದಿಗೆ ಭಾನುವಾರ ಉಚಿತವಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲಾ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.