ನಾಲ್ಕೂ ದಿಕ್ಕಿಗೆ ನಲ್ವತ್ತೇ ನಿಮಿಷ 


Team Udayavani, Jun 18, 2017, 11:59 AM IST

17metro-inugration12.jpg

ಬರೋಬ್ಬರಿ 11 ವರ್ಷಗಳ ಹಿಂದೆ ಅಡಿಗಲ್ಲು ಹಾಕಿದ್ದ ಮೆಟ್ರೋ ಮೊದಲ ಹಂತದ ಯೋಜನೆ ಶನಿವಾರ ಪೂರ್ಣಗೊಂಡಿದೆ. ಈ ಮೂಲಕ ರಾಜಧಾನಿ ಬೆಂಗಳೂರಿನ ನಾಲ್ಕು ದಿಕ್ಕುಗಳಿಗೂ ನಮ್ಮ ಮೆಟ್ರೋ ವ್ಯಾಪಿಸಿಕೊಂಡಿದೆ. ಇನ್ನೇನಿದ್ದರೂ, ಎರಡನೇ ಹಂತದತ್ತ ನಗರದ ಚಿತ್ತ… 

ಬೆಂಗಳೂರು: ಏಷ್ಯಾದಲ್ಲೇ ಅತಿದೊಡ್ಡ ಮೆಟ್ರೋ ರೈಲು ಇಂಟರ್‌ಚೇಂಜ್‌ ಮತ್ತು ದಕ್ಷಿಣ ಭಾರತದ ಮೊದಲ ಸುರಂಗ ಮಾರ್ಗ ಹೊಂದಿರುವ ಬಹುನಿರೀಕ್ಷಿತ “ನಮ್ಮ ಮೆಟ್ರೋ’ ಯೋಜನೆಯ ಮೊದಲ ಹಂತದ ಪೂರ್ಣ ಪ್ರಮಾಣದ ಸಂಚಾರ ಸೇವೆಯನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಶನಿವಾರ ಸಾರ್ವಜನಿಕ ಬಳಕೆಗೆ ಸಮರ್ಪಿಸಿದರು.

ಈ ಮೂಲಕ ದಶಕಗಳ ಕನಸು ಸಾಕಾರಗೊಂಡಿತು. ವಿಧಾನಸೌಧದ ಆವರಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ರಿಮೋಟ್‌ ಗುಂಡಿ ಒತ್ತುವ ಮೂಲಕ ಈ ಮಹತ್ವಾಕಾಂಕ್ಷಿ ಯೋಜನೆ ನಾಗರಿಕರಿಗೆ ಅರ್ಪಿಸಿದ ಪ್ರಣಬ್‌ ಮುಖರ್ಜಿ, ಗಾರ್ಡನ್‌ಸಿಟಿ, ಸಿಲಿಕಾನ್‌ ಸಿಟಿ ಖ್ಯಾತಿಯ ಬೆಂಗಳೂರು ನಗರದ ಮೆಟ್ರೋ ಯೋಜನೆಗೆ ಚಾಲನೆ ನೀಡುತ್ತಿರುವುದು ನನಗೆ ಹೆಮ್ಮೆ ತಂದಿದೆ ಎಂದು ಹೇಳಿದರು.

ನಮ್ಮ ದೇಶದಲ್ಲಿ ಮೆಟ್ರೋ ರೈಲು ಪರಿಚಯವಾಗಲು ಬಹಳ ವರ್ಷಗಳು ಆಗಿರಬಹುದು. ಆದರೆ, ಇಂದು ವೇಗವಾಗಿ ಬೆಳೆಯುತ್ತಿದೆ. ಅನೇಕ ಸವಾಲುಗಳನ್ನು ಮೆಟ್ಟಿ ನಿಂತು 10 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಿರು  ವುದು ದಾಖಲೆಯೇ ಸರಿ. ಮೊದಲ ಹಂತದ ಯೋಜನೆಯಲ್ಲಿ ಪಡೆದುಕೊಂಡ ಅನುಭವದ ಆಧಾರದಲ್ಲಿ 2ನೇ ಹಂತವನ್ನು ಕಾಲಮಿತಿಯೊಳಗೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು. 

ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಅನಂತಕುಮಾರ್‌, ಡಿ.ವಿ. ಸದಾ ನಂದಗೌಡ, ವಿಧಾನಪರಿಷತ್ತಿನ ಸಭಾಪತಿ ಡಿ.ಎಚ್‌. ಶಂಕರಮೂರ್ತಿ, ಸ್ಪೀಕರ್‌ ಕೆ.ಬಿ. ಕೋಳಿವಾಡ್‌, ಸಚಿವರಾದ ಆರ್‌. ರೋಷನ್‌ ಬೇಗ್‌, ಕೆ.ಜೆ. ಜಾರ್ಜ್‌, ಮೇಯರ್‌ ಜಿ. ಪದ್ಮಾವತಿ, ಜಪಾನ್‌ ರಾಯಭಾರಿ ಕೆಂಜಿ ಹಿರಮತ್ಸು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. 

ಪೂರ್ಣ ಪ್ರಮಾಣದಲ್ಲಿ ಸೇವೆಗೆ ಅಣಿ: ನಗರದ ನಾಲ್ಕು ದಿಕ್ಕುಗಳ ನಡುವೆ ಮೆಟ್ರೋ ಸಂಪರ್ಕ ಕಲ್ಪಿಸುವ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್‌ಗಳ 13,845  ಕೋಟಿ ರೂ. ಯೋಜನಾ ವೆಚ್ಚದ 42.3 ಕಿ.ಮೀ. ಉದ್ದದ “ನಮ್ಮ ಮೆಟ್ರೋ’ ಯೋಜನೆಗೆ 2006ರಲ್ಲಿ ಕೇಂದ್ರ ಸರ್ಕಾರದಿಂದ ಅನುಮೋದನೆಗೊಂಡಿತ್ತು. ಯೋಜನೆಯ  ಕಾಮಗಾರಿಗೆ 2007ರ ಏಪ್ರಿಲ್‌ 15ಕ್ಕೆ ಚಾಲನೆ ಸಿಕ್ಕಿತ್ತು. ಸತತ 10 ವರ್ಷಗಳಿಂದ ಕಾಮಗಾರಿ ನಡೆದು, ಹಲವು ಅಡತಡೆಗಳನ್ನು ದಾಟಿ, ಈಗ ಪೂರ್ಣ ಪ್ರಮಾಣದಲ್ಲಿ ಸೇವೆಗೆ ಅಣಿಗೊಂಡಿದೆ. 2011ರ ಅಕ್ಟೋಬರ್‌ 20ರಂದು ರೀಚ್‌-1ರ ಎಂ.ಜಿ. ರಸ್ತೆ-ಬೈಯಪ್ಪನಹಳ್ಳಿ ನಡುವೆ 18.1 ಕಿ.ಮೀ “ನೆರಳೆ ಮಾರ್ಗ’ ಹಾಗೂ ನಾಗಸಂದ್ರದಿಂದ  ಮಂತ್ರಿಸ್ಕ್ವೆ„ರ್‌ ನಿಲ್ದಾಣದ ನಡುವೆ 12.2 ಕಿ.ಮೀ ಮೆಟ್ರೋ ಸಂಚಾರ ಸೇವೆ ಆರಂಭಿಸಿತ್ತು. ಈಗ ಸಂಪಿಗೆ ರಸ್ತೆ ಮಂತ್ರಿ ಸ್ಕೈರ್‌ನಿಂದ ಯಲಚೇನಹಳ್ಳಿವರೆಗಿನ ಹಸಿರು ಮಾರ್ಗ  12 ಕಿ.ಮೀ ಸಂಚಾರಕ್ಕೆ ಮುಕ್ತಗೊಳ್ಳುವ ಮೂಲಕ ಮೊದಲ ಹಂತದ ಯೋಜನೆ ಮುಕ್ತಾಯಗೊಂಡಿದೆ.  

ಮೊದಲ ಹಂತ ಪೂರ್ಣಗೊಳ್ಳುತ್ತಲೇ ಪ್ರಯಾಣ ದರವೂ ಹೆಚ್ಚಾಯ್ತು 
ಬೆಂಗಳೂರು:
ಮೆಟ್ರೋ ಮೊದಲ ಹಂತ ಲೋಕಾರ್ಪಣೆ ದಿನವೇ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ವು ಪ್ರಯಾಣಿಕರಿಗೆ ದರ ಏರಿಕೆ ಶಾಕ್‌ ನೀಡಿದೆ. ಶೇ. 10ರಿಂದ 15ರಷ್ಟು ಪ್ರಯಾಣ ದರ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಇದೇ 18ರಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಕನಿಷ್ಠ ದರದಲ್ಲಿ ಮಾತ್ರ ಯಾವುದೇ ವ್ಯತ್ಯಾಸ ಆಗಿಲ್ಲ. ಹಾಗಾಗಿ, ಎರಡು ನಿಲ್ದಾಣಗಳ ನಡುವಿನ ಪ್ರಯಾಣ ದರ 10 ರೂ. ಹಾಗೆಯೇ ಇದೆ. ಆದರೆ, ಗರಿಷ್ಠ ದರ 60 ರೂ. ತಲುಪಿದೆ.  

 24.2 ಕಿ.ಮೀ. ಉದ್ದದ ಉತ್ತರ-ದಕ್ಷಿಣ ಕಾರಿಡಾರ್‌ನ ನಾಗಸಂದ್ರದಿಂದ ಯಲಚೇನಹಳ್ಳಿಗೆ 60 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ. 18.1 ಕಿ.ಮೀ. ಉದ್ದದ ಪೂರ್ವ-ಪಶ್ಚಿಮ ಕಾರಿಡಾರ್‌ನ ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿವರೆಗೆ 45 ರೂ. ದರ ನಿಗದಿಪಡಿಸಲಾಗಿದೆ. (ಈ ಹಿಂದೆ ಈ ಮಾರ್ಗದಲ್ಲಿ 40 ರೂ. ಪ್ರಯಾಣ ದರ ಇತ್ತು)

ಎಲ್ಲಿಂದ ಎಲ್ಲಿಗೆ ಈಗ ಎಷ್ಟಿದೆ? 
ಮಾರ್ಗ—–ಪ್ರಯಾಣ ದರ (ರೂ.ಗಳಲ್ಲಿ):-
* ನಾಗಸಂದ್ರ-ಯಲಚೇನಹಳ್ಳಿ 60 ರೂ.
* ಬೈಯಪ್ಪನಹಳ್ಳಿ-ಮೈಸೂರು ರಸ್ತೆ 45 ರೂ.
* ಬೈಯಪ್ಪನಹಳ್ಳಿ-ಯಲಚೇನಹಳ್ಳಿ 50 ರೂ.
* ನಾಗಸಂದ್ರ-ಬೈಯಪ್ಪನಹಳ್ಳಿ 58 ರೂ.
* ಬೈಯಪ್ಪನಹಳ್ಳಿ- ಕೆಂಪೇಗೌಡ ನಿಲ್ದಾಣ 30 ರೂ.
* ಮೈಸೂರು ರಸ್ತೆ- ಕೆಂಪೇಗೌಡ ನಿಲ್ದಾಣ 25 ರೂ.
* ನಾಗಸಂದ್ರ- ಕೆಂಪೇಗೌಡ ನಿಲ್ದಾಣ 38 ರೂ.
* ಯಲಚೇನಹಳ್ಳಿ-ಕೆಂಪೇಗೌಡ ನಿಲ್ದಾಣ 30 ರೂ.
* ಕೆಂಪೇಗೌಡ ನಿಲ್ದಾಣ-ಕೆ.ಆರ್‌.ಮಾರ್ಕೆಟ್‌ ನಿಲ್ದಾಣ15 ರೂ.
* ಕೆ.ಆರ್‌.ಮಾರ್ಕೆಟ್‌- ಯಲಚೇನಹಳ್ಳಿ ನಿಲ್ದಾಣ 28 ರೂ. 
* ವಾಹನಗಳ ನಿಲುಗಡೆ ಶುಲ್ಕದಲ್ಲಿ ಯಾವುದೇ ಪರಿಷ್ಕರಣೆ ಇಲ್ಲ. 

10 ವರ್ಷದಲ್ಲಿ ಎಲ್ಲ ನಗರಗಳಲ್ಲಿ ಮೆಟ್ರೋ: “ಭಾರತದಲ್ಲಿ 1854ಗೆ ಈಸ್ಟ್‌ ಇಂಡಿಯಾ ಕಂಪೆನಿ ರೈಲ್ವೆ ವ್ಯವಸ್ಥೆಯನ್ನು ಪರಿಚಯಿಸಿತು. ಮುಂದಿನ ಹತ್ತು ವರ್ಷಗಳಲ್ಲೇ ಲಂಡನ್‌ನಲ್ಲಿ ಮೆಟ್ರೋ ರೈಲು ಆರಂಭಗೊಂಡಿತು. ಯುರೋಪ್‌, ಅಮೇರಿಕಾದ ಎಲ್ಲ ದೊಡ್ಡ ನಗರಗಳಲ್ಲಿ ಮೆಟ್ರೋ ರೈಲು ಬಹಳ ಹಿಂದೆಯೇ ಚಾಲನೆಗೆ ಬಂತು. ನಮ್ಮ ದೇಶದಲ್ಲಿ 1984ರಲ್ಲಿ ಕಲ್ಕತ್ತಾದಲ್ಲಿ ಮೊದಲ ಬಾರಿ ಮೆಟ್ರೋ ಆರಂಭವಾಯಿತು.

2000ರಲ್ಲಿ ದೆಹಲಿಗೆ ಮೆಟ್ರೋ ಬಂತು. ನಮ್ಮಲ್ಲಿ ಮೆಟ್ರೋ ಬರಲು ಸಾಕಷ್ಟು ವಿಳಂಬ ಆಗಿರಬಹುದು. ಆದರೆ, ಈಗ ಹಿಂದೆ ನೋಡುವ ಪ್ರಶ್ನೆ ಇಲ್ಲ. ಯಶಸ್ವಿ ಅನುಷ್ಠಾನಕ್ಕೆ ಬೆಂಗಳೂರು ಮಾದರಿ ನಮ್ಮ ಮುಂದಿದೆ. ಮುಂದಿನ 10-15 ವರ್ಷಗಳಲ್ಲಿ ದೇಶದ ಎಲ್ಲ ದೊಡ್ಡ ನಗರಗಳಲ್ಲಿ ಮೆಟ್ರೋ ಕಾಣಬಹುದು’ ಎಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಹೇಳಿದ್ದಾರೆ. 

ನಾಯ್ಡು ವಾಲಾ ಕಿವಿಮಾತು: ಕರ್ನಾಟಕ ಈಗಾಗಲೇ ರೈತರ, ಕುಡಿಯುವ ನೀರಿನ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸಮಸ್ಯೆಗಳಿಗೆ ಒಂದು ವೇಳೆ ಮೆಟ್ರೋಗೆ ರಾಜ್ಯ ಸರ್ಕಾರ ಹಣ ಕೊಟ್ಟರೆ, ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ಕೊರತೆ ಉಂಟಾಗುತ್ತದೆ. ಆದ್ದರಿಂದ ಮೆಟ್ರೋ ಯೋಜನೆಗೆ ಪೂರ್ಣ ಪ್ರಮಾಣದ ಹಣವನ್ನು ಕೇಂದ್ರ ಸರ್ಕಾರವೇ ಕೊಡಬೇಕು. ನೀವು ಈಗ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿರಬಹುದು.

ಆದರೆ, ಕರ್ನಾಟಕದ ಜನ ನಿಮ್ಮನ್ನು ಮೂರು ಬಾರಿ ಇಲ್ಲಿಂದ ರಾಜ್ಯಸಭೆಗೆ ಕಳಿಸಿದ್ದಾರೆ. ಹಾಗಾಗಿ ರಾಜ್ಯದ ಯೋಜನೆಗಳಿಗೆ ಪೂರ್ಣ ಪ್ರಮಾಣದ ಅನುದಾನ ಕೊಡಿ ಎಂದು ನಿಮ್ಮನ್ನು ಕೇಳುವ ಹಕ್ಕು ಇಲ್ಲಿನ ಜನರಿಗಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಿ ಎಂದು ಇದೇ ವೇಳೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಕಿವಿಮಾತು ಹೇಳಿದರು. 

ನೂತನ ಮೆಟ್ರೋ ನೀತಿ ಜಾರಿ ಶೀಘ್ರ: ದೇಶದ ಎಂಟು ರಾಜ್ಯಗಳ ಮಹಾನಗರಗಳಲ್ಲಿ ಈಗಾಗಲೇ ಅನುಷ್ಠಾನದಲ್ಲಿರುವ ಮೆಟ್ರೋ ರೈಲು ಯೋಜನೆಯ ಯಶಸ್ಸು ಮತ್ತು ಅನುಭವದ ಆಧಾರದಲ್ಲಿ ಶೀಘ್ರದಲ್ಲೇ ಹೊಸ ಮೆಟ್ರೋ ನೀತಿ ಜಾರಿಗೆ ತರಲಾಗುವುದು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯನಾಯ್ಡು ತಿಳಿಸಿದ್ದಾರೆ. ಮೆಟ್ರೋ 2ನೇ ಹಂತಕ್ಕೆ 2014ರ ಫೆಬ್ರವರಿ 14ಕ್ಕೆ ಅನುಮೋದನೆ ನೀಡಲಾಗಿದೆ. ಇದರ ಒಟ್ಟು ಯೋಜನಾ ವೆಚ್ಚ 26,405 ಕೋಟಿ ರೂ. ಆಗಿದೆ.

ಇದಕ್ಕಾಗಿ ಕೇಂದ್ರ ಸರ್ಕಾರಿ ಎಎಫ್ಡಿ ಜೊತೆಗೆ 1,440 ಕೋಟಿ ರೂ. ಸಾಲಕ್ಕೆ 2015ರ ಸೆಪ್ಟಂಬರ್‌ನಲ್ಲಿ ಒಪ್ಪಂದ ಮಾಡಿಕೊಂಡಿದೆ. ಅಲ್ಲದೇ ಎಐಐಬಿಯಿಂದ 2,160 ಕೋಟಿ ರೂ. ಸಾಲ ಪಡೆದುಕೊಳ್ಳಲು ಕಳೆದ ವಾರ ಒಪ್ಪಿಗೆ ನೀಡಲಾಗಿದೆ. ಕೇಂದ್ರ ಸರ್ಕಾರದ ಪಾಲಿನ 5,291 ಕೋಟಿ ರೂ.ಗಳ ಪೈಕಿ ಈಗಾಗಲೇ 1,205 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಎರಡನೇ ಹಂತ 2020 ಮಾರ್ಚ್‌ಗೆ ಪೂರ್ಣಗೊಳ್ಳುವ ವಿಶ್ವಾಸವಿದೆ’ ಎಂದಿದ್ದಾರೆ. 

ದೆಹಲಿ ನಂತರ ಬೆಂಗಳೂರು ಪೂರ್ಣ ಪ್ರಮಾಣದ ಮೆಟ್ರೋ ರೈಲು ಸಂಚಾರದ ನಗರ ಆಗಿರುವುದಕ್ಕೆ ಹೆಮ್ಮೆಯಿದೆ. ಮೊದಲ ಹಂತದ ಅನುಷ್ಠಾನಕ್ಕೆ ನೆರವು ನೀಡಿದ ಕೇಂದ್ರ ಸರ್ಕಾರ, ಜಪಾನ್‌ ಮತ್ತು ಫ್ರಾನ್ಸ್‌ ಸರ್ಕಾರಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎರಡನೇ ಹಂತದ ಮೆಟ್ರೋವನ್ನು ಶೀಘ್ರಗತಿಯಲ್ಲಿ ಅನುಷ್ಠಾನಕ್ಕೆ ತರಲಿದ್ದೇವೆ. 
●ಸಿದ್ದರಾಮಯ್ಯ, ಮುಖ್ಯಮಂತ್ರಿ

ದೇಶದ ಎಂಟು ರಾಜ್ಯಗಳಲ್ಲಿ ಅನುಷ್ಠಾನದಲ್ಲಿರುವ ಮೆಟ್ರೋ ಯೋಜನೆಗಳ ಯಶಸ್ಸು ಮತ್ತು ಅನುಭವದ ಆಧಾರದಲ್ಲಿ ಶೀಘ್ರದಲ್ಲೇ ರಾಷ್ಟ್ರಮಟ್ಟದ ಹೊಸ ಮೆಟ್ರೋ ರೈಲು ನೀತಿ ಜಾರಿಗೊಳಿಸಲಾಗುವುದು. ಬೆಂಗಳೂರು ಮೆಟ್ರೋ 2ನೇ ಹಂತಕ್ಕೆ ಕೇಂದ್ರ ಸರ್ಕಾರ ಈಗಾಗಲೇ 1,205 ಕೋಟಿ ನೀಡಿದೆ.
●ಎಂ.ವೆಂಕಯ್ಯನಾಯ್ಡು, ಸಚಿವ

ಮೆಟ್ರೋ ರೈಲು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರವೇ ಪೂರ್ಣ ಪ್ರಮಾಣದಲ್ಲಿ ಶೇ.100ರಷ್ಟು ಅನುದಾನ ಒದಗಿಸಬೇಕು. ಇದು ಕೇಂದ್ರ ಸರ್ಕಾರಕ್ಕೆ ಲಾಭದಾಯಕ. 
●ವಜುಭಾಯಿ ವಾಲಾ, ರಾಜ್ಯಪಾಲ 

ಐದು ವರ್ಷಗಳ ಹಿಂದೆಯೇ ಈ ಕೆಲಸ ಆಗಬೇಕಿತ್ತು. ಈ ಜಾಲದಿಂದ ನಗರದ ಪ್ರಮುಖ ರೈಲು ನಿಲ್ದಾಣಗಳು, ಬಸ್‌ ನಿಲ್ದಾಣಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳಿಗೆ ನೇರವಾಗಿ ಮೆಟ್ರೋ ಮೂಲಕ ತೆರಳಬಹುದು. ಮೆಟ್ರೋ ಸೇವೆಯ ಅವಧಿ 11ರವರೆಗೆ ವಿಸ್ತರಣೆಯಾಗಿದೆ. ಇದರಿಂದ ರೈಲು, ಬಸ್‌ನಲ್ಲಿ ತಡರಾತ್ರಿ ಬಂದಿಳಿಯುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.
●ಕೃಷ್ಣಪ್ರಸಾದ್‌, ಕರ್ನಾಟಕ ರೈಲ್ವೆ ವೇದಿಕೆ ಸಂಚಾಲಕರು

ದಶಕಗಳ ಕನಸು ನನಸಾಗಿದೆ. ಟ್ರಾμಕ್‌ ಸಮಸ್ಯೆಗೆ ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈಗ ಮೂರು ಬೋಗಿಗಳಿವೆ. ಆದಷ್ಟು ಬೇಗ ಇನ್ನೂ ಮೂರು ಬೋಗಿಗಳನ್ನು ಅಳವಡಿಸಬೇಕು. ನಿತ್ಯ ನಾನು ಬನಶಂಕರಿಯಿಂದ ಮಾರುಕಟ್ಟೆ, ಆರ್‌.ವಿ. ರಸ್ತೆಗೆ ಸ್ವಂತ ವಾಹನದಲ್ಲಿ ಹೋಗುತ್ತಿದ್ದೆ. ಈಗ ರೈಲಿನಲ್ಲೇ ಹೋಗುತ್ತೇನೆ. 
●ಲೋಕೇಶ್‌, ವ್ಯಾಪಾರಿ, ಬನಶಂಕರಿ

ಪೂರ್ಣಗೊಂಡ ಮೆಟ್ರೋ ಮೊದಲ ಹಂತವು ನಮಗೆ ಒಂದು ಒಳ್ಳೆಯ ಪಾಠ. ಇಲ್ಲಿ ಕಲಿತದ್ದನ್ನು ಎರಡನೇ ಹಂತದ ಯೋಜನೆಯಲ್ಲಿ ಬಳಸಿಕೊಳ್ಳುತ್ತೇವೆ. ಹಲವು ಸವಾಲುಗಳನ್ನು ನಾವು ಇಲ್ಲಿ ಎದುರಿಸಬೇಕಾಯಿತು. ಎರಡನೇ ಹಂತದಲ್ಲಿ ಇನ್ನಷ್ಟು ಮುಂದುವರಿದ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುವುದು. 
●ರಂಜಿತ್‌ ಕುಮಾರ್‌, ಜೂನಿಯರ್‌ ಎಂಜಿನಿಯರ್‌, ಬಿಎಂಆರ್‌ಸಿ

ಟಾಪ್ ನ್ಯೂಸ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.