ನಿರ್ದೋಷಿ ಖಯ್ಯೂಮ್‌ 11ವರ್ಷ ಜೈಲು ವಾಸ ಅನುಭವಿಸಿದ ಬಳಿಕ ಬಿಡುಗಡೆ!

Team Udayavani, Jun 18, 2017, 12:40 PM IST

2587413.jpg

ಮುಂಬಯಿ: ಟಾಡಾ  ನ್ಯಾಯಾಲಯ 1993ರ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿದ್ದ ಅಬ್ದುಲ್‌ ಖಯ್ಯೂಮ್‌ನನ್ನು ದೋಷಮುಕ್ತಿಗೊಳಿಸಿರಬಹುದು. ಆದರೆ ಈ ಖುಷಿಯ ಸಮಾಚಾರ ಕೇಳಲು ಖಯ್ಯೂಮ್‌ 11 ವರ್ಷ 8 ತಿಂಗಳು ಆರ್ಥರ್‌ ರೋಡ್‌ನ‌ಲ್ಲಿ ಕಳೆಯಬೇಕಾಯಿತು. 

ನಾನು ಅಪರಾಧಿಯಲ್ಲ ಎಂದು ಖಯ್ಯೂಮ್‌ ಬಂಧನವಾದಾಗಲೇ ಪೊಲೀಸರ ಬಳಿ ಹೇಳುತ್ತಿದ್ದರು. ಕೊನೆಗೂ ಅವರ ಮಾತು ನಿಜವಾಗಿದೆ. 11 ವರ್ಷ 8 ತಿಂಗಳು ಎನ್ನುವುದು ವ್ಯಕ್ತಿ¤ಯೊಬ್ಬನ ಬದುಕಿನಲ್ಲಿ ಸುದೀರ್ಘ‌ ಅವಧಿ. ಈ ಅವಧಿಯಲ್ಲಿ ನಾನು ಏನುಬೇಕಾದರೂ ಆಗಬಹುದಿತ್ತು. ಆದರೆ ಮಾಡದ ತಪ್ಪಿನ ಆರೋಪ ಹೊತ್ತು ಜೈಲಿನಲ್ಲಿ ಕಳೆಯಬೇಕಾಯಿತು. ಆದರೆ ಕೊನೆಗೂ ದೇವರಿಗೆ ನನ್ನ ಪ್ರಾರ್ಥನೆ ಕೇಳಿಸಿತು. ಇನ್ನು ಕಳಂಕವಿಲ್ಲದೆ ನಾನು ತಲೆ ಎತ್ತಿ ಓಡಾಡಬಹುದು ಎಂದಿದ್ದಾರೆ ಖಯ್ಯೂಮ್‌. 

ಖಯ್ಯೂಮ್‌ ವಿರುದ್ಧ ಹೊರಿಸಿದ ಆರೋಪಗಳನ್ನು ಸಾಬೀತುಪಡಿಸುವ ವಿಶ್ವಾಸಾರ್ಹ ಪುರಾವೆಗಳು ಇಲ್ಲ ಎಂದು ಶುಕ್ರವಾರ ನ್ಯಾಯಾಧೀಶರು ತೀರ್ಪು ಓದಿದಾಗ ಖಯ್ಯೂಮ್‌ ತನಗರಿವಿಲ್ಲದೆ ಎರಡೂ ಕೈಗಳನ್ನು ಮೇಲೆತ್ತಿ ನಮಸ್ಕರಿಸಿದ್ದರು. ಜೈಲಿನಿಂದ ಹೊರಗೆ ಹೋದ ಕೂಡಲೇ ನಾನು ಅನೇಕ ಕೆಲಸ ಮಾಡಲಿದ್ದೇನೆ. ಆದರೆ ಇಷ್ಟು ವರ್ಷ ನಾನು ಏಕೆ ಜೈಲಲ್ಲಿ ಕೊಳೆಯಬೇಕಾಯಿತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಜೈಲಿನಲ್ಲಿದ್ದ ಪ್ರತಿ ಸೆಕೆಂಡನ್ನು ಎಣಿಸಿದ್ದೇನೆ. ನನ್ನ ಬದುಕಿನ 23.5 ಕೋಟಿ ಸೆಕೆಂಡುಗಳು ವ್ಯರ್ಥವಾಗಿ ಹೋಗಿವೆ ಎಂದಿದ್ದಾರೆ.

 ಖಯ್ಯೂಮ್‌ ನಿರ್ದೋಷಿ ಎಂದು ಘೋಷಿಸಿದ ಕೂಡಲೇ ಮಾಹಿಮ್‌ನಲ್ಲಿರುವ ಅವರ ಸಹೋದರ ಸೌದಿಯಲ್ಲಿ ತಾಯಿ ಮತ್ತು ಸಹೋದರಿಗೆ ಫೋನು ಮಾಡಿ ಸುದ್ದಿ ತಿಳಿಸಿದರು. ಇಷ್ಟು ವರ್ಷ ಚಿಂತೆಯಲ್ಲಿ  ದಿನ ಕಳೆಯುತ್ತಿದ್ದೆವು. ಇಂದು ನಮ್ಮ ಚಿಂತೆ ದೂರವಾಯಿತು ಎಂದು ಸಹೋದರ ಖಾದಿರ್‌ ಶೇಖ್‌  ಪ್ರತಿಕ್ರಿಯಿಸಿದ್ದಾರೆ. 

ಮಾಹಿಮ್‌ನಲ್ಲಿ ವಾಸವಾಗಿದ್ದ ಖಯ್ಯೂಮ್‌ ಪರಿವಾರದ ಹೆಚ್ಚಿನವರು ಈಗ ಗಲ್ಫ್ ದೇಶಗಳಿಗೆ ವಲಸೆ ಹೋಗಿದ್ದಾರೆ. ಖಯ್ಯೂಮ್‌ಗೆ ಮೂರು ಮದುವೆಯಾಗಿದ್ದು ಮೂವರು ಹೆಂಡತಿಯರು ಬದುಕಿದ್ದಾರೆ. ಓರ್ವ ಹೆಂಡತಿ ಸೌದಿಯಲ್ಲಿ, ಎರಡನೇ ಹೆಂಡತಿ ಲಂಡನ್‌ನಲ್ಲಿ ಮತ್ತು ಮೂರನೇ ಹೆಂಡತಿ ಮುಂಬಯಿಯಲ್ಲಿದ್ದಾರೆ. ಆದರೆ ಮಕ್ಕಳ ಬಗ್ಗೆ ಯಾವ ವಿವರವೂ ಲಭ್ಯವಿಲ್ಲ. ಖಯ್ಯೂಮ್‌ ಕೂಡ ಯಾರ ಬಳಿಯೂ ಹೇಳಿಕೊಂಡಿಲ್ಲ. 

ಮರಣ ದಂಡನೆಗೆ ಆಗ್ರಹ 
ಈ ನಡುವೆ ಪ್ರಾಸಿಕ್ಯೂಶನ್‌ ಅಪರಾಧಿಗಳೆಂದು ಸಾಬೀತಾಗಿರುವ ಮುಸ್ತಾಫ‌ ದೊಸ್ಸಾ, ಫಿರೋಜ್‌ ಖಾನ್‌ ಮತ್ತು ತಾಹಿರ್‌ ಮರ್ಚಂಟ್‌ಗೆ ಮರಣ ದಂಡನೆ ವಿಧಿಸುವಂತೆ ಟಾಡಾ ನ್ಯಾಯಾಲಯವನ್ನು ವಿನಂತಿಸಲಿದೆ. ಸೋಮವಾರ ಶಿಕ್ಷೆಯ ಪ್ರಮಾಣದ ವಿಚಾರಣೆ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಪ್ರಾಸಿಕ್ಯೂಶನ್‌ ಬಲವಾದ ವಾದ ಮಂಡಿಸಲಿದೆ. 

ಆರೋಪಿಗಳ ಪೈಕಿ  ಸಿದ್ಧಿಕಿ ವಿರುದ್ಧ ಸಂಚಿನ ಆರೋಪವಿಲ್ಲ. ಹೀಗಾಗಿ ಗರಿಷ್ಠ ಜೀವಾವಧಿ ಶಿಕ್ಷೆಯಾಗಬಹುದು. ಅಂತೆಯೇ ಅಬೂ ಸಲೇಂಗೂ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಯಿದೆ. ಸಲೇಂಗೆ ಮರಣ ದಂಡನೆ ವಿಧಿಸಲು ಪೋರ್ಚುಗಲ್‌ ಜತೆಗೆ ಮಾಡಿಕೊಂಡಿರುವ ಒಪ್ಪಂದ ಅಡ್ಡಿಯಾಗುತ್ತದೆ. 

ಟಾಪ್ ನ್ಯೂಸ್

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.