ಉದ್ಯಾನವನ ಪ್ರವೇಶ ದ್ವಾರದ ಸೊಬಗಿಗೆ ಧಕ್ಕೆ
Team Udayavani, Jun 18, 2017, 2:59 PM IST
ಕಲಬುರಗಿ: ಮಹಾನಗರ ಪಾಲಿಕೆಯ ಸಾರ್ವಜನಿಕ ಉದ್ಯಾನವನದಲ್ಲಿ ಇರುವ ಶತಮಾನದಷ್ಟು ಹಳೆಯದಾದ ಹೈದ್ರಾಬಾದ ನಿಜಾಂ ಕಾಲದ ಮಹಾದ್ವಾರಕ್ಕೆ ಹೊತ್ತಿಕೊಂಡೆ ಖಾಸಗಿ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದ್ದು ಮಹಾದ್ವಾರದ ಸೊಬಗು ಮಾಯವಾಗಲಿದೆ ಎನ್ನುವ ಆತಂಕ ಮೂಡಿದೆ.
ಐತಿಹಾಸಿಕ ಸ್ಮಾರಕಕ್ಕೆ ಹತ್ತಿಕೊಂಡೆ ಕಟ್ಟಡ ನಿರ್ಮಾಣ ಆಗುತ್ತಿರುವುದರಿಂದ ಮಹಾನಗರದ ಜನತೆಗೆ ಈಗಿನ ಮಹಾದ್ವಾರದ ಸೌಂದರ್ಯ ಸವಿಯಲಿಕ್ಕೆ ಸಾಧ್ಯಕ್ಕಾಗದು. ಮಹಾನಗರದ ಉದ್ಯಾನವಕ್ಕೆ ಪ್ರವೇಶಿಸುವ ನಿಟ್ಟಿನಲ್ಲಿ ಹೈದ್ರಾಬಾದ ನಿಜಾಂ ಉದ್ಯಾನವನಕ್ಕೆ ನಾಲ್ಕು ಮಹಾದ್ವಾರ ನಿರ್ಮಿಸಿದ್ದ.
ಇಂದು ಮೂರು ದ್ವಾರಗಳು ಒಂದಿಲ್ಲ ಒಂದು ಕಾರಣಕ್ಕೆ ಕಾಣದಂತೆ ಆಗಿವೆ. ಉಳಿದಿದ್ದು ಇದೊಂದೆ ಮಹಾದ್ವಾರವಾಗಿತ್ತು. ಈಗ ಅದಕ್ಕೂ ಧಕ್ಕೆ ಎದುರಾಗುವ ಪರಿಸ್ಥಿತಿ ಎದುರಾಗಿದೆ. ಐತಿಹಾಸಿಕ ಶರಣಬಸವೇಶ್ವರ ಕೆರೆ ನೀರು ಯಾವುದೇ ಮೋಟಾರಿನ ಸಹಾಯವಿಲ್ಲದಂತೆ ಉದ್ಯಾನವನದಲ್ಲಿರುವ ಗಿಡ ಮರಗಳಿಗೆ ನೀರು ಬರುವ ಹಾಗೆ ಕೆರೆ ಕೆಳಗಡೆ ಐತಿಹಾಸಿಕ ಮಹಿಬೂಬ ಷಾಹಿ ಗುಲನ್ ಉದ್ಯಾನವನ ನಿರ್ಮಿಸಲಾಗಿದೆ.
ಇದಕ್ಕೆ ಮೆರಗು ಎನ್ನುವಂತೆ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಉಳಿದಿರುವ ಏಕೈಕ ಮಹಾದ್ವಾರಕ್ಕೂ ಈಗ ಧಕ್ಕೆ ಎದುರಾಗುತ್ತಿದೆ. ಶತ-ಶತಮಾನದ ಈ ಮಹಾದ್ವಾರಕ್ಕೆ 20 ವರ್ಷಗಳ ಹಿಂದೆ ಬಣ್ಣ ಹಚ್ಚಿ ಸೌಂದರ್ಯ ಹೆಚ್ಚಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಹಾದ್ವಾರಕ್ಕೆ ಹತ್ತಿಕೊಂಡು ಬೆಳೆದಿರುವ ಗಿಡ ಕಂಟಿಗಳನ್ನು ಕಡಿದು ಹಾಕುತ್ತಿಲ್ಲ ಮಹಾನಗರ ಪಾಲಿಕೆ.
ಐತಿಹಾಸಿಕ ಸ್ಮಾರಕದ 200 ಮೀಟರ್ ವ್ಯಾಪ್ತಿಯೊಳಗೆ ಕಟ್ಟಡವಾಗಿರುವ ಎಲ್ಲ ಕಟ್ಟಡದಾರರಿಗೆ ತೆರವುಗೊಳಿಸಲು ಅಂತಿಮ ನೋಟಿಸ್ ನೀಡಿರುವ ಮಹಾನಗರ ಪಾಲಿಕೆಗೆ ಈ ಸ್ಮಾರಕಕ್ಕೆ ಹತ್ತಿಕೊಂಡೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಕಾಣುತ್ತಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಪರಿಶೀಲನೆ: ಈ ಮಹಾದ್ವಾರ ಐತಿಹಾಸಿಕವಾಗಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಲಾಗುವುದು. ಅಲ್ಲದೇ ಮಹಾದ್ವಾರಕ್ಕೆ ಹತ್ತಿಕೊಂಡೆ ಕಟ್ಟಡ ಕಟ್ಟಲಿಕ್ಕೆ ಅನುಮತಿ ನೀಡಲಾಗಿದೆಯೇ ಎನ್ನುವ ಕುರಿತು ದಾಖಲೆ ಪರಿಶೀಲಿಸಲಾಗುವುದು.
ಮಹಾದ್ವಾರದ ಎತ್ತರದಷ್ಟು ಕಟ್ಟಡವಂತೂ ಕಟ್ಟಲಿಕ್ಕಾಗದು. ಏಕೆಂದರೆ ಜಿ ಪ್ಲಸ್ ಟು ಹಂತಕ್ಕೆ ಮಾತ್ರ ಅನುಮತಿ ನೀಡಲಾಗಿರುತ್ತದೆ. ಒಟ್ಟಾರೆ ಮಹಾದ್ವಾರದ ಸೊಬಗು ಹಾಗೂ ಮಹಾದ್ವಾರಕ್ಕೆ ಯಾವುದೇ ನಿಟ್ಟಿನಲ್ಲಿ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ.
* ಹಣಮಂತರಾವ್ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.