ಕಲ್ಯಾಣ ರಾಗ


Team Udayavani, Jun 19, 2017, 11:47 AM IST

Kkalyan.jpg

ಇದುವರೆಗೆ ಗೀತೆಗಳನ್ನು ಬರೆಯುತ್ತ, ಸಂಗೀತ ನಿರ್ದೇಶನ ಮಾಡಿಕೊಂಡಿದ್ದ ಕೆ.ಕಲ್ಯಾಣ್‌, ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದು ಗೊತ್ತೇ ಇದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ ಕಲ್ಯಾಣ್‌. ಹೌದು, ಕೆ.ಕಲ್ಯಾಣ್‌ ಈಗ ಗಾಯಕರೂ ಆಗಿದ್ದಾರೆ. ಚಿತ್ರರಂಗಕ್ಕೆ ಬಂದು ಸುಮಾರು ಎರಡು ದಶಕಗಳನ್ನೇ ಕಳೆದಿರುವ ಕಲ್ಯಾಣ್‌, ಇದುವರೆಗೆ ಅವರು ಬರೆದ ಹಾಡುಗಳ ಸಂಖ್ಯೆ ಬರೋಬ್ಬರಿ ಮೂರು ಸಾವಿರಕ್ಕೂ ಹೆಚ್ಚು!

ಅವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಚಿತ್ರಗಳು ಈಗ ಅರ್ಧಸೆಂಚುರಿ ದಾಟಿವೆ. ಅಷ್ಟೇ ಅಲ್ಲ, ಸುಮಾರು 725 ಕ್ಕೂ ಹೆಚ್ಚು ಚಿತ್ರಗಳಿಗೆ ಕೆ.ಕಲ್ಯಾಣ್‌ ಗೀತೆಗಳನ್ನು ಬರೆದುಕೊಟಿದ್ದಾರೆ. ಈಗ ಹೊಸ ಸುದ್ದಿ ಏನೆಂದರೆ, ಅವರು ಗಾಯಕರಾಗಿದ್ದಾರೆ. ಸಾಮಾನ್ಯವಾಗಿ ಹಾಡು ಬರೆಯೋರು ಸಂಗೀತ ನಿರ್ದೇಶಕರಾಗೋದು ವಿರಳ. ಕೆ.ಕಲ್ಯಾಣ್‌ ಹಾಡು ಬರೆಯುತ್ತಲೇ ಸಂಗೀತ ನಿರ್ದೇಶನ ಮಾಡಿದವರು. ಈಗ ಇದೇ ಮೊದಲ ಸಲ ಚಿತ್ರವೊಂದಕ್ಕೆ ಹಾಡಿದ್ದಾರೆ.

ಹೊಸಬರೇ ಸೇರಿ ಮಾಡಿರುವ “ಜೊತೆಯಾಗಿರು’ ಎಂಬ ಸಿನಿಮಾದಲ್ಲಿ ಕೆ.ಕಲ್ಯಾಣ್‌ ಹಾಡುವ ಮೂಲಕ ತಾನೂ ಗಾಯಕ ಎನಿಸಿಕೊಂಡಿದ್ದಾರೆ. ಸತೀಶ್‌ ರೇ ನಿರ್ದೇಶನದ “ಜೊತೆಯಾಗಿರು’ ಚಿತ್ರದಲ್ಲಿ ವಿರಾಟ್‌ ವೆಂಕಟೇಶ್‌ ನಾಯಕರಾದರೆ, ರಶ್ಮಿ ನಾಯಕಿ. ಸುನೀಲ್‌ ಕಾಂಚನ್‌ ಸೇರಿದಂತೆ ಬಹುತೇಕ ಹೊಸ ಕಲಾವಿದರೇ ನಟಿಸಿದ್ದಾರೆ. ಚಿತ್ರಕ್ಕೆ ವಿನು ಮನಸು ಸಂಗೀತವಿದೆ. ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಹಾಡಿಗೆ ಕೆ.ಕಲ್ಯಾಣ್‌ ದನಿಯಾಗಿದ್ದಾರೆ.

ನಿರ್ದೇಶಕ ಸತೀಶ್‌ ರೇ ಅವರು ಬರೆದ, “ಊರ್‌ ತುಂಬ ಹುಡುಗೀರು, ನಮಗಂತ ಯಾರವರೊ, ಯಾವುದೂನು ಗೊತ್ತಾಗ್ತಿಲ್ವಲ್ಲ …’ ಎಂಬ ಟಪ್ಪಾಂಗುಚ್ಚಿ ಹಾಡಿಗೆ ಕೆ.ಕಲ್ಯಾಣ್‌ ತಮ್ಮ ದನಿ ಕೊಟ್ಟಿದ್ದಾರೆ. ಸ್ವತಃ ಸಂಗೀತ ನಿರ್ದೇಶಕರಾಗಿದ್ದರೂ ಕಲ್ಯಾಣ್‌, ಎಂದೂ ಹಾಡುವ ಪ್ರಯತ್ನ ಮಾಡಿರಲಿಲ್ಲ. ಟ್ರ್ಯಾಕ್‌ ಹಾಡಿ, ಗಾಯಕರಿಗೆ ಹೇಳಿ ಕೊಡುತ್ತಿದ್ದ ಕಲ್ಯಾಣ್‌ಗೆ, ಈ ಹೊಸಬರ ತಂಡ, ಒಮ್ಮೆಲೆ ಹಾಡಿ ಅಂತ ಪೀಡಿಸಿದ್ದರಿಂದ, “ಒಂದು ಪ್ರಯತ್ನ ಮಾಡುತ್ತೇನೆ,

ಚೆನ್ನಾಗಿಲ್ಲ ಎನಿಸಿದರೆ, ತೆಗೆದು ಬೇರೆ ಗಾಯಕರಿಂದ ಹಾಡಿಸಿ’ ಅಂದಿದ್ದರಂತೆ ಕಲ್ಯಾಣ್‌. ಕೊನೆಗೆ ಕಲ್ಯಾಣ್‌ ದನಿ ಕೇಳಿದ ತಂಡ, ಅವರ ವಾಯ್ಸ ಫಿಕ್ಸ್‌ ಮಾಡಿಬಿಟ್ಟಿದೆ. ಅಂದಹಾಗೆ, ಈ ಹಾಡು ಹಾಡುತ್ತಿದ್ದಂತೆಯೇ, ಈಗ ಇನ್ನೂ ಎರಡು ಸಿನಿಮಾಗಳಲ್ಲಿ ಹಾಡುವ ಕೋರಿಕೆಯೂ ಕಲ್ಯಾಣ್‌ಗೆ ಬಂದಿದೆ. ಈ ಚಿತ್ರಕ್ಕೆ  ವೆಂಕಟೇಶ್‌ ನಿರ್ಮಾಪಕರು. ರಾಜಾ ಶಿವಶಂಕರ್‌ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. 

ಟಾಪ್ ನ್ಯೂಸ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Priya: ʼಕುಂಭ ಸಂಭವʼದಲ್ಲಿ ಪೊಲೀಸ್‌ ಗಿರಿಜಾ

Priya: ʼಕುಂಭ ಸಂಭವʼದಲ್ಲಿ ಪೊಲೀಸ್‌ ಗಿರಿಜಾ

Manada Kadalu: ಯುವ ಜೋಡಿಗಳ ʼಮನದ ಕಡಲುʼ; ಮತ್ತೆ ಒಂದಾದ ಮುಂಗಾರು ಮಳೆ ಟೀಂ

Manada Kadalu: ಯುವ ಜೋಡಿಗಳ ʼಮನದ ಕಡಲುʼ; ಮತ್ತೆ ಒಂದಾದ ಮುಂಗಾರು ಮಳೆ ಟೀಂ

Sandalwood: ತೆರೆಮೇಲೆ ʼಅನಾಥʼನ ಕನಸು

Sandalwood: ತೆರೆಮೇಲೆ ʼಅನಾಥʼನ ಕನಸು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

6

Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್‌ ನಿಲ್ದಾಣವೇ ಇಲ್ಲ !

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

5

Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!

4

Sullia: ಉಪಟಳ ಮಾಡುವ ಕೋತಿಗಳಿಗೆ ಶಾಕ್‌ ಟ್ರೀಟ್‌ಮೆಂಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.