ಮೊದಲ ಸಲ ಅರ್ಜುನ್ ಜನ್ಯ ಹಿನ್ನೆಲೆ ಧ್ವನಿ
Team Udayavani, Jun 19, 2017, 11:47 AM IST
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಎಷ್ಟೋ ಚಿತ್ರಗಳಲ್ಲಿ ಹಾಡಿದ್ದಾರೆ. ಕೆಲ ಚಿತ್ರಗಳಲ್ಲಿ ಅತಿಥಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಈಗ ಹೊಸ ಸುದ್ದಿ ಏನಪ್ಪಾ ಅಂದರೆ, ಇದೇ ಮೊದಲ ಸಲ “ಡಮ್ಕಿ ಢಮಾರ್’ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಹೌದು, ಪ್ರದೀಪ್ ವರ್ಮ ನಟಿಸಿ, ನಿರ್ದೇಶಿಸಿರುವ “ಡಮ್ಕಿ ಢಮಾರ್’ ಚಿತ್ರ ಶುರುವಾಗೋದೇ ಅರ್ಜುನ್ ಜನ್ಯ ಅವರ ಧ್ವನಿಯಿಂದ. ಚಿತ್ರ ಮುಗಿಯೋದು ಕೂಡ ಅವರ ಧ್ವನಿಯಿಂದಲೇ.
ಅಂದಹಾಗೆ, ಈ ಚಿತ್ರದಲ್ಲಿ ಅರ್ಜುನ್ ಜನ್ಯ ಅವರು ಚಿತ್ರದ ಕಥೆ ಮತ್ತು ಪಾತ್ರಗಳ ಪರಿಚಯ ಮಾಡಿಕೊಟ್ಟಿದ್ದಾರೆ. “ಮಂಡೇ ಟು ಫ್ರೈಡೆ ಎಲ್ಲರೂ ಕೆಲಸ ಮಾಡ್ತಾರೆ. ಆದರೆ, ವೀಕೆಂಡ್ ಬಂದಾಗ ಕೆಲವರು ಬಾರು, ಪಬ್ಬು, ಲಾಂಗ್ ಡ್ರೈವ್ ಮಾಡ್ತಾರೆ. ಹೀಗೇ ಈ ಚಿತ್ರದ ನಾಯಕ ಕೂಡ ವೀಕೆಂಡ್ ಸೆಲೆಬ್ರೆಟ್ ಮಾಡ್ತಾರೆ. ಆದರೆ, ಅವರು ಹೇಗೆ ಮಾಡ್ತಾರೆ ನೋಡಿ …’ ಎಂಬ ಅರ್ಜುನ್ ಜನ್ಯ ಅವರ ಧ್ವನಿಯಿಂದ ಸಿನಿಮಾ ಶುರವಾಗುತ್ತೆ.
ಸಿನಿಮಾದಲ್ಲಿ ನಾಯಕಿ ಕಾಯುತ್ತಿರುವಾಗ, ಪುನಃ ಅರ್ಜುನ್ ವಾಯ್ಸ ಶುರುವಾಗುತ್ತೆ. “ಇವಳು ಚಿತ್ರದ ನಾಯಕಿ. ಹೆಸರು ವೇದ. ಇವಳು ತನ್ನ ಪಾಟ್ನìರ್ಗೊàಸ್ಕರ ಕಾಯ್ತಾ ಇದ್ದಾರೆ. ಈಕೆಯ ಪಾಟ್ನರ್ ಯಾವುದೋ ಸಾಂಗ್ ರೆಕಾರ್ಡಿಂಗ್ನಲ್ಲಿ ಬಿಜಿ ಇದ್ದಾರೆ. ಈಗ ಬರ್ತಾರೆ ನೋಡಿ …’ ಎನ್ನುವ ಮೂಲಕ ಚಿತ್ರ ನೋಡಿಸಿಕೊಂಡು ಹೋಗುತ್ತೆ. ಕೊನೆಯಲ್ಲಿ ಮತ್ತೆ ಅರ್ಜುನ್ ಜನ್ಯ ಧ್ವನಿ ಕೇಳಿಸುತ್ತೆ.
ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಟಿಸಿ, ನಿರ್ದೇಶಿಸಿರುವ ಪ್ರದೀಪ್ ವರ್ಮ ಅವರಿಗೆ ಚೈತ್ರಾ ಶೆಟ್ಟಿ ನಾಯಕಿ. ಚಿತ್ರದಲ್ಲಿ “ನಾನೊಬ್ನೇ ಒಳ್ಳೇವ್ನು’ ಚಿತ್ರದ ನಾಯಕ ವಿಜಯ್ ಮಹೇಶ್, “5ಜಿ’ ಚಿತ್ರದ ನಿರ್ಮಾಪಕ ಜಗದೀಶ್, ಜಗದೀಶ್ ವೆಂಕಿ, ಅನುಷ್ಕಾ ಶೆಟ್ಟಿ, ಇಂಚರ ಮೋಹನ್ ಸೇರಿದಂತೆ ಬಹುತೇಕ ಹೊಸಬರು ನಟಿಸಿದ್ದಾರೆ.
ಚಿತ್ರಕ್ಕೆ ಯು ಸರ್ಟಿಫಿಕೆಟ್ ಸಿಕ್ಕಿದ್ದು, ಜುಲೈನಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ ಚಿತ್ರತಂಡ. ಚಿತ್ರದ ಮೂರು ಹಾಡುಗಳಿಗೆ ಸಾಯಿ ಸರ್ವೇಶ್, ಪ್ರದೀಪ್ ವರ್ಮ ಸಾಹಿತ್ಯವಿದೆ. ಸಂಗೀತವನ್ನೂ ಪ್ರದೀಪ್ ವರ್ಮ ಅವರೇ ನೀಡಿದ್ದಾರೆ. ಸದ್ಗುಣ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುಂದರ್ ನಿರ್ಮಾಣಕ್ಕೆ ಸಾಥ್ ಕೊಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.