ವಾರ್ಡ್‌ ಸಮಿತಿ ಮೇಲೆ ಕಾರ್ಪೊರೇಟರ್‌ಗಳ ಹಿಡಿತ?


Team Udayavani, Jun 19, 2017, 12:33 PM IST

bbmp-ward-comeetee.jpg

ಬೆಂಗಳೂರು: ಬಿಬಿಎಂಪಿಯಲ್ಲಿ ಇಪ್ಪತ್ತೈದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಾರ್ಡ್‌ ಸಮಿತಿಗಳ ರಚನೆ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಸಮಿತಿಯ ಬಲವನ್ನು ಕುಗ್ಗಿಸಲು ಮುಂದಾಗಿರುವ ಜನಪ್ರತಿನಿಧಿಗಳು ಸಮಿತಿಗಳಿಗೆ ತಮ್ಮ ಬೆಂಬಲಿಗರನ್ನೆ ಸದಸ್ಯರನ್ನಾಗಿಸಲು ಮುಂದಾಗಿರುವುದು ಟೀಕೆಗೆ ಕಾರಣವಾಗಿದೆ. 

ಸ್ಥಳೀಯ ಮಟ್ಟದ ಆಡಳಿತದಲ್ಲಿ ಪಾರದರ್ಶಕತೆ ತರುವುದು ಮತ್ತು ಆಡಳಿತದಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳುವಂತೆ ಮಾಡುವುದು ವಾರ್ಡ್‌ ಸಮಿತಿಯ ಪರಿಕಲ್ಪನೆಯಾಗಿದೆ. ಅದರ ಹಿನ್ನೆಲೆಯಲ್ಲಿ ಸಮಾಜದ ವಿವಿಧ ಸ್ತರಗಳನ್ನು ಪ್ರತಿನಿಧಿಸುವವರು ಸಮಿತಿಯಲ್ಲಿರಬೇಕು ಎಂಬ ನಿಯಮವಿದೆ. ಆದರೆ, ಇದಕ್ಕೆ ಅವಕಾಶ ನೀಡಲು ಸಿದ್ಧವಿರದ ಪಾಲಿಕೆ ಸದಸ್ಯರು ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರನ್ನು ಸದಸ್ಯರಾಗಿ ನೇಮಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. 

ಹೈಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ 198 ವಾರ್ಡ್‌ಗಳಲ್ಲಿ ಸಮಿತಿಗಳ ರಚಿಸಲು ಬಿಬಿಎಂಪಿ ಮುಂದಾಗಿದೆ. ಅದರ ಹಿನ್ನೆಲೆಯಲ್ಲಿ ಇತ್ತೀಚೆಗೆ ಮೇಯರ್‌ ಎಲ್ಲ ಪಾಲಿಕೆ ಸದಸ್ಯರಿಗೆ ವಾರ್ಡ್‌ ಸಮಿತಿಗೆ ಸದಸ್ಯರ ಪಟ್ಟಿ ನೀಡುವಂತೆ ಸೂಚಿಸಿರುವುದು ನಾಗರಿಕರ ಕೋಪಕ್ಕೆ ಕಾರಣವಾಗಿದೆ. ಕೆಎಂಸಿ ಕಾಯ್ದೆಯಂತೆ ವಾರ್ಡ್‌ ಸಮಿತಿಗೆ ಸದಸ್ಯರನ್ನು ನೇಮಿಸುವ ಅಧಿಕಾರ ಆಯುಕ್ತರದ್ದಾಗಿದೆ. ಹೀಗಿದ್ದರೂ ಮೇಯರ್‌ ಪಾಲಿಕೆ ಸದಸ್ಯರಿಗೆ ಪಟ್ಟಿ ನೀಡುವಂತೆ ಸೂಚಿಸಿರುವ ಬಗ್ಗೆ ಕೆಲ ನಾಗರಿಕ ಸಂಸ್ಥೆಗಳು ಬೇಸರ ವ್ಯಕ್ತಪಡಿಸಿವೆ. 

ವಾರ್ಡ್‌ ಸಮಿತಿಗಳ ರಚನೆಗೆ ಮುಂದಾಗಿರುವ ಪಾಲಿಕೆ ಈವರೆಗೆ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿಯನ್ನೇ ಒದಗಿಸಿಲ್ಲ. ವಾರ್ಡ್‌ ಸಮಿತಿ ರಚನೆ ಮಾಡುತ್ತಿರುವ ಬಗ್ಗೆ ಯಾವುದೇ ಪ್ರಚಾರ ಕಾರ್ಯವನ್ನೂ ನಡೆಸಿಲ್ಲ. ಪಾಲಿಕೆ ಸದಸ್ಯರು ವಾರ್ಡ್‌ ಸಮಿತಿಯ ಮಹತ್ವ ಕುಗ್ಗಿಸಲು ಷಡ್ಯಂತ್ರಕ್ಕೆ ಮುಂದಾಗಿದ್ದಾರೆ ಎಂದು ನಾಗರಿಕ ಸಂಸ್ಥೆಗಳು ದೂರಿವೆ. 

ಇದರೊಂದಿಗೆ ವಲಯ ಮಟ್ಟದಲ್ಲಿ ವಾರ್ಡ್‌ ಸಮಿತಿಯ ಸದಸ್ಯರಾಗಲು ಬಯಸುವ ನಾಗರಿಕರು ಪಾಲಿಕೆ ಸದಸ್ಯರು ಹಾಗೂ ಜಂಟಿ ಆಯುಕ್ತರಿಗೆ ಅರ್ಜಿಗಳನ್ನು ನೀಡಲು ಮುಂದಾದರೆ, ಈಗಾಗಲೇ ಸದಸ್ಯರ ಆಯ್ಕೆ ಪ್ರಕ್ರಿಯೆ ಮುಗಿದಿದೆ ಎಂದು ಅರ್ಜಿಗಳನ್ನು ಸ್ವೀಕರಿಸದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

ನೇಮಕ ಪ್ರಕ್ರಿಯೆಯೇ ಇಲ್ಲ!: ವಾರ್ಡ್‌ ಸಮಿತಿಗೆ ಸದಸ್ಯರ ಆಯ್ಕೆಗೆ ಬಿಬಿಎಂಪಿ ಮುಂದಾಗಿದೆ. ಆದರೂ, ಸದಸ್ಯರ ನೇಮಕವನ್ನು ಯಾವ ಪ್ರಕ್ರಿಯೆ ಮೂಲಕ ಮಾಡುತ್ತಿದೆ ಎಂಬುದನ್ನೇ ತಿಳಿಸಿಲ್ಲ. ಇದರೊಂದಿಗೆ ವಾರ್ಡ್‌ ಸಮಿತಿಗಳ ರಚನೆಗೆ ಮುಂದಾಗಿರುವ ಕುರಿತು ಪ್ರಚಾರ ನೀಡಲು ಅಧಿಕಾರಿಗಳು ಮುಂದಾಗಿಲ್ಲ. ಸದಸ್ಯರಾಗಲು ಬಯಸುವವರು ಯಾವೆಲ್ಲ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು, ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಹೀಗೆ ಯಾವುದೇ ನಿಯಮಗಳನ್ನು ರೂಪಿಸಿಲ್ಲ. 

ಪಾಲಿಕೆಗೆ ಬಂದ ಸಾವಿರಾರು ಅರ್ಜಿಗಳು!: ಹೈಕೋರ್ಟ್‌ ಆದೇಶಕ್ಕೂ ಮೊದಲೇ ಪಾಲಿಕೆಗೆ ನೂರಾರು ನಾಗರಿಕರು ಸಮಿತಿಗೆ ಸದಸ್ಯರಾಗಲು ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಆದೇಶದ ನಂತರವೂ ಸಾವಿರಾರು ಅರ್ಜಿಗಳು ಪಾಲಿಕೆಗೆ ಬಂದಿವೆ. ಪಾಲಿಕೆಗೆ ಸದಸ್ಯರು ಹಾಗೂ ಪಾಲಿಕೆ ಅಧಿಕಾರಿಗಳಿಗೆ ಅರ್ಜಿ ನೀಡಿದರೆ ಕಡೆಗಣಿಸುತ್ತಾರೆ ಎಂಬ ಸಂಶಯದಿಂದ ಹೆಚ್ಚಿನ ಸಂಖ್ಯೆಯ ನಾಗರಿಕರು ನೇರವಾಗಿ ತಮ್ಮ ಅರ್ಜಿಗಳನ್ನು ಬಿಬಿಎಂಪಿ ಆಯುಕ್ತರ  ಕಚೇರಿಗೆ ನೀಡಿದ್ದಾರೆ. ಬಿಬಿಎಂಪಿ ಆಯುಕ್ತರು ಯಾವ ಮಾನದಂಡಗಳ ಆಧಾರದ ಮೇಲೆ ಸಮಿತಿಗೆ ಸದಸ್ಯರನ್ನು ನೇಮಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. 

ಪಾಲಿಕೆ ಸದಸ್ಯರ ಆತಂಕವೇನು?: ವಾರ್ಡ್‌ ಸಮಿತಿಯ ಸದಸ್ಯರು ವಾರ್ಡ್‌ನಲ್ಲಿ ನಡೆಯುವ ಪ್ರತಿಯೊಂದು ಕಾಮಗಾರಿಯ ಪರಿಶೀಲನೆ ಹಾಗೂ ಉಸ್ತುವಾರಿ ನಡೆಸುವ ಅವಕಾಶವಿದೆ. ಇದರೊಂದಿಗೆ ಕಾಮಗಾರಿಯಲ್ಲಿ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಲೆಕ್ಕ ಪರಿಶೋಧನೆ ವರದಿ ಪಡೆದು ಪರಿಶೀಲನೆ ನಡೆಸಬಹುದು. ಇದರಿಂದ ವಾರ್ಡ್‌ನಲ್ಲಿ ಪಾಲಿಕೆ ಸದಸ್ಯರ ವರ್ಚಸ್ಸು ಕಡಿಮೆಯಾಗಲಿದೆ ಎಂಬ ಆತಂಕ ಒಂದೆಡೆ.

ಪಾಲಿಕೆ ಸದಸ್ಯರು ಸಾರ್ವಜನಿಕರ ಕುಂದು * ಕೊರತೆಗಳಿಗೆ ಸ್ಪಂದಿಸದಿದ್ದರೆ ಸಮಿತಿ ಸದಸ್ಯರು ಪಾಲಿಕೆ ಸದಸ್ಯರ ಹೊಣೆಗಾರಿಕೆಯನ್ನು ಪ್ರಶ್ನಿಸಬಹುದು. ಇಂತಹ ಸಂದರ್ಭದಲ್ಲಿ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಪಾಲಿಕೆ  ಸದಸ್ಯರು ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರನ್ನೇ ಸಮಿತಿ ಸದಸ್ಯರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. 

ವಾರ್ಡ್‌ ಸಮಿತಿಯಲ್ಲಿ ಯಾರಿರುತ್ತಾರೆ?: ವಾರ್ಡ್‌ ಸಮಿತಿಗೆ ಆಯಾ ವಾರ್ಡ್‌ನ ಚುನಾಯಿತ ಕಾರ್ಪೊರೇಟರ್‌ ಅಧ್ಯಕ್ಷರಾಗಿರಲಿದ್ದಾರೆ. ವಿವಿಧ ಸ್ತರಗಳನ್ನು ಪ್ರತಿನಿಧಿಸುವ 10 ಮಂದಿ ಸದಸ್ಯರು ಇರುತ್ತಾರೆ. ಸಮಿತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 2 ಸದಸ್ಯರು, 3 ಮಹಿಳೆಯರು, 2 ನೋಂದಾಯಿತ ಸಂಘ ಸಂಸ್ಥೆಗಳು ಇರಲೇಬೇಕು. ಇದರೊಂದಿಗೆ ಇತರೆ 3 ಸದಸ್ಯರನ್ನು ನೇಮಿಸಿಕೊಳ್ಳಬಹುದಾಗಿದೆ. 

ಆಯ್ಕೆ ಸಮಿತಿ ರಚಿಸಿ
ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿ ವಾರ್ಡ್‌ ಸಮಿತಿ ರಚನೆಗೆ ಮುಂದಾಗಿದೆ. ಆದರೆ, ಸಮಿತಿಗೆ ಸದಸ್ಯರ ಆಯ್ಕೆ ವಿಧಾನದ ಕುರಿತು ಈವರೆಗೆ ಯಾವುದೇ ಮಾಹಿತಿಯನ್ನು ಪಾಲಿಕೆ ನೀಡಿಲ್ಲ. ಜನಪ್ರತಿನಿಧಿಗಳು ಸೂಚಿಸುವರನ್ನೇ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಸಮಾಜದ ಪ್ರಮುಖರ ಸಮಿತಿ ರಚಿಸಿ, ಆ ಮೂಲಕ ವಾರ್ಡ್‌ ಸಮಿತಿಗೆ ಸದಸ್ಯರನ್ನು ನೇಮಿಸಬೇಕು. ಜತೆಗೆ ಅರ್ಜಿ ಸ್ವೀಕರಿಸಲು ನಿಗದಿ ಪಡಿಸಿರುವ ದಿನಾಂಕವನ್ನು ಜೂ.20ರವರೆಗೆ ವಿಸ್ತರಿಸಬೇಕು.
-ಕಾತ್ಯಾಯಿನಿ ಚಾಮರಾಜ್‌, ಸಿವಿಕ್‌ ಸಂಸ್ಥೆಯ ಕಾರ್ಯಕಾರಿಣಿ ಟ್ರಸ್ಟಿ

ಪಾಲಿಕೆ ಸದಸ್ಯರು ತಮಗೆ ಬೇಕಾದವರನ್ನೇ ವಾರ್ಡ್‌ ಸಮಿತಿಗೆ ಆಯ್ಕೆ ಮಾಡಿ ಪಟ್ಟಿ ಸಿದ್ಧಪಡಿಸಿರುವುದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದರೊಂದಿಗೆ ಸದಸ್ಯರಾಗಲು ಬಯಸುವವರು ನೇರವಾಗಿ ಕೇಂದ್ರ ಕಚೇರಿಗೆ ಅರ್ಜಿಗಳನ್ನು ನೀಡಬಹುದಾಗಿದೆ. 
-ಸಫ‌ರಾಜ್‌ ಖಾನ್‌, ಜಂಟಿ ಆಯುಕ್ತ ಘನತ್ಯಾಜ್ಯ ಮತ್ತು ಆರೋಗ್ಯ

ವಾರ್ಡ್‌ ಸಮಿತಿಯ ಅನುಕೂಲಗಳೇನು?
* ವಾರ್ಡ್‌ನ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಲು ಸಮಿತಿ ವೇದಿಕೆಯಾಗಲಿದೆ 
* ಪ್ರತಿ ತಿಂಗಳು ಸಮಿತಿ ಸಭೆ ನಡೆಯುವುದರಿಂದ ನಾಗರಿಕರ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ 
* ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧ ಸಮಿತಿ ಕ್ರಮ ಕೈಗೊಳ್ಳಬಹುದು. 
* ತಿಂಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಮೇಲೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಬಹುದು. 
* ಸಾರ್ವಜನಿಕರು ಸಲ್ಲಿಸುವ ಕುಂದು ಕೊರತೆಗಳಿಗೆ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳು ವರದಿ ನೀಡಬೇಕು 
* ಪಾಲಿಕೆ ಸದಸ್ಯರು ಸಭೆ ಕರೆಯದಿದ್ದರೆ 1/3ರಷ್ಟು ಸದಸ್ಯರು ಸಭೆ ನಡೆಸುವಂತೆ ಪಾಲಿಕೆ ಸದಸ್ಯರಿಗೆ ತಿಳಿಸಬಹುದು. 
* ವಾರ್ಡ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಸಮಿತಿ ಸದಸ್ಯರು ಪರಿಶೀಲನೆ ಮತ್ತು ಉಸ್ತುವಾರಿ ನಡೆಸಬಹುದು. 
* ಕಾಮಗಾರಿಗಳ ಪರಿಶೀಲನೆ ವೇಳೆ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿರುವುದು ಕಂಡು ಬಂದರೆ ಕ್ರಮಕ್ಕೆ ಮುಂದಾಗಬಹುದು.
* ಇದರಿಂದಾಗಿ ಕಾಮಗಾರಿಗಳಲ್ಲಿ ಗುಣಮಟ್ಟ ಹಾಗೂ ಭ್ರಷ್ಟಾಚಾರ ಪ್ರಮಾಣ ಕಡಿಮೆಯಾಗಲಿದೆ.
* ಲೆಕ್ಕ ಪರಿಶೋಧನೆ ವರದಿ ಪರಿಶೀಲನೆ ನಡೆಸಬಹುದು. 
* ಪಾಲಿಕೆ ಸದಸ್ಯರ ಹೊಣೆಗಾರಿಕೆಯನ್ನು ಸದಸ್ಯರು ಪ್ರಶ್ನಿಸಬಹುದು. 
* ವಾರ್ಡ್‌ನ ಎಲ್ಲ ಸದಸ್ಯರು ತಿಂಗಳ ಸಮಿತಿ ಸಭೆಯನ್ನು ವೀಕ್ಷಣೆ ಮಾಡಬಹುದು. 

* ವೆಂ.ಸುನೀಲಕುಮಾರ್‌

ಟಾಪ್ ನ್ಯೂಸ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.