ಪುಂಡಾನೆಗಳ ಪಳಗಿಸೋ ಏಕೈಕ ಶಿಬಿರ

Team Udayavani, Jun 19, 2017, 1:06 PM IST

mys5.jpg

ಹುಣಸೂರು: ಎಂತಹ ಪುಂಡಾನೆಗಳಾದರೂ ಹೆಡೆಮುರಿಕಟ್ಟಿ ಪಳಗಿಸಲೂ ಸೈ ಎನಿಸಿರುವ ಇಲ್ಲಿನ ಮಾವುತರು-ಕವಾಡಿಗಳು ಇದೀಗ ಏಳು ಮಂದಿಯನ್ನು ಬಲಿ ಪಡೆದಿದ್ದ ಮದಗಜ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಸಲಗವನ್ನು ಸಲಹುವ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಇದೀಗ ಮಾವುತರ ಸಂಜ್ಞೆ(ಆದೇಶ)ಯನ್ನು ಕರಗತ ಮಾಡಿಕೊಂಡಿರುವ ಸಲಗ ಸಂಜ್ಞೆಗೆ ತಕ್ಕ ಹೆಜ್ಜೆ ಹಾಕುತ್ತಿದ್ದರೆ, ಮತ್ತೂಂದು ಕ್ರಾಲ್ನಲ್ಲೇ ಪಳಗಿಸಲಾಗುತ್ತಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಅಂಡೆ ಕುರುಬನದೊಡ್ಡಿಯಲ್ಲಿ ಸುಮಾರು 45 ವರ್ಷದ ಮದಗಜವನ್ನು 2016ರ ನವಂಬರ್‌ 10 ರಂದು ಸೆರೆ ಹಿಡಿದು ತಂದು ಪಳಗಿಸಿ ಹೇಳಿದಂತೆ ಕೇಳುವಂತೆ ಮಾಡುವಲ್ಲಿ ಯಶಕಂಡಿದ್ದಾರೆ.

ಇನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈರಾಪುರ ಗಸ್ತಿನ ಸುತ್ತಮುತ್ತಲಿನ ಕಾಫಿ ಎಸ್ಟೇಟ್‌ಗಳಲ್ಲಿ ಉಪಟಳ ನೀಡುತ್ತಿದ್ದ ಸುಮಾರು 30 ವರ್ಷದ ಗಂಡಾನೆಯನ್ನು 2017 ಮಾ.17 ಸೆರೆ ಹಿಡಿದು ತರಲಾಗಿತ್ತು. ಅಂದಿನಿಂದಲೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡುವಲಯದ ಕಂಠಾಪುರ ಆನೆಗಳ ಪಾಠ (ಕ್ರಾಲ್‌)ಶಾಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ತರಬೇತಿ ನೀಡಲಾಗುತ್ತಿದ್ದು, ಇದಕ್ಕೆ ಪ್ರೀತಿಯಿಂದ ರಾಮಯ್ಯನೆಂದು ನಾಮಕರಣ ಮಾಡಲಾಗಿದೆ.

ಕೊಳ್ಳೆಗಾಲ ಸುತ್ತಮುತ್ತಲಿನ ಕಾಡಂಚಿನಲ್ಲಿ 7 ಮಂದಿ ಬಲಿಪಡೆದಿದ್ದ ಮದಗಜಕ್ಕೆ ಮಾವುತ ವಸಂತ ಹಾಗೂ ಕವಾಡಿ ರವಿ ಅಂಕುಶ ಹಿಡಿದು ಕಾಡಿನೊಳಗೆ ಅಡ್ಡಾಡುವ ಪಾಠ ಹೇಳಿಕೊಡುತ್ತಿದ್ದರೆ. ಮೂಡಿಗೆರೆ ಎಸ್ಟೇಟ್‌ಗಳಲ್ಲಿ ಉಪಟಳ ನೀಡುತ್ತಿದ್ದ ಗಂಡಾನೆಗೆ ಮಾವುತ ಲಿಂಗಪ್ಪ, ಕವಾಡಿ ರಾಮು  ಕ್ರಾಲ್‌ನೊಳಗೆ ಬಂಧಿಸಿ, ಪಾಠ ಹೇಳಿಕೊಡುತ್ತಿದ್ದು, ಆಗಾಗ್ಗೆ  àಳಿಡುತ್ತಾ, ನೋಡಲು ಬಂದವರತ್ತ ಕಾಲಕೆಳಗಿನ ಮಣ್ಣನ್ನು ಸೊಂಡಲಿನಿಂದ ಎರಚುತ್ತಾ, ನಿಧಾನವಾಗಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ.

ಏನಿದು ಕ್ರಾಲ್‌: ಮಾನವನ ಪ್ರಾಣ, ಆಸ್ತಿ-ಪಾಸ್ತಿಗಳಿಗೆ ಹಾನಿಯಾದಾಗ ಅಂತಹ ಮದಗಜಗಳನ್ನು ಸೆರೆ ಹಿಡಿದು, ಸಾಕಾನೆ ಶಿಬಿರಗಳಿಗೆ ತಂದು ಹೊರ ಬಿಡುವುದಕ್ಕೂ ಮುನ್ನ ಒಂದೇ ಸಮನಾದ ಗುಣಮಟ್ಟದ ಮರಗಳಿಂದ ತಯಾರಿಸಲಾಗಿರುವ ಉದ್ದನೆಯ ಪೋಲ್ಸ್‌ಗಳನ್ನು (ಗೇಟ್‌ ಮಾದರಿಯಲ್ಲಿ) ಪೇರಿಸಿ ಅದರೊಳಗೆ ಪುಂಡಾಟ ನಡೆಸಿದ್ದ ಆನೆಗಳನ್ನು ಕೂಡಿ ಹಾಕುವುದೇ ಕ್ರಾಲ್‌. ಮಾವುತರು-ಕವಾಡಿಗಳು ಆನೆಗಳು ಕ್ರಾಲ್‌ನೊಳಗೆ ನಿಂತಲ್ಲಿಯೇ ಇಂತಹ ಆನೆಗಳಿಗೆ ಆಹಾರ ನೀಡುತ್ತಾರೆ, ಇದೊಂತರ ಮನುಷ್ಯರನ್ನು ಕೂಡಿ ಹಾಕುವ ಬಂಧಿಖಾನೆ ಇದ್ದಂತೆ.

ನಿತ್ಯದ ಆಹಾರ: ವಿವಿಧ ಜಾತಿಯ ಮರಗಳ ಸೊಪ್ಪು, ನೀರು, ಜೊತೆಗೆ ಹುರಳಿ, ಕುಸಬಲಕ್ಕಿ, ಬೆಲ್ಲ, ರುಚಿಗೆತಕ್ಕ ಉಪ್ಪು ಸೇರಿಸಿ ಉಂಡೆಕಟ್ಟಿ ನೀಡುವುದು, ಇದರೊಂದಿಗೆ ಭತ್ತವನ್ನು ಹುಲ್ಲಿನೊಂದಿಗೆ ಕುಸರೆ(ಉಂಡೆ) ಕಟ್ಟಿ ಮಿತ‌ವಾಗಿ ನೀಡಲಾಗುತ್ತದೆ. ಆದರೆ ಇದೇ ಮಾದರಿಯಲ್ಲೇ ಸಾಕಾನೆಗಳು ದೈನಂದಿನ ಆಹಾರದೊಂದಿಗೆ ಕವಾಡಿ ಮಾವುತರೊಂದಿಗೆ ಕಾಡಿನೊಳಕ್ಕೆ ತೆರಳುವುದರಿಂದ ಅಲ್ಲಿ ಮೇಯ್ದು ಮತ್ತಷ್ಟು ಸೊಪ್ಪನ್ನು ಹೊತ್ತು ತರುವುದರಿಂದ ಪ್ರತಿನಿತ್ಯ ಕನಿಷ್ಠ 300-400 ಕೆಜಿಯಷ್ಟು ವಿವಿಧ ಜಾತಿಯ ಸೊಪ್ಪನ್ನು ತಿನ್ನುತ್ತವೆ.

ಒಂದಕ್ಕೆ ಬಿಡುಗಡೆ, ಮತ್ತೂಂದಕ್ಕೆ ಕೈಲು(ಕ್ರಾಲ್‌)ವಾಸ: ಕಳೆದ ಆರು ತಿಂಗಳಹಿಂದೆ ಕ್ರಾಲ್‌ನೊಳಗಿದ್ದ ಮದಗಜ ಇದೀಗ ತನ್ನ ಕೋಪ-ತಾಪವನ್ನು ನಿಗ್ರಹಿಸಿಕೊಂಡಿದ್ದರಿಂದ ಕ್ರಾಲ್‌ನಿಂದ ಹೊರಕ್ಕೆ ಬಿಟ್ಟು ಕಾಲಿಗೆ ಸರಪಳಿ ಹಾಕಿ ಶಿಬಿರದಲ್ಲಿ ಮಾವುತ-ಕವಾಡಿಗಳು ಅಂಕುಶಹಿಡಿದು ಅತ್ತಿಂದಿತ್ತ ಓಡಾಡಿಸುತ್ತಿದ್ದರೆ, ಮತ್ತೂಂದು ಗಂಡಾನೆಯನ್ನು ಇನ್ನೂ ಕ್ರಾಲ್‌ನೊಳಗಿಟ್ಟು ಮಿತ ಆಹಾರ ನೀಡಿ ಹೇಳಿದಂತೆ ಕೇಳಲು ಮಾಡಲು ಶ್ರಮ ಹಾಕಲಾಗುತ್ತದೆ.

ತಿಂಗಳ ಮರಿ: ಇದೀಗ ಮತ್ತಿಗೋಡು ವಲಯದ ಕಂಠಾಪುರ ಸಾಕಾನೆ ಶಿಬಿರದಲ್ಲಿ ಅಂತರಸಂತೆ ವಲಯದಲ್ಲಿ ತಾಯಿಯಿಂದ ಬೇರ್ಪಟ್ಟು ಅರಣ್ಯದಂಚಿನಲ್ಲಿ ತಾಯಿಗಾಗಿ ಹಂಬಲಿಸುತ್ತಿದ್ದ ಎರಡು ತಿಂಗಳ ಹಾಲು ಕುಡಿಯುವ ಮರಿಯಾನೆಯಿಂದ ಹಿಡಿದು ವಿಶ್ವ ವಿಖ್ಯಾತ ದಸರಾ ಜಂಬೂಸವಾರಿಗೆ ತೆರಳುವ ಸಾಕಾನೆಗಳಿಗೂ ಇಲ್ಲಿಯೇ ಆಶ್ರಯ ನೀಡಲಾಗಿದೆ.

ಶಿಬಿರದಲ್ಲಿ ಒಟ್ಟು 36 ಆನೆಗಳಿವೆ. ಇದರೊಂದಿಗೆ ಇತ್ತಿಚೆಗೆ ತಂದ ಆನೆ (ರಾಮಯ್ಯ) ಹಾಗೂ ಕೊಳ್ಳೆಗಾಲದ ಬಳಿ ಸೆರೆಸಿಕ್ಕ ಆನೆ ಸೇರಿ ಆನೆಗಳ ಸಂಖ್ಯೆ 38ಕ್ಕೇರಲಿದ್ದು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿವೆ.
-ಕಿರಣ್‌ಕುಮಾರ್‌, ವಲಯ ಅರಣ್ಯಾಧಿಕಾರಿ ಮತ್ತಿಗೋಡು ವಲಯ.

* ಸಂಪತ್‌ಕುಮಾರ್‌

ಟಾಪ್ ನ್ಯೂಸ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.