ಸಾವಿನ ವಿಷಯದೊಂದಿಗೆ ಭಾರತೀಯ ತತ್ವಶಾಸ್ತ್ರ ಉಗಮ


Team Udayavani, Jun 19, 2017, 1:06 PM IST

mys2.jpg

ಮೈಸೂರು: ಪ್ರಸ್ತುತ ಭಾರತೀಯ ಬರಹಗಾರರು ನಿಜವಾದ ತಾತ್ವಿಕ ಮತ್ತು ಸಾಮಾಜಿಕ ಸಮಸ್ಯೆಗಳ ನಡುವಿನ ವ್ಯತ್ಯಾಸ ಗುರುತಿಸಲು ಸಾಧ್ಯವಾಗದ ಪರಿಣಾಮ, ಆಳವಾದ ಬರವಣಿಗೆ ಹಾಗೂ ತತ್ವಶಾಸ್ತ್ರದ ಮಟ್ಟವನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಕಾದಂಬರಿಕಾರ ಡಾ.ಎಸ್‌.ಎಲ್‌.ಬೈರಪ್ಪ ಹೇಳಿದರು. ಮೈಸೂರು ಲಿಟರರಿ ಅಸೋಸಿಯೇಷನ್‌ನಿಂದ ನಗರದ ಮಾನಸಗಂಗೋತ್ರಿಯ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು ಲಿಟರರಿ ಫೆಸ್ಟ್‌ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರೀಕ್‌ನಲ್ಲಿ ತತ್ವಶಾಸ್ತ್ರ ಎಂಬುದು ವಿಶ್ವದ ಅದ್ಭುತಗಳಿಂದ ಹುಟ್ಟಿಕೊಂಡರೆ, ಭಾರತದಲ್ಲಿ ಸಾವಿನ ವಿಷಯದೊಂದಿಗೆ ತತ್ವಶಾಸ್ತ್ರ ಎಂಬುದು ಉಗಮ ವಾಯಿತು. ಅದರಂತೆ ಭಾರತದಲ್ಲಿ ಪ್ರಮುಖವಾಗಿ ವೇದಾಂತ ಮತ್ತು ಬುದ್ಧನ ತತ್ವಶಾಸ್ತ್ರಗಳಿವೆ. ಆದರೆ ಭಾರತೀಯ ಬರಹಗಾರರಿಗೆ ವ್ಯಾಸಮುನಿಯ ಆಳವಾದ ಬರವಣಿಗೆ ಮಾದರಿಯಾಗಿದ್ದು, ವ್ಯಾಸಮುನಿಯು ತಮ್ಮ ಬರವಣಿಗೆಗೆ ಅಗತ್ಯವಿರುವ ವಿಷಯದ ಕುರಿತು ಆಳವಾದ ಅಧ್ಯಯನ ನಡೆಸಿದ ಬಳಿಕವಷ್ಟೇ ಬರವಣಿಗೆ ನಡೆಸುತ್ತಿದ್ದರು. ಹೀಗಾಗಿ ಬರವಣಿಗೆ ಹಾಗೂ ತತ್ವಶಾಸ್ತ್ರ ಎರಡೂ ಜತೆಗೂಡಬೇಕಿದ್ದು, ಬರಹಗಾರರಿಗೆ ತತ್ವಶಾಸ್ತ್ರದ ಉತ್ತಮ ಅಡಿಪಾಯ ಇರಬೇಕಾದ ಅಗತ್ಯವಿದೆ ಎಂದರು.

ವೇದ, ಉಪನಿಷತ್‌ಗಳು ನಮ್ಮ ದೇಶವನ್ನು ಪ್ರತಿನಿಧಿಸಲಿದ್ದು, ಇಲ್ಲಿನ ಚಿಂತನೆ, ಸಂಸ್ಕೃತಿಯಲ್ಲಿ ಅಡಗಿದೆ. ವಾಲ್ಮೀಕಿ ಮತ್ತು ವ್ಯಾಸರು ವೇದ, ಉಪನಿಷತ್‌ಗಳ ದಾಸರಾಗಿದ್ದು, ಹೀಗಾಗಿ ದೇಶದ ಪುರಾತನ ಇತಿಹಾಸವಿರುವ ರಾಮಾಯಣ ಹಾಗೂ ಮಹಾಭಾರತ ತಮ್ಮ ಕಾದಂಬರಿಗಳಿಗೆ ಮಾದರಿಯಾಗಿದೆ. ಇನ್ನೂ ರಾನಡೆ ಪ್ರಕಾರ ಬುದ್ಧ ವೇದ-ಉಪನಿಷತ್‌ಗಳಿಂದ ಪ್ರೇರಿತನಾಗಿದ್ದು, ಆ ಬಗ್ಗೆ ಅರಿತು ಬುದ್ಧಿಸಂ ಸೃಷ್ಟಿಸಿದ. ಆದರೆ ತತ್ವಶಾಸ್ತ್ರ ಎಂದರೆ, ತತ್ವ-ಸಿದ್ಧಾಂತಗಳು ಮಾತ್ರವಲ್ಲ. ಅಲ್ಲಿ ರಾಸಾಯನ, ಭೌತಶಾಸ್ತ್ರ, ಗಣಿತವೂ ಅಡಗಿದ್ದು, ತಾವು ಇದರಲ್ಲ ವ್ಯಾಸಂಗ ಮಾಡಿ, ಪಿಎಚ್‌ಡಿ ಸಹ ಪಡೆದಿರುವುದಾಗಿ ಸ್ಮರಿಸಿಕೊಂಡರು.

ಇದಲ್ಲದೆ ಸಾಹಿತ್ಯ ರಚನೆಗೆ ಸೃಜನಾಶೀಲತೆ ಅಗತ್ಯವಿದ್ದು, ಸೃಜನಾಶೀಲತೆ ಎಂಬುದು ಅನುಕರಣೆಯಾಗದೆ, ಹೊಸದಾಗಿ ಸೃಷ್ಟಿಯಾಗಬೇಕು. ಹೀಗಾಗಿ ನಮ್ಮಲ್ಲಿ ಸೃಷ್ಟಿಯಾಗುವ ಕಟ್ಟುಕಥೆಗಳು, ಕಲ್ಪನೆಗಳ ಮೂಲಕ ಹುಟ್ಟುವ ಸಾಹಿತ್ಯಗಳು ಹೆಚ್ಚು ಸೃಜನಾಶೀಲವಾಗಿರುತ್ತದೆ ಎಂದು ಹೇಳಿದರು. ಇತಿಹಾಸ ತಜ್ಞ ಡಾ.ರಾಮಚಂದ್ರ ಗುಹಾ ಮಾತನಾಡಿ, ಯಾವುದೇ ಇತಿಹಾಸಕಾರರು ಸಿದ್ಧಾಂತ-ತತ್ವಗಳನ್ನು ಹೇಳದೆ, ವಸ್ತುನಿಷ್ಠವಾಗಿ ಹೇಳಬೇಕು. ಆ ಮೂಲಕ ಅಧಿಕಾರಶಾಹಿಗಳ ಪರವಾಗಿರದೇ ಸತ್ಯವನ್ನೇ ಸಂಶೋಧಿಸಿ ದಾಖಲಿಸಬೇಕು ಎಂದರು. ವಿಶ್ರಾಂತ ಕುಲಪತಿ ಕೆ.ಸಿ.ಬೆಳ್ಳಿಯಪ್ಪ, ವಿಮರ್ಶಕ ಪೊ›.ಹರೀಶ್‌ ತ್ರಿವೇದಿ ಇನ್ನಿತರರು ಹಾಜರಿದ್ದರು.

ಟಾಪ್ ನ್ಯೂಸ್

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.