ಸರ್ಕಾರಿ ಕಟ್ಟಡ ಮೇಲೆ ಸೌರ ವಿದ್ಯುತ್‌ ವ್ಯವಸ್ಥೆ


Team Udayavani, Jun 19, 2017, 3:12 PM IST

hub1.jpg

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಸರಕಾರಿ ಹಾಗೂ ಅರೆ ಸರಕಾರಿಯ ಕಚೇರಿಗಳ ವಿವಿಧ ಕಟ್ಟಡಗಳ ಮೇಲೆ ಸೌರಶಕ್ತಿ ವಿದ್ಯುತ್‌ ಅಳವಡಿಕೆಯನ್ನು ಕೈಗೊಳ್ಳಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ ಸುಮಾರು 100-135 ಕಟ್ಟಡಗಳ ಮೇಲೆ ಇದನ್ನು ಅಳಡಿಸುವ ಯೋಜನೆ ಸಿದ್ಧಗೊಳ್ಳುತ್ತಿದೆ. ಜತೆಗೆ ಮಳೆನೀರು ಕೊಯ್ಲು ವ್ಯವಸ್ಥೆಗೂ ಯೋಜನೆ ರೂಪುಗೊಳ್ಳುತ್ತಿದೆ. 

ವಿದ್ಯುತ್‌ ಮೇಲಿನ ಅವಲಂಬನೆ ತಗ್ಗಬೇಕು, ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಸೌರಶಕ್ತಿ ವಿದ್ಯುತ್‌ ಬಳಕೆ ಹೆಚ್ಚಬೇಕು ಎಂಬ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಆರಂಭಿಕವಾಗಿ ಸರಕಾರಿ ಹಾಗೂ ಪಾಲಿಕೆ ಒಡೆತನದ ಆರ್‌ಸಿಸಿ ಕಟ್ಟಡಗಳ ಮೇಲೆ ಸೌರಶಕ್ತಿ ವಿದ್ಯುತ್‌ ವ್ಯವಸ್ಥೆ ಅಳವಡಿಕೆಗೆ ಮುಂದಾಗಿದೆ. ಅಲ್ಲದೆ ಸರಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಕೆ ಕಾರ್ಯ ಕೈಗೊಳ್ಳಲಾಗುತ್ತಿದೆ. 

ಎಲ್ಲೆಲ್ಲಿ ಅಳವಡಿಕೆ?: ಸರಕಾರಿ ಹಾಗೂ ಅರೆ ಸರಕಾರಿ ಕಚೇರಿಯ ಆರ್‌ಸಿಸಿ ಕಟ್ಟಡಗಳು ಎಲ್ಲೆಲ್ಲಿ ಇವೆಯೋ ಅಲ್ಲಿ ಸೌರಶಕ್ತಿ ವಿದ್ಯುತ್‌ ಘಟಕಗಳನ್ನು ಅಳವಡಿಸಲು ಯೋಜಿಸಲಾಗಿದೆ. ಮುಖ್ಯವಾಗಿ ಆಯಾ ಸರಕಾರಿ ಇಲಾಖೆಯವರು ಸ್ವಂತ ಕಟ್ಟಡ ಹೊಂದಿರಬೇಕು, ಜತೆಗೆ ಸೌರಶಕ್ತಿ ಅಳವಡಿಕೆಗೆ ತಮ್ಮ ಆಕ್ಷೇಪವೇನು ಇಲ್ಲವೆಂದು ನಿರಪೇಕ್ಷಣಾ ಪತ್ರ ನೀಡಬೇಕಿದೆ. 

ಸದ್ಯದ ಯೋಜನೆಯಂತೆ ಪಾಲಿಕೆ ಒಡೆತನದಲ್ಲಿರುವ ನೆಹರು ಮೈದಾನದಲ್ಲಿ ಕಟ್ಟಡಗಳ ಮೇಲೆ, ಪಾಲಿಕೆ ವಲಯ ಕಚೇರಿಗಳು, ಆಸ್ಪತ್ರೆಗಳು, ಮಾರುಕಟ್ಟೆ ಹೀಗೆ ಎಲ್ಲೆಲ್ಲಿ ಆರ್‌ಸಿಸಿ ಕಟ್ಟಡಗಳಿವೆಯೋ ಅಲ್ಲಿ ಸೌರಶಕ್ತಿ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಅಳವಡಿಸಲಾಗುತ್ತದೆ.

ಘಟಕ ಅಳವಡಿಕೆಯ ಒಟ್ಟು ವೆಚ್ಚವನ್ನು ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿಯೇ ಭರಿಸಲಾಗುತ್ತಿದ್ದು, ಆರ್‌ಸಿಸಿ ಕಟ್ಟಡ ಹೊಂದಿದ ಸರಕಾರಿ ಹಾಗೂ ಅರೆ  ಸರಕಾರಿ ಇಲಾಖೆಗಳು ಕೇವಲ ನಿರಪೇಕ್ಷಣಾ ಪತ್ರ ನೀಡಿದರೆ ಮಾತ್ರ ಸಾಕಾಗಿದೆ. ಇದಲ್ಲದೆ ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ನಗರದ ಐದು ಕಡೆ ನಿರ್ಮಿಸಲು ಉದ್ದೇಶಿಸಿರುವ ಸ್ಮಾರ್ಟ್‌ ಪಾರ್ಕಿಂಗ್‌ ಕಟ್ಟಡಗಳ ಮೇಲೂ ಸೌರ ವಿದ್ಯುತ್‌ ಘಟಕ ಅಳವಡಿಕೆಗೆ ಯೋಜಿಸಲಾಗಿದೆ. 

ರೂಫ್ ಟಾಪ್‌ ಸೋಲಾರ್‌ ಯೋಜನೆ ಕುರಿತಾಗಿ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನದ ಸಲಹಾ ಏಜೆನ್ಸಿ ಪ್ರೈಸ್‌ವಾಟರ್‌ ಹೌಸ್‌ಕೂಪರ್‌ ಸಂಸ್ಥೆಯ ತಜ್ಞರು ಈಗಾಗಲೇ ಯೋಜನೆಯ ವಿಸ್ತೃತ ಯೋಜನಾ ವರದಿ(ಡಿಪಿಆರ್‌)ಸಿದ್ಧತೆಯಲ್ಲಿ ತೊಡಗಿದ್ದು, ಆಗಸ್ಟ್‌ 1ರೊಳಗೆ ಡಿಪಿಆರ್‌ ಸಿದ್ಧಗೊಳಿಸಲು ಯೋಜಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಸೋಲಾರ್‌ ಹಾಗೂ ರೂಫ್ ಟಾಪ್‌ ವಿದ್ಯುತ್‌ ಯೋಜನೆಗಾಗಿ ಸುಮಾರು 128.76 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. 

ಬಳಕೆ ಹೇಗೆ?: ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಸುಮಾರು 100-135 ಸರಕಾರಿ ಹಾಗೂ ಅರೆ ಸರಕಾರಿ ಕಚೇರಿ-ಆಸ್ತಿಗಳ ಕಟ್ಟಡ ಮೇಲೆ ಸೌರಶಕ್ತಿ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪನೆ ಅನಂತರದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ಆಯಾ ಕಚೇರಿಗಳು ಬಳಕೆ ಮಾಡಿಕೊಳ್ಳಬಹುದಾಗಿದೆ.

ಉತ್ಪಾದಿತ ಕಟ್ಟಡಗಳಲ್ಲಿ ಬಳಕೆ ಅನಂತರವೂ ಹೆಚ್ಚುವರಿಯಾಗಿ ಉಳಿಯುವ ಸೌರ ವಿದ್ಯುತ್‌ನ್ನು ಗ್ರಿಡ್‌ಗೆ ನೀಡುವ ಕುರಿತಾಗಿ ಹೆಸ್ಕಾಂನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ. ಈ ವಿದ್ಯುತ್‌ ಮಾರಾಟದಿಂದ ಬರುವ ಹಣ ಸ್ಮಾರ್ಟ್‌ ಸಿಟಿಯ  ವಿಶೇಷ ಉದ್ದೇಶದ ವಾಹನ(ಎಸ್‌ಪಿವಿ) ಖಾತೆಗೆ ಜಮಾ ಆಗಲಿದೆ. 

ಸುಮಾರು 100-135 ಸರಕಾರಿ ಹಾಗೂ ಅರೆ ಸರಕಾರಿ ಕಚೇರಿ- ಆಸ್ತಿಗಳ ಕಟ್ಟಡಗಳ ಮೇಲೆ ಸೌರ ವಿದ್ಯುತ್‌ ಶಕ್ತಿ ಅಳವಡಿಕೆ ಜಾರಿಗೊಂಡರೆ ಈ ಎಲ್ಲ ಕಚೇರಿಗಳಲ್ಲಿ ವಿದ್ಯುತ್‌ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆ ಆಗಲಿದೆ. ಒಂದು ಕಡೆ ಕಚೇರಿಗಳು ಪ್ರತಿ ತಿಂಗಳು ಪಾವತಿಸಬೇಕಾದ ಸಾವಿರಾರು ರೂ.ಗಳ ವಿದ್ಯುತ್‌ ಶುಲ್ಕ ಉಳಿತಾಯವಾಗಲಿದೆ. ಈ ಕಚೇರಿಗಳಿಂದ ಉಳಿತಾಯ ರೂಪದಲ್ಲಿ ಸಿಗುವ ಹಾಗೂ ಹೆಚ್ಚುವರಿ ಸೌರಶಕ್ತಿ ವಿದ್ಯುತ್‌ ಅನ್ನು ಹೆಸ್ಕಾಂ ಇತರೆ ಬಳಕೆಗೆ ನೀಡಬಹುದಾಗಿದೆ. 

ಮಳೆ ನೀರು ಕೊಯ್ಲು ಯೋಜನೆ: ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಸೌರಶಕ್ತಿ ವಿದ್ಯುತ್‌ ಉತ್ಪಾದನೆ ಜತೆಗೆ ಮಳೆ ನೀರು ಕೊಯ್ಲು ಯೋಜನೆಗೂ ಆದ್ಯತೆ ನೀಡಲಾಗಿದೆ. ಮಳೆ ನೀರು ಪೋಲಾಗಿ ಹಳ್ಳ-ಕೊಳ್ಳ, ನದಿಗಳ ಮೂಲಕ ಸಮುದ್ರ ಸೇರುತ್ತಿದೆ. ಜತೆಗೆ ಮಳೆಗಾಲದಲ್ಲಿ ನಗರಗಳಲ್ಲಿ ಈ ನೀರು ಹಲವು ಸಮಸ್ಯೆಗಳನ್ನು ಕೆಲವೊಮ್ಮೆ ಸಣ್ಣ-ಪುಟ್ಟ ಅನಾಹುತಗಳನ್ನು ಸೃಷ್ಟಿಸುತ್ತಿದೆ. 

ಮತ್ತೂಂದು ಕಡೆ ನೀರಿನ ಕೊರತೆ ಹೆಚ್ಚುತ್ತ ಸಾಗುತ್ತಿದ್ದು, ಚಳಿಗಾಲದಲ್ಲಿಯೇ ನಗರ-ಹಳ್ಳಿಗಳೆನ್ನದೆ ಅನೇಕ ಕಡೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಸ್ಥಿತಿ ಹೆಚ್ಚುತ್ತ ಸಾಗುತ್ತಿದೆ. ನೀರು ಸಂರಕ್ಷಣೆ, ಮಿತ ಹಾಗೂ ಸದ್ಬಳಕೆ ಜಾಗೃತಿ ನಿಟ್ಟಿನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಮಳೆನೀರು ಕೊಯ್ಲು ಅಳವಡಿಕೆಗೆ ಮುಂದಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಮಳೆ ನೀರು ಕೊಯ್ಲು, ಸಾರ್ವಜನಿಕ ಶೌಚಾಲಯ ಇತರೆ ಯೋಜನೆಗಳಿಗೆ ಸುಮಾರು 193.85 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಮಳೆ ನೀರು ಕೊಯ್ಲು ಕುರಿತಾಗಿ ಅಕ್ಟೋಬರ್‌ 1ರೊಳಗೆ ವಿಸ್ತೃತ ಯೋಜನಾ ವರದಿ(ಡಿಪಿಆರ್‌)ಸಿದ್ಧಗೊಳ್ಳಲಿದೆ. 

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಉದ್ದೇಶಿತ ಸೌರಶಕ್ತಿ ಹಾಗೂ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಕೆ ಸಮರ್ಪಕವಾಗಿ ಜಾರಿಗೊಂಡಿದ್ದೇ ಆದಲ್ಲಿ  ವಿವಿಧ ಸರಕಾರಿ ಹಾಗೂ ಅರೆ ಸರಕಾರಿ ಕಚೇರಿಗಳಲ್ಲಿ ವಿದ್ಯುತ್‌, ನೀರಿಗಾಗಿ ಹೆಸ್ಕಾಂ ಹಾಗೂ ಜಲಮಂಡಳಿ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದೆ, ಅಷ್ಟೇ ಅಲ್ಲ ಈ ವ್ಯವಸ್ಥೆ ಸಾರ್ವಜನಿಕರಿಗೂ ಮಾದರಿ ಆಗಲಿದೆ. 

* ಅಮರೇಗೌಡ ಗೋನವಾರ 

ಟಾಪ್ ನ್ಯೂಸ್

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ

Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.