ಮೂರು ದಶಕದ ಚಿತ್ರಮಂದಿರ ಸುತ್ತ ಚರಂಡಿ ಹೂಳಿನ ಹುತ್ತ
Team Udayavani, Jun 19, 2017, 3:54 PM IST
ವಾಡಿ: ಹೊಸ ಹೊಸ ಚಲನಚಿತ್ರ ಪ್ರದರ್ಶಿಸುವ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದ ಸ್ಥಳೀಯ ಕಿಸ್ಮತ್ ಚಲನಚಿತ್ರ ಮಂದಿರದ ಸುತ್ತ ಭಾರಿ ಪ್ರಮಾಣದ ಚರಂಡಿ ಹೂಳು ಸುತ್ತುವರಿದಿದ್ದು, ಕಳೆದ ಒಂದು ವಾರದಿಂದ ಚಿತ್ರ ಪ್ರದರ್ಶನ ಸ್ಥಗಿತಗೊಂಡಿದೆ.
ಗುರುವಾರ ಸುರಿದ ಭಾರಿ ಮಳೆಯಿಂದ ನಗರದ ವಿವಿಧ ಬಡಾವಣೆ ಘನತ್ಯಾಜ್ಯ ಚರಂಡಿ ಮೂಲಕ ಹರಿದು ಚಲನಚಿತ್ರ ಮಂದಿರ ಆವರಣಕ್ಕೆ ನುಗ್ಗಿದ್ದು, ಇಡೀ ಚಿತ್ರಮಂದಿರ ಚರಂಡಿ ಹೂಳಿನಲ್ಲಿ ಮುಳುಗಿ ಹೋಗಿದೆ. ಕಳೆದ ಒಂದು ವಾರದಿಂದ ಮಡುಗಟ್ಟಿ ನಿಂತಿರುವ ಕೊಳೆ ನೀರು ಹಸಿರು ಪಾಚಿಗೆ ತಿರುಗಿದ್ದು, ರೋಗಾಣುಗಳ ತಾಣವಾಗಿ ಬದಲಾಗಿದೆ.
ಸಿನಿಮಾ ನೋಡಲು ಬರುತ್ತಿದ್ದ ಪಟ್ಟಣ ಸೇರಿದಂತೆ ಸುತ್ತಲ ಗ್ರಾಮಗಳ ಚಿತ್ರಪ್ರೇಮಿಗಳು, ಮನರಂಜನಾ ಕೇಂದ್ರದ ಸುತ್ತ ನೆಲೆನಿಂತ ಚರಂಡಿಯ ಗಬ್ಬು ನೀರಿನ ವಾಸನೆಯಿಂದ ದೂರವೇ ಉಳಿಯುತ್ತಿದ್ದಾರೆ. ಚಿತ್ರಮಂದಿರದತ್ತ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೊಳೆ ಹರಿದು ಬರಲು ಪುರಸಭೆ ಅಧಿಕಾರಿಗಳು ನಿರ್ಮಿಸಿದ ಅವೈಜ್ಞಾನಿಕ ಚರಂಡಿಗಳೇ ಕಾರಣ ಎಂದು ಚಿತ್ರಮಂದಿರದ ವಾರಸುದಾರ ಸುಭಾಷ ವರ್ಮಾ ಆರೋಪಿಸುತ್ತಾರೆ.
ಕಿಸ್ಮತ್ ಚಿತ್ರಮಂದಿರ ಮೂರು ದಶಕದಷ್ಟು ಹಳೆಯದಾಗಿದೆ. ಇದರ ದುಸ್ಥಿತಿಗೆ ಕಟ್ಟಡದ ಮಾಲಿಕರೇ ಕಾರಣ ಎನ್ನುವುದು ಪುರಸಭೆ ಅಧಿ ಕಾರಿಗಳ ವಾದವಾಗಿದೆ. ಇಬ್ಬರ ವಾದ ವಿವಾದಗಳ ಮಧ್ಯೆ ಸಮಸ್ಯೆ ಕಳೆದ ಐದಾರು ವರ್ಷಗಳಿಂದ ಜೀವಂತವಾಗಿದೆ. ಆಸುಪಾಸಿನಲ್ಲಿ ವಾಸಿಸುವ ಸಾರ್ವಜನಿಕರು ಅನಾರೋಗ್ಯ ವಾತಾವರಣದಲ್ಲಿ ಬದುಕುವಂತಾಗಿದೆ.
ಚಲನಚಿತ್ರ ಮಂದಿರದ ಸುತ್ತ ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದ್ದು, ಹಲವು ಕುಟುಂಬಗಳಿಗೆ ರೋಗದ ಭೀತಿ ಎದುರಾಗಿದೆ. ಆರೋಗ್ಯ ಇಲಾಖೆ ಅಧಿ ಕಾರಿಗಳು ಮಧ್ಯ ಪ್ರವೇಶಿಸುವ ಮೂಲಕ ಆರೋಗ್ಯಪೂರಿತ ವಾತಾವರಣ ಮರುಸ್ಥಾಪಿಸಲು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
* ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.