ಯೋಗ ದಿನ: 45 ನಿಮಿಷಗಳ ಯೋಗ ಪ್ರದರ್ಶನ


Team Udayavani, Jun 20, 2017, 12:54 PM IST

mys2.jpg

ಮೈಸೂರು: ಮೂರನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬುಧವಾರ ನಗರದ ರೇಸ್‌ಕೋರ್ಸ್‌ನಲ್ಲಿ ನಡೆಯುವ ಸಾಮೂಹಿಕ ಯೋಗ ಪ್ರದರ್ಶನದ ಗಿನ್ನಿಸ್‌ ದಾಖಲೆಗೆ ಪ್ರಯತ್ನಿಸುತ್ತಿರುವುದರಿಂದ ಭಾಗವಹಿಸುವವರು ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್‌ ಮನವಿ ಮಾಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾರ್ಥನೆ 1 ನಿಮಿಷ, ಚಲನಕ್ರಿಯೆಗೆ 4 ನಿಮಿಷ ಸೇರಿದಂತೆ ತಾಡಾಸನ, ವೃûಾಸನ, ಪಾದ ಹಸ್ತಾಸನ-1, ಪಾದ ಹಸ್ತಾಸನ-2, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮ ದಂಡಾಸನ, ಭದ್ರಾಸನ, ವಜಾÅಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ ಪ್ರದರ್ಶನಕ್ಕೆ 25 ನಿಮಿಷ ನಿಗದಿಪಡಿಸಲಾಗಿದೆ.

ನಂತರ 14 ನಿಮಿಷಗಳ ಕಾಲ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ. ಕಡೆಗೆ ಒಂದು ನಿಮಿಷಗಳ ಕಾಲ ಶಾಂತಿಮಂತ್ರ ಪಠಿಸಲಿದ್ದಾರೆ. ಒಟ್ಟಾರೆ 45 ನಿಮಿಷಗಳ ಕಾಲ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ. ರೇಸ್‌ಕೋರ್ಸ್‌ ಮೈದಾನದ ಎಲ್ಲಾ ಪ್ರವೇಶ ದ್ವಾರಗಳನ್ನು ಬೆಳಗ್ಗೆ 5 ಗಂಟೆಯಿಂದಲೇ ತೆರೆಯಲಾಗುವುದು. 7 ಗಂಟೆಗೆ ಯೋಗ ಪ್ರದರ್ಶನ ಆರಂಭವಾಗಲಿದ್ದು, 6.45ಕ್ಕೆ ಎಲ್ಲಾ ಪ್ರವೇಶ ದ್ವಾರಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದರು.

ಭಾಗವಹಿಸುವ ಯೋಗಪಟುಗಳು ಬೆಳಗ್ಗೆ 5.45ರಿಂದಲೇ ಪ್ರವೇಶ ದ್ವಾರಗಳ ಬಳಿ ಉಚಿತವಾಗಿ ನೀಡಲಾಗುವ ಬಾರ್‌ ಕೋಡೆಡ್‌ ಟಿಕೆಟ್‌ಗಳನ್ನು ಪಡೆದು ಮೈದಾನ ಪ್ರವೇಶಿಸಿ ನಿಗದಿತ ಸ್ಥಳದಲ್ಲಿ ಉಪಸ್ಥಿತರಿರಬೇಕು. ಗುರುತಿನ ಚೀಟಿ ಹೊಂದಿರುವ ಸ್ಟಿವರ್ಡ್‌ಗಳು ಯೋಗಪಟುಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಕೂರಿಸಲು ನೆರವಾಗಲಿದ್ದಾರೆ ಎಂದರು.
ಬೆಳಗ್ಗೆ 5 ಗಂಟೆಯಿಂದಲೇ ನಗರದ ವಿವಿಧ ಭಾಗಗಳಿಂದ ರೇಸ್‌ಕೋರ್ಸ್‌ಗೆ ನಿರಂತರವಾಗಿ ಸಾರಿಗೆ ಬಸ್‌ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ನಿಗದಿತ ದರ ನೀಡಿ ಈ ಸೇವೆ ಬಳಸಿಕೊಳ್ಳಬಹುದು.

ಪ್ರದರ್ಶನದಲ್ಲಿ ಭಾಗವಹಿಸುವವರು ಬಿಳಿ ಟಿ ಶರ್ಟ್‌ ಧರಿಸಿಬರಬೇಕು. ಮಹಿಳೆಯರು ಯೋಗ ಮಾಡಲು ಅನುಕೂಲವಾಗುವ ಪ್ಯಾಂಟ್‌ ಅಥವಾ ಚೂಡಿದಾರ್‌ ಧರಿಸಿಬರಬೇಕು.  ಯೋಗ ಮ್ಯಾಟ್‌ ಇಲ್ಲದೆ ಯೋಗ ಪ್ರದರ್ಶನ ನೀಡಿದರೆ ಗಿನ್ನಿಸ್‌ ದಾಖಲೆಗೆ ಪರಿಗಣಿಸುವುದಿಲ್ಲ. ಹೀಗಾಗಿ ಭಾಗವಹಿ ಸುವವರು ಯೋಗ ಮ್ಯಾಟ್‌ ಅಥವಾ ಜಮಖಾನ, ಬೆಡ್‌ಶೀಟ್‌, ಟರ್ಕಿ ಟವೆಲ್‌ ಸೇರಿದಂತೆ ತಮ್ಮ ಎತ್ತರಕ್ಕೆ ಅನುಗುಣವಾದ ಬಟ್ಟೆಯನ್ನು ತಂದು ಅದರ ಮೇಲೆ ಯೋಗ ಪ್ರದರ್ಶನ ನೀಡುವುದು ಕಡ್ಡಾಯವಾಗಿದೆ.

ಕಾರ್ಯಕ್ರಮ ಮುಗಿದ ನಂತರ ಪ್ರವೇಶಿಸಿದ ದ್ವಾರದಿಂದಲೇ ಹೊರನಡೆದು ಅಲ್ಲಿ ನೀಡುವ ಅಧಿಕೃತ ಗಿನ್ನಿಸ್‌ ದಾಖಲೆ ಪ್ರಯತ್ನದ ಭಾಗವಹಿಸುವಿಕೆ ಪ್ರಮಾಣ ಪತ್ರ, ಲಘು ಉಪಾಹಾರ ಮತ್ತು ನೀರಿನ ಬಾಟಲಿಗಳನ್ನು ಪಡೆದುಕೊಂಡು ಹೋಗುವಂತೆ ತಿಳಿಸಿದರು.

ಪ್ರವೇಶ ದ್ವಾರಗಳು: ರೇಸ್‌ಕೋರ್ಸ್‌ ಪ್ರವೇಶಿಸಲು ಒಟ್ಟು ಏಳು ಪ್ರವೇಶದ್ವಾರಗಳಿದ್ದು, ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಯ 16 ಸಾವಿರ ವಿದ್ಯಾರ್ಥಿಗಳು ಯೋಗ ಪ್ರದರ್ಶನದಲ್ಲಿ ಭಾಗವಹಿಸುವುದರಿಂದ ಮಹಾರಾಣ ಪ್ರತಾಪ್‌ ವೃತ್ತದ ಗೇಟ್‌-1ಅನ್ನು ಅವರಿಗೆ ಮೀಸಲಿಡಲಾಗಿದೆ.

ಗೇಟ್‌ -2ರಲ್ಲಿ ಯೋಗ ಸಂಸ್ಥೆಗಳು, ಸಿಬಿಎಸ್‌ಇ ಶಾಲೆಗಳು ಹಾಗೂ ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರವೇಶಿಸಬಹುದು. ಗೇಟ್‌ -3 (ಪಂಟರ್ ಗೇಟ್‌), ಗೇಟ್‌-4 ಹಾಗೂ ಗೇಟ್‌-6ರಲ್ಲಿ ಸಾರ್ವಜನಿಕರು ಪ್ರವೇಶಿಸಬಹುದು. ಗೇಟ್‌-5ರಲ್ಲಿ (ಲಾರಿ ಟರ್ಮಿನಲ್‌ ಗೇಟ್‌) ಡಿಡಿಪಿಐ, ಡಿಡಿಪಿಯು ಅಧೀನದಲ್ಲಿ ಬರುವ ವಿದ್ಯಾರ್ಥಿಗಳು, ಬಿಸಿಎಂ, ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್‌ಗ‌ಳ ವಿದ್ಯಾರ್ಥಿಗಳು ಹಾಗೂ ಮೈಸೂರು ವಿವಿ ವಿದ್ಯಾರ್ಥಿಗಳು ಪ್ರವೇಶಿಸಬಹುದು. ಗೇಟ್‌-7ರಲ್ಲಿ ಗಣ್ಯರು, ಅಧಿಕಾರಿಗಳು, ಸಂಘಟಕರು ಪ್ರವೇಶಿಸಬಹುದು ಎಂದು ವಿವರಿಸಿದರು.

ಯೋಗ ಪ್ರದರ್ಶಕರು ನೀಡುವ ಸೂಚನೆಯಂತೆ ಎಲ್ಲರೂ ಕಡ್ಡಾಯವಾಗಿ ಯೋಗಾಸನ ಮಾಡಬೇಕು. ಪ್ರದರ್ಶನದಲ್ಲಿ ಭಾಗವಹಿಸುವವರಲ್ಲಿ ಶೇ.10ಕ್ಕಿಂತ ಹೆಚ್ಚು ಜನರು ಯೋಗ ಮಾಡದಿದ್ದರೆ, ಗಿನ್ನಿಸ್‌ ದಾಖಲೆಗೆ ನಮ್ಮ ಪ್ರಯತ್ನ ತಾಂತ್ರಿಕವಾಗಿ ಮಾನ್ಯವಾಗುವುದಿಲ್ಲ.
-ಡಿ.ರಂದೀಪ್‌, ಜಿಲ್ಲಾಧಿಕಾರಿ

ಯೋಗ ದಿನ: ಸಂಚಾರ ಮಾರ್ಪಾಡು    
ಮೈಸೂರು:
ನಗರದ ರೇಸ್‌ಕೋರ್ಸ್‌ನಲ್ಲಿ ಬುಧವಾರ ನಡೆಯಲಿರುವ 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಅಂದು ಬೆಳಗ್ಗೆ 5 ರಿಂದ 10 ಗಂಟೆವರೆಗೆ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ ನಗರ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ಯೋಗಪಟುಗಳ ವಾಹನಗಳನ್ನು ಹೊರತುಪಡಿಸಿ, ನಂಜನಗೂಡು ರಸ್ತೆಯಲ್ಲಿ ಜೆಎಸ್‌ಎಸ್‌ ಕಾಲೇಜು ಜಂಕ್ಷನ್‌ನಿಂದ-ಎಂ.ಆರ್‌.ಸಿ ವೃತ್ತದವರೆಗೆ. ಲಲಿತಮಹಲ್‌ ರಸ್ತೆಯಲ್ಲಿ ಕುರುಬರಹಳ್ಳಿ ವೃತ್ತದಿಂದ-ಎಂಆರ್‌ಸಿ ವೃತ್ತದವರೆಗೆ, ಮಿಜಾìರಸ್ತೆಯಲ್ಲಿ ಮಿಜಾìವೃತ್ತದಿಂದ ದಕ್ಷಿಣಕ್ಕೆ ಮೃಗಾಲಯದ ರಸ್ತೆಯಲ್ಲಿ ರೇಸ್‌ಕೋರ್ಸ್‌ ವೃತ್ತದವರೆಗೆ ನಿರ್ಬಂಧಿಸಲಾಗಿದೆ.

ಬದಲಿ ಮಾರ್ಗಗಳು: ನಂಜನಗೂಡು ರಸ್ತೆಯಿಂದ ನಗರದ ಕಡೆಗೆ ಪ್ರವೇಶಿಸುವ ವಾಹನಗಳು ನಂಜನಗೂಡು ರಸ್ತೆ ಜೆಎಸ್‌ಎಸ್‌ ಜಂಕ್ಷನ್‌ ಬಳಿ ಕಡ್ಡಾಯವಾಗಿ ಎಡಕ್ಕೆ ತಿರುಗಿ ಜೆಎಲ್‌ಬಿ ರಸ್ತೆ ಮೂಲಕ ಮುಂದೆ ಸಾಗಬೇಕು. ಲಲಿತಮಹಲ್‌ ರಸ್ತೆಯಲ್ಲಿ ಕುರುಬರಹಳ್ಳಿ ವೃತ್ತದಿಂದ ರೇಸ್‌ಕೋರ್ಸ್‌ ವೃತ್ತದ ಕಡೆಗೆ ಸಾಗುತ್ತಿದ್ದ ವಾಹನಗಳು ಕುರುಬರಹಳ್ಳಿ ವೃತ್ತದಲ್ಲಿ ಬಲಕ್ಕೆ ತಿರುಗಿ ವಾಯುವಿಹಾರ ರಸ್ತೆ ಮೂಲಕ ಎಂಎಂ ರಸ್ತೆ ತಲುಪಿ ಮುಂದೆ ಸಾಗಬೇಕು.

ಮಿಜಾ ರಸ್ತೆಯಿಂದ ಮೃಗಾಲಯದ ಕಡೆಗೆ ಸಾಗುತ್ತಿದ್ದ ವಾಹನಗಳು ನೇರವಾಗಿ ಮಿಜಾ ರಸ್ತೆಯಲ್ಲಿ ಸಾಗಿ ನಜರ್‌ಬಾದ್‌ ವೃತ್ತ ತಲುಪಿ ಮುಂದೆ ಸಾಗಬೇಕು. ನಂಜನಗೂಡು ಕಡೆಗೆ ಸಂಚರಿಸಬೇಕಾದ ಕೆಎಸ್‌ಆರ್‌ಟಿಸಿ ಬಸ್ಸುಗಳು ಹಾರ್ಡಿಂಜ್‌ ವೃತ್ತ ತಲುಪಿ ಬಿ.ಎನ್‌. ರಸ್ತೆ-ಪಾಠಶಾಲಾ ವೃತ್ತ-ಚಾಮರಾಜ ಜೋಡಿ ರಸ್ತೆ ಮೂಲಕ ರಾಮಸ್ವಾಮಿ ವೃತ್ತ-ಎಡತಿರುವು-ಜೆಎಲ್‌ಬಿ ರಸ್ತೆ- ನಂಜನಗೂಡು ರಸ್ತೆ ತಲುಪಿ ಮುಂದೆ ಸಾಗಬೇಕು.

ಕೊಳ್ಳೇಗಾಲ- ತಿ.ನರಸೀಪುರ ಕಡೆಗೆ ಸಂಚರಿಸಬೇಕಾದ ಕೆಎಸ್‌ಆರ್‌ಟಿಸಿ ಬಸ್ಸುಗಳು ಬಸ್‌ ನಿಲ್ದಾಣದಿಂದ ಫೈವ್‌ಲೈಟ್‌ ವೃತ್ತ-ಸರ್ಕಾರಿ ಭವನದ ಉತ್ತರದ್ವಾರ-ಪೊಲೀಸ್‌ ವೃತ್ತ-ಸ್ಟೇಡಿಯಂ ರಸ್ತೆ-ನಜರ್‌ಬಾದ್‌.

ಟಾಪ್ ನ್ಯೂಸ್

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.