ಅವ್ವಂದಿರ ಸಂಪ್ರದಾಯದ ಹಾಡು ಉಳಿಸಿ
Team Udayavani, Jun 20, 2017, 3:09 PM IST
ಧಾರವಾಡ: ಹಳ್ಳಿಯ ಸೊಗಡಿನಲ್ಲಿ ಮೌಖೀಕ ಪರಂಪರೆ ಮೂಲಕ ತಾಯಂದಿರು ಹಾಡಿಕೊಂಡು ಬಂದಿರುವ ಸಂಪ್ರದಾಯದ ಹಾಡುಗಳನ್ನು ಇಂದಿನ ಪೀಳಿಗೆಗೆ ಕಲಿಸುವುದು ಅಗತ್ಯವಿದೆ ಎಂದು ಲೇಖಕಿ ಡಾ| ಹೇಮಾ ಪಟ್ಟಣಶೆಟ್ಟಿ ಹೇಳಿದರು.
ಇಲ್ಲಿನ ಕಸಾಪದಲ್ಲಿ ಜಾನಪದ ಸಂಶೋಧನಾ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಹಾಡುಗಳ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಮೌಖೀಕ ಪರಂಪರೆಯ ಹಾಡುಗಳನ್ನು ಇಂದು ಎಲ್ಲರೂ ಮರೆತು ಬಿಟ್ಟಿದ್ದೇವೆ.
ಆ ಮೂಲಕ ಒಂದು ದೊಡ್ಡ ಜಾನಪದ ಸಂಸ್ಕೃತಿಯನ್ನೇ ನಾವು ತೆರೆಮರೆಗೆ ಸರಿಯುವಂತೆ ಮಾಡಿದ್ದೇವೆ. ಹಳ್ಳಿಯ ತಾಯಂದಿರು ತಮ್ಮ ತಲೆಮಾರಿನಿಂದ ಕಲಿತುಕೊಂಡು ಹಾಡಿಕೊಂಡು ಬಂದಿರುವ ಹಾಡುಗಳನ್ನು ಮತ್ತೆ ಕಲಿತು, ಕಲಿಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ.
ಅದಕ್ಕಾಗಿ ಜಾನಪದ ಸಂಶೋಧಕರು, ಕಲಾವಿದರು ಶ್ರಮಿಸಬೇಕಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿ.ಎಂ. ಹಿರೇಮಠ, ಯಾವುದೇ ಚಳವಳಿ ಆರಂಭಗೊಂಡರು ಮೊದಲು ಧಾರವಾಡದಲ್ಲಿಯೇ ಆರಂಭಗೊಳ್ಳುತ್ತವೆ.
ಇದೀಗ ಜಾನಪದವನ್ನು ಪುನರುಜ್ಜೀನಗೊಳಿಸುವ ಕಾರ್ಯ ಧಾರವಾಡದ ಜಾನಪದ ಸಂಶೋಧನಾ ಕೇಂದ್ರದಿಂದ ಆರಂಭಗೊಂಡಿದೆ. ಇದು ಇಲ್ಲಿಗೆ ನಿಲ್ಲದೇ, ಈ ಸಂಸ್ಕೃತಿಯನ್ನು ಬೆಂಗಳೂರಿನ ಭಾಗದವರಿಗೂ ಪರಿಚಯಿಸುವ ಕೆಲಸವಾಗಬೇಕು ಎಂದು ಹೇಳಿದರು.
ಸಾಹಿತಿ ಪ್ರೊ| ಕೌಜಲಗಿ ಮಾತನಾಡಿ, ಜಾನಪದವನ್ನು ಉಳಿಸುವುದು ಎಂದರೆ ಬರೀ ಮಾತನಾಡುವುದು ಆಗಿಬಿಟ್ಟಿದೆ. ಆದರೆ ಪ್ರಾಯೋಗಿಕವಾಗಿ ಹೊಸ ಆಯಾಮಗಳನ್ನು ಕಂಡುಕೊಂಡು ಈ ಕಲೆಯನ್ನು ಮತ್ತೆ ಪ್ರಸ್ತುತತೆಯ ಕಡೆಗೆ ತೆಗೆದುಕೊಂಡು ಹೋಗಬೇಕಿದೆ.
ಅದಕ್ಕೆ ಸರ್ಕಾರ, ಸಂಘ-ಸಂಸ್ಥೆಗಳ ಬೆಂಬಲವೂ ಅಗತ್ಯವಿದೆ ಎಂದು ಹೇಳಿದರು. ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಮಾತನಾಡಿದರು. ವ್ಯವಸ್ಥಾಪಕಿ ಜಯಶ್ರೀ ಗೌಳಿ, ಗಾಯಕಿ ಸುನಂದಾ ನಿಂಬನಗೌಡರ ಇದ್ದರು. ಡಾ| ಜೀನದತ್ತ ಹಡಗಲಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಮಲ್ಲಪ್ಪ ಹೊಂಗಲ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.