ಸಂಸ್ಕೃತಿ-ಸಂಸ್ಕಾರ ಸಾರಿದ ಗಾಣಿಗ ಸಮಾಜದ ಸಾಂಸ್ಕೃತಿಕ ವೈವಿಧ್ಯ


Team Udayavani, Jun 20, 2017, 5:03 PM IST

19-Mum03d.jpg

ಶ್ರೀ ಕೃಷ್ಣದೇವರಾಯ ಅರಸು ಕಾಲದಲ್ಲಿ ಸೈನಿಕರಾಗಿದ್ದ ಈ ಜನಾಂಗ ರಾಜಶಾಹಿ ಕೊನೆಗೊಂಡ ಬಳಿಕ ಜೀವನೋಪಾಯಕ್ಕಾಗಿ ಗಾಣ ವೃತ್ತಿಯನ್ನು  ತಮ್ಮ ಕುಲ ಕಸುಬನ್ನಾಗಿಸಿಕೊಂಡು ವಿಶ್ವದ ಗಮನ ಸೆಳೆದ ಅತೀ ಕಡಿಮೆ ಸಂಖ್ಯೆಯ ಸಮುದಾಯವಾಗಿದೆ. ಗಾಣ ಉದ್ದಿಮೆಯಿಂದಾಗಿ ಗಾಣಿಗರು ಎಂದೂ ಕರೆಸಿಕೊಂಡವರು ಎನ್ನುವುದು ವಾಸ್ತವಿಕ. ಬಾಕೂìರು ಶ್ರೀ ಗೋಪಾಲಕೃಷ್ಣ ದೇವರನ್ನು ಕುಲದೇವರನ್ನಾಗಿಸುವ ಗಾಣಿಗರು ಬ್ರಾಹ್ಮಣರದ್ದೇ ರೀತಿ, ನೀತಿ ಪೂಜಾದಿ ಕ್ರಮಗಳನ್ನು ರೂಢಿಸಿಕೊಂಡವರು. ಸೋಮಕ್ಷತ್ರಿಯ ಗಾಣಿಗ, ವೈಷ್ಣವರು ಎಂದೂ ಗುರುತಿಸಿಕೊಳ್ಳುತ್ತಾ ಜನಾಂಗೀಯ ತಲೆಮಾರುಗಳಿಂದಲೂ ಎಂದೂ ಅಳಿಯಕಟ್ಟು ಪ್ರೇರೇಪಿಸದೆ ಮಕ್ಕಳ ಸಂತಾನಕ್ಕೆ ಒತ್ತು ನೀಡಿ ಮುನ್ನಡೆದ ಸಮಾಜ ಗಾಣಿಗರದ್ದು. ಕರ್ನಾಟಕದಾದ್ಯಂತ ನೆಲೆಯಾಗಿರುವ ಗಾಣಿಗರು ಕರಾವಳಿ ತೀರದ ಕುಂದಾಪುರದಲ್ಲಿ ಅಧಿಕವಾಗಿದ್ದರೂ ಇನ್ನಿತರೆಡೆ ವಿರಳ ಸಂಖ್ಯೆಯಲ್ಲಿದ್ದರೂ ಸಜ್ಜನರ ರಾಷ್ಟ್ರ ಪ್ರೇಮಿಗಳ ಸಮಾಜವಾಗಿದೆ.

ಪರರಿಗೆ ಯಾವತ್ತೂ ತೊಂದರೆಯಾಗದಂತೆ ಸಾಧ್ಯ ವಾದಷ್ಟು ತಮ್ಮಿಂದಾದ ಸಹಾಯಹಸ್ತ ಚಾಚುತ್ತಾ ಎಲ್ಲರೊಂದಿಗೂ ಸಮಾಧಾನವಾಗಿ ಸಾಮರಸ್ಯದಿಂದ ಬಾಳುವ ಅಪರೂಪದ ಸಮುದಾಯ ಇದಾಗಿದೆ.  ಮೂರ್ತಿ ಚಿಕ್ಕದಾಗಿದ್ದರೂ ಕೀರ್ತಿ ದೊಡ್ಡದು ಎನ್ನುವಂತೆ ಅಪ್ಪಟ ಕಲಾವಿದರಾಗಿ ಕಲಾಪೋಷಕರಾಗಿ ಬೆಳೆದವರು. ಸ್ವರ್ಗಸ್ಥ ಹಾರಾಡಿ ರಾಮ ಅವರು ರಾಷ್ಟ್ರಪ್ರಶಸ್ತಿಗೂ ಕುತ್ಪಾಡಿ ಆನಂದ ಎಂ. ಗಾಣಿಗ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾದ ಹಿರಿಯ ಮತ್ತು ಸಮುದಾಯದಲ್ಲಿನ ಪ್ರಸಕ್ತ ಜನತೆಯಲ್ಲಿನ ಗುರುತರ ಹಿರಿಯ ಮತ್ತು ಪ್ರತಿಭಾನ್ವಿತ, ಪ್ರತಿಷ್ಠಿತ ಕಲಾವಿದರು. ವಿಶೇಷವಾಗಿ ಯಕ್ಷಗಾನ ಕಲೆಯನ್ನು ಮೈಗೂಡಿಸಿ ಅದರಲ್ಲೂ ಬಡಗುತಿಟ್ಟಿನ ಮೇಳಗಳಲ್ಲಿ ರಾರಾಜಿಸುತ್ತಿರುವ ಗಾಣಿಗರು ಅಪ್ರತಿಮರು. ಮಂದಾರ್ತಿ ಮೇಳದಲ್ಲಿ ಕನಿಷ್ಠ ಒಬ್ಬ ಕಲಾವಿದನಾದರೂ ಗಾಣಿಗ ಇರಲೇ ಬೇಕೆನ್ನುವ ವಾಡಿಕೆಯಿದೆ ಎನ್ನುವುದು ತಿಳಿದವರು ಅಭಿಮತ.

ಇಂತಹ ಅಪರೂಪದ ಸಮುದಾಯವೊಂದು ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ನೆಲೆವೂರಿ ಸೌಹಾರ್ದಯುತವಾಗಿ ಬದುಕು ಕಟ್ಟಿಕೊಂಡಿರುವುದು ಅಭಿನಂದನೀಯ. ಗಾಣಿಗ ಸಮಾಜ ಮುಂಬಯಿ ಕಳೆದ ಸುಮಾರು ಎರಡು ದಶಕಗಳಿಂದ ತೆರೆಮರೆಯಲ್ಲಿದ್ದು ಮುಂಬಯಿಯಲ್ಲಿ ಗುರುತರ ಸಮಾಜ ಸೇವೆಗೈಯುತ್ತಿದೆ. ಸಂಸ್ಥೆಯು ಇತ್ತೀಚೆಗೆ ಸಾಂತಾಕ್ರೂಜ್‌ ಪೂರ್ವ ಬಿಲ್ಲವರ ಭವನದಲ್ಲಿ ತನ್ನ 20ನೇ ವಾರ್ಷಿಕೋತ್ಸ‌Õವವನ್ನು ಅದ್ದೂರಿ ಯಾಗಿ ಆಚರಿಸಿತು.

ಗಾಣಿಗರು ತಮ್ಮ ಜೀವನವನ್ನು ಶ್ರೇಯಸ್ಕರವಾಗಲಿ ಎಂಬುದಾಗಿ ಸಾಹಿತ್ಯ ಕಲೆ, ನೃತ್ಯ, ನಾಟಕ, ನಾಟ್ಯ ಹೀಗೆ ಸಂಸ್ಕೃತಿಯನ್ನು ಬೆಳೆಸಿ ಅದರಿಂದ ಎಲ್ಲರಿಗೂ ಬದುಕಿನ ಅರಿವನ್ನು ಮೂಡಿಸಲು ಎಚ್ಚೆತ್ತುಕೊಳ್ಳುವಂತೆ ಅಂದು ನಡೆದ ತಮ್ಮ ಸಾಂಸ್ಕೃತಿಕ ಕಾರ್ಯಕ್ರಮದ ಮುಖಾಂತರ ತೋರಿಸಿಕೊಟ್ಟಿದ್ದಾರೆ.  ಈ ಸಂಭ್ರಮದಲ್ಲಿ ಮುಂಬಯಿಯ  ಬಹುತೇಕ ಗಾಣಿಗರು ಒಗ್ಗೂಡಿ ತಮ್ಮ ಆಚಾರ ವಿಚಾರ, ಸಂಸ್ಕೃತಿ, ಪರಂಪರೆ, ಪೂಜೆ ಸಂಸ್ಕಾರಗಳ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸಿದ ನೀತಿ ಅನುಪಮವಾಗಿತ್ತು. ಜೊತೆ ಜೊತೆಗೆ ತಮ್ಮಲ್ಲಿನ ಹಿರಿ-ಕಿರಿಯ ಪ್ರತಿಭೆಗಳ ವೈವಿಧ್ಯಮಯ ನೃತ್ಯಾವಳಿ, ಸಂಗೀತ,  ಹಾಡುಗಳ ಮೇಳೈಕೆಯು ಎಲ್ಲರಲ್ಲೂ ಅಚ್ಚರಿ ಮೂಡಿಸಿ ಸಮುದಾಯದ ಹಿರಿಮೆಯನ್ನು ಮನಸಾರೆ ಪ್ರಶಂಸಿಸುವಂತೆ ಮಾಡಿತ್ತು. ವೀಣಾ ದಿನೇಶ್‌ ಗಾಣಿಗ ಪ್ರಾರ್ಥನೆಯ  ಬಳಿಕ ನಿರರ್ಗಳವಾಗಿ ಭಗದ್ಗೀತೆ ಪಠಿಸಿದ ಮಾ| ರೂಪಕ್‌ ಸದಾನಂದ್‌ ಅವರ ಪ್ರತಿಭೆಗೆ ಎಲ್ಲರೂ ಆಶ್ಚರ್ಯಚಕಿತರಾದರು.

ಕ್ಯಾಸಿಯೋ ವಾದನದೊಂದಿಗೆ ದೇವರನ್ನು ಸ್ತುತಿಸಿದ ಮಾ| ಶ್ರೇಯಸ್‌ ಭಟ್ಕಳ್‌ ಕಾರ್ಯಕ್ರಮಕ್ಕೆ ಉತ್ಸಾಹ ತುಂಬಿದರು. ಅನಂತರ ಕಲಾ ಪ್ರತಿಭೆಗಳಾದ ಶ್ವೇತಾ ಡಿ. ರಾವ್‌, ಅಥರ್ವಾ ರಾವ್‌, ವೇದ್‌ ಗಾಣಿಗ, ಧ್ರುವ್‌  ಶೆಟ್ಟಿ, ಇಶಾ ಕುತ್ಪಾಡಿ, ಧೃತಿ ಕುತ್ಪಾಡಿ, ಯುವನ್‌ ಕುತ್ಪಾಡಿ, ದಿಶಾ ಗಾಣಿಗ, ಇಸ್ರಿ ಗಾಣಿಗ, ರುಚಿಕಾ ಕಲ್ಯಾಣು³ರ್‌, ಅಂಜಲಿ ಗಾಣಿಗ, ಭೂಮಿಕಾ ರಾವ್‌, ಹಿತಾ ಲೋಕೇಶ್‌, ಕುಷ್‌ ಕುತ್ಪಾಡಿ, ಮೇಘ್ನಾ ಗಾಣಿಗ, ಪೃಥ್ವಿ ಗಾಣಿಗ, ಅನ್ವಿತಾ ವೈ. ಗಾಣಿಗ, ಕೃಷಿಕಾ ರಮೇಶ್‌ ಗಾಣಿಗ,  ಶ್ರುತಿ  ಡಿ. ರಾವ್‌, ವೈಷ್ಣವಿ  ಬಿ. ರಾವ್‌, ಶ್ರೇಯಾ ರಾವ್‌, ಧನುಷ್‌ ರಾವ್‌, ಪೂಜಾ ಜಯಂತ್‌ ಗಾಣಿಗ, ವಿದ್ಯಾ ರಾವ್‌, ಪ್ರಸನ್ನ ಗಾಣಿಗ, ಅನಿಕಾ ರಾವ್‌, ನರೇಂದ್ರ ರಾವ್‌ ಅವರ ಏಕವ್ಯಕ್ತಿ ನೃತ್ಯಗಳು ಮೈಮನವನ್ನು ತಣಿಸಿದವು.

ಅಲ್ಲದೆ ಕಾಂದಿವಲಿ ಕಿಲ್ಲರ್, ಥಾಣೆ ರೋಕರ್ಸ್‌, ಪೊಕ್ರಿ ಗ್ರೂಪ್‌ಗ್ಳ ಸಮೂಹ ನೃತ್ಯಗಳು ಮುದ ನೀಡಿದವು. ಶುಭಾ ಗಣೇಶ್‌ ಕುತ್ಪಾಡಿ ಮತ್ತು ಸುಮಾ ರಾಜೇಶ್‌ ಕುತ್ಪಾಡಿ ಅವರು ಕ್ರಮವಾಗಿ ತಮ್ಮ ಶಿಶುಗಳಾದ ಕು| ದ್ವಿತಿ ಕುತ್ಪಾಡಿ ಮತ್ತು ಮಾ| ಯುವಾನ್‌ ಕುತ್ಪಾಡಿ ಅವರನ್ನು ಬಳಸಿಕೊಂಡು ರ್‍ಯಾಂಪಿಂಗ್‌ ಡಾನ್ಸ್‌ ವಿನೂತನವಾಗಿತ್ತು.  ಸಂಸ್ಥೆಯ ವಿದ್ಯೋದಯ ಸಮಿತಿಯ ಪ್ರಸ್ತುತಿಯಲ್ಲಿ ಶ್ರೀರಾಮ್‌ ಆತ್ರಿ ಅವರು “ಮಾನಸಿಕ ಮನಸ್ಸಿನ ಪ್ರೇರಣೆ ನಿರ್ವಹಿಸುವ ಶೈಕ್ಷಣಿಕ’ ಕಾರ್ಯಕ್ರಮ ಎಲ್ಲರಲ್ಲೂ ಅರಿವು ಮೂಡಿಸಿ ಜೀವನ ವೈಶಿಷ್ಟéಕ್ಕೆ ಪಾಠ ಕಲ್ಪಿಸಿತು ಎನ್ನುವುದು ಸಭಿಕರ ಅಭಿಮತವಾಗಿತ್ತು.

ಸಂಸ್ಥೆಯ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ ಅವರ ಸಾರಥ್ಯ ಮತ್ತು ದಕ್ಷ ಮಾರ್ಗದರ್ಶನದಲ್ಲಿ ಕಾರ್ಯಕ್ರಮದ ಯಶಸ್ಸಿನಲ್ಲಿ ಯುವ ವಿಭಾಗದ ಕಾರ್ಯಾಧ್ಯಕ್ಷ ಗಣೇಶ್‌ ಆರ್‌. ಕುತ್ಪಾಡಿ ಮತ್ತು ರಾಜೇಶ್‌ ಕುತ್ಪಾಡಿ ಅವರ ಅವಿರತ ಯೋಗದಾನ ಮತ್ತು 

ಸಂಸ್ಥೆಯ ಉಪಾಧ್ಯಕ್ಷ ಭಾಸ್ಕರ ಎಂ. ಗಾಣಿಗ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ಆರ್‌. ಗಾಣಿಗ, ಕೋಶಾಧಿಕಾರಿ ಜಯಂತ್‌ ಪಿ. ಗಾಣಿಗ, ಜೊತೆ ಕಾರ್ಯದರ್ಶಿ ಬಿ. ಜಗದೀಶ್‌ ಗಾಣಿಗ, ಮಹಿಳಾ ವಿಭಾಗಾಧ್ಯಕ್ಷೆ ತಾರಾ ಎನ್‌. ಭಟ್ಕಳ್‌, ಕಾಳಿಂಗ ರಾವ್‌, ಜಿ. ಗೋಪಾಲಕೃಷ್ಣ ಗೋವಿಂದ ಗಾಣಿಗ, ಬಾಲಕೃಷ್ಣ ತೋನ್ಸೆ, ಯು. ಬಾಲಚಂದ್ರ ಕಟಪಾಡಿ, ಸದಾನಂದ ಕಲ್ಯಾಣು³ರ, ಆಶಾ ಹರೀಶ್‌ ತೋನ್ಸೆ, ದಿನೇಶ್‌ 

ರಾವ್‌ ಟಿ. ಎಸ್‌., ಸೀತಾರಾಮ್‌ ಎಂ. ಆರ್‌., ನರೇಂದ್ರ ರಾವ್‌, ವಿನಾಯಕ ಭಟ್ಕಳ, ದಿನೇಶ್‌ ಗಾಣಿಗ ಭಾಯಂದರ್‌, ರಮೇಶ್‌ ಎನ್‌.ಗಾಣಿಗ ಮತ್ತಿತರ ಸದಸ್ಯರ ಅವಿರತ ಶ್ರಮದಿಂದ ಮೂಡಿಬಂದ ಅತ್ಯದ್ಭುತ ಕಾರ್ಯಕ್ರಮವನ್ನು ಮಾಜಿ ಕಾರ್ಯದರ್ಶಿ ಬಿ. ವಿ. ರಾವ್‌, ಮಮತಾ ದೇವೇಂದ್ರ ರಾವ್‌, ಆರತಿ ಸತೀಶ್‌ ಗಾಣಿಗ ಅವರು ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.

 ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.