ವೃದ್ಧಾಪ್ಯ ವೇತನ ಕೊಡಿಸು ನೆಪದಲ್ಲಿ ಸರ ಕದ್ದ ಚೋರ
Team Udayavani, Jun 21, 2017, 12:36 PM IST
ಬೆಂಗಳೂರು: ವೃದ್ಧಾಪ್ಯವೇತನ ಕೊಡಿಸುವ ನೆಪದಲ್ಲಿ ವೃದ್ಧೆಯೊಬ್ಬರನ್ನು ಕರೆದೊಯ್ದ ಅಪರಿಚಿತ ಯುವಕನೊಬ್ಬ ಚಿನ್ನದ ಸರ ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಮರಾಜ್ ರಸ್ತೆಯ ಶಿವನಚೆಟ್ಟಿ ಗಾರ್ಡ್‌ನ್ ನಿವಾಸಿ ಲಕ್ಷಿ ಸರ ಕಳೆದುಕೊಂಡವರು.
ನಾಲ್ಕೈದು ದಿನಗಳ ಹಿಂದೆ ಮನೆ ಮುಂದೆ ಕುಳಿತಿದ್ದ ಲಕ್ಷಿ ಅವರನ್ನು ಅಪರಿಚಿತ ಯುವಕನೊಬ್ಬ ವೃದ್ಧಾಪ್ಯವೇತನ ಬಗ್ಗೆ ವಿಚಾರಿಸಿದ್ದಾನೆ. ಆಗ ಲಕ್ಷ್ಮೀ ಅವರು ವೃದ್ಧಾಪ್ಯವೇತನ ಬರುತ್ತಿಲ್ಲ ಎಂದು ಹೇಳಿದ್ದಾರೆ. ಆಗ ಯುವಕ, “ನನ್ನ ಜತೆ ಬಂದರೆ ವೃದ್ಧಾಪ್ಯ ವೇತನ ಬರುವಂತೆ ಮಾಡಿಸುತ್ತೇನೆ,’ ಎಂದು ಹೇಳಿದ್ದಾನೆ.
ಅಲ್ಲೇ ಇದ್ದ ನೆರೆ ಮನೆ ವಾಸಿ ಶಾಂತಮ್ಮ ಎಂಬುವರು “ನಮಗೂ ವೃದ್ಧಾಪ್ಯ ವೇತನ ಕೊಡಿಸಿ ನಾನೂ ಬರುತ್ತೇನೆ,’ ಎಂದು ಹೇಳಿದ್ದಾರೆ. ಮೂವರು ಆಟೋ ಹತ್ತಿದ್ದು, ಮಾರ್ಗ ಮಧ್ಯೆ ಶಾಂತಮ್ಮ ಅವರು ದಾಖಲೆಗಳನ್ನು ತರುವುದಾಗಿ ಹೇಳಿ ಮನೆಗೆ ವಾಪಸ್ ಹೋಗಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿ ಬ್ಯಾಂಕ್ ಮುಂದೆ ಕರೆದೊಯ್ದು ವೃದ್ಧೆಗೆ ನಿಮ್ಮ ಕುತ್ತಿಗೆಯಲ್ಲಿರುವ ಚಿನ್ನದ ಸರ ಕಂಡರೆ ಶ್ರೀಮಂತರು ಎಂದು ಅಧಿಕಾರಿಗಳು ಅರ್ಜಿ ಕೊಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಸರ ಬಿಚ್ಚುವಂತೆ ಹೇಳಿದ್ದಾನೆ. ಒಂದು ಕವರ್‌ನಲ್ಲಿ 30 ಗ್ರಾಂ ಸರ ಹಾಗೂ 300 ರೂ. ಹಣವನ್ನು ಹಾಕಿಸಿಕೊಂಡು ತನ್ನ ಬಳಿ ಇಟ್ಟುಕೊಂಡಿದ್ದಾನೆ. ನಂತರ ಲಕ್ಷಿ ಅವರಿಗೆ ಬ್ಯಾಂಕ್ ಒಳಗೆ ಹೋಗುವಂತೆ ಹೇಳಿ ಪರಾರಿಯಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.