ವಿವಾದಿತ ಪಿಓಕೆಯಲ್ಲಿ ಪಾಕಿಸ್ಥಾನದ ಬೃಹತ್ ಅಣೆಕಟ್ಟಿಗೆ ಚೀನದ ಹಣ ?
Team Udayavani, Jun 22, 2017, 4:33 PM IST
ಬೀಜಿಂಗ್ : ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಬೃಹತ್ ದೈಮರ್-ಭಾಷಾ ಅಣೆಕಟ್ಟು ನಿರ್ಮಾಣಕ್ಕಾಗಿ ಚೀನವು 14 ಶತಕೋಟಿ ಡಾಲರ್ ಮೊತ್ತವನ್ನು ಒದಗಿಸಲಿದ್ದು ಇದನ್ನು 50 ಶತಕೋಟಿ ಡಾಲರ್‌ಗಳ ಚೀನ – ಪಾಕಿಸ್ಥಾನ ಆರ್ಥಿಕ ವಲಯ ಯೋಜನೆಗೆ ಸೇರ್ಪಡೆಗೊಳಿಸಲಿದೆ ಎಂಬ ವರದಿಗಳು ಪಾಕ್ ಮಾಧ್ಯಮದಲ್ಲಿ ಪ್ರಕಟವಾಗಿದ್ದು ಈ ಬಗ್ಗೆ ಚೀನ ಯಾವುದೇ ಪ್ರತಿಕ್ರಿಯೆ ನೀಡದೆ ಜಾಣ ಮೌನವನ್ನು ಪ್ರದರ್ಶಿಸಿದೆ.
ಪಾಕ್ ಮಾಧ್ಯಮಗಳಲ್ಲಿ ವರದಿಯಾಗಿರುವ ಬೃಹತ್ ಪಿಓಕೆ ಅಣೆಕಟ್ಟಿನ ಬಗ್ಗೆ ನಮಗೆ ಯಾವುದೇ ಮಾಹಿತಿಗಳಿಲ್ಲ; ಆ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಚೀನದ ವಿದೇಶ ಸಚಿವಾಲಯದವಕ್ತಾರ ಗೆಂಗ್ ಶುವಾಂಗ್ ಇಂದು ಮಾಧ್ಯಮಕ್ಕೆ ಹೇಳಿದರು.
ಬಹಳ ಹಿಂದಿನಿಂದಲೂ ಪಾಕಿಸ್ಥಾನ ಗಿಲ್‌ಗಿಟ್-ಬಾಲ್ಟಿಸ್ಥಾನ್ ವಲಯದಲ್ಲಿ ದೈಮರ್-ಭಾಷಾ ಅಣೆಕಟ್ಟು ನಿರ್ಮಾಣಕ್ಕಾಗಿ 12ರಿಂದ 14 ಬಿಲಿಯ ಡಾಲರ್ ಮೊತ್ತವನ್ನು ಪಡೆಯಲು ಯತ್ನಿಸುತ್ತಿತ್ತು. ಆದರೆ ಪಿಓಕೆ ವಿವಾದಾತ್ಮಕ ಪ್ರದೇಶವಾಗಿರುವುದರಿಂದ ಪಾಕ್ ಯೋಜನೆಗೆ ಎಲ್ಲಿಂದಲೂ ಹಣ ಬಂದಿರಲಿಲ್ಲ. ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ವಿಶ್ವ ಬ್ಯಾಂಕ್ ಈ ಹಿಂದೆಯೇ ಪಾಕಿಸ್ಥಾನದ ಈ ವಿವಾದಾತ್ಮಕ ಯೋಜನೆಗೆ ಹಣ ಒದಗಿಸಲು ಅಸಾಧ್ಯವೆಂದು ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.